ಬೈಕಿಗೆ ಪೆಟ್ರೋಲ್ ಹಾಕುವ ವಿಷಯ: ಹೊಡೆದಾಟ!
ಪೆಟ್ರೋಲ್ ಹಾಕಿಸುವುದಕ್ಕಾಗಿ ಸಾಲಿನಲ್ಲಿ ನಿಂತಿದ್ದ ಮಂಜುನಾಥ ಹೊನ್ನಳ್ಳಿ ಎಂಬಾತರಿಗೆ ಇಬ್ಬರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಥಳಿಸಿದವರ ಹೆಸರು-ವಿಳಾಸ ಪತ್ತೆಯಾಗಿಲ್ಲ! ಕಲಘಟಕಿ ಚಾಲಕ ಮಂಜುನಾಥ ಹೊನ್ನಳಿ ಜನವರಿ 16ರ ಸಂಜೆ ಯಲ್ಲಾಪುರದ ಹೊಸಳ್ಳಿ ಪೆಟ್ರೋಲ್ ಬಂಕಿಗೆ ಬಂದಿದ್ದರು. ಪಾಳಿ ಪ್ರಕಾರ ಅವರು ತಮ್ಮ ಬೈಕಿಗೆ…
ರಾಮತೀರ್ಥ | ನೀರು ಬತ್ತಿಲ್ಲ.. ಪತ್ರಿಕಾ ವರದಿ ಸತ್ಯವಲ್ಲ!
ಪುರಾಣ ಪ್ರಸಿದ್ಧ ಗೋಕರ್ಣದ ರಾಮತೀರ್ಥದ ನೀರು ಬತ್ತಿರುವ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದ್ದು, ಇದು ಸತ್ಯವಲ್ಲ! ಕಳೆದ ಮಳೆಗಾಲದ ಅವಧಿಯಲ್ಲಿ ರಾಮತೀರ್ಥದ ಬಳಿ ಗುಡ್ಡ ಕುಸಿತ ಉಂಟಾಗಿತ್ತು. ಅದರ ಪರಿಣಾಮ ಝರಿಯಿಂದ ನೀರು ಹರಿಯುವ ಮಾರ್ಗವನ್ನು ಮಣ್ಣು ಆವರಿಸಿತ್ತು. ಇದರಿಂದ…
ಊರಿನವರ ಸಾಹಸ: ಬೋನಿಗೆ ಬಿದ್ದ ಮರಿ ಚಿರತೆ!
ಕಳೆದ ಎರಡು ತಿಂಗಳಿನಿoದ ಹೊನ್ನಾವರದ ವಂದಿಗೆ ಜಡ್ಡಿಗದ್ದೆ ಭಾಗದಲ್ಲಿ ಜನರ ನಿದ್ದೆಗೆಡಿಸಿದ್ದ ಚಿರತೆ ಶುಕ್ರವಾರ ರಾತ್ರಿ ಬೋನಿಗೆ ಬಿದ್ದಿದೆ. ಊರಿನವರು ತಿಂಗಳುಗಳ ಕಾಲ ಚಿರತೆ ಸೆರೆಹಿಡಿಯುವ ಸಾಹಸ ನಡೆಸಿದ್ದು, ಕೊನೆಗೂ ಮರಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಈ ಹಿಂದೆ ಬೈಕಿನಲ್ಲಿ ಸಂಚರಿಸುತ್ತಿದ್ದ…
ಪದೋನ್ನತಿಪಡೆದ ನೌಕರನಿಗೆ ತಾಮ್ರದ ಕೊಡ ಉಡುಗರೆ!
ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಪದೋನ್ನತಿ ಪಡೆದು ಬೇರೆಡೆ ವರ್ಗವಾಗಿರುವ ರಾಜೇಂದ್ರ ನಾಯ್ಕ ಅವರಿಗೆ ಅವರ ಸಹದ್ಯೋಗಿಗಳು ಸನ್ಮಾನಿಸಿದ್ದು, ಈ ವೇಳೆ ಶಿಕ್ಷಕರೊಬ್ಬರು ತಾಮ್ರದ ಕೊಡವನ್ನು ಉಡುಗರೆಯಾಗಿ ನೀಡಿದ್ದಾರೆ. ಕಾರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ರಾಜೇಂದ್ರ ನಾಯ್ಕ ಅವರು ಮೇಲ್ವಿಚಾರಕರಾಗಿದ್ದರು. ಕಡತವನ್ನು…
ಜಾತ್ರೆಯಲ್ಲಿ ಪೊಲಿ ಹುಡುಗರ ಕಾಟ: ಪ್ರಶ್ನಿಸಿದವನ ಕಿವಿ ಕಚ್ಚಿ ಪರಾರಿಯಾದ ಪರ ಪತ್ನಿ ಪೀಡಕ!
ಜಾತ್ರೆಗೆ ಬಂದ ಮಹಿಳೆಯನ್ನು ಹಿಂಬಾಲಿಸಿದವನನ್ನು ಪ್ರಶ್ನಿಸಿದ ಕಾರಣ ಮುಂಡಗೋಡು ಸಾಲಗಾಂವ್ ಜಾತ್ರೆಯಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಜನವರಿ 15ರ ರಾತ್ರಿ ಸಾಲಗಾಂವ್ ಜಾತ್ರೆ ನಡೆಯುತ್ತಿತ್ತು. ಆಂದಲಗಿಯ ಶರಣ ಕಣ್ಣೂರು ಅವರು ಕುಟುಂಬಸಹಿತವಾಗಿ ಜಾತ್ರೆಗೆ ಹೋಗಿದ್ದರು. ಶರಣ ಕಣ್ಣೂರು ಅವರ…
ವಾಸ್ತುತಜ್ಞನ ಗೃಹಚಾರ ಬಿಡಿಸಿದ ಸ್ನೇಹಿತರು!
ಸರಾಯಿ ಅಂಗಡಿ ಮುಂದೆ ನಿಂತಿದ್ದ ವಾಸ್ತು ತಜ್ಞನಿಗೆ ಅಂಕೋಲೆಯ ನಾಲ್ವರು ಚಳಿ ಬಿಡಿಸಿದ್ದಾರೆ. ವಾಸ್ತುತಜ್ಞನ ಮೇಲೆ ದಾಳಿ ನಡೆಸಿದವರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಬೆಂಗಳೂರಿನ ಬೇಸ್ ವಾಸ್ತು ಇಎನ್ಜಿಜಿ ಸರ್ವೀಸ್’ನ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಭಾಕರ ನಾಯ್ಕ ಮೇಲೆ ಅಂಕೋಲಾದ ವಿನಾಯಕ…
ಬೈಕಿಗೆ ಗುದ್ದಿದ ಲಾರಿ: ಸ್ಥಳದಲ್ಲಿಯೇ ಮಹಿಳೆ ಸಾವು!
ಹುಬ್ಬಳ್ಳಿಯಿಂದ ಯಲ್ಲಾಪುರ ಕಡೆ ಬರುತ್ತಿದ್ದ ಲಾರಿ ಕಿರವತ್ತಿ ಅರಣ್ಯ ತಪಾಸಣಾ ಕೇಂದ್ರದ ಬಳಿ ಬೈಕಿಗೆ ಡಿಕ್ಕಿಯಾಗಿದೆ. ಇದರ ಪರಿಣಾಮ ಬೈಕಿನ ಹಿಂದೆ ಕೂತಿದ್ದ ಮಹಿಳೆಯೊಬ್ಬರ ಕೈ ತುಂಡಾಗಿ, ಅವರು ಅಲ್ಲಿಯೇ ಸಾವನಪ್ಪಿದ್ದಾರೆ. ಜನವರಿ 16ರಂದು ಬೈಲಂದೂರಿನ ಜಗ್ಗು ಕೊಕರೆ ಅವರು ತಮ್ಮ…
ಸಾಲ ಮಾಡಿ ಶಬರಿಮಲೆಗೆ ಹೋದ ರಿಕ್ಷಾ ಚಾಲಕನಿಗೆ ಸಂಕಷ್ಟ!
ಸ್ನೇಹಿತರ ಬಳಿ 10 ಸಾವಿರ ರೂ ಸಾಲ ಮಾಡಿ ಶಬರಿಮಲೆಗೆ ಹೋಗಿದ್ದ ಶ್ರೀನಿವಾಸ ರೆಡ್ಡಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. `ಹಣ ಮರಳಿಸಿದೇ ಇದ್ದಲ್ಲಿ ಕೊಲೆ ಮಾಡುವೆ’ ಎಂದು ಬೆದರಿಸಿದ ಮೂವರು ಸ್ನೇಹಿತರು ಸೇರಿ ಶ್ರೀನಿವಾಸ ರೆಡ್ಡಿ ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದು, ಅವರು ಶಿರಸಿ…
ಆನೆ ಬಂದರೂ ಬಾರದ ಅರಣ್ಯಾಧಿಕಾರಿಗಳು: ಅಪಾಯಕಾರಿ ಸನ್ನಿವೇಶದಲ್ಲಿಯೂ ಸೆಲ್ಪಿಗೆ ಮುಗಿಬಿದ್ದ ಪ್ರವಾಸಿಗರು!
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ-ಹಳಿಯಾಳ ಭಾಗದಲ್ಲಿ ಎರಡು ದಿನಗಳಿಂದ ಕಾಡಾನೆಗಳ ಓಡಾಟ ಜೋರಾಗಿದೆ. ರಾತ್ರಿ ವೇಳೆ ಹೊಲ-ತೋಟಗಳಿಗೆ ನುಗ್ಗುತ್ತಿರುವ ಆನೆಗಳು ಹಗಲಿನಲ್ಲಿ ರಸ್ತೆ ಅಂಚಿನಲ್ಲಿಯೇ ಕಾಣಿಸುತ್ತಿವೆ. ದಾಂಡೇಲಿ ಪ್ರವಾಸಕ್ಕೆ ಬರುವ ಜನ ಜೀವದ ಆಸೆ ಬಿಟ್ಟು ಆನೆಗಳ ಜೊತೆ ಸೆಲ್ಪಿ ತೆಗಿಸಿಕೊಳ್ಳುತ್ತಿದ್ದಾರೆ!…
ರಸ್ತೆ ನಿರ್ಮಾಣಕ್ಕೆ ಮುಹೂರ್ತ – ಶಾಲೆ ಅಂಗನವಾಡಿ ಅಭಿವೃದ್ಧಿಗೆ ಸಂಕಲ್ಪ: ಗುಡ್ಡಳ್ಳಿಗೆ ಜಿಲ್ಲಾಧಿಕಾರಿ ಬಂದಿದ್ದು ಸಾರ್ಥಕ!
ಕಾರವಾರ ನಗರಸಭೆ ವ್ಯಾಪ್ತಿಯಲ್ಲಿದ್ದರೂ ಕುಗ್ರಾಮಗಳ ಪಟ್ಟಿಯಲ್ಲಿರುವ ಗುಡ್ಡಳ್ಳಿಗೆ ವಿವಿಧ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಮುಂದಾಗಿದ್ದಾರೆ. ಶುಕ್ರವಾರ ಗುಡ್ಡಳ್ಳಿಗೆ ದಿಢೀರ್ ಭೇಟಿ ನೀಡಿದ ಅವರು ಜನರ ಸಮಸ್ಯೆ ಆಲಿಸಿದರು. ಅದಾದ ನಂತರ ಅಭಿವೃದ್ಧಿ ಚಟುವಟಿಕೆಯ ಬಗ್ಗೆ ಚರ್ಚಿಸಿ ವಾಗ್ದಾನ ಮಾಡಿದರು.…







