ಬೈಕ್ ಸವಾರನ ಬಲಿ ಪಡೆದ ಟ್ಯಾಂಕರ್: ಲಾರಿ ಬಿಟ್ಟು ಓಡಿದ ಚಾಲಕ
ಟ್ಯಾಂಕರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಯಲ್ಲಾಪುರ ತಾಲೂಕಿನ ಕೋಳಿಕೇರಿಯ ದೇಶಪಾಂಡೆನಗರ ಕ್ರಾಸ್ ಬಳಿ ನಡೆದಿದೆ. ರಾಯಚೂರು ಜಿಲ್ಲೆಯ ಉಡಂಗಲ್ ನ ನರಸಿಂಹ ನರಸಪ್ಪ ಬುಗಲಿ…
ನಾಳೆ ವಿದ್ಯುತ್ ವ್ಯತ್ಯಯ
ಯಲ್ಲಾಪುರದ 33/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಇರುವುದರಿಂದ ಸೆ.20 ರಂದು ವಿದ್ಯುತ್ ವ್ಯತ್ಯಯವಾಗಲಿದೆ. ಯಲ್ಲಾಪುರ ಪಟ್ಟಣ, ಇಡಗುಂದಿ, ಬಿಸಗೋಡ, ಆನಗೋಡ, ವಜ್ರಳ್ಳಿ, ಮಾಗೋಡ, ಉಪಳೇಶ್ವರ ಹಾಗೂ ಕಣ್ಣಿಗೇರಿ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸೆ.20 ರ ಬೆಳಗ್ಗೆ…
ಲಯನ್ಸ್ ಕ್ಲಬ್ ನಿಂದ ಗುರುವಂದನೆ: ಆದರ್ಶ ಶಿಕ್ಷಕರಿಗೆ ಲಯನ್ ಟೀಚರ್ ಆಫ್ ದಿ ಇಯರ್ ಪ್ರಶಸ್ತಿ
ಯಲ್ಲಾಪುರದ ಅಡಿಕೆ ಭವನದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಗುರುವಂದನೆ ಕಾರ್ಯಕ್ರಮ ನಡೆಯಿತು. ಆನಗೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರಿಯಾಶೀಲ ಶಿಕ್ಷಕ ಮಾರುತಿ ಆಚಾರಿ, ಹುಟಕಮನೆ ಶಾಲೆಯ ಶಿಕ್ಷಕ, ಯೋಗಪಟು ಸುಬ್ರಾಯ ಭಟ್ಟ, ಕನ್ನಡಗಲ್ ಶಾಲೆಯ ಶಿಕ್ಷಕಿ ಶೋಭಾ ನಾಯ್ಕ, ಉಮ್ಮಚಗಿ…
ಎಲೆ ಕೊಯ್ಯುವಾಗ ಮರದಿಂದ ಬಾವಿಗೆ ಬಿದ್ದ ವೃದ್ಧ
ಯಲ್ಲಾಪುರ ತಾಲೂಕಿನ ಬಾಸಲ ಸಮೀಪದ ವಾಗಳ್ಳಿಯಲ್ಲಿ ಎಲೆ ಕೊಯ್ಯಲೆಂದು ಅಡಕೆ ಮರಕ್ಕೆ ಹತ್ತುವಾಗ ಆಕಸ್ಮಿಕವಾಗಿ ಕಾಲು ಜಾರಿ ಮರದ ಪಕ್ಕದಲ್ಲಿದ್ದ ಬಾವಿಗೆ ಬಿದ್ದು ವೃದ್ಧನೊಬ್ಬ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ವಾಗಳ್ಳಿಯ ಅಂಬ್ಡೆಪಾಲಿನ ಗಣಪತಿ ಶಿವರಾಮ ಗಾಂವ್ಕರ್ (96 ) ಮೃತ…
ಸೆ.25 ರಂದು ಅಂತರಂಗದ ‘ಹಸಿರು ಹೆಜ್ಜೆ’
ಬೆಂಗಳೂರಿನ ಅಂತರಂಗ ಪ್ರತಿಷ್ಠಾನದ ಪ್ರೇರಣಾ ಮಾಸದ ಸರಣಿಯ ಅಂಗವಾಗಿ ಹಸಿರು ಹೆಜ್ಜೆ ಕಾರ್ಯಕ್ರಮ ತಾಲೂಕಿನ ತೇಲಂಗಾರ ಮೈತ್ರಿ ಸಭಾಭವನದಲ್ಲಿ ಸೆ.25 ರಂದು ಮಧ್ಯಾಹ್ನ 3.30 ಕ್ಕೆ ನಡೆಯಲಿದೆ. ಮಕ್ಕಳಿಗಾಗಿ ಸಂಗೀತ ಕುರ್ಚಿ ಹಾಗೂ ಪ್ಲಾಸ್ಟಿಕ್ ಮುಕ್ತ ಭೂಮಿ ಕುರಿತು ಚಿತ್ರ ರಚನೆಯ…
ಸೆ.22 ರಂದು ಯಲ್ಲಾಪುರದಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟ
ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ಸೆ 22 ರಂದು ಬೆಳಿಗ್ಗೆ 9.30 ಕ್ಕೆ ಪಟ್ಟಣದ ಕಾಳಮ್ಮನಗರ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಬಿಇಒ ರೇಖಾ ನಾಯ್ಕ ಹೇಳಿದರು. ಅವರು ಯಲ್ಲಾಪುರದ ಬಿಇಒ ಕಾರ್ಯಾಲಯದಲ್ಲಿ ಮಾಧ್ಯಮದವರಿಗೆ ಈ ಕುರಿತು…
ಹುಬ್ಬಳ್ಳಿಯಲ್ಲಿ ಸೆ.19 ಏಕತಾ ಸಮಾವೇಶ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಅಲ್ಲಯ್ಯನವರಮಠ ಮಾಹಿತಿ
ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾದಿಂದ ಸೆ.19 ರಂದು ಮಧ್ಯಾಹ್ನ 3 ಘಂಟೆಗೆ ಏಕತಾ ಸಮಾವೇಶ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆಯಲಿದೆ. ಸಮಾವೇಶದಲ್ಲಿ ಜಿಲ್ಲೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಉತ್ತರ ಕನ್ನಡ…
ಹಣ್ಣು ಮಾರುವವರಿಗೆ ಎಚ್ಚರಿಕೆ, ಮೀನು ಮಾರುವವರಿಗೆ ಸ್ವಾತಂತ್ರ್ಯ: ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ
ಯಲ್ಲಾಪುರದ ಬಸ್ ನಿಲ್ದಾಣದ ಎದುರು ಬೆಲ್ ರಸ್ತೆಯ ಪಕ್ಕ ಇರುವ ಗೂಡಂಗಡಿಕಾರರು ರಸ್ತೆಯನ್ನು ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿರುವ ದೂರಿನ ಹಿನ್ನೆಲೆಯಲ್ಲಿ ಪ.ಪಂ ಅಧಿಕಾರಿಗಳು ಅಂಗಡಿಕಾರರಿಗೆ ಎಚ್ಚರಿಕೆ ನೀಡಿದರು. ಬೆಲ್ ರಸ್ತೆ ಬದಿಯಲ್ಲಿದ್ದ ಅಂಗಡಿಕಾರರು ರಸ್ತೆಯನ್ನು ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿದ್ದು, ಇದರಿಂದ ವಾಹನಗಳ,…
ಮಾಗೋಡಿನಲ್ಲಿ ಸೆ.20 ರಂದು ‘ಪ್ರಸಂಗ ಪಂಚಕ-3’: ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ತಾಳಮದ್ದಲೆ
ಯಲ್ಲಾಪುರ ತಾಲೂಕಿನ ಮಾಗೋಡ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ವೀರಮಾರುತಿ ತಾಳಮದ್ದಲೆ ಕೂಟದಿಂದ ಪ್ರಸಂಗ ಪಂಚಕ-3 ಕಾರ್ಯಕ್ರಮ ಸೆ.20 ರಂದು ನಡೆಯಲಿದೆ. ಅಂದು ಸಂಜೆ 6 ರಿಂದ ಮಾರನೇ ದಿನ ಬೆಳಗ್ಗೆ 6 ರವರೆಗೆ ನಿರಂತರವಾಗಿ 12 ತಾಸುಗಳ ಕಾಲ ತಾಳಮದ್ದಲೆಗಳು…
ಯಲ್ಲಾಪುರದಲ್ಲಿ ವಿಶ್ವಕರ್ಮ ಜಯಂತ್ಯುತ್ಸವ
ವಿಶ್ವದ ಸೃಷ್ಟಿಗೆ ಮೂಲಕ ಕಾರಣ ವಿಶ್ವಕರ್ಮರು. ಅವರ ಬದುಕು-ಆದರ್ಶಗಳನ್ನು ಎಲ್ಲರೂ ಸ್ಮರಿಸಬೇಕೆಂದು ತಹಸೀಲ್ದಾರ ಚಂದ್ರಶೇಖರ ಹೊಸ್ಮನಿ ಹೇಳಿದರು. ಅವರು ಯಲ್ಲಾಪುರದ ಕಾಳಮ್ಮನಗರದ ಕಾಳಮ್ಮದೇವಿ ಸಭಾಭವನದಲ್ಲಿ ತಾಲೂಕು ಆಡಳಿತ, ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಂಘ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ವಿಶ್ವಕರ್ಮ ಜಯಂತ್ಯುತ್ಸವ…
















