6

ಮನುಷ್ಯನ ಮೇಲೆ ಕೋಣನ ದಾಳಿ: ಆಕ್ರಮಣಾಕಾರಿ ಜಾನುವಾರು ಸೆರೆ

ಶಿರಸಿ: ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಕೋಣ ರಸ್ತೆಯಲ್ಲಿ ಹಾದು ಹೋಗುವವರ ಮೇಲೆಲ್ಲ ದಾಳಿ ನಡೆಸುತ್ತಿದ್ದು, ಆ ಕೋಣವನ್ನು ಸಾರ್ವಜನಿಕರು ಇದೀಗ ಸೆರೆ ಹಿಡಿದಿದ್ದಾರೆ.
ಬುಧವಾರ ಸಂಜೆ ಈ ಕೋಣ ವಿವೇಕ್ ಮಡಿವಾಳ ಎಂಬಾತರ ಮೇಲೆ ದಾಳಿ ನಡೆಸಿತ್ತು. ಗಾಯಗೊಂಡ ಅವರು ಆಸ್ಪತ್ರೆ ಸೇರಿದ್ದರು. ಪ್ರಸ್ತುತ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಅದಾದ ನಂತರ ಇನ್ನೂ ಕೆಲವರ ಮೇಲೆ ಕೋಣ ದಾಳಿ ನಡೆಸುವ ಪ್ರಯತ್ನ ನಡೆಸಿತ್ತು. ಅಪಾಯಕಾರಿ ಕೋಣದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಬಗ್ಗೆ ಅರಿತ ಕೆಲ ಗೋ ರಕ್ಷಕರು ಉಪಾಯವಾಗಿ ಕೋಣವನ್ನು ಸೆರೆ ಹಿಡಿದಿದ್ದಾರೆ. ಅಕ್ರಮ ಜಾನುವಾರು ಸಾಗಾಟದ ವೇಳೆ ಸಿಕ್ಕಿಬಿದ್ದ ಕೋಣ ಇದಾಗಿದ್ದು, ನಂತರ ತಪ್ಪಿಸಿಕೊಂಡ ಬಗ್ಗೆ ಮಾತುಗಳಿವೆ. ಆದರೆ, ಇದು ಖಚಿತವಾಗಿಲ್ಲ.

  • Related Posts

    ಬಾಳು ಬೆಳಗುಂದಿ ಕರೆಸಿ ₹1 ಕೋಟಿ ಕಾರ್ಯಕ್ರಮ

    Share this… Facebook Pinterest Twitter Linkedin Whatsappಮುಂದಿನ ವರ್ಷ ನಾಡು-ನುಡಿ ಸಂಭ್ರಮಕ್ಕೆ ₹1 ಕೋಟಿ ಖರ್ಚು! ಬಾಳು ಬೆಳಗುಂದಿ ಕರೆಸುವ ಘೋಷಣೆ ಮಾಡಿದ ಉಮೇಶ್ ಕರಿಗಾರ್ ಹಾವೇರಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಾವೇರಿ ನಗರದ ಮುನ್ಸಿಪಲ್ ಮೈದಾನದಲ್ಲಿ ನಾಡು-ನುಡಿ ಸಂಭ್ರಮ-2026…

    CM ಆದ ಬಳಿಕ ಮೊದಲ ಬಾರಿ ಹಾವೇರಿಗೆ ಡಿಕೆಶಿ ಎಂಟ್ರಿ!

    Share this… Facebook Pinterest Twitter Linkedin Whatsappಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಹಾವೇರಿಗೆ ಡಿಕೆ ಶಿವಕುಮಾರ್ ಭೇಟಿ: ನಾಳೆ ಕನಕದಾಸರ ಕಂಚಿನ ಮೂರ್ತಿ ಅನಾವರಣ ಹಾವೇರಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಹಾವೇರಿ…

    Leave a Reply

    Your email address will not be published. Required fields are marked *

    You cannot copy content of this page