6
ನ್ಯಾಯಯುತ ಹಕ್ಕಿಗಾಗಿ ಉಗ್ರ ಹೋರಾಟ: ಪ ಪಂ ಅಧಿಕಾರಿ ವಿರುದ್ಧ ಆಕ್ರೋಶ!

ಮುಂಡಗೋಡ ಪಟ್ಟಣದ ಕಂಬಾರಗಟ್ಟಿ ಹಾಗೂ ಗಾಂಧಿನಗರ ನಿವಾಸಿಗಳಿಗೆ ನಮೂನೆ 3 ಸಿಗದ ಬಗ್ಗೆ ಪಟ್ಟಣ ಪಂಚಾಯತಿ ಕಚೇರಿಯ ಎದುರು ಮಂಗಳವಾರ ಉಗ್ರ ಹೋರಾಟ ನಡೆದಿದೆ. `ಗಾಂಧಿನಗರ ಹಾಗೂ ಕಂಬಾರಗಟ್ಟಿ ಕೊಳಚೆ ಪ್ರದೇಶದಲ್ಲಿ ಅತಿ ಹೆಚ್ಚು ಕೂಲಿಕಾರರು ವಾಸಿಸುತ್ತಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ…

ಸಿಸಿ ಕ್ಯಾಮರಾಗೆ ಸಿಕ್ಕ ಚುಕ್ಕಿ ಚಿರತೆ!

ಶಿರಸಿಯ ಆರೆಕೊಪ್ಪ ಮತ್ತು ಬಚಗಾಂವ್ ಗ್ರಾಮದಲ್ಲಿ ಚಿರತೆ ಓಡಾಟ ಜೋರಾಗಿದೆ. ರಾತ್ರಿ 8 ಗಂಟೆ ಅವಧಿಗೆ ಚಿರತೆ ಓಡಾಡುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅರೆಕೊಪ್ಪ ಮತ್ತು ಬಚಗಾಂವ್ ಗ್ರಾಮದ ಮದ್ಯ ಭಾಗದಲ್ಲಿರುವ ವಿನಾಯಕ ನಾಯ್ಕ ಅವರ ಮನೆ ಗೇಟಿನ ಬಳಿ ಚಿರತೆ…

ಚಲಿಸುತ್ತಿದ್ದ ರಿಕ್ಷಾ ಮೇಲೆ ವಿದ್ಯುತ್ ಕಂಬ ಮುರಿತ!

ಶಿರಸಿ ಎಪಿಎಂಸಿ ಆವರಣದ ಬಳಿ ನಿಧಾನವಾಗಿ ಚಲಿಸುತ್ತಿದ್ದ ರಿಕ್ಷಾದ ಮೇಲೆ ಜೋರಾಗಿ ವಿದ್ಯುತ್ ಕಂಬ ಮುರಿದು ಬಿದ್ದಿದೆ. ರಿಕ್ಷಾದ ಒಳಗೆ ಚಾಲಕ ಸೇರಿ ಮೂವರು ಪ್ರಯಾಣಿಕರಿದ್ದು, ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳವಾರ ಮಧ್ಯಾಹ್ನ ಮಿನಿ ವಿಧಾನಸೌಧ ಬಳಿ ರಿಕ್ಷಾ ನಿಲ್ದಾಣದ ರಿಕ್ಷಾ…

ಕೊಳಚೆ ಚರಂಡಿಯಲ್ಲಿ ಕೊಳೆತ ಶವ!

ಸೆಂಟ್ರಿ0ಗ್ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಕುಮಟಾದ ಗಣೇಶ ಹುಲಸ್ವಾರ ಶವ ಕೊಳಚೆ ಚರಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ. ಕುಮಟಾ ಮಾದನಗೇರಿಯ ಹೊಸನಗರದ ಗಣೇಶ ಹುಲಸ್ವಾರ್ (32) ಮಾರ್ಚ 4ರಂದು ಕಾಣೆಯಾಗಿದ್ದರು. ಕೆಲಸಕ್ಕಾಗಿ ಬೆಳ್ತಂಗಡಿಗೆ ಹೋಗುವುದಾಗಿ ಹೇಳಿ ಹೋದ ಅವರು ನಂತರ…

ಉತ್ತರ ಕನ್ನಡ | ಈ ಎಲ್ಲಾ ಊರುಗಳಲ್ಲಿ ಸರಾಯಿ ಮಾರಾಟ-ಸಾಗಾಟ ನಿಷೇಧ!

ಹೋಳಿ ಹಬ್ಬ, ಕಾಮದಹನ ಹಾಗೂ ರಂಗ ಪಂಚಮಿ ಹಿನ್ನಲೆ ಜಿಲ್ಲೆಯ ಹಲವು ಕಡೆ ಮದ್ಯ ಮಾರಾಟ ಹಾಗೂ ಸಾಗಾಟ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಹಬ್ಬದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಬಾರ್ ಹಾಗೂ ವೈನ್ ಶಾಪ್ ಬಾಗಿಲು ಮುಚ್ಚುವಂತೆ ಸೂಚಿಸಲಾಗಿದೆ.…

ರಸ್ತೆಯಿಲ್ಲ.. ಶಾಲೆಯಿಲ್ಲ.. ಆಸ್ಪತ್ರೆಯಿಲ್ಲ.. ಸಮಸ್ಯೆ ಹೇಳಲು ಜಿಲ್ಲಾಕೇಂದ್ರಕ್ಕೆ ಬಂದ ಗುಡ್ಡದೂರಿನ ಜನ!

ಅಂಕೋಲಾ ಡೋಂಗ್ರಿ-ಹೆಬ್ಬಾರಗುಡ್ಡದ ಜನ ಸೋಮವಾರ ಕಾರವಾರ ಆಗಮಿಸಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ್ದು, `ಊರಿಗೆ ಕನಿಷ್ಟ ಮೂಲಭೂತ ಸೌಕರ್ಯವನ್ನಾದರೂ ಕಲ್ಪಿಸಿ’ ಎಂದು ಅಳಲು ತೋಡಿಕೊಂಡಿದ್ದಾರೆ. `ಗ್ರಾಮಕ್ಕೆ ತೆರಳಲು ಸರಿಯಾದ ರಸ್ತೆ ಇಲ್ಲ. ರಸ್ತೆಯಿಲ್ಲದ ಕಾರಣ ಸಾರಿಗೆ ವ್ಯವಸ್ಥೆ ಸಹ ಇಲ್ಲ. ಕಂಬ ಎಳೆದರೂ…

ವಿದ್ಯಾರ್ಥಿನಿ ಸಾವಿಗೆ ಕಾರಣ ತಿಳಿಸಿ.. ತಪ್ಪಿತಸ್ಥರನ್ನು ಕೂಡಲೇ ಶಿಕ್ಷಿಸಿ!

`ಕಾರವಾರ ಬಾಲಕಿಯರ ಬಾಲ ಮಂದಿರದಲ್ಲಿ ಆತ್ಮಹತ್ಯೆಗೆ ಶರಣಾದ ಬಾಲಕಿ ಸಾವಿಗೆ ನ್ಯಾಯ ಕೊಡಿಸಬೇಕು. ಈ ಸಾವಿಗೆ ನೈಜ ಕಾರಣದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು’ ಎಂದು ಭಂಡಾರಿ ಸಮಾಜೋನ್ನತಿ ಸಂಘ ಆಗ್ರಹಿಸಿದೆ. ಈ ಕುರಿತು ಸೋಮವಾರ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರನ್ನು…

ಚಾಕು ತಿವಿದ ಚೆನ್ನಯ್ಯನಿಗೆ 10 ವರ್ಷ ಜೈಲು!

ಕೊಲೆ ಪ್ರಯತ್ನ ನಡೆಸಿದ ವ್ಯಕ್ತಿಗೆ ನ್ಯಾಯಾಲಯ 10 ವರ್ಷದ ಜೈಲು ಶಿಕ್ಷೆ ಪ್ರಕಟಿಸಿದೆ. ಶಿಕ್ಷೆ ಅನುಭವಿಸುವುದರ ಜೊತೆ ಸಾವಿನ ದವಡೆಯಿಂದ ತಪ್ಪಿಸಿಕೊಂಡವನಿಗೆ 10 ಸಾವಿರ ರೂ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಶಿರಸಿ ತಾಲೂಕಿನ ಬನವಾಸಿಯ ದೊಡ್ಡಕೇರಿಯ ದಿನೇಶ ಅಶೋಕ ಚನ್ನಯ್ಯ…

ಪಾದಚಾರಿಗೆ ಗುದ್ದಿದ KSRTC ಬಸ್ಸು!

ರಸ್ತೆ ಅಂಚಿನಲ್ಲಿ ನಡೆದು ಹೋಗುತ್ತಿದ್ದ ಮುಂಡಗೋಡಿನ ವ್ಯಕ್ತಿಗೆ ಹೊನ್ನಾವರದಲ್ಲಿ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ಸು ಡಿಕ್ಕಿ ಹೊಡೆದಿದೆ. ಪರಿಣಾಮ ಪಾದಚಾರಿಯ ತಲೆ, ಮುಖ, ಎದೆ, ಹೊಟ್ಟೆ ಸೇರಿ ವಿವಿಧ ಕಡೆ ಗಾಯವಾಗಿದೆ. ಮುಂಡಗೋಡ ತೆಂಗಿನಕೊಪ್ಪ ಬಳಿಯ ಚೌಡಳ್ಳಿ ರಾಮ ಕೃಷ್ಣ ಸಿಂಧೆ…

ತಲೆ ಒಡೆದ ಟಾಕ್ಟರ್ ಟಯರ್ ಗಾಳಿ!

ಶಿರಸಿಯಲ್ಲಿ ಗುಜುರಿ ಸಾಮಗ್ರಿ ಒಯ್ಯುವ ಟಾಕ್ಟರ್ ಟೈಯರ್ ಸ್ಪೋಟಗೊಂಡ ಪರಿಣಾಮ ಇಬ್ಬರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೋಮವಾರ ಸಂಜೆ `ನಾಗಲಿಂಗ ಟ್ರೇಲರ‍್ಸ’ ಎಂಬ ಟಾಕ್ಟರಿನವರು ಶಿರಸಿ ಹುಬ್ಬಳ್ಳಿ ರಸ್ತೆಯಲ್ಲಿರುವ ಸುಂಕದ ವಾಲ್ಕ್ ನೈಸಿಂಗ್ ಅಂಗಡಿಗೆ…

You cannot copy content of this page