ಗತಿ ಕಾಣಿಸುತ್ತೇನೆ ಎಂದವನಿಗೆ ಗತಿ ಕಾಣಿಸಿದ ಬಿಜೆಪಿಗ!
`ನಿನಗೆ ಒಂದು ಗತಿ ಕಾಣಿಸುತ್ತೇನೆ’ ಎಂದು ಬೆದರಿಕೆ ಒಡ್ಡಿದ ಇಬ್ಬರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ ಪೊಲೀಸ್ ಪ್ರಕರಣ ದಾಖಲಿಸುವ ಮೂಲಕ ಬಿಜೆಪಿ ಮುಖಂಡರೊಬ್ಬರು ಎದುರಾಳಿಗೆ ಬಿಸಿ ಮುಟ್ಟಿಸಿದ್ದಾರೆ. ಕಾರವಾರದ ಸೋನಾರವಾಡದ ವಿವೇಕಾನಂದ ಬಾಯ್ಕೇರಿಕರ್ (72) ಅವರು ದೀಪಕ ಅಣ್ವೇಕರ್ ಹಾಗೂ…
ಸಂಬoಧಿಕರ ನಡುವೆ ಜಾಗದ ಕಲಹ: ಮಹಿಳೆಗೆ ಕತ್ತಿ ಬೀಸಿದವನಿಗೆ 10 ವರ್ಷ ಜೈಲು!
ನಡೆದಾಡುವ ದಾರಿ ವಿಷಯವಾಗಿ ಗಲಾಟೆ ಮಾಡಿ ಮಹಿಳೆಗೆ ಕತ್ತಿ ಬೀಸಿದವರಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಯಲ್ಲಾಪುರ ತಾಲೂಕಿನ ಕಿರವತ್ತಿ ಜಯಂತಿನಗರದ ಹಸೀನಾ ಶೇಖ್ ಹಾಗೂ ಅವರ ಸಂಬoಧಿಕರಾದ ಜಾಫರ್ ಪಟೇಲ್, ಇಮಾಮ್ ಪಟೇಲ್, ಆಶಾಬಿ ಪಟೇಲ್ ಹಾಗೂ ನಗ್ಮಾ ಪಟೇಲ್ ನಡುವೆ…
ಹಳ್ಳಿ ಊರಿಗೆ ದಾರಿ ಸಮಸ್ಯೆ: ಪರಿಶೀಲನೆಗೆ ಬಂದವರ ಮುಂದೆ ಚಪ್ಪಲಿ ತೋರಿಸಿದವನ ವಿರುದ್ಧ ದೂರು!
ದಾರಿ ಸಮಸ್ಯೆ ಬಗೆಹರಿಸಲು ಬಂದ ಸರ್ಕಾರಿ ಅಧಿಕಾರಿ-ಜನಪ್ರತಿನಿಧಿಗಳ ಮುಂದೆಯೇ ಚಂದ್ರಕಾoತ ಗಾಂವ್ಕರ ಎಂಬಾತ ಚಪ್ಪಲಿ ತೋರಿಸಿದ್ದರಿಂದ ಸಿಟ್ಟಾದ ವಿನೋದ ಗಾಂವ್ಕರ್ ಎಂಬಾತರು ನ್ಯಾಯಾಲಯದ ಮೊರೆ ಹೋಗಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಕಾರವಾರದ ಸಿದ್ದರ ಬಳಿಯ ಬಳೆವಾಡದಲ್ಲಿ ವಿನೋದ ಗಾಂವ್ಕರ (69) ಅವರು…
ಒಂದು ಲಕ್ಷದ ಸಾಲಕ್ಕೆ 12 ಲಕ್ಷ ರೂ ಬಡ್ಡಿ: ಆದರೂ ಅಸಲು ಇನ್ನೂ ಬಾಕಿ!
1.20 ಲಕ್ಷ ರೂ ಕೈಗಡ ಸಾಲ ಪಡೆದ ಮಹೇಶ ದೊಡ್ಡಮನಿ ಬಡ್ಡಿ ರೂಪದಲ್ಲಿ 12 ಲಕ್ಷ ರೂ ಪಾವತಿಸಿದ್ದಾರೆ. ಅದಾಗಿಯೂ ಅವರ ಸಾಲ ತೀರದ ಕಾರಣ ಮಹೇಶ ದೊಡ್ಮನಿ ಅವರ ಬಳಿಯಿದ್ದ ಟಾಕ್ಟರನ್ನು ಸಾಲ ಕೊಟ್ಟವರು ಎಳೆದೊಯ್ದಿದ್ದಾರೆ! ಮುಂಡಗೋಡಿನ ಇಂದೂರು ಬಳಿಯ…
ಹಳೆ ಪಾತ್ರೆ.. ಹಳೆ ಕಬ್ಬಿಣ | ಗುಜುರಿ ವ್ಯಾಪಾರಿಗಳ ನಡುವೆ ಮಾರಾಮಾರಿ!
ಗುಜುರಿ ಆಯ್ದುಕೊಳ್ಳುವ ವಿಷಯವಾಗಿ ಇಬ್ಬರು ವ್ಯಾಪಾರಿಗಳ ನಡುವೆ ಹೊಡೆದಾಟ ನಡೆದಿದೆ. ಈ ಹೊಡೆದಾಟ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಶಿರಸಿ ಗೋಸಾವಿಗಲ್ಲಿಯ ಸಾಗರ ಗೋಸಾವಿ (21) ಹಾಗೂ ಯಲ್ಲಾಪುರದ ಗಣಪತಿಗಲ್ಲಿಯಅನೀಲ ಗೋಸಾವಿ (31) ಹೊಡೆದಾಡಿಕೊಂಡಿದ್ದಾರೆ. ಅನೀಲ ಗೋಸಾವಿ ಸದ್ಯ ಶಿರಸಿಯ ಗೋಸಾವಿಗಲ್ಲಿಯಲ್ಲಿಯೇ…
ಸಹವಾಸ ದೋಷ | ವ್ಯಾಪಾರಿ-ಉದ್ಯೋಗಿಯಿಂದ ವಿದ್ಯಾರ್ಥಿಯ ಜೀವನ ಹಾಳು!
ರೋಷನ್ ಪಾಲೇಕರ್ ಎಂಬ ವ್ಯಾಪಾರಿ ಹಾಗೂ ಸೂರಜ್ ರೇವಣಕರ್ ಎಂಬ ಉದ್ಯೋಗಿ ಸೇರಿ ಮಣಿಕಂಠ ರೇವಣಕರ್ ಎಂಬ ಕಾಲೇಜು ವಿದ್ಯಾರ್ಥಿಗೆ ಗಾಂಜಾ ನಶೆ ಏರಿಸಿದ್ದಾರೆ. ಶಿವಾನಿ ಹೋಟೇಲ್ ಬಳಿ ಗಾಂಜಾ ಗುಂಗಿನಲ್ಲಿದ್ದ ಈ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿರಸಿ ಶಿವಾನಿ…
ಕಾರ್ಮಿಕನನ್ನು ಕೊಂದ ಕಾರ್ಮಿಕರ ಬಸ್ಸು
ಕಾರ್ಮಿಕರನ್ನು ಕೆಲಸಕ್ಕೆ ಕರೆದೊಯ್ಯುವ ವಾಹನ ಕಾರ್ಮಿಕನಿಗೆ ಗುದ್ದಿದ ಪರಿಣಾಮ ದೂರದ ಊರಿನಿಂದ ದುಡಿಯಲು ಬಂದಿದ್ದ ಜಸ್ತಿ ಮಂಡಲ್ (49) ಸಾವನಪ್ಪಿದ್ದಾರೆ. ಪ ಬಂಗಾಲದ ಜಸ್ತಿ ಮಂಡಲ್ ಅವರು ಎಲ್ & ಟಿ ಕಂಪನಿಯಲ್ಲಿ ಕಾರ್ಮಿಕರಾಗಿದ್ದರು. ಕಂಪನಿ ಕೆಲಸಕ್ಕೆ ಹೋಗಲು ಅವರು ಕಾರವಾರ-ಸದಾಶಿವಗಡ…
ಸಿದ್ದಿ ಹೆಂಗಸನ್ನು ಸರಸಕ್ಕೆ ಕರೆದ ಪುರೋಹಿತ!
ಐದಾರು ಯುವತಿಯರಿಗೆ ಅಶ್ಲೀಲ ಸಂದೇಶ ರವಾನಿಸಿ ಪೆಟ್ಟು ತಿನ್ನದೇ ಬಜಾವಾಗಿದ್ದ ವಿ-ನಾಯಕ ಇದೀಗ ಬುಡಕಟ್ಟು ಸಮುದಾಯದ ಸಿದ್ದಿ ಮಹಿಳೆಯೊಬ್ಬರನ್ನು ಸರಸಕ್ಕೆ ಕರೆದು ಸಿಕ್ಕಿ ಬಿದ್ದಿದ್ದಾರೆ. ವಿ-ನಾಯಕನ ಉಪಟಳ ಸಹಿಸದ ಸಂತ್ರಸ್ತೆ ಕನ್ನಿಕಾವೇಣಿ (ಸಂತ್ರಸ್ತೆ ಹೆಸರು ಬದಲಿಸಿದೆ) ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.…
ರಕ್ಷಿತಾಗೆ ಪೊಲೀಸರ ಶ್ರೀರಕ್ಷೆ: ತಾಯಿ ಮಡಿಲು ಸೇರಿದ ಯಲ್ಲಾಪುರ ಯುವತಿ!
ಬಸ್ ನಿಲ್ದಾಣದ ಅಂಗಡಿಗೆ ತೆರಳಿದ್ದ ಕಾಣೆಯಾಗಿದ್ದ ಹುಡುಗಿಯನ್ನು ಪೊಲೀಸರು ಹುಡುಕಿ ಆಕೆಯ ತಾಯಿಗೆ ಒಪ್ಪಿಸಿದ್ದಾರೆ. `ತಾಯಿ ಬಿಟ್ಟು ಎಲ್ಲಿಯೂ ಹೋಗಬೇಡ’ ಎಂದು ಬುದ್ದಿಮಾತನ್ನು ಹೇಳಿದ್ದಾರೆ! ಯಲ್ಲಾಪುರದ ಕಿರವತ್ತಿ ಬಳಿಯ ಜಯಂತಿನಗರದ ರಕ್ಷಿತಾ ಚಂದಾವರ (20) ಶನಿವಾರ ಶಿರಸಿಗೆ ಬಂದಿದ್ದರು. ಹಳೆ ಬಸ್…
ರಾತ್ರಿಯಿಡೀ ಪೀಡಿಸುವ ಸಾಲ ಸಿಬ್ಬಂದಿ: ತಹಶೀಲ್ದಾರರ ಮುಂದೆ ಮಹಿಳೆಯರ ಅಳಲು!
`ರಾತ್ರಿ 11 ಗಂಟೆ ವೇಳೆಗೂ ಮಹಿಳೆಯರನ್ನು ಮಾತನಾಡಿಸುವುದಕ್ಕಾಗಿ ಮೈಕ್ರೋ ಫೈನಾನ್ಸ ಸಿಬ್ಬಂದಿ ಮನೆಗೆ ನುಗ್ಗುತ್ತಾರೆ. ಸ್ವಲ್ಪ ಸಮಯಕೊಡಿ ಎಂದು ಬೇಡಿಕೊಂಡರೂ ಬಿಡುವುದಿಲ್ಲ’ ಎಂದು ಸಾಲಗಾರ ಮಹಿಳೆಯರು ತಹಶೀಲ್ದಾರ್ ಯಲ್ಲಪ್ಪ ಗೊನೆಣ್ಣವರ್ ಅವರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಗುರುವಾರ ಸಂಜೆ ಯಲ್ಲಾಪುರ ತಹಶೀಲ್ದಾರ್…








