ಆರ್.ಎಸ್.ಎಸ್ ಬಗ್ಗೆ ಮರಿ ಖರ್ಗೆಯವರ ಹೇಳಿಕೆ ಬಾಲಿಶವಾದದ್ದು: ರಾಮು ನಾಯ್ಕ
ಪ್ರಚಾರ ಪ್ರಿಯ ಪ್ರಿಯಾಂಕ್ ಖರ್ಗೆ, ಮುಂದಿನ ಸಚಿವ ಸಂಪುಟದಿಂದ ತಮ್ಮನ್ನು ಕೈಬಿಡುವುದು ಖಚಿತವಾಗುತ್ತಿದ್ದಂತೆ ಹತಾಶರಾಗಿದ್ದಾರೆ ಹೊಸ ಪ್ರಚಾರ ಆರಂಭಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸುವ ಅವರ ಹೇಳಿಕೆ ಬಾಲಿಶತನದ್ದು ಎಂದು ಬಿಜೆಪಿ ಮುಖಂಡ ರಾಮು ನಾಯ್ಕ ವ್ಯಂಗ್ಯವಾಡಿದ್ದಾರೆ. ಕಳೆದ ನೂರು…
ಅಕ್ರಮವಾಗಿ ದನಗಳ ಸಾಗಾಟ: ಪೊಲೀಸರಿಂದ 6 ದನಗಳ ರಕ್ಷಣೆ
ಅಕ್ರಮವಾಗಿ ಬುಲೆರೊ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ಪೊಲೀಸರು ಯಲ್ಲಾಪುರ ಪಟ್ಟಣದ ಮಲಬಾರ್ ಹೋಟೆಲ್ ಬಳಿ ಸೋಮವಾರ ರಕ್ಷಿಸಿದ್ದಾರೆ. ಈ ಸಂಬಂಧ ಓರ್ವನನ್ನು ಬಂಧಿಸಲಾಗಿದೆ. ಭಟ್ಕಳದ ಮಹಮ್ಮದ್ ಸಿದ್ದಿಕ್ ಅಬ್ದುಲ್ ಅಮೀರ್ ಮಜಾರ ಬಂಧಿತ. ಈತನೊಂದಿಗಿದ್ದ ರಬ್ಬಾನಿ ಬಾಬಾಸಾಬ ಕಚವಿ ಹಾಗೂ ಅಲ್ತಾಫ…
ಚುನಾವಣಾ ಪ್ರಕ್ರಿಯೆಗೆ ತಾತ್ಕಾಲಿಕ ತಡೆಯಾಜ್ಞೆ
ನಗರ ಪಾಲಿಕೆ ಮಂಡಳಿಗಳ ಅವಧಿ ಮುಗಿಯುವವರೆಗೆ ಸರ್ಕಾರವು ಆಡಳಿತಾಧಿಕಾರಿಗಳನ್ನು ನೇಮಿಸದೇ ಇರುವಂತೆ ಹೈಕೋರ್ಟ್ ಸರ್ಕಾರಕ್ಕೆ ತಾತ್ಕಾಲಿಕ ನಿರ್ದೇಶನ ನೀಡಿದೆ. ಇದರಿಂದ ಹಾಲಿ ಸದಸ್ಯರ ಪಾಲಿಗೆ ಅವಧಿ ಇನ್ನಷ್ಟು ಮುಂದುವರಿಯಬಹುದೆಂಬ ನಿರೀಕ್ಷೆ ಉಂಟಾಗಿದ್ದರೆ, ಹೊಸದಾಗಿ ಸ್ಥಳೀಯ ಆಡಳಿತದ ಸದಸ್ಯತ್ವಕ್ಕಾಗಿ ಸ್ಪರ್ಧಿಸುವ ಉತ್ಸಾಹದಲ್ಲಿದ್ದವರಿಗೆ ಸ್ವಲ್ಪ…
ಶೀಲ ಶಂಕಿಸಿದ ಪತಿ: ಪತ್ನಿಯ ಜೀವ ಬೆಂಕಿಗಾಹುತಿ
ಯಲ್ಲಾಪುರ ತಾಲೂಕಿನ ಕಿರವತ್ತಿ ಬೊಮಡಿಕೊಪ್ಪದಲ್ಲಿ ಮಹಿಳೆಯ ಶೀಲ ಶಂಕಿಸಿ ಗಂಡನೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾರೆ. ಜನ್ನಿ ಬಾಬು ಖಾತ್ರೋಟ (23) ಮೃತ ಮಹಿಳೆ. ಈಕೆ ಕಳೆದ ಅಕ್ಟೋಬರ್ 3 ರಂದು ಮಕ್ಕಳೊಂದಿಗೆ…
‘ಕೃಷ್ಣಾರ್ಪಣಂ’ ಕಾರ್ಯಕ್ರಮ: ಎಲ್ಲರ ಮನಗೆದ್ದ ದಿಯಾ ಹೆಗಡೆ
ಕಲೆ,ಸಂಸ್ಕೃತಿ ಹಾಗೂ ಭಾರತೀಯ ಪರಂಪರೆಯ ಮೌಲ್ಯಗಳನ್ನು ಶ್ರೀಕೃಷ್ಣಾರ್ಪಣಂ ಸಮಾರಂಭದ ಮೂಲಕ ಸುಜ್ಞಾನ ಸೇವಾ ಸಂಸ್ಥೆಯು ಸಮಾಜಕ್ಕೆ ತಲುಪಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ಅವರು ಸುಜ್ಞಾನ ಸೇವಾ ಸಂಸ್ಥೆ, ಇ-ಯಲ್ಲಾಪುರ ಡಿಜಿಟಲ್ ನ್ಯೂಸ್, ಸುಜ್ಞಾನ ವಾಹಿನಿ ಪತ್ರಿಕೆಯ ವತಿಯಿಂದ…
ಅಂಗಡಿ, ಗೋಡೌನಿಗೆ ಬೆಂಕಿ: ಅಪಾರ ಪ್ರಮಾಣದ ಹಾನಿ
ಯಲ್ಲಾಪುರದ ಐಬಿ ರಸ್ತೆಯ ಪಕ್ಕದಲ್ಲಿರುವ ಅಂಗಡಿ ಹಾಗೂ ಸಮೀಪದ ಗೋಡೌನಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಕಾಯಿ, ಹಣ್ಣು ವ್ಯಾಪಾರ, ಖರೀದಿ ಮಾಡುವ ಶಿವಾನಂದ ಮರಾಠಿ ದೊಡ್ಡಬೇಣ ಅವರಿಗೆ ಸೇರಿದ ಈ ಅಂಗಡಿಯೊಳಗೆ ಶನಿವಾರ ನಸುಕಿನಲ್ಲಿ ವಿದ್ಯುತ್…
ಗುಂಡ್ಕಲ್ ಗಣಪಜ್ಜ ಇನ್ನಿಲ್ಲ
ಯಲ್ಲಾಪುರ ತಾಲೂಕಿನ ಗುಂಡ್ಕಲ್ ನ ಗಣಪತಿ ಮಹಾಬಲೇಶ್ವರ ಭಟ್ಟ (ಗೇರಗದ್ದೆ) ಶನಿವಾರ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ನಾಲ್ವರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರು ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದ ಟ್ರಸ್ಟಿ ಆಗಿದ್ದ…
ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯುವ ಯತ್ನ: ವಕೀಲನ ಬಂಧನಕ್ಕೆ ದಲಿತ ಸಂಘರ್ಷ ಸಮಿತಿ ಆಗ್ರಹ
ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲೆ ಹಾಗೂ ತಾಲೂಕು ಸಮಿತಿಯಿಂದ ಯಲ್ಲಾಪುರದಲ್ಲಿ ತಹಸೀಲ್ದಾರ ಚಂದ್ರಶೇಖರ ಹೊಸ್ಮನಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.…
ಜಿಲ್ಲಾಮಟ್ಟದ ಕ್ರೀಡಾಕೂಟ: ಥ್ರೊ ಬಾಲ್ ಸ್ಪರ್ಧೆಯಲ್ಲಿ ನಂದೊಳ್ಳಿ, ಹಿತ್ಲಳ್ಳಿ ಬಾಲಕಿಯರು ವಿಭಾಗ ಮಟ್ಟಕ್ಕೆ
ಸಿದ್ದಾಪುರದಲ್ಲಿ ನಡೆದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಯಲ್ಲಾಪುರ ತಾಲೂಕಿನ ನಂದೊಳ್ಳಿ ಹಾಗೂ ಹಿತ್ಲಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನೊಳಗೊಂಡ ತಂಡ ಸಾಧನೆ ಮಾಡಿದೆ. ಬಾಲಕಿಯರ ಥ್ರೋ ಬಾಲ್ ವಿಭಾಗದಲ್ಲಿ ಯಲ್ಲಾಪುರ ತಾಲೂಕನ್ನು ಪ್ರತಿನಿಧಿಸಿದ್ದ ನಂದೊಳ್ಳಿ ಹಾಗೂ ಹಿತ್ಲಳ್ಳಿ…
ಮರದಿಂದ ಬಿದ್ದು ಕೃಷಿಕ ಸಾವು
ಮರದಿಂದ ಬಿದ್ದು ಕೃಷಿಕನೊಬ್ಬ ಮೃತಪಟ್ಟ ಘಟನೆ ಯಲ್ಲಾಪುರ ತಾಲೂಕಿನ ಮಾಗೋಡ ಸಮೀಪದ ಮೇಲಿನ ತಾರೀಮನೆಯಲ್ಲಿ ನಡೆದಿದೆ. ಗಣಪತಿ ನಾರಾಯಣ ಭಟ್ಟ (62) ಮೃತ ಕೃಷಿಕ. ಇವರು ತಮ್ಮ ಅಡಿಕೆ ತೋಟಕ್ಕೆ ಹಾಕುವುದಕ್ಕಾಗಿ ಸೊಪ್ಪು ಕಡಿಯಲು ಮರ ಏರಿದಾಗ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ…
















