ಗುತ್ತಿಗೆದಾರನ ಕೋಣ ಕೊಂದ ಉದಯ ಸಿದ್ದಿ!
ಸಿವಿಲ್ ಗುತ್ತಿಗೆದಾರ ಅಬ್ದುಲ್ ರಹಮಾನ್ ಸಾಕಿದ್ದ ಕೋಣ ಸಾವನಪ್ಪಿದೆ. ಆಳ್ವೇಸರದ ಉದಯ ಸಿದ್ದಿ ತಮ್ಮ ಬೈಕ್ ಗುದ್ದಿ ಕೋಣದ ಸಾವಿಗೆ ಕಾರಣರಾಗಿದ್ದಾರೆ! ಯಲ್ಲಾಪುರದ ಮಂಚಿಕೇರಿ ಚರ್ಚ ರಸ್ತೆಯ ಅಬ್ದುಲ್ ರೆಹಮಾನ್ ಕೋಣವನ್ನು ಸಾಕಿದ್ದರು. ಎರಡು ವರ್ಷ ಪ್ರಾಯದ ಕೋಣ ದಷ್ಟಪುಷ್ಟವಾಗಿ ಬೆಳೆದಿತ್ತು.…
ನಿನ್ನೆ ಪ್ರಶಸ್ತಿ.. ಇಂದು ಪರಲೋಕವಾಸಿ!
ಅಪಘಾತರಹಿತ ಚಾಲನೆ, ಉತ್ತಮ ನಡವಳಿಕೆ ಹಾಗೂ ಸರ್ಕಾರಿ ಸಾರಿಗೆ ಸಂಸ್ಥೆಯ ಆದಾಯ ಹೆಚ್ಚಿಸಿದ ಕಾರಣ ಭಾನುವಾರ ಪ್ರಶಸ್ತಿ ಪಡೆದಿದ್ದ ಎಸ್ ಎನ್ ಶೇಖ್ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ! ಜಮಖಂಡಿ ಮೂಲದ ಎಸ್ ಎನ್ ಶೇಖ್ ಕಳೆದ 30 ವರ್ಷಗಳಿಂದ ಶಿರಸಿ ಕೆಎಸ್ಆರ್ಟಿಸಿ…
ಹಸು ಕೊಂದ ದುಷ್ಕರ್ಮಿ ಬಂಧನಕ್ಕೆ ಆಗ್ರಹ
`ಹೊನ್ನಾವರದ ಸಾಲ್ಕೋಡ ಗ್ರಾಮ ಸಮೀಪದ ಕೊಂಡುಕುಳಿ ಗ್ರಾಮದಲ್ಲಿ ಹಸುವಿನ ತಲೆ ಕಡಿದು ವಿಕೃತಿ ಮೆರೆದವರನ್ನು ಕೂಡಲೇ ಬಂಧಿಸಬೇಕು’ ಎಂದು ಉತ್ತರ ಕನ್ನಡ ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ದಿಲೀಪ್ ಅರ್ಗೇಕರ್ ಹೇಳಿದ್ದಾರೆ. `ಗ್ರಾಮೀಣ ಭಾಗದ ಜನ ತಾವು ಸಾಕಿದ ಹಸುಗಳನ್ನು ಮೇವಿಗಾಗಿ…
ಕೊರಗಿ ಕೊರಗಿ ನೇಣಿಗೆ ಶರಣಾದ ಎಪಿಎಂಸಿ ನಿವೃತ್ತ ನೌಕರ!
ಕಳೆದ ಮೂರು ವರ್ಷಗಳಿಂದ ಬಿಪಿ – ಶುಗರ್ ಹೆಚ್ಚಳದಿಂದ ಕೊರಗುತ್ತಿದ್ದ ಗಿರೀಶ ಭಾನಾವಳಿ ನೇಣು ಬಿಗಿದುಕೊಂಡು ಸಾವನಪ್ಪಿದ್ದಾರೆ. ಶಿರಸಿ ಬಿಸಲಕೊಪ್ಪದ ಗಿರೀಶ ಭಾನಾವಳಿ (62) ಕಾರವಾರದ ಬಾಡ ಚಂದ್ರದೇವವಾಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಿರೀಶ ಭಾನಾವಳಿ ಅವರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ…
ತುರ್ತು ಸೇವೆ ಸಿಗದೇ ಸಾವನಪ್ಪಿದ ರೋಗಿ: ಆರೋಗ್ಯ ಕವಚಕ್ಕೆ 108 ಸಮಸ್ಯೆ!
ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಗೆ ಸಕಾಲದಲ್ಲಿ 108 ತುರ್ತು ಆರೋಗ್ಯ ಸೇವೆಯ ಆಂಬುಲೆನ್ಸ ಸಿಗದ ಕಾರಣ ರೋಗಿ ಸಾವನಪ್ಪಿದ್ದಾರೆ. ಆರೋಗ್ಯ ಸಿಬ್ಬಂದಿಯ ಅಸಡ್ಡೆಯ ಮಾತು ಕೇಳಿದ ಗೋಕರ್ಣ ಬಳಿಯ ತದಡಿಯ ಜನ ಭಾನುವಾರ ಆಸ್ಪತ್ರೆ ಮುಂದೆ ಶವವಿಟ್ಟು ಪ್ರತಿಭಟಿಸಿದರು. ತದಡಿಯ ಲೋಹಿತ ನಾಯ್ಕ…
ಕೈ ಕೊಟ್ಟ ಬೆಳೆ: ಸಾಲ ತೀರಿಸಲಾದ ರೈತ ಆತ್ಮಹತ್ಯೆ!
ಸಾಲ ಮಾಡಿ ಕೃಷಿ ಮಾಡಿಕೊಂಡಿದ್ದ ಯಲ್ಲಪ್ಪ ಬಂತೂರು (35) ಸಾಲ ತೀರಿಸಲಾಗದ ತಲೆಬಿಸಿಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಧಾರವಾಡ ಕುಂದಗೋಳದ ಯಲ್ಲಪ್ಪ ಬಂತೂರು ಕುಮಟಾದಲ್ಲಿ ನೇಣು ಹಾಕಿಕೊಂಡಿದ್ದಾರೆ. ಯಲ್ಲಪ್ಪ ಬಂತೂರು ಅವರು ತಮ್ಮ ಊರಿನಲ್ಲಿ ಮೂರುವರೆ ಎಕರೆ ಕೃಷಿ ಭೂಮಿ ಅಭಿವೃದ್ಧಿಗಾಗಿ ಕರ್ನಾಟಕ…
ಹೆದ್ದಾರಿ ಅಂಚಿನ ಹೊಳೆ ಇದೀಗ ಬಿಳಿ ನೊರೆ!
ವರ್ಷದ ಬಹುಪಾಲು ದಿನ ತುಂಬಿ ಹರಿಯುವ ಯಲ್ಲಾಪುರದ ಆರತಿಬೈಲ್ ಅಂಚಿನ ಹಳ್ಳಕ್ಕೆ ಕೆಮಿಕಲ್ ಮಿಶ್ರಣವಾಗಿರುವ ಶಂಕೆ ವ್ಯಕ್ತವಾಗಿದೆ. ಈ ಹಳ್ಳದ ನೀರು ಕಲುಷಿತಗೊಂಡಿದ್ದು, ಭಾನುವಾರ ಬೆಳಗ್ಗೆಯಿಂದ ಇಲ್ಲಿ ಭಾರೀ ಪ್ರಮಾಣದ ನೊರೆ ಉಕ್ಕಿ ಬರುತ್ತಿದೆ. ಹಳ್ಳದ ನೀರಿನಲ್ಲಿ ನೊರೆ ಬರುತ್ತಿರುವುದನ್ನು ನೋಡಿದ ಸ್ಥಳೀಯರು…
ಮೊದಲು ಪ್ರೀತಿ-ಪ್ರೇಮ.. ಆಮೇಲೆ ಮದುವೆ-ವಿಚ್ಚೇದನ: ಪತ್ನಿಗೆ ಪೀಡಿಸಿ ನೇಣಿಗೆ ಶರಣಾದ ಕುಡುಕ ಚಾಲಕ!
ಪ್ರಶಾಂತ ನಾಯ್ಕರ ಪ್ರೀತಿಗೆ ಮನಸೋತು ಮದುವೆಯಾಗಿದ್ದ ಪ್ರಜ್ಞಾ ನಾಯ್ಕ ಅವರು ನಂತರ ಆತನ ವರ್ತನೆಯಿಂದ ಬೇಸತ್ತು ವಿಚ್ಚೇದನ ಪಡೆದಿದ್ದರು. ಅದಾಗಿಯೂ ಪ್ರಜ್ಞಾ ಅವರ ಬೆನ್ನು ಬಿದ್ದಿದ್ದ ಪ್ರಶಾಂತ ನಾಯ್ಕ ಪತ್ನಿ ಜೊತೆಗಿಲ್ಲದ ಕೊರಗಿನಲ್ಲಿ ಅವರ ಮನೆ ಹಿಂದಿನ ಮಾವಿನ ಮರಕ್ಕೆ ನೇಣು…
ಕರು ಕೊಂದು ಹಸು ಭಕ್ಷಿಸಿದ ರಾಕ್ಷಸರು!
ಮೇವಿಗೆ ತೆರಳಿದ್ದ ಹಸುವನ್ನು ಕೊಂದ ದುರುಳರು ಹಸುವಿನ ಹೊಟ್ಟೆಯಲ್ಲಿದ್ದ ಕರುವನ್ನು ಕಿತ್ತೆಸೆದಿದ್ದಾರೆ. ಅದಾದ ನಂತರ ಹಸುವನ್ನು ತುಂಡು ತುಂಡಾಗಿ ಕತ್ತರಿಸಿ ಅದರ ಮಾಂಸವನ್ನು ಸಾಗಿಸಿದ್ದಾರೆ. ಕೊಟ್ಟಿಗೆಗೆ ಮರಳದ ಹಸು ಹುಡುಕಿ ಹೊರಟ ಕೃಷ್ಣ ಆಚಾರಿ ಚಿತ್ರಹಿಂಸೆಯಿ0ದ ನಲುಗಿ ಸಾವನಪ್ಪಿದ ಆಕಳ ನೋಡಿ…
RSS | ಶಿಸ್ತಿನ ಸಿಪಾಯಿಗಳು ನಾವು!
ಧರ್ಮ ಹಾಗೂ ರಾಷ್ಟ್ರ ಜಾಗೃತಿ ಸಂದೇಶ ಸಾರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಇದೀಗ 100ರ ಸಂಭ್ರಮ. ಈ ಹಿನ್ನಲೆ ಭಾನುವಾರ ಯಲ್ಲಾಪುರದಲ್ಲಿ ಸಂಘಟನೆ ಹಾಗೂ ಭಾವನಾತ್ಮಕ ದೃಷ್ಠಿಕೋನದ ವಿಶೇಷ ಕಾರ್ಯಕ್ರಮ ನಡೆಯಿತು. ಪ್ರತಿ ವರ್ಷ ಸಂಕ್ರಾತಿ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂ…







