6

ಆರ್.ಎಸ್.ಎಸ್ ಬಗ್ಗೆ ಮರಿ ಖರ್ಗೆಯವರ ಹೇಳಿಕೆ ಬಾಲಿಶವಾದದ್ದು: ರಾಮು ನಾಯ್ಕ

ಪ್ರಚಾರ ಪ್ರಿಯ ಪ್ರಿಯಾಂಕ್ ಖರ್ಗೆ, ಮುಂದಿನ ಸಚಿವ ಸಂಪುಟದಿಂದ ತಮ್ಮನ್ನು ಕೈಬಿಡುವುದು ಖಚಿತವಾಗುತ್ತಿದ್ದಂತೆ ಹತಾಶರಾಗಿದ್ದಾರೆ ಹೊಸ ಪ್ರಚಾರ ಆರಂಭಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸುವ ಅವರ ಹೇಳಿಕೆ ಬಾಲಿಶತನದ್ದು ಎಂದು ಬಿಜೆಪಿ ಮುಖಂಡ ರಾಮು ನಾಯ್ಕ ವ್ಯಂಗ್ಯವಾಡಿದ್ದಾರೆ.

ಕಳೆದ ನೂರು ವರ್ಷಗಳಲ್ಲಿ ಮೂರು ತಲೆಮಾರುಗಳು ಕಳೆದುಹೋದವು. ಇವರ ರಾಜಕೀಯ ನೇತಾರ ರಾಜೀವ ಗಾಂಧಿ, ಅವರಮ್ಮ ಇಂದಿರಾ ಗಾಂಧಿ, ಅವರಪ್ಪ ಜವಾಹರಲಾಲ ನೆಹರು ಯಾರಿಂದಲೂ ಸಂಘವನ್ನು ಬಗ್ಗಿಸಲು ಆಗಲಿಲ್ಲ. ಇನ್ನೂ ಬೆಳೆಯುತ್ತಲೇ ಇದೆ. ಕಳೆದ ನೂರು ವರ್ಷಗಳಲ್ಲಿ ಸಂಘ ರಾಷ್ಟ್ರವ್ಯಾಪಿ ಹೆಮ್ಮರವಾಗಿ ಬೆಳೆದಿದೆ. ಈಗ ಬಗ್ಗಿಸುವ ಮಾತನಾಡುವುದು ಹುಚ್ಚುತನದ ಪರಮಾವಧಿ.

ಅದು ಖರ್ಗೆಗೂ ಗೊತ್ತು. ಆದರೆ, ತಾನು ಸಂಘವನ್ನು ಇಷ್ಟು ಬಹಿರಂಗವಾಗಿ ಟೀಕಿಸಿದ ಕಾರಣಕ್ಕಾಗಿಯಾದರೂ ರಾಹುಲ್ ಗಾಂಧಿ ಪ್ರಸನ್ನರಾಗಿ, ತಮ್ಮ ಸಚಿವ ಸ್ಥಾನ ಅಬಾಧಿತವಾಗಿ ಉಳಿಯಬಹುದೆಂಬ ದೂರದ ಲೆಕ್ಕಾಚಾರ ಮರಿ ಖರ್ಗೆಯವರದು ಎಂದು ರಾಮು ನಾಯ್ಕ ವಿಶ್ಲೇಷಿಸಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page