ಉತ್ತರ ಕನ್ನಡ: ಪ್ರವಾಸೋದ್ಯಮಕ್ಕೆ ಸಿಕ್ಕಿಲ್ಲ ಹೊಸ ದಿಕ್ಕು!
ವ್ಯಾಪಕ ಮಳೆ, ಪ್ರಕೃತಿ ವಿಕೋಪ ಸೇರಿ ವಿವಿಧ ಕಾರಣಗಳಿಂದ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ನೆಲ ಕಚ್ಚಿದೆ. ಪ್ರವಾಸೋದ್ಯಮದಲ್ಲಿ ಸಾಕಷ್ಟು ಉದ್ಯೋಗವಕಾಶ ಹಾಗೂ ಅಭಿವೃದ್ಧಿ ಸಾಧ್ಯತೆಯಿದ್ದರೂ ಇದಕ್ಕೆ ಸ್ಪಂದನೆ ದೊರೆಯದ ಹಿನ್ನಲೆ ಪ್ರವಾಸಿಗರ ಜೊತೆ ಪ್ರವಾಸೋದ್ಯಮ ಹೂಡಿಕೆದಾರರು ಸಹ ನಷ್ಟದಲ್ಲಿದ್ದಾರೆ. ಜೊಯಿಡಾ…
ಚೌತಿ ಹಬ್ಬಕ್ಕೆ ಆತಂಕ ತಂದ ಚಿರತೆ: ತಾಯಿ ಮುಂದೆಯೇ ಕಂದಮ್ಮನ ಕೊಂದ ದುಷ್ಟವ್ಯಾಘ್ರ
ಶಿರಸಿ: ಇಳಸೂರು ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಜನ ಆತಂಕದಲ್ಲಿದ್ದಾರೆ. ಕುಲದೇವನಸರ ಎಂಬಲ್ಲಿ ಚಿರತೆ ಹಸುವಿನ ಮೇಲೆ ಆಕ್ರಮಣ ನಡೆಸಿದೆ. ಜೊತೆಗೆ ಆಕಳ ಜೊತೆಯೇ ಇದ್ದ ಕರುವನ್ನು ಭಕ್ಷಿಸಿದೆ. ಶ್ರೀರಾಮ ಶೆಟ್ಟಿ ಎಂಬಾತರಿಗೆ ಸೇರಿದ ಕೊಟ್ಟಿಗೆ ಇದಾಗಿದ್ದು, ನಸುಕಿನ ವೇಳೆಯಲ್ಲಿ ಚಿರತೆ ಕೊಟ್ಟಿಗೆ…
ಸೆಕ್ಯುರಿಟಿ ಗಾರ್ಡಗೆ ಗುದ್ದಿದ ಬೈಕ್: ಸಾವು
ಭಟ್ಕಳ: ಸರ್ಫನಕಟ್ಟೆ ಹಲಗತ್ತಿ ದೇವಾಲಯ ಬಳಿ ನಡೆದು ಹೋಗುತ್ತಿದ್ದ ಶ್ರೀಧರ ನಾರಾಯಣ ಶೆಟ್ಟಿ (55) ಎಂಬಾತರಿಗೆ ದರ್ಶನ ಸಂಕ್ರಯ್ಯ ಗೊಂಡ (21) ಎಂಬಾತ ಬೈಕ್ ಗುದ್ದಿದ್ದು ಶ್ರೀಧರ ಶೆಟ್ಟಿ ಸಾವನಪ್ಪಿದ್ದಾರೆ. ಪುರವರ್ಗ ಗಣೇಶ ನಗರದ ಶ್ರೀಧರ್ ಶೆಟ್ಟಿ ಸೆಕ್ಯುರಿಟಿ ಗಾರ್ಡ ಆಗಿ…
ದೋಣಿಗೆ ಡ್ರೈವರ್ ಆದ ವೈದ್ಯ: ಸಮುದ್ರಕ್ಕೆ ಸೇಬು ಎಸೆದ ಸಚಿವ!
`ಉತ್ತರ ಕನ್ನಡ, ಉಡುಪಿ, ಮಂಗಳೂರಿನಲ್ಲಿ ಮತ್ಸ್ಯಕ್ಷಾಮದಿಂದ ಮೀನುಗಾರಿಕೆ ಉದ್ಯಮದ ಮೇಲೆ ಭಾರೀ ಪ್ರಮಾಣದ ಹೊಡೆತ ಬಿದ್ದಿದ್ದು ಇಲ್ಲಿನ ಮೀನುಗಾರರನ್ನು ಕಾಪಾಡು’ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಭಗವಂತನಲ್ಲಿ ಪ್ರಾರ್ಥಿಸಿದರು. ಇದಕ್ಕಾಗಿ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ…
ಪರಿಸರ ಆರಾಧನೆಗೆ ಮಾದರಿ ಈ ವೈದ್ಯ: ಗಣಪತಿ ಮೂರ್ತಿಗೆ ತರಕಾರಿ ಬಣ್ಣ!
ಯಲ್ಲಾಪುರ ತಾಲೂಕಾ ವೈದ್ಯಾಧಿಕಾರಿಯಾಗಿರುವ ಡಾ ನರೇಂದ್ರ ಪವಾರ್ ಬಿಡುವಿಲ್ಲದ ಕೆಲಸದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಮಣ್ಣಿನ ಗಣಪತಿ ವಿಗ್ರಹ ತಯಾರಿಸಿದ್ದಾರೆ. ಈ ಮೂರ್ತಿಗೆ ಪಾಲಕ್ ಸೊಪ್ಪು, ಬಿಟರೂಟು ಹಾಗೂ ಅರಶಿನ-ಕುಂಕುಮ ಬಳಸಿ ಸುಣ್ಣ-ಬಣ್ಣ ಬಡಿದಿದ್ದಾರೆ. ಪರಿಸರ ಸ್ನೇಹಿ ಗಣಪನನ್ನು ಶನಿವಾರ…
ಸರಾಯಿ ಕುಡಿದು ಸಾವನಪ್ಪಿದ ಶಿಲ್ಪಿ
ಅಂಕೋಲಾ: ಶಿಲ್ಪ ಕೆತ್ತನೆಗಾಗಿ ಊರುರು ಅಲೆಯುತ್ತಿದ್ದ ಉಡುಪಿ ಮೂಲದ ವೆಂಕಟೇಶ ರಾಜು ಪೂಜಾರಿ (55) ಎಂಬಾತರು ಬಾಳೆಗುಳಿ ಕ್ರಾಸಿನ ಚಹದ ಅಂಗಡಿ ಬಳಿ ಸಾವನಪ್ಪಿದ್ದಾರೆ. ಕಳೆದ 20 ವರ್ಷಗಳಿಂದ ಅವರು ಮೂರ್ತಿ ಕೆತ್ತನೆ ಮಾಡುತ್ತಿದ್ದರು. ಈ ಕೆಲಸಕ್ಕಾಗಿ ಅವರು ಹೆಂಡತಿ ಮಕ್ಕಳಿಂದ…
ದೇವರ ದುಡ್ಡಿಗಾಗಿ ಸಹೋದರರ ಕಾಳಗ: ಹಬ್ಬದ ದಿನ ಹರಿದ ರಕ್ತ!
ಗಣಪತಿ ಮೂರ್ತಿ ಮುಂದೆ ಇರಿಸಿದ ದುಡ್ಡಿಗಾಗಿ ಸಹೋದರರ ನಡುವೆ ಹೊಡೆದಾಟ ನಡೆದಿದ್ದು, ಈ ಹೊಡೆದಾಟದಲ್ಲಿ ಸಂದೇಶ ಪ್ರಭಾಕರ್ ಬೋರ್ಕರ್ ಎಂಬಾತರು ಸಾವನಪ್ಪಿದ್ದಾರೆ. ಕಾರವಾರದ ಸಾಯಿಕಟ್ಟಾದ ಬಿಂದು ಮಾಧವ ದೇವಸ್ಥಾನದ ಬಳಿ ಮನೆಯೊಂದರಲ್ಲಿ ಗಣಪತಿ ಮೂರ್ತಿ ಕೂರಿಸಲಾಗಿತ್ತು. ಗಣಪತಿ ಮೂರ್ತಿ ಪೂಜೆ ಹಾಗೂ…
ಆನೆ ಬಂತು ಆನೆ | ಯಾವ ಊರಿನ ಆನೆ? ಇಲ್ಲಿಗೆ ಯಾಕೆ ಬಂತು?
ಉತ್ತರ ಕನ್ನಡ ಜಿಲ್ಲೆಯ ಹಲವು ಊರುಗಳಿಗೆ ವನ್ಯಜೀವಿ ಪ್ರವೇಶ ಹೊಸದಲ್ಲ. ಆದರೆ, ಯಲ್ಲಾಪುರ ತಾಲೂಕಿನ ಕೆಲ ಗ್ರಾಮದ ಜನರು ಪ್ರತಿ ವರ್ಷ `ಆನೆ ಸಂಕಷ್ಟದಿoದ ಬಳಲುತ್ತಿದ್ದಾರೆ. ಪ್ರತಿ ವರ್ಷ 8-10 ಆನೆಗಳು ಆಗಮಿಸಿ ರೈತರು ಬೆಳೆದ ಬೆಳೆಗಳನ್ನು ಹಾಳು ಮಾಡುತ್ತಿವೆ. ಈ…
ಆಹಾರ ಬೆಳೆ ಸುತ್ತುವರೆದ ಗರಿ ಹುಳು
ಉತ್ತರ ಕನ್ನಡ ಜಿಲ್ಲೆಯಲ್ಲಿ ಭತ್ತ ಬೆಳೆಯುವವರ ಸಂಖ್ಯೆಯೇ ಕಡಿಮೆಯಾಗಿದೆ. ಅದಾಗಿಯೂ ಅಲ್ಲಲ್ಲಿ `ಮನೆ ಖರ್ಚಿನ ಅಕ್ಕಿಗಾದರೂ ಭತ್ತ ಬೆಳೆಯುವ’ ಎನ್ನುವ ರೈತರಿಗೂ ಕೀಟಬಾಧೆ ತೊಂದರೆ ನೀಡುತ್ತಿದೆ. ಯಲ್ಲಾಪುರ, ಜೊಯಿಡಾ, ಹೊನ್ನಾವರ ಮೊದಲಾದ ಕಡೆ ಭತ್ತ ಬೆಳೆದವರು ಗರಿ ಸುತ್ತುವ ಹುಳದ ಉಪಟಳಕ್ಕೆ…
ಮುಂಬಡ್ತಿ ಸಿಕ್ಕರೂ ಸ್ವೀಕರಿಸದ ಮಾತೃಹೃದಯಿ: ಜನ ಮೆಚ್ಚಿದ ಶಿಕ್ಷಕಿಗೆ ಸೇವಾ ನಿವೃತ್ತಿ
ಗೋಕರ್ಣದ ಹಾರುಮಾಸ್ಕೇರಿಯಲ್ಲಿ ಹುಟ್ಟಿದ ವನಿತಾ ಭಟ್ಟ ಅವರು ಶಿಕ್ಷಕಿಯಾಗಿ 42 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಮುರುಡೇಶ್ವರ ಮಾವಳ್ಳಿ-2ರ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆಗೆ ಅವರ ಕೊಡುಗೆ ಅಪಾರ. ತಮ್ಮ ಜೀವನದುದ್ದಕ್ಕೂ ಶಿಸ್ತು ಹಾಗೂ ಸಮಯ ಪಾಲನೆಯನ್ನು ರೂಡಿಸಿಕೊಂಡಿರುವ ಅವರು…







