6

ಪದೋನ್ನತಿಪಡೆದ ನೌಕರನಿಗೆ ತಾಮ್ರದ ಕೊಡ ಉಡುಗರೆ!

ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಪದೋನ್ನತಿ ಪಡೆದು ಬೇರೆಡೆ ವರ್ಗವಾಗಿರುವ ರಾಜೇಂದ್ರ ನಾಯ್ಕ ಅವರಿಗೆ ಅವರ ಸಹದ್ಯೋಗಿಗಳು ಸನ್ಮಾನಿಸಿದ್ದು, ಈ ವೇಳೆ ಶಿಕ್ಷಕರೊಬ್ಬರು ತಾಮ್ರದ ಕೊಡವನ್ನು ಉಡುಗರೆಯಾಗಿ ನೀಡಿದ್ದಾರೆ.

ಕಾರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ರಾಜೇಂದ್ರ ನಾಯ್ಕ ಅವರು ಮೇಲ್ವಿಚಾರಕರಾಗಿದ್ದರು. ಕಡತವನ್ನು ಕೂಲಂಕುಷವಾಗಿ ಪರಿಶೀಲಿಸಿ ಅದನ್ನು ಮುಂದಿನ ಹಂತಕ್ಕೆ ತಲುಪಿಸುವ ಕೆಲಸವನ್ನು ರಾಜೇಂದ್ರ ನಾಯ್ಕ ಅವರು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಪ್ರಸ್ತುತ ರಾಜೇಂದ್ರ ನಾಯ್ಕ ಅವರು ಪತ್ರಾಂಕಿತ ಅಧಿಕಾರಿಯಾಗಿ ಪದೋನ್ನತಿ ಪಡೆದಿದ್ದಾರೆ. ಇದರೊಂದಿಗೆ ಚಿಕ್ಕೋಡಿ ಜಿಲ್ಲೆಯ ರಾಯಭಾಗಕ್ಕೆ ಅವರು ವರ್ಗವಾಗಿದ್ದಾರೆ. ಈ ಹಿನ್ನಲೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ತಾಲೂಕು ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘದವರು ಅವರನ್ನು ಗೌರವಿಸಿದರು. ಬಿಆರ್‌ಸಿವತಿಯಿಂದಲೂ ಸನ್ಮಾನಿಸಲಾಯಿತು.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಹಾಸ ರಾಯ್ಕರ ಅವರು ರಾಜೇಂದ್ರ ನಾಯ್ಕ ಅವರ ಸೇವೆಯನ್ನು ಸ್ಮರಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ವಿಠೋಬ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಪಿ ಗೌಡ, ಬಿ ಆರ್ ಸಿ ಪ್ರಭಾರಿ ಸಮನ್ವಯಾಧಿಕಾರಿ ಸುಜಾತಾ ಜಾವಕರ, ಪ್ರೌಢ ಶಾಲಾ ಮುಖ್ಯಾಧ್ಯಾಪಕರ ಸಂಘದ ಅಧ್ಯಕ್ಷ ದಿನೇಶ ಗಾಂವಕರ ಇತರರು ಹಾಜರಿದ್ದರು. ಈ ವೇಳೆ ನಗೆ ಶಾಲೆಯ ಮುಖ್ಯ ಶಿಕ್ಷಕ ಅಖ್ತರ ಸೈಯದ್ ಅವರು ವೈಯಕ್ತಿಕವಾಗಿ ರಾಜೇಂದ್ರ ನಾಯ್ಕ ಅವರಿಗೆ ತಾಮ್ರದ ಕೊಡ ಹಾಗೂ ತಾಂಬೂಲವನ್ನು ನೀಡಿ ಗೌರವಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page