ಮಿತಿ ಮೀರಿದ ಕಳ್ಳರ ಕಾಟ: ಒಂದು ಮನೆಯಲ್ಲಿ ಚಿನ್ನ.. ಇನ್ನೊಂದು ಮನೆಗೆ ಕನ್ನ!
ಮುಂಡಗೋಡ: ಹುನಗುಂದ ಗ್ರಾಮದ ಎರಡು ಮನೆಗಳಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿಯಾಗಿಸಿದ್ದಾರೆ. ಒಂದು ಮನೆಯಲ್ಲಿ ಕಳ್ಳತನ ನಡೆಸಿದ್ದು, ಇನ್ನೊಂದು ಮನೆಯಲ್ಲಿ ಏನೂ ಸಿಗದ ಕಾರಣ ನಿರಾಸೆಯಿಂದ ತೆರಳಿದ್ದಾರೆ. ದೇವಕ್ಕ ವಡ್ಡರ್ ಅವರ ಮನೆಯಲ್ಲಿ 25 ಸಾವಿರ ರೂ ಹಣ ನಾಪತ್ತೆಯಾಗಿದೆ.…
ಇನ್ನೊಂದು ಕ್ರೀಡೆಗೆ ಸಜ್ಜಾದ ಕಾಳಮ್ಮನಗರ: ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ!
ಯಲ್ಲಾಪುರ: ಯಲ್ಲಾಪುರ ಕ್ರಿಕೆಟ್ ಅಸೋಶಿಯೇಶನ್ ನಡೆಸುತ್ತಿರುವ `ಯಲ್ಲಾಪುರ ಕ್ರಿಕೆಟ್ ಪ್ರಿಮಿಯರ್ ಲೀಗ್’ ಈ ಭಾನುವಾರದಿಂದ ಕಾಳಮ್ಮನಗರ ಕ್ರೀಡಾಂಗಣದಲ್ಲಿ ನಡೆಯಲಿದೆ. 10 ತಂಡಗಳು ಈ ಹಣಹಣಿಯಲ್ಲಿ ಭಾಗವಹಿಸಲಿದ್ದು, ಎಲ್ಲಾ ಬಗೆಯ ಸಿದ್ಧತೆಗಳು ಜೋರಾಗಿ ನಡೆದಿದೆ. ಮೂರು ವಾರಗಳ ಕಾಲ ಈ ಆಟ ನಡೆಯಲಿದೆ.…
ಮರದ ಮೇಲೆ ನೇತಾಡಿದ ಮರಿ: ನರಿ ಮುಖ ನೋಡಿದ ಚಿರತೆ!
ಮುಂಡಗೋಡ: ಲಕ್ಕೊಳ್ಳಿ ಗ್ರಾಮದ ಗದ್ದೆ ಅಂಚಿನ ಅರಣ್ಯದಲ್ಲಿ ಚಿರತೆಯೊಂದು ನರಿಯನ್ನು ಅರೆಬರೆಯಾಗಿ ಭಕ್ಷಿಸಿದೆ. ನರಿ ಮುಖ ಭಾಗವನ್ನು ಮಾತ್ರ ಜೀರ್ಣಿಸಿಕೊಂಡ ಚಿರತೆ ದೇಹವನ್ನು ಮರಕ್ಕೆ ಸಿಕ್ಕಿಸಿ ಕಾಡಿನ ದಾರಿ ಹಿಡಿದಿದೆ. ಗದ್ದೆ ಕೆಲಸಕ್ಕೆ ಹೋಗಿದ್ದ ಮಹಿಳೆಯೊಬ್ಬರು ನರಿಯ ಶವ ನೋಡಿದರು. ಭಯಗೊಂಡ…
ವಿದೇಶಿ ವೃದ್ಧೆಗೆ ಜೀವದಾನ!
ಕುಮಟಾ: ಈಜಲು ತೆರಳಿ ಅಲೆಗಳ ಅಬ್ಬರಕ್ಕೆ ಸಿಲುಕಿದ್ದ ವಿದೇಶಿ ವೃದ್ಧೆಗೆ ಸ್ಥಳೀಯ ಜೀವ ರಕ್ಷಕ ಸಿಬ್ಬಂದಿ ಮರು ಜೀವ ನೀಡಿದ್ದಾರೆ. ಫ್ರಾನ್ಸಿನಿಂದ ಬಂದು ಅರಬ್ಬಿ ಸಮುದ್ರಕ್ಕೆ ಹಾರಿದ್ದ 73 ವರ್ಷದ ಧನ್ಯ ಎಂಬಾತರನ್ನು ಗೋಕರ್ಣದ ಲೈಫ್ಗಾರ್ಡ ಸಿಬ್ಬಂದಿ ದಡಕ್ಕೆ ಎಳೆದು ತಂದಿದ್ದಾರೆ.…
ಪೊಲೀಸ್ ದಾಳಿ: ರಾಮನ ಊರಿನಲ್ಲಿ ಮದ್ಯ ತೀರ್ಥ!
ಜೊಯಿಡಾ: ಚಹಾ ಹೊಟೇಲ್’ನಲ್ಲಿ ಸರಾಯಿ ಮಾರುತ್ತಿದ್ದ ಎರಡು ಹೊಟೇಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ರಾಮನಗರದ ರಾಮಲಿಂಗಗಲ್ಲಿಯ ಕಿರಣ ದೇಸಾಯಿ ಹಾಗೂ ನವೀನ ಗಂಗೈಕರ್ ತಮ್ಮ ಹೊಟೇಲಿನಲ್ಲಿ ಸರಾಯಿ ಸೇವನೆಗೆ ಅವಕಾಶ ಕೊಟ್ಟು ಸಿಕ್ಕಿ ಬಿದ್ದಿದ್ದಾರೆ. ಪುಟ್ಟ ಹೊಟೇಲ್ ನಡೆಸುವ ಈ…
ಹಿತ್ತಲಿಗೆ ಹೋದವ ಹೊಳೆ ಪಾಲಾದ!
ಹೊನ್ನಾವರ: ಮನೆ ಹಿಂದಿನ ಹಿತ್ತಲಿಗೆ ಹೋದ ವಾಸು ನಾಯ್ಕ ಹೊಳೆಗೆ ಬಿದ್ದು ಸಾವನಪ್ಪಿದ್ದಾರೆ. ಅವರ ಮನೆಯಿಂದ ಅನತಿ ದೂರದ ನದಿಯಲ್ಲಿ ವಾಸು ಅವರ ಶವ ಸಿಕ್ಕಿದೆ. ಹೊನ್ನಾವರದ ಮುಟ್ಟಾ ಜನ್ನಕಡ್ಕಲ್ ಬಳಿಯ ಹರಡಸೆ ಗ್ರಾಮದ ವಾಸು ಸಣ್ತಮ್ಮ ನಾಯ್ಕ (64) ಅವರು…
ಕಳ್ಳರ ಕಿಸೆ ಸೇರಿದ ದೇವರ ಕಾಸು: ಕಾಸಿನ ಜೊತೆ ಕ್ಯಾಮರಾವೂ ಮಾಯ!
ಕುಮಟಾ: ಬರ್ಗಿ ಘಟಿಬೀರ ದೇವಸ್ಥಾನದ ಕಾಣಿಕೆ ಹುಂಡಿ ಒಡೆದ ಕಳ್ಳರು ಅಲ್ಲಿದ್ದ 1 ಸಾವಿರ ರೂ ಎಗರಿಸಿದ ನಂತರ ಸಿಸಿ ಕ್ಯಾಮರಾವನ್ನು ಸಹ ಕದ್ದೊಯ್ದಿದ್ದಾರೆ. ಸಿಸಿ ಕ್ಯಾಮರಾಗೆ ಅಳವಡಿಸಿದ್ದ ಹಾರ್ಡಡಿಸ್ಕ್, ಬ್ಯಾಟರಿ ಸೇರಿ ಒಟ್ಟು 48,500ರೂ ಮೌಲ್ಯದ ಸಾಮಗ್ರಿಗಳು ಕಳ್ಳರ ಪಾಲಾಗಿದೆ.…
ಆಶಾ ಕಾರ್ಯಕರ್ತರಿಗೆ ಆಸೆ: ಸರ್ಕಾರದಿಂದ ಪದೇ ಪದೇ ನಿರಾಸೆ!
ಶಿರಸಿ: 15 ಸಾವಿರ ರೂ ಮಾಸಿಕ ವೇತನಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸೇರಿ ಪ್ರತಿಯೊಬ್ಬರ ಆಶಾ ಕಾರ್ಯಕರ್ತೆಯರಿಗೂ ಕನಿಷ್ಟ 15 ಸಾವಿರ ವೇತನ ನೀಡಬೇಕು ಎಂದು ಪ್ರತಿಭಟನಾಕಾರರು…
ಲೋಕಾರ್ಪಣೆಗೆ ಸಜ್ಜುಗೊಂಡ ನಾಯ್ಕನಕೆರೆ ದತ್ತ ಮಂದಿರ
ಯಲ್ಲಾಪುರ: ಪಟ್ಟಣದ ನಾಯ್ಕನಕೆರೆ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾದ ದತ್ತ ಮಂದಿರದ ಲೋಕಾರ್ಪಣೆಗೆ ಸಜ್ಜಾಗಿದೆ. ದೇವರ ಪುನರ್ ಪ್ರತಿಷ್ಠಾಪನೆ ಅಂಗವಾಗಿ ಡಿಸೆಂಬರ್ 13ರಿಂದ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಾಘವೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಪ್ರತಿಷ್ಠಾಪನಾ ವಿಧಿವಿಧಾನಗಳು ನಡೆಯಲಿದ್ದು, ಹದಿನೈದಕ್ಕೂ ಹೆಚ್ಚು…
ಬಿಪಿ-ಶುಗರು | ಕೈಗಾ ಅಣು ಉದ್ಯೋಗಿ ಸಾವಿನಲ್ಲಿ ಅನುಮಾನವೇ ಇಲ್ಲ!
ಕಾರವಾರ: ಕೈಗಾ ಅಣು ವಿದ್ಯುತ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ ಹಾದಿಮನೆ ಸಾವನಪ್ಪಿದ್ದಾರೆ. `ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಅವರು ಸಾವನಪ್ಪಿದ್ದು, ಈ ಸಾವಿನಲ್ಲಿ ಯಾವುದೇ ಸಂಶಯವಿಲ್ಲ’ ಎಂದು ಅವರ ಸಹೋದರ ಉದಯ ಹಾದಿಮನೆ ಪೊಲೀಸ್ ದೂರಿನಲ್ಲಿ ವಿವರಿಸಿದ್ದಾರೆ. ಕುಮಟಾದ ನಾಗದೇವಿ…








