6
ದರೋಡೆಯೇ ಇವರ ಕಾಯಕ: ಹೆದ್ದಾರಿ ಪ್ರಯಾಣಿಕರೇ ಎಚ್ಚರ!

ಯಲ್ಲಾಪುರ: ಹುಬ್ಬಳ್ಳಿ – ಅಂಕೋಲಾ ಹೆದ್ದಾರಿಯಲ್ಲಿ ಸಂಚರಿಸುವ ಕಾರುಗಳನ್ನು ಗುರಿಯಾಗಿರಿಸಿಕೊಂಡು ಸುಲಿಗೆ ಮಾಡುತ್ತಿದ್ದ ತಂಡದ ಸದಸ್ಯನೊಬ್ಬನ್ನು ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ನೆಟ್‌ವರ್ಕ ಸಹ ಸಿಗದ ಅರಬೈಲ್ ಘಟ್ಟ ಪ್ರದೇಶದಲ್ಲಿ ಆಗಂತುಕರು ದಾಳಿ ಮಾಡುತ್ತಾರೆ. ಕಾರಿನಲ್ಲಿದ್ದವರನ್ನು ಬೆದರಿಸಿ ಅವರ ಬಳಿಯಿದ್ದ ಹಣ-ಒಡವೆಗಳನ್ನು ದೋಚುತ್ತಾರೆ.…

ಉಪಮುಖ್ಯಮಂತ್ರಿ ಹುದ್ದೆಗೆ ಸಚಿವರ ಬೇಡಿಕೆ

ಬೆಂಗಳೂರು: ಕರ್ನಾಟಕಕ್ಕೆ ಇನ್ನೊಬ್ಬ ಉಪಮುಖ್ಯಮಂತ್ರಿ ನೀಡಬೇಕು ಎಂಬ ವಿಷಯ ಮುನ್ನೆಲೆಗೆ ಬಂದಿದೆ. ಮುಖ್ಯಮoತ್ರಿ ಸಿದ್ದರಾಮಯ್ಯನವರ ಸಂಪುಟದ ಸಹೋದ್ಯೋಗಿಗಳು, ವಿಶೇಷವಾಗಿ ಅವರ ನಿಷ್ಠಾವಂತರು ಸರ್ಕಾರದಲ್ಲಿ ಹೆಚ್ಚಿನ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸುವ ವಿಷಯವನ್ನು ಮತ್ತೆ ಪ್ರಸ್ತಾಪಿಸುತ್ತಿದ್ದಾರೆ. ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಮಾಡಿದರೆ ಮುಂಬರುವ…

ಕೋಟಿ ಸಿನಿಮಾ ಮೇಲೆ ಕೋಟಿಯಷ್ಟು ನಿರೀಕ್ಷೆ!

ಯಾರಿಗೂ ಮೋಸ ಮಾಡದೇ, ನೋವು ನೀಡದೇ ಒಂದು ಕೋಟಿ ದುಡಿಯುವ ಬಯಕೆಯ ಡ್ರೈವರ್ ಕಥೆ ಹೇಳುವ ಸಿನಿಮಾ `ಕೋಟಿ’. ಯಲ್ಲಾಪುರದ ಪರಮೇಶ್ವರ ಗುಂಡ್ಕಲ್ ನಿರ್ದೇಶನದ `ಕೋಟಿ’ ಸಿನೀಮಾ ಕೋಟಿ ಲೆಕ್ಕದಲ್ಲಿಯೇ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಧನಂಜಯ್ ಪೂರ್ಣಪ್ರಮಾಣದ ಹೀರೋ ಆದ ಮೇಲೆ ಮಾಡಿದ…

ಪ್ರವಾಸಿಗನ ಮೇಲೆ ಅಧಿಕಾರಿಗಳ ದರ್ಫ

ಜೊಯಿಡಾ: ಗೋವಾ ಹೈದರಾಬಾದ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪ್ತಾಬ ಸನದಿ ಎಂಬಾತನ ಮೇಲೆ ಅಬಕಾರಿ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಗೋವಾ ಮೂಲದ ಅಪ್ತಾಬ ತನ್ನ ಸಂಬoಧಿಕರ ಜೊತೆ ವಿಡಿಯೋ ಕಾಲ್’ನಲ್ಲಿ ಮಾತನಾಡುತ್ತಿದ್ದ. ಆನಮೋಡ ಚೆಕ್‌ಪೋಸ್ಟಿನಲ್ಲಿ ಬಸ್ ತಪಾಸಣೆಗೆ ಆಗಮಿಸಿದ ಅಬಕಾರಿ ಸಿಬ್ಬಂದಿ ಆತ…

ಮುಸ್ಲಿಂ ಮಗುವಿಗೆ ದೇವಿ ಹೆಸರು!

ಕೊಲ್ಲಾಪುರ: ಚಲಿಸುತ್ತಿದ್ದ ರೈಲಿನಲ್ಲಿ ಮುಸ್ಲಿಂ ಮಹಿಳೆಗೆ ಹುಟ್ಟಿದ ಮಗುವಿಗೆ `ಮಹಾಲಕ್ಷ್ಮಿ’ ಎಂದು ನಾಮಕರಣ ಮಾಡಲಾಗಿದೆ. ಕೋಲ್ಹಾಪುರ-ಮುಂಬೈ ಮಹಾಲಕ್ಷ್ಮಿ ಎಕ್ಸ್ಪ್ರೆಸ್ ಚಲಿಸುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಗ ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರು ಸಹಾಯ ಮಾಡಿದ್ದಾರೆ. ರೈಲು ಲೋನಾವಾಲಾ ದಾಟಿದ ನಂತರ…

ಅಗ್ನಿ ಅವಘಡಕ್ಕೆ ಐವರ ಬಲಿ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಬಳಿ ಕಾರ್ಖಾನೆಯಲ್ಲಿ ಸ್ಪೋಟ ಸಂಭವಿಸಿದ್ದು, ಐವರು ಸಾವನಪ್ಪಿದ್ದಾರೆ. ಸ್ಫೋಟಕಗಳನ್ನು ತಯಾರಿಸುವ ಕಾರ್ಖಾನೆ ಇದಾಗಿತ್ತು.ನಾಗ್ಪುರದಿಂದ 25 ಕಿ.ಮೀ. ದೂರದಲ್ಲಿರುವ ಧಮ್ನಾ ಗ್ರಾಮದ ಚಾಮುಂಡಿ ಸ್ಫೋಟಕ ಪ್ರೈವೇಟ್ ಲಿಮಿಟೆಡ್ ಸ್ಪೋಟ ಸಂಭವಿಸಿದೆ. ಇಡೀ ಫ್ಯಾಕ್ಟರಿ ಬೆಂಕಿಯಿAದ ಸುಟ್ಟು ಹೋಗಿದೆ.

ಪೊಲೀಸ್ ಠಾಣೆ ಸುತ್ತ ನಿಷೇಧಾಜ್ಞೆ!

ಬೆಂಗಳೂರು: ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿರುವ ನಟ ದರ್ಶನ್ ಯಾರಿಗೂ ಕಾಣದಂತೆ ಶಾಮಿಯಾನ ಹಾಗೂ ಪರದೆ ಹಾಕಲಾಗಿದೆ. ಜೊತೆಗೆ ಪೊಲೀಸ್ ಠಾಣೆಯ ಸುತ್ತ ಸೆ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ದರ್ಶನ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ, ಘೋಷಣೆ ಕೂಗಿದ್ದರಿಂದ ತನಿಖೆಯ…

ದರ್ಶನ್’ನನ್ನು ಹೊರದಬ್ಬಿದ ಚಿತ್ರರಂಗ?!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡದ ನಟ ದರ್ಶನ್’ರನ್ನು ಬಂಧಿಸಲಾಗಿದ್ದು ಕನ್ನಡ ಚಿತ್ರರಂಗದಿoದ ದರ್ಶನ್ ಅವರನ್ನು ಬಹಿಷ್ಕರಿಸಿ ಎಂಬ ಆಗ್ರಹ ಜಾಸ್ತಿಯಾಗಿದೆ. ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್ ನೇತೃತ್ವದಲ್ಲಿ ಈ ಬಗ್ಗೆ ಚರ್ಚಿಸಲು ಸಭೆ ನಡೆದಿದೆ. ಕೊಲೆ…

ಭಟ್ಕಳಕ್ಕೆ ಹೋಗುತ್ತಿದ್ದ ಹೋರಿ ವಶ

ಸಿದ್ದಾಪುರ: ಭಟ್ಕಳದ ಖಸಾಯಿಖಾನೆಗೆ ತೆರಳುತ್ತಿದ್ದ ನಾಲ್ಕು ಹೋರಿಗಳನ್ನು ಪೊಲೀಸರು ರಕ್ಷಿಸಿದ್ದಾರೆ. ದೊಡ್ಮನೆಯ ಕೇಶವ ಗೌಡ ಹಾಗೂ ಕೋಡಿಗದ್ದೆಯ ಮಹೇಶ ಮರಾಠಿ ಎಂಬಾತರು ಪಿಕ್‌ಅಪ್ ವಾಹನದ ಮೂಲಕ ಹೋರಿಗಳನ್ನು ಸಾಗಿಸುತ್ತಿದ್ದರು. ಚಂದ್ರಘಟಕಿ, ಮೆಣಸಿ – ಮಾವಿನಗುಂಡಿ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನವನ್ನು ಪೊಲೀಸರು ತಡೆದರು.…

ನೇಣಿಗೆ ಶರಣಾದ ಚಾಲಕ

ಹಳಿಯಾಳ: ತತ್ವಗಣಿ ಗ್ರಾಮದ ಸಂತೋಷ ಕಾಪಲಕರ್ ಎಂಬಾತ ನೇಣಿಗೆ ಶರಣಾಗಿದ್ದಾನೆ. ಚಾಲಕ ವೃತ್ತಿ ಆರಿಸಿಕೊಂಡಿದ್ದ ಈತ ಕಳೆದ ಕೆಲ ದಿನಗಳಿಂದ ಮಂಕಗಿದ್ದ. ಹೀಗಿರುವಾಗ ಏಕಾಏಕಿ ಆತ್ಮಹತ್ಯೆಯ ನಿರ್ಧಾರ ಮಾಡಿದ್ದು, ಮನೆಯಲ್ಲಿನ ಜಂತಿಗೆ ಹಗ್ಗದಿಂದ ಬಿಗಿದುಕೊಂಡು ಸಾವನಪ್ಪಿದ್ದಾನೆ.

You cannot copy content of this page