ಅರೆಬರೆ ಕೆಲಸದಿಂದ ಅದ್ವಾನ: ಖಾಸಗಿ ಜಾಗಕ್ಕೆ ಸರ್ಕಾರಿ ಅನುದಾನ!
ಖಾಸಗಿ ಮಾಲಕತ್ವದ ಜಾಗಕ್ಕೆ ತೆರಳಲು ಯಲ್ಲಾಪುರ ಪಟ್ಟಣ ಪಂಚಾಯತ ವಿಶೇಷ ಆಸಕ್ತಿವಹಿಸಿ ಸರ್ಕಾರಿ ಅನುದಾನ ನೀಡಿದೆ. ಇದಕ್ಕೆ ಕೆಲವರು ತಕರಾರು ಸಲ್ಲಿಸಿ ಮುಖ್ಯಮಂತ್ರಿ ಕಚೇರಿಗೆ ಅರ್ಜಿ ಮಾಡಿದ್ದಾರೆ! ಯಲ್ಲಾಪುರ ಪಟ್ಟಣ ಪಂಚಾಯತ ವ್ಯಾಪ್ತಿಯ ಸವಣಗೇರಿ ಬಳಿ ರಸ್ತೆ ನಿರ್ಮಾಣಕ್ಕೆ ಪ ಪಂ…
ಸ್ಕೂಟಿಯಲ್ಲಿದ್ದ ಕಾಸು ಕಳ್ಳರ ಪಾಲು!
ಕುಮಟಾದ ಹುಲಿದೇವ ಕಾಂಪ್ಲೆಕ್ಸ್ ಎದುರು ನಿಲ್ಲಿಸಿದ್ದ ಸ್ಕೂಟಿಯಲ್ಲಿದ್ದ ಹಣ ಹಾಗೂ ಮೊಬೈಲ್’ನ್ನು ಕಳ್ಳರು ದೋಚಿದ್ದಾರೆ. 62 ವರ್ಷದ ಶಶಿಕಾಂತ ನಾಯಕ 2.52 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ. ಕುಮಟಾ ಹೆರವಟ್ಟಾದ ಶಶಿಕಾಂತ ನಾಯಕ ಅವರು ಮಂಗಳವಾರ ರಾತ್ರಿ 10 ಗಂಟೆಗೆ ಹಳೆ…
ಎಲ್ಲೆಂದರಲ್ಲಿ ಕಸ ಎಸೆದರೂ ಪೊಲೀಸ್ ಕೇಸು!
`ರಸ್ತೆ ಅಂಚಿನಲ್ಲಿ ಕಸ ಎಸೆಯುವವರಿಂದ ಭಾರೀ ಪ್ರಮಾಣದ ದಂಡ ವಸೂಲಿ ಜೊತೆ ಅವರ ವಿರುದ್ಧ ಪೊಲೀಸ್ ಪ್ರಕರಣವನ್ನು ದಾಖಲಿಸಬೇಕು’ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅವರು ಬುಧವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಹಸಿ ಮತ್ತು…
ಅನಧಿಕೃತ ಗೈರು: ಯಲ್ಲಾಪುರ ಪೊಲೀಸ್ ಸಿಬ್ಬಂದಿಗೆ ಅಮಾನತು ಶಿಕ್ಷೆ!
ಮೇಲಧಿಕಾರಿಗಳು ಸೂಚಿಸಿದ ಕೆಲಸವನ್ನು ಸರಿಯಾಗಿ ಮಾಡದ ಕಾರಣ ಯಲ್ಲಾಪುರ ಪೊಲೀಸ್ ಠಾಣೆ ಸಿಬ್ಬಂದಿ ಬೆನಕ ಆರ್ ನಾಯಕ ಅವರು ಅಮಾನತಾಗಿದ್ದಾರೆ. ಯಲ್ಲಾಪುರ ಗಡಿಭಾಗವಾದ ಕಿರವತ್ತಿ ತಪಾಸಣಾ ಕೇಂದ್ರದಲ್ಲಿನ ಕರ್ತವ್ಯ ಲೋಪದ ಕಾರಣ ಅವರನ್ನು ಅಮಾನತುಗೊಳಿಸಿ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಆದೇಶ…
ಉಸ್ತುವಾರಿ ಅಂಗಳದಲ್ಲಿ ಸಹಕಾರಿ ಅಕ್ರಮದ ದೂರು!
ಉತ್ತರ ಕನ್ನಡ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ನಿಯಮಿತದ 2ನೇ ಅವಧಿಯ ಚುನಾವಣೆಯಲ್ಲಿನ ಅಕ್ರಮ ಹಾಗೂ ಗೊಂದಲದ ತನಿಖೆಗೆ ಆಗ್ರಹಿಸಿ ಒಕ್ಕೂಟದ ನಿರ್ದೇಶಕಿ ಸರಸ್ವತಿ ಎನ್ ರವಿ ಅವರು ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಗೆ ದೂರು ನೀಡಿದ್ದಾರೆ. ಚುನಾವಣಾ ಅಕ್ರಮ ನಡೆಸಿದ…
ಮಂಚಕ್ಕೆ ಕರೆದ ಪ್ರಾಚಾರ್ಯ ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಉಪನ್ಯಾಸಕ!
ಅಂಕೋಲಾ ಜಿಸಿ ಕಾಲೇಜಿನಲ್ಲಿ ಪ್ರಾಚಾರ್ಯ ಹುದ್ದೆಗಾಗಿ ನಡೆದ ಕಾದಾಟ ವೈಯಕ್ತಿಕ ತೇಜೋವಧೆಯ ಸ್ವರೂಪ ಪಡೆದಿದೆ. ಪ್ರಾಚಾರ್ಯ ಹುದ್ದೆ ಆಕಾಂಕ್ಷಿ ಎಸ್ ಆರ್ ಶಿರೂಡ್ಕರ್ ಹಾಗೂ ಸದ್ಯದ ಪ್ರಾಚಾರ್ಯ ಸಿದ್ದಲಿಂಗೇಶ್ವರ ವಸ್ತ್ರದ ನಡುವೆ ನಿತ್ಯವೂ `ದೃಷ್ಠಿ ಯುದ್ಧ’ ನಡೆಯುತ್ತಿದೆ! ಕಳೆದ 31 ವರ್ಷಗಳಿಂದ…
ಯಲ್ಲಾಪುರ | ಕೊಡಸೆ ಭಾಗದಲ್ಲಿ ಸುಗ್ಗಿ ಕುಣಿತದ ಸಡಗರ!
ಯಲ್ಲಾಪುರದ ಕಣ್ಣಿಗೇರಿ-ಕೊಡಸೆ-ಚಿನ್ನಹೊಕಳಿ ಭಾಗದಲ್ಲಿ ಹೋಳಿ ಹಬ್ಬ ಎಂದರೆ ಸುಗ್ಗಿ ಕುಣಿತದ ಸಂಭ್ರಮ. ಅನಾಧಿಕಾಲದಿಂದಲೂ ನಡೆಸಿಕೊಂಡು ಬಂದ ಈ ಪರಂಪರೆಯನ್ನು ಊರಿನ 60 ವರ್ಷ ಮೇಲ್ಪಟ್ಟ ವೃದ್ಧರು ಮುಂದಿನ ತಲೆಮಾರಿನವರಿಗೆ ಕಲಿಸುತ್ತಿದ್ದಾರೆ. ನಿನ್ನೆಯ ಸೋಮವಾರದಿಂದ ಈ ಭಾಗದಲ್ಲಿ ಸುಗ್ಗಿ ಕುಣಿತ ಜೋರಾಗಿದೆ. ವೇಷಧಾರಿಗಳು…
ಬೈಕಿನಿಂದ ಬಿದ್ದ ಮಹಿಳೆ: ಸಾವು!
ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುತ್ತಿದ್ದ ಸುಮಂಗಲ ಹೆಗಡೆ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಅಂಕೋಲಾದ ಸುಮಂಗಲಾ ಹೆಗಡೆ ಅವರು ಗೋಕರ್ಣದ ಬಳಿಯ ಅಪಘಾತದಲ್ಲಿ ಕೊನೆ ಉಸಿರೆಳೆದಿದ್ದಾರೆ. ಅಂಕೋಲಾ ತಾಲೂಕಿನ ಹಿಲ್ಲೂರ ಹಳೆಕೇರಿಯ ಸುಮಂಗಲ ಕೃಷ್ಣ ಹೆಗಡೆ (51) ಅವರು ಬುಧವಾರ ಬೈಕಿನಲ್ಲಿ ಗೋಕರ್ಣದ ಕಡೆ…
ಮನೆಯಲ್ಲಿದ್ದ ಮಹಿಳೆ ಕಣ್ಮರೆ: ಕುಟುಂಬದವರ ಅಲೆದಾಟ.. ಪೊಲೀಸರ ಹುಡುಕಾಟ!
ಮುಂಡಗೋಡಿನ ನಂದೀಶ್ವರದ ಅದಿತಿ ಬಸ್ತವಾಡ ಕಾಣೆಯಾಗಿದ್ದಾರೆ. ಅವರ ತಂದೆ ನೀಡಿದ ದೂರಿನ ಅನ್ವಯ ಪೊಲೀಸರು ಅದಿತಿ ಅವರ ಹುಡುಕಾಟ ನಡೆಸಿದ್ದಾರೆ. 29 ವರ್ಷದ ಅದಿತಿ ಅವರು ಆನಂದ ಬಸ್ತಿವಾಡ ಅವರನ್ನುವಹಿಸಿದ್ದರು. ಮಾರ್ಚ 7ರವರೆಗೂ ಮನೆಯಲ್ಲಿದ್ದ ಅವರು ನಂತರ ಕಾಣೆಯಾದರು. ಆ ದಿನ…
ವಿದ್ಯುತ್ ಸಮಸ್ಯೆ: ರೈತರ ಬೆಳೆಗಿಲ್ಲ ಬೆಲೆ!
ಶಿರಸಿಯ ದಾಸನಕೊಪ್ಪ ಹಾಗೂ ಅಂಡಗಿಯಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುತ್ತಿರುವುದರಿಂದ ಜನ ರೊಚ್ಚಿಗೆದ್ದಿದ್ದಾರೆ. ಅದಾಗಿಯೂ ಮಂಗಳವಾರ ಶಾಂತಿಯುತ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ. `ರೈತರ ಭೂಮಿಗಳಿಗೆ ನೀರುಣಿಸಲು ಸರಿಯಾಗಿ ವಿದ್ಯುತ್ ಸಿಗುತ್ತಿಲ್ಲ. ಇದರಿಂದ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗುತ್ತಿದೆ’…
















