ಮಸೀದಿ ಮುಂದೆ ಮಾರಾಮಾರಿ!
ನಮಾಜ್ ಮಾಡಲು ಮಸೀದಿಗೆ ತೆರಳಿದ ಕುಟುಂಬದ ಮೇಲೆ 18 ಜನರ ಗುಂಪು ದಾಳಿ ಮಾಡಿದೆ. ಮಸೀದಿ ಆವರಣದೊಳಗೆ ಕಾಲಿಗೆ ಹಾಕಿದ ಬೂಟು ಬಿಟ್ಟಿರುವುದು ಈ ಹೊಡೆದಾಟಕ್ಕೆ ಮೂಲ ಕಾರಣ! ಸಿದ್ದಾಪುರ ತಾಲೂಕಿನ ಬಿಳಗಿಯ ಅಜೀಜ್ ಸಾಬ್ ಅವರು ಫೆ 7ರಂದು ಅಹಲ್ಲೆ…
ಚಿನ್ನ ಕಣ್ಮರೆ: ಭೂಪತಿ ಮಾಡಿದ ಕಿತಾಪತಿ!
ಬೆಲೆ ಬಾಳುವ ವಸ್ತು ಹಾಗೂ ಆಭರಣ ಧರಿಸಿ ಪ್ರದರ್ಶಿಸದಂತೆ ಪೊಲೀಸರು ಸಾಕಷ್ಟು ಎಚ್ಚರಿಕೆ ನೀಡಿದರೂ ಜನ ಜಾಗೃತರಾಗಿಲ್ಲ. ದೇವರ ದರ್ಶನದ ವೇಳೆ ಮೈಮೇಲಿದ್ದ ಚಿನ್ನ ಕಳೆದುಕೊಂಡ ಭೂಪತಿ `ಬೇರೆ ಯಾರೋ ಕದ್ದಿರಬಹುದು’ ಎಂಬ ಅನುಮಾನದ ಮೇರೆಗೆ ಇದೀಗ ಪೊಲೀಸ್ ದೂರು ನೀಡಿದ್ದಾರೆ.…
ಜಗಳ ತಪ್ಪಿಸಲು ಹೋದವರಿಗೂ ಬಿತ್ತು ಬಾರೀ ಪೆಟ್ಟು!
ರಸ್ತೆ ಬದಿ ನಿಂತಿದ್ದ ಯುವಕನಿಗೆ ನಾಲ್ವರು ಸೇರಿ ಥಳಿಸಿದ್ದು, ಅದನ್ನು ಬಿಡಿಸಲು ಹೋದ ಮೂವರು ಹೊಡೆತ ತಿಂದಿದ್ದಾರೆ. ಹಲ್ಲೆ ನಡೆಸಿದ ನಾಲ್ವರು ತೆಲಗು ಮಾತನಾಡುತ್ತಿದ್ದು, ಅವರ ಪರಿಚಯ ಯಾರಿಗೂ ಇಲ್ಲ. ಫೆ 7ರ ಸಂಜೆ ಭಟ್ಕಳದ ಮುರುಡೇಶ್ವರ ನಾಕಾದ ಬಳಿ ಮಾವಳ್ಳಿ-1…
ಕೈಗಡ ಸಾಲ: ಖಾಲಿ ಚೆಕ್ಕು ನೀಡಿ ಹೆದರಿದ ಮಹಿಳೆ!
ಹಣದ ಅಡಚಣೆಯಿರುವ ಕಾರಣ ನಾಲ್ಕು ಜನರಿಂದ ತಲಾ 50 ಸಾವಿರ ರೂ ಕೈಗಡ ಸಾಲ ಪಡೆದಿದ್ದ ಹಸೀನಾ ಶೇಖ್ ಅವರು ಬಡ್ಡಿಸಹಿತ ಸಾಲ ತೀರಿಸಿದರೂ ಸಾಲ ಕೊಟ್ಟವರು ಭದ್ರತೆಗೆ ನೀಡಿದ ಖಾಲಿ ಚೆಕ್’ನ್ನು ಮರಳಿಸಿಲ್ಲ. ಚೆಕ್ ಬೌನ್ಸ ಪ್ರಕರಣ ದಾಖಲಿಸುವುದಾಗಿ ಐದು…
`ಭಗವಂತನ ಸಾನಿಧ್ಯಕ್ಕೆ ಭಾಷೆಗಿಂತ ಭಾವ ಮುಖ್ಯ’
`ನಾವು ಮಾಡುವ ಎಲ್ಲಾ ಕೆಲಸವನ್ನು ದೇವರು ನೋಡುತ್ತಿದ್ದು, ಅದೇ ಭಾವನೆ ನಮ್ಮಿಂದ ತಪ್ಪಾಗುವುದನ್ನು ತಡೆಯುತ್ತದೆ’ ಎಂದು ಶಿರಳಗಿ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಹೇಳಿದ್ದಾರೆ. ಶಿರಸಿಯ ಮಂಜುಗುಣಿಯಲ್ಲಿ ನಡೆಯುತ್ತಿರುವ ಉದ್ಯಾಪನಾ ಉತ್ಸವ ಪರ್ವದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು…
ಲಾರಿ ಮಾಲಕ ಸಂಘಕ್ಕೂ ಮಾಧವ ನಾಯಕರೇ ಅಧ್ಯಕ್ಷ!
ಉತ್ತರ ಕನ್ನಡ ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷರಾಗಿ ಮಾಧವ ನಾಯಕ ಆಯ್ಕೆಯಾಗಿದ್ದಾರೆ. ಅಂಕೋಲಾದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಹೋರಾಟದ ದಿಸೆಯಲ್ಲಿ ಮಾಧವ ನಾಯಕ ಅವರು ಜನಶಕ್ತಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. ವೃತ್ತಿ ದಿಸೆಯಲ್ಲಿ ಕಾರವಾರ…
ಶಿರಸಿ | ಆಸ್ಪತ್ರೆ ಫೋನು ರಿಂಗಣಿಸಿದ ಪ್ರಧಾನಿ ಮೋದಿ!
ಆಯುರ್ವೇದ ಆಸ್ಪತ್ರೆಯ ಹಳೆಯ ಲ್ಯಾಂಡ್‌ಲೈನ್ ಸಂಪರ್ಕ ಸ್ಥಗಿತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯದ ಸೂಚನೆ ಮೇರೆಗೆ ಅದನ್ನು ರಿಪೇರಿ ಮಾಡಲಾಗಿದೆ! ಶಿರಸಿಯ ಪಟ್ಟಣದ ಹೊಸಪೇಟೆ ರಸ್ತೆಯಲ್ಲಿ ಡಾ ರವಿಕಿರಣ ಪಟವರ್ಧನ್ ಅವರು ಆಯುರ್ವೇದ ಆಸ್ಪತ್ರೆ ಹೊಂದಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಅವರು…
ನಿರಾಶ್ರಿತ ಜಿಲ್ಲೆ ಜನರಿಗೆ ಇಲ್ಲ ಭೂಮಿ ಹಕ್ಕು!
ಐದು ಜಲ ವಿದ್ಯುತ್ ಯೋಜನೆ, ಕೈಗಾ ಅಣುಸ್ಥಾವರ, ಸೀಬರ್ಡ ನೌಕಾನೆಲೆ, ರೈಲ್ವೆ ಯೋಜನೆ, ಪ್ರಾಯೋಜಿತ ವಿಮಾನ ನಿಲ್ದಾಣ, ಸಿ ಆರ್ ಜಡ್, ಅಭಿಯಾರಣ್ಯ, ಹುಲಿ ಸಂರಕ್ಷಣಾ ವಲಯ ಸೇರಿ ಹಲವು ರಾಷ್ಟ್ರೀಯ ಯೋಜನೆಗಳಿಂದ ಭೂಮಿ ಕಳೆದುಕೊಂಡ ಉತ್ತರ ಕನ್ನಡ ಜಿಲ್ಲೆಯ ಜನರಿಗೆ…
ಅಡಿಕೆ ಕಳ್ಳ ಅರೆಸ್ಟ್!
ಮನೆ ಅಂಗಳದಲ್ಲಿದ್ದ ಅಡಿಕೆ ಕದ್ದು ಪರಾರಿಯಾಗಿದ್ದ ಕಳ್ಳನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿoದ ಅಡಿಕೆ ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ. ಸಿದ್ದಾಪುರ ತಾಲೂಕಿನ ಕೋಲಸಿರ್ಸಿಯ ಮಾರುತಿನಗರದಲ್ಲಿ ಮೂರು ದಿನದ ಹಿಂದೆ ಅಡಿಕೆ ಕಳ್ಳತನ ನಡೆದಿತ್ತು. ನಾಗರಾಜ ಗೌಡ ಅವರು ಮನೆ ಅಂಗಳದಲ್ಲಿ ದಾಸ್ತಾನು…
ಕಳ್ಳರ ಕಾಟ: ಕಿರಾಣಿ ಅಂಗಡಿಗೆ ಕನ್ನ!
ಅಪ್ಪ-ಮಗ ಸೇರಿ ನಡೆಸುತ್ತಿದ್ದ ಕಿರಾಣಿ ಅಂಗಡಿಗೆ ನುಗ್ಗಿದ ಕಳ್ಳರು ಗಲ್ಲಾ ಪೆಟ್ಟಿಗೆಯಲ್ಲಿದ್ದ 7460ರೂ ಎಗರಿಸಿದ್ದಾರೆ. `ಆ ಕಳ್ಳರನ್ನು ಹುಡುಕಿ, ನಮ್ಮ ಹಣ ಮರಳಿಸಿ’ ಎಂದು ಕಿರಾಣಿ ವ್ಯಾಪಾರಿ ಶ್ರೀಪಾದ ದೇಸಾಯಿ ಪೊಲೀಸ್ ದೂರು ನೀಡಿದ್ದಾರೆ. ಜೊಯಿಡಾದ ಕುಂಬಾರವಾಡದಲ್ಲಿ ಶ್ರೀಪಾದ ದೇಸಾಯಿ ಅವರು…








