ರಿಕ್ಷಾಗೆ ಗುದ್ದಿದ ಬಸ್ಸು: ಪ್ರಯಾಣಿಕ ಸಾವು
ಖಾಸಗಿ ಬಸ್ಸು ಹಾಗೂ ರಿಕ್ಷಾ ನಡುವೆ ಅಪಘಾತ ನಡೆದಿದ್ದು, ಆಟೋ ಪ್ರಯಾಣಿಕ ದಿನೇಶ ಮುಕ್ರಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಕುಮಟಾ ಪಟ್ಟಣದ ಮಣಕಿ ಮೈದಾನದ ಚರ್ಚ್ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ಬುಧವಾರ ಸಂಜೆ ಅಪಘಾತ…
ಅಕ್ರಮ ಮರಳುಗಾರಿಕೆ | ಗಣಿ ವಿಜ್ಞಾನಿಗೆ ದಿಗ್ಬಂದನ: ದೂರು ನೀಡಿದವನ ಮೇಲೆ 30 ಜನರ ದಾಳಿ!
ಅಕ್ರಮ ಮರಳುಗಾರಿಗೆ ದೂರಿನ ಅನ್ವಯ ಸ್ಥಳ ಪರಿಶೀಲನೆಗೆ ತೆರಳಿದ್ದ ಮೂವರು ಅಧಿಕಾರಿಗಳಿಗೆ ಆ ಭಾಗದ ಇಬ್ಬರು ದಿಗ್ಬಂದನ ಹಾಕಿದ್ದಾರೆ. ಚಪ್ಪಲಿಯಿಂದ ಹೊಡೆಯುವುದಾಗಿ ಬೆದರಿಸಿ ಅಧಿಕಾರಿಗಳ ಕೈ-ಬುಜ ಹಿಡಿದು ಎಳೆದಾಡಿದ್ದಾರೆ. ಇದಲ್ಲದೇ, ಅಕ್ರಮ ಮರಳುಗಾರಿಕೆ ದೂರು ನೀಡಿದ ಕಾರಣ ಸಾರ್ವಜನಿಕರೊಬ್ಬರಿಗೆ 30 ಜನ…
ಕಾಸಿನ ಆಸೆಗೆ ಹಸು ಕೊಂದ ಪಾಪಿಗಳು: ಮುಗ್ದುಂ ಕಾಲೋನಿಯ ಅವರು ಮುಗ್ದರಲ್ಲ!
ಮಾಂಸ ಮಾರಾಟ ಮಾಡಿ ಕಾಸು ಸಂಪಾದಿಸುವ ಆಸೆಗಾಗಿ ಜಾನುವಾರು ಹತ್ಯೆ ನಡೆಸಿದ ಮೂವರನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. ಹಸುವಿನ ದೇಹ ತುಂಡರಿಸುತ್ತಿರುವಾಗಲೇ ಪೊಲೀಸರು ದಾಳಿ ನಡೆಸಿದರಾದರೂ ಆ ಹಸುವನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬುಧವಾರ ಭಟ್ಕಳ ಮುಗ್ದುಂ ಕಾಲೋನಿ ನ್ಯಾಶನಲ್ ಸ್ಟಿಟ್ನಲ್ಲಿ ನಿಜಾಮುದ್ದೀನ್…
ದಾತ್ರಿ ನಗರ | ನಿವೇಶನದಾರರಿಗೆ ನೀರು ಕುಡಿಸುವವರಾರು?
ಹಿತ್ಲಕಾರಗದ್ದೆಯ ದಾತ್ರಿ ನಗರದಲ್ಲಿ ನಿವೇಶನ ಖರೀದಿಸಿರುವ ಮಂಜುನಾಥ ಹೆಗಡೆ ಕುಡಿಯುವ ನೀರಿನ ಸೌಕರ್ಯಕ್ಕಾಗಿ ಹೋರಾಟ ನಡೆಸಿದ್ದು, ಈ ವೇಳೆ ಯಲ್ಲಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನೀಲ ಗಾವಡೆ ನೀರು ಪೂರೈಸುವ ಭರವಸೆ ನೀಡಿದ್ದರು. ಆದರೆ, ಅವರು ನುಡಿದಂತೆ ನಡೆದಿರಲಿಲ್ಲ. ಈ ಹಿನ್ನಲೆ…
ಸರ್ಕಾರಿ ಶಾಲೆಗೆ ಡಿಜಿಟಲ್ ಕರೆನ್ಸಿ!
ಹಲವು ಬಗೆಯ ಡಿಜಿಟಲ್ ಸೌಕರ್ಯವನ್ನು ಹೊಂದಿದ ಯಲ್ಲಾಪುರದ ಸವಣಗೇರಿ ಸರ್ಕಾರಿ ಶಾಲೆ ಡಿಜಿಟಲ್ ಬ್ಯಾಂಕಿ0ಗ್ ಪದ್ಧತಿಯನ್ನು ಸಹ ಅಳವಡಿಸಿಕೊಂಡಿದೆ. ಈ ಶಾಲೆಗೆ ಇನ್ನಷ್ಟು ಸೌಕರ್ಯ ಒದಗಿಸುವ ಉದ್ದೇಶಕ್ಕಾಗಿ ಸುಬ್ರಾಯ ಮಹಾಬಲೇಶ್ವರ ಭಟ್ಟ ಹಾಗೂ ನಾರಾಯಣ ಗಣಪತಿ ಹೆಗಡೆ ಅವರು ಆರ್ಥಿಕ ನೆರವು…
ಸತ್ಯಂ ಶಿವಂ ಸುಂದರO: ಮುರುಡೇಶ್ವರ ಜಾತ್ರೆಗೆ ಜನವೋ ಜನ!
ಶ್ರೀ ಕ್ಷೇತ್ರ ಮುರ್ಡೇಶ್ವರದಲ್ಲಿ ಏಳು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ಜಾತ್ರೆ ನಡೆದಿದ್ದು, ಸಾವಿರಾರು ಭಕ್ತರು ಸಾಕ್ಷಿಯಾದರು. ಮಂಗಳವಾರ ಸಮುದ್ರಯಾನದ ಮೂಲಕ ಜಾತ್ರೆ ಸಂಪನ್ನಗೊoಡಿತು. `ನೇತ್ರಾಣಿ ಅಡ್ವೆಂಚರ್’ ಅವರ ದೋಣಿಯಲ್ಲಿ ಶಿವನ ಮೂರ್ತಿಯ ಸಮುದ್ರಯಾನ ನಡೆಯಿತು. ಮುರುಡೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ…
ಮಾತು ತಪ್ಪಿದ ಮುಖ್ಯಾಧಿಕಾರಿ: ಮತ್ತೆ ಪ್ರತಿಭಟನೆ!
ಕುಡಿಯುವ ನೀರಿಗಾಗಿ ಹಿತ್ಲಕಾರಗದ್ದೆ ಬಳಿಯ ದಾತ್ರಿ ಲೇಔಟಿನ ಮಂಜುನಾಥ ಹೆಗಡೆ ಪ್ರತಿಭಟನೆ ನಡೆಸಿದಾಗ `ಒಂದು ವಾರದ ಒಳಗೆ ನೀರು ಪೂರೈಸುವೆ’ ಎಂದು ವಾಗ್ದಾನ ಮಾಡಿದ್ದ ಅಧಿಕಾರಿಗಳು ತಮ್ಮ ಮಾತು ಉಳಿಸಿಕೊಂಡಿಲ್ಲ. ಈ ಹಿನ್ನಲೆ ಮಂಜುನಾಥ ಹೆಗಡೆ ಅವರು ಮತ್ತೊಮ್ಮೆ ಪ್ರತಿಭಟನೆಗೆ ಸಜ್ಜಾಗಿದ್ದಾರೆ!…
ರಿಕ್ಷಾ ಚಾಲಕರಿಗೆ ಅನ್ಯಾಯ: ಧರಣಿ!
ಮುರುಡೇಶ್ವರ ಜಾತ್ರೆಯಲ್ಲಿ ಸೋಮವಾರ ರಾತ್ರಿ ಆಟೋ ಯೂನಿಯನ್ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಮುರುಡೇಶ್ವರ ಆಟೋ ಯೂನಿಯನ್ ಅಧ್ಯಕ್ಷ ಶ್ರೀಧರ ನಾಯ್ಕ ಮಾತನಾಡಿ `ಜಾತ್ರೆ ವೇಳೆಯಲ್ಲಿ ಪ್ರತಿ ವರ್ಷವೂ ಬಸ್ ಸ್ಟಾಂಡ್ ಬಳಿ ಆಟೋ ನಿಲ್ಲಿಸಿ ಬಾಡಿಗೆ ಮಾಡುತ್ತಿದ್ದೇವು. ಈ…
ಪ್ರತ್ಯೇಕ ಜಿಲ್ಲೆಗಾಗಿ ಪ್ರತ್ಯೇಕ ಸಭೆ: ಹಿಸ್ಸೆ ವಿರೋಧಿಸುವವರಿಗೆ ಇಲ್ಲ ಅಧಿಕೃತ ಆಮಂತ್ರಣ!
ಉತ್ತರ ಕನ್ನಡ ಜಿಲ್ಲೆಯನ್ನು ವಿಭಾಗಿಸಿ ಪ್ರತ್ಯೇಕ ಜಿಲ್ಲೆ ಮಾಡುವ ಕುರಿತು ಮಂಗಳವಾರ ನಡೆದ ಸಭೆಯಲ್ಲಿ ಒಬ್ಬರೇ ಒಬ್ಬರು ಸಹ ಜಿಲ್ಲೆ ಒಡೆಯುವುದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ. ಕಾರಣ, ವಿರೋಧ ವ್ಯಕ್ತಪಡಿಸುವವರಿಗೆ ಈ ಸಭೆಗೆ ಅಧಿಕೃತ ಆಹ್ವಾನವೇ ಇರಲಿಲ್ಲ! ಈ ಪೂರ್ವಭಾವಿ ಸಭೆಯಲ್ಲಿ ಹಿರಿಯ…
ಫೇಸ್ಬುಕ್ ನಂಬಿದ ಅಧಿಕಾರಿಯ ಪಾಸ್ಬುಕ್ ಖಾಲಿ!
ತೋಟಗಾರಿಕಾ ಇಲಾಖೆ ಅಧಿಕಾರಿಯೊಬ್ಬರು ಫೇಸ್ಬುಕ್ ಜಾಹೀರಾತು ನೋಡಿ ಹಣ ಕಳೆದುಕೊಂಡಿದ್ದಾರೆ. ಷೇರು ಮಾರುಕಟ್ಟೆ ಮೂಲಕ ದುಪ್ಪಟ್ಟು ಹಣ ಕೊಡಿಸುವುದಾಗಿ ನಂಬಿಸಿ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಸೈಬರ್ ವಂಚಕರು ದೋಚಿದ್ದಾರೆ! ದಾವಣೆಗೆರೆ ಮೂಲದ ಮಂಜಪ್ಪ ಪಿ ಅವರು ಬನವಾಸಿ ರಸ್ತೆಯ ಪ್ರತೀಕ್ ಬಿಲ್ಡಿಂಗ್…








