ಆ ಲಾರಿ ತುಂಬ ಅಕ್ರಮ ಜಾನುವಾರು ಸಂತೆ!
ಮಹಾರಾಷ್ಟದಿoದ ಭಟ್ಕಳದ ಕಸಾಯಿಖಾನೆಗಳಿಗೆ ಬರುತ್ತಿದ್ದ 13 ಜಾನುವಾರುಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಭಟ್ಕಳ ತಾಲೂಕಿನ ಶಿರಾಲಿ ಚೆಕ್ ಪೋಸ್ಟ್ ಬಳಿ ಲಾರಿ ತಡೆಹಿಡಿದ ಪೊಲೀಸರಿಗೆ ರಾಜಾರೋಷವಾಗಿ ಸಾಗಿಸುತ್ತಿದ್ದ ಜಾನುವಾರುಗಳು ಕಾಣಿಸಿದೆ. ದಾಖಲೆ ಪ್ರಶ್ನಿಸಿದಾಗ ಆ ಲಾರಿಯಲ್ಲಿದ್ದವರ ಬಳಿ ಯಾವ ಕಾಗದ ಪತ್ರಗಳು…
ಕೈಗಾ | ಭದ್ರತಾ ಪಡೆಯಿಂದ ಶಕ್ತಿ ಪ್ರದರ್ಶನ!
ಉರಿಯುತ್ತಿರುವ ಬೆಂಕಿಯ ಒಳಗಡೆ ಸೈನಿಕರ ಹಾರಾಟ.. ಸಿಡಿಮದ್ದುಗಳ ಸದ್ದಿನ ನಡುವೆ ನಾಯಿಗಳ ಚುರುಕು ಓಡಾಟ ಸೇರಿ ಹಲವು ಚಿತ್ರ-ವಿಚಿತ್ರ ಸನ್ನಿವೇಶಗಳು ಸೋಮವಾರ ಕಾರವಾರದ ಕುರ್ನಿಪೇಟೆಯಲ್ಲಿ ಕಾಣಿಸಿದವು. ಕೇಂದ್ರೀಯ ಔದ್ಯೋಗಿಕ ಸುರಕ್ಷಾ ಬಲದ 56ನೇ ಸ್ಥಾಪನಾ ದಿವಸ ಕಾರ್ಯಕ್ರಮದ ಅಂಗವಾಗಿ ಕೈಗಾ ಭದ್ರತಾ…
ಕಡಲು ಸೇರಿದ ಸಾವಿರ ಕೂರ್ಮ ಪಡೆ!
ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡೆ ಸಮುದ್ರ ತೀರದಲ್ಲಿ ಆಮೆ ಮೊಟ್ಟೆಯಿಟ್ಟಿದ್ದು, ಅದನ್ನು ಅರಣ್ಯ ಇಲಾಖೆ ಸಂರಕ್ಷಿಸಿದೆ. ಸಾವಿರಾರು ಮೊಟ್ಟೆಗಳಿಂದ ಆಮೆ ಮರಿಗಳು ಹೊರ ಬಂದಿವೆ. ಆ ಮರಿಗಳನ್ನು ಅರಬ್ಬಿ ಸಮುದ್ರದ ವಿಶಾಲ ಪ್ರಪಂಚಕ್ಕೆ ಬಿಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಕಡಲತೀರ…
ಏಳಲ್ಲ.. ಆರೇ ದಿನದೊಳಗೆ ಬೆಳೆ ವಿಮೆ ಪರಿಹಾರ!
ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಅನ್ಯಾಯ ಮಾಡಲು ಮುಂದಾಗಿದ್ದ ಕ್ಷೇಮ ಜನರಲ್ ಇನ್ಸುರೆನ್ಸ ಕಂಪನಿಗೆ ಕೇಂದ್ರ ಸರ್ಕಾರ ಚಾಟಿ ಬೀಸಿದೆ. ಹವಾಮಾನ ಆಧಾರಿತ ವಿಮಾ ಪರಿಹಾರದಲ್ಲಿ ಆದ ಅನ್ಯಾಯದ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೃಷಿ ಸಚಿವ ಶಿವರಾಜ…
IAS ಓದುವ ಮುನ್ನ ಜಿಲ್ಲಾಧಿಕಾರಿಯಾದ ಯಲ್ಲಾಪುರದ ಹುಡುಗಿ!
ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ತಮ್ಮ ಜಿಲ್ಲಾಧಿಕಾರಿ ಆಸನವನ್ನು ಯಲ್ಲಾಪುರದ ಸುದೀಪ್ತ ಅತ್ತರವಾಲ್ ಅವರಿಗೆ ಬಿಟ್ಟು ಕೊಟ್ಟಿದ್ದಾರೆ. ಕೆಲಕಾಲ ಜಿಲ್ಲಾಧಿಕಾರಿಗಳ ಆಸನದಲ್ಲಿ ಕೂತ ವಿದ್ಯಾರ್ಥಿನಿ ತಾನೂ ಜಿಲ್ಲಾಧಿಕಾರಿಯಾಗುವ ಬಯಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ. ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಾಜ…
ಸುಪ್ರೀಂ ಅಂಗಳದಲ್ಲಿ ಅತಿಕ್ರಮಣದಾರರ ಭವಿಷ್ಯ: ಸರ್ಕಾರ ಅಪಡಾವಿಟ್ ಸಲ್ಲಿಸದಿದ್ದರೆ ಬದುಕು ಅತಂತ್ರ!
ಅರಣ್ಯವಾಸಿಗಳ ಪರ ನಿಲುವು ಪ್ರಕಟಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಏಪ್ರಿಲ್ 2ರಂದು ಉತ್ತಮ ಅವಕಾಶ ಸಿಕ್ಕಿದ್ದು, ಆ ದಿನದೊಳಗೆ ಸರ್ಕಾರ ಸುಪ್ರೀಂ ಕೋರ್ಟಿಗೆ ಅಪಡಾವಿಟ್ ಸಲ್ಲಿಸದೇ ಇದ್ದರೆ ದೇಶದಲ್ಲಿನ 18 ಲಕ್ಷಕ್ಕೂ ಅಧಿಕ ಅತಿಕ್ರಮಣದಾರರು ಅತಂತ್ರರಾಗುವ ಆತಂಕ ಎದುರಾಗಿದೆ. ಅರಣ್ಯ…
ಕೈಗಾ ಅಣುವಿಕರಣ ಸೋರಿಕೆ: ಕಿಂಚಿತ್ತು ಗಡಿಬಿಡಿಯಿಲ್ಲದೇ ಕಾರ್ಯಾಚರಣೆ ನಡೆಸಿದ ಜಿಲ್ಲಾಡಳಿತ!
ಬೆಳಗ್ಗೆ 11 ಗಂಟೆ ಅವಧಿಗೆ ಕೈಗಾದಿಂದ ವಿಕಿರಣ ಸೋರಿಕೆಯ ಸಂದೇಶ ಬಂದಿತು. ಈ ಬಗ್ಗೆ ಮೊದಲೇ ಅರಿವು ಹೊಂದಿದ್ದ ಉತ್ತರ ಕನ್ನಡ ಜಿಲ್ಲಾಡಳಿತ ಕಿಂಚಿತ್ತು ಆತಂಕ-ಗಡಿಬಿಡಿಗೆ ಒಳಗಾಗದೇ ಯಶಸ್ವಿ ಕಾರ್ಯಾಚರಣೆ ನಡೆಸಿತು. ಬುಧವಾರ ಅಣಕು ಕಾರ್ಯಾಚರಣೆ ನಡೆಸುವ ಬಗ್ಗೆ ಮೊದಲೇ ನಿರ್ಧರಿಸಲಾಗಿತ್ತು.…
ರಾತ್ರಿಯಿಡೀ ಈಜಿ ದಡ ಸೇರಿದ ಬಡ ಮೀನುಗಾರ!
ಮೀನುಗಾರಿಕೆಗಾಗಿ ಆಳ ಸಮುದ್ರಕ್ಕೆ ತೆರಳಿದ್ದ ಕಾರವಾರದ ಮಾಜಾಳಿ ಬಳಿಯ ಮಹೇಶ ಸಾಳಗಾಂವ್ಕರ್ ಅವರಿಗೆ ನೆರೆ ಜಿಲ್ಲೆ ಮೀನುಗಾರರು ಆತಂಕ ಉಂಟು ಮಾಡಿದ್ದಾರೆ. ಅರಬ್ಬಿ ಸಮುದ್ರದಲ್ಲಿ ಎಂಟುವರೆ ತಾಸು ಈಜುವ ಮೂಲಕ ಅವರು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ! ಸೋಮವಾರ ಸಂಜೆ ಮಹೇಶ ಸಾಳಗಾಂವ್ಕರ್…
ರೈಲು ಸಮಸ್ಯೆ: ಗೋವಾದಲ್ಲಿ ಸಭೆ ನಡೆಸಿದ ಉತ್ತರ ಕನ್ನಡ ಸಂಸದ!
ಕೊ0ಕಣ ರೈಲ್ವೆಯಲ್ಲಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಗೋವಾದಲ್ಲಿ ಅಧಿಕಾರಿಗಳು ಹಾಗೂ ರೈಲ್ವೆ ಬಳಕೆದಾರರ ಜೊತೆ ಸಭೆ ನಡೆಸಿದ್ದಾರೆ. ಕೊಂಕಣ ರೈಲ್ವೆ ಸಿಎಂಡಿ ಸಂತೋಷ್ ಝಾ ಜೊತೆ ಹಲವು ವಿಷಯಗಳ ಬಗ್ಗೆ ವಿಶ್ವೇಶ್ವರ ಹೆಗಡೆ ಕಾಗೇರಿ…
ಶಿವರಾತ್ರಿ | ವ್ಯಾಪಾರಕ್ಕೆ ಬಂದಿದ್ದ ಯುವಕ ಸಾವು
ಶಿವರಾತ್ರಿ ಹಿನ್ನಲೆ ವ್ಯಾಪಾರಕ್ಕಾಗಿ ಗೋಕರ್ಣಕ್ಕೆ ಬಂದಿದ್ದ ಮಹಮದ್ ರಫಿಕ್ ಸಾವನಪ್ಪಿದ್ದಾರೆ. ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಅವರು ಆರೋಗ್ಯದಲ್ಲಿನ ದಿಡೀರ್ ಏರುಪೇರಿನಿಂದಾಗಿ ಕೊನೆ ಉಸಿರೆಳೆದಿದ್ದಾರೆ. ಜಾರ್ಖಂಡ ಕೋಡ್ರಮಾ ಊರಿನ ಮಹಮದ್ ರಫಿಕ್ (37) ಹಾಗೂ ಉತ್ತರ ಪ್ರದೇಶದ ಕರೀಂಮುದ್ದಿನ್ ಜೊತೆಯಾಗಿ ವ್ಯಾಪಾರ ಮಾಡಿಕೊಂಡಿದ್ದರು.…
















