ದೇವಿಮಾತಾಗೆ 108 ಬಗೆಯ ನೈವೇದ್ಯ
ಶಿರಸಿ: ಸ್ವಾದಿ ಜೈನ ಮಠದಲ್ಲಿ ಶ್ರಾವಣ ಮಾಸದ ಹಿನ್ನಲೆಯಲ್ಲಿ ಕೂಷ್ಮಾಂಡಿನಿ ದೇವಿಗೆ 108 ಬಗೆಯ ವಿಶೇಷ ನೈವೇದ್ಯ ಅರ್ಪಿಸಲಾಯಿತು. ಸ್ವಾದಿ ದಿಗಂಬರ ಜೈನ ಮಠಾಧೀಶ ಶ್ರೀ ಬಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಅಮ್ಮನವರಿಗೆ ವಿಶೇಷ ಅಭಿಷೇಕ ಪೂಜಾ ಆರಾಧಾನೆ,…
ಆವಾಸ್ ಯೋಜನೆ: ಮನೆ ಮುರಿದರೆ ಮೂರು ಕಾಸಿನ ಪರಿಹಾರ!
ಕೂಡಿಗೆಯ ಸೀತಾ ಸಿದ್ದಿ ಅವರ ಮನೆ ಗೋಡೆ ಪೂರ್ತಿ ಕುಸಿದಿದ್ದು, ಇನ್ನೆರಡು ಗೋಡೆಗೆ ಭಾರೀ ಪ್ರಮಾಣದ ಬಿರುಕು ಮೂಡಿದೆ. ಆದರೆ, ಸರ್ಕಾರದಿಂದ ಅವರಿಗೆ ಪರಿಹಾರ 4 ಸಾವಿರ ರೂ ಪರಿಹಾರದ ಭರವಸೆ ಮಾತ್ರ ಸಿಕ್ಕಿದ್ದು, ಆ ಹಣ ಸಹ ಜಮಾ ಆಗಿಲ್ಲ!…
ಅಡಿಕೆ ಮಾರಾಟದಲ್ಲಿ ಅವ್ಯವಹಾರ: ಆ ದಿನ TSS ಅಂಗಳದಲ್ಲಿ ನಡೆದಿದ್ದೇನು?
ಅಡಿಕೆ ವ್ಯಾಪಾರದಲ್ಲಿ ಅವ್ಯವಹಾರ ಹಾಗೂ ಮೋಸ ನಡೆದಿರುವ ಬಗ್ಗೆ ಟಿ ಎಸ್ ಎಸ್ ಅಧ್ಯಕ್ಷ ಹಾಗೂ ನಿರ್ದೇಶಕರ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಎಲ್ಲಾ ಅವಾಂತರಗಳಿಗೆ ಮುಖ್ಯ ಕಾರಣವಾಗಿದ್ದವರ ಹೆಸರು ದೂರಿನಲ್ಲಿಯೇ ಇಲ್ಲ! ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ…
ಅಡಿಕೆ-ಮಾವು-ಕಾಳು ಮೆಣಸಿಗೆ ವಿಮಾ ಸೌಲಭ್ಯ
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಉತ್ತರ ಕನ್ನಡ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ವಿಮಾ ಕಂತನ್ನು ಪಾವತಿಸಲು ಆಗಸ್ಟ್…
ಲೋಕಾಯುಕ್ತ: ನಿಮ್ಮ ದೂರು ಇಲ್ಲಿ ದಾಖಲಿಸಿ
ಅಗಸ್ಟ್ 13ರಂದು ಯಲ್ಲಾಪುರ ತಹಶೀಲ್ದಾರ್ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಆಗಮಿಸಲಿದ್ದು, ಸಾರ್ವಜನಿಕರ ಅಹವಾಲು ಆಲಿಸಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಯಿoದ ಮಧ್ಯಾಹ್ನ 1 ಗಂಟೆಯವರೆಗೆ ಲೋಕಾಯುಕ್ತರು ಲಭ್ಯ. ದೂರುಗಳ ವಿಚಾರಣೆಯನ್ನು ಸಹ ಅಲ್ಲಿಯೇ ಮಾಡಲಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕ ಕೆಲಸಗಳನ್ನು ನಿರ್ವಹಿಸಲು…
ಅಪಘಾತದಲ್ಲಿ ಸಾವನಪ್ಪಿದ ಗ್ರಾ ಪಂ ಸಿಬ್ಬಂದಿ
ಶಿರಸಿ: ಮುಂಡಗೋಡಿನ ನಂದಿಗಟ್ಟಾದ ಮಾರುತಿ ರಾದಾಪುರ ಅಪಘಾತದಲ್ಲಿ ಸಾವನಪ್ಪಿದ್ದಾರೆ. ಅವರು ಶಿರಸಿಯ ಸಾಲ್ಕಣಿ ಗ್ರಾ ಪಂ ಕಾರ್ಯದರ್ಶಿಯಾಗಿದ್ದರು. ಗುರುವಾರ ಬೆಳಗ್ಗೆ ಕಚೇರಿಗೆ ಹೋಗುವಾಗ ಈ ಅಪಘಾತ ನಡೆದಿದೆ. ಅವರು ಓಡಿಸುತ್ತಿದ್ದ ಸ್ಕೂಟಿಗೆ ಕೋಳಿಗಾರ ಬಳಿ ಕಾರು ಡಿಕ್ಕಿಯಾಗಿದ್ದು, ಇದರಿಂದ ಗಾಯಗೊಂಡಿದ್ದರು. ಅವರನ್ನು…
ಸೇತುವೆ ದುರಂತ: ತುರ್ತು ಸನ್ನಿವೇಶದಲ್ಲಿಯೂ ಹೊರಬಾರದ ರಕ್ಷಣಾ ಬೋಟು!
ಕಾಳಿ ಸೇತುವೆ ಕುಸಿತವಾದರೂ ಕರಾವಳಿ ಕಾವಲು ಪಡೆಯ ಯಾಂತ್ರಿಕೃತ ಬೋಟ್ ಇದ್ದ ಸ್ಥಳದಿಂದ ಅಲುಗಾಡಲಿಲ್ಲ. ಬೋಟಿಗೆ ಹೊದಸಿದ್ದ ತಾಡಪತ್ರೆಯನ್ನು ಸಹ ತೆಗೆಯಲಿಲ್ಲ. ಹೀಗಾಗಿ ಕಾಳಿ ಸೇತುವೆ ಕುಸಿತದ ಸಮಯದಲ್ಲಿ ಸ್ಥಳೀಯ ಮೀನುಗಾರರ ದೋಣಿ ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಕಡಲಿನ ಗಸ್ತು…
ಮನುಷ್ಯನ ಮೇಲೆ ಕೋಣನ ದಾಳಿ: ಆಕ್ರಮಣಾಕಾರಿ ಜಾನುವಾರು ಸೆರೆ
ಶಿರಸಿ: ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಕೋಣ ರಸ್ತೆಯಲ್ಲಿ ಹಾದು ಹೋಗುವವರ ಮೇಲೆಲ್ಲ ದಾಳಿ ನಡೆಸುತ್ತಿದ್ದು, ಆ ಕೋಣವನ್ನು ಸಾರ್ವಜನಿಕರು ಇದೀಗ ಸೆರೆ ಹಿಡಿದಿದ್ದಾರೆ. ಬುಧವಾರ ಸಂಜೆ ಈ ಕೋಣ ವಿವೇಕ್ ಮಡಿವಾಳ ಎಂಬಾತರ ಮೇಲೆ ದಾಳಿ ನಡೆಸಿತ್ತು. ಗಾಯಗೊಂಡ ಅವರು ಆಸ್ಪತ್ರೆ ಸೇರಿದ್ದರು.…
ಬೈಕ್ ಜೊತೆ ಸವಾರನನ್ನೂ ಎಳೆದೊಯ್ದ ಕಾರು: ರಕ್ತದ ಮೊಡವಿನಲ್ಲಿ ಹೊರಳಾಡಿ ಸಾವು
ಕಾರವಾರ: ಸದಾಶಿವಗಡದ ರಾಮನಾಥ ಕ್ರಾಸಿನಿಂದ ಗಾಂವಕೇರಿ ಕ್ರಾಸ್ ಕಡೆ ಸ್ಕೂಟಿ ಓಡಿಸಿಕೊಂಡು ಹೋಗುತ್ತಿದ್ದ ವಿನಯ ಅಶೋಕ ಕುರುಡೇಕರ್ ಎಂಬಾತರಿಗೆ ಗೋವಾ ಕಡೆಯಿಂದ ಬಂದ ಕಾರು ಗುದ್ದಿದ್ದು, ವಿನಯ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಅಗಸ್ಟ 8ರ ಬೆಳಗ್ಗೆ 11 ಗಂಟೆ ವೇಳೆಗೆ ವಿನಯ ಕುರುಡೇಕರ್…
ಕಳ್ಳರ ಕರಾಮತ್ತು: ಲಕ್ಷ್ಮೀ ಮನೆಯ ಲಕ್ಷ್ಮೀ ಹಾರ ಕಣ್ಮರೆ!
ಯಲ್ಲಾಪುರ: ಬೈಲಂದೂರು ಮಸೀದಿಗಲ್ಲಿಯ ಲಕ್ಷ್ಮೀ ದೇಸಾಯಿ ಅವರ ಮನೆಗೆ ನುಗ್ಗಿದ ಕಳ್ಳರು ಅಲ್ಲಿದ್ದ ಲಕ್ಷ್ಮೀ ಹಾರವನ್ನು ಕದ್ದು ಪರಾರಿಯಾಗಿದ್ದಾರೆ. ಜುಲೈ 22ರಂದೇ ಈ ಕಳ್ಳತನ ನಡೆದಿದೆ. ಇಷ್ಟು ದಿನಗಳ ಕಾಲ ಚಿನ್ನಾಭರಣ ಹುಡುಕಾಟ ನಡೆಸಿದ ಅವರು ಸಿಗದ ಕಾರಣ ಇದೀಗ ಪೊಲೀಸ್…







