ಮುಂದುವರೆದ ಭೂ ಕುಸಿತ: ಕಳಚೆಯಲ್ಲಿ ಮತ್ತೆ ಆತಂಕ
ಯಲ್ಲಾಪುರ: ಶುಕ್ರವಾರ ಕಳಚೆಯ ಹೊಸಕುಂಬ್ರಿಯಿoದ ಶಂಬಡೆಮನೆಕೇರಿಗೆ ರಸ್ತೆ ಕುಸಿದ ಬೆನ್ನಲ್ಲೆ ಶನಿವಾರ ಇನ್ನಷ್ಟು ಭೂ ಕುಸಿತ ಉಂಟಾಗಿದೆ. 2021ರಲ್ಲಿ ಭಾರೀ ಪ್ರಮಾಣದ ಭೂ ಕುಸಿತ ಉಂಟಾದ ಪ್ರದೇಶದಲ್ಲಿ ಮತ್ತೆ ಕುಸಿತವಾಗಿದ್ದು, ಮಾನಿಗದ್ದೆ ಕುಂಬ್ರಿಯ ಜನಾರ್ಧನ ಹೆಬ್ಬಾರ್ ಅವರ ತೋಟ ನೆಲಕಚ್ಚಿದೆ. ಇದರೊಂದಿಗೆ…
ಸರ್ವೆಗೆ ಹೋದವನ ಸರ್ಕಾರಿ ಕೆಲಸಕ್ಕೆ ಅಡ್ಡಿ: ಭೂ ಮಾಪಕನಿಗೆ ಕಪಾಳ ಮೋಕ್ಷ!
ಭಟ್ಕಳ: ಬೈಲೂರು ತೊದಳ್ಳಿ ಗ್ರಾಮದ ನಾಗಮ್ಮ ಮೊಗೇರ್ ಹಾಗೂ ಲಲಿತಾ ಮೊಗೇರ್ ಅವರ ಭೂ ಗಡಿ ಗುರುತು ಮಾಡಲು ಹೋಗಿದ್ದ ಅನುಪ ಶೆಟ್ಟಿ (30) ಎಂಬಾತರ ಮೇಲೆ ಹಲ್ಲೆ ನಡೆದಿದೆ. ನಾಗಮ್ಮ ಬೋಳು ಮೊಗೇರ್ ಹಾಗೂ ಲಲಿತಾ ತಿಮ್ಮಪ್ಪ ಮೊಗೇರ್ ಅವರು…
ಕಡಲ ಅಬ್ಬರಕ್ಕೆ ಮಾಜಾಳಿ ರಸ್ತೆಯೇ ಮಾಯ!
ಕಾರವಾರ: ಅರಬ್ಬಿ ಸಮುದ್ರದ ಅಬ್ಬರಕ್ಕೆ ಮಾಜಾಳಿ ಬಾವಳದಲ್ಲಿ ನಿರ್ಮಿಸಿದ್ದ ಕಾಂಕ್ರೆಟ್ ರಸ್ತೆ ಕಣ್ಮರೆಯಾಗಿದೆ. ಕಳೆದ ಒಂದು ತಿಂಗಳಿನಿoದ ಇಲ್ಲಿ ನಿರಂತರವಾಗಿ ಕಡಲ ಕೊರೆತ ಉಂಟಾಗುತ್ತಿದ್ದು, ಮಾಜಾಳಿ, ದೇವಭಾಗ, ಬಾವಳ, ದಂಡೇಭಾಗದಲ್ಲಿ ಇದರ ದುಷ್ಪರಿಣಾಮ ಅಧಿಕವಾಗಿದೆ. 5 ವರ್ಷದ ಹಿಂದೆ ನಿರ್ಮಿಸಿದ್ದ ರಸ್ತೆ…
ಕಾರಿನ ಮೇಲೆ ಬಿದ್ದ ಮರ: ತಂಗಿ ಮನೆಗೆ ಹೋಗುತ್ತಿದ್ದವ ಸಾವು
ಸಿದ್ದಾಪುರ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಹಲಗೇರಿಯ ದೇವರಾಜ ನಾಯ್ಕ (59) ಎಂಬಾತರು ಸಾವನಪ್ಪಿದ್ದಾರೆ. ದೇವರಾಜ ನಾಯ್ಕ ಅವರ ತಂಗಿ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರನ್ನು ನೋಡಿಬರಲು ಕುಟುಂಬಸಹಿತ ಅವರು ಕೇರಳಕ್ಕೆ ಹೊರಟಿದ್ದರು. ಮಳೆ ಹೆಚ್ಚಾಗಿರುವ ಕಾರಣ ದೇವರಾಜ ನಾಯ್ಕ…
ವ್ಯಾಪಕ ಮಳೆಗೆ ಬೆಳೆ ಹಾನಿ: ವಿಮೆ ಮಾಡಿಸಿದವರಿಗೆ ನಷ್ಟ ಪರಿಹಾರ
ಕುಮಟಾ: ವ್ಯಾಪಕ ಮಳೆ ಪರಿಣಾಮ ನದಿ ಹಾಗೂ ಗಜನಿ ಪ್ರದೇಶದ ಅಂಚಿನಲ್ಲಿ ಬೆಳೆದ ಭತ್ತದ ಬೆಳೆ ಹಾಳಾಗಿದೆ. ಹೆಗಡೆ ಬಾಡ, ಹುಬ್ಬಣಗೇರಿ, ಕಾಗಾಲ, ಅಘನಾಶಿನಿ, ಹೊಲನಗದ್ದೆ, ಬರ್ಗಿ, ಬೆಟ್ಕುಳಿ, ಐಗಳಕೂರ್ವೆ, ಚತ್ರಕೂರ್ವೆ, ಗೋಕರ್ಣ, ಹಿರೇಗುತ್ತಿ, ಮೂರೂರು, ಕಲ್ಲಬ್ಬೆ ಹೋಳೆಗದ್ದೆ, ಹೊರಭಾಗ, ಕಡೇಕೊಡಿ,…
ಮಣ್ಣಿನಡಿ ಕಾಣಿಸಿದ ಟೀ ಅಂಗಡಿ ಅವಶೇಷ
ಅಂಕೋಲಾ: ಶಿರೂರು ಗುಡ್ಡ ಕುಸಿತದಿಂದ ಹೆದ್ದಾರಿಯಲ್ಲಿ ಬಿದ್ದ ಮಣ್ಣನ್ನು ಭಾಗಶಃ ತೆಗಿಯಲಾಗಿದ್ದು, ಅಲ್ಲಿನ ಮಣ್ಣಿನ ರಾಡಿಯಲ್ಲಿ ಲಕ್ಷಣ ನಾಯ್ಕ ಅವರು ನಡೆಸುತ್ತಿದ್ದ ಚಹಾ ಅಂಗಡಿಯ ಅವಶೇಷಗಳು ಪತ್ತೆಯಾಗಿದೆ. ಚಹಾ ಅಂಗಡಿಯಲ್ಲಿ ಬಳಸುತ್ತಿದ್ದ ಬಕೆಟ್ ಹಾಗೂ ಕೆಲ ಪಾತ್ರೆಗಳು ಮಣ್ಣಿನ ರಾಡಿಯಲ್ಲಿ ಕಾಣಿಸಿವೆ.…
ಜುಲೈ 27: ಮಳೆ ಮಾಹಿತಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಮುಂದುವರೆದಿದ್ದು, ಶುಕ್ರವಾರ ರಾತ್ರಿ ಮಲೆನಾಡು ಭಾಗದಲ್ಲಿ ಜೋರಾದ ಮಳೆಯಾಗಿದೆ. ಕರಾವಳಿ ಪ್ರದೇಶದಲ್ಲಿ ನಸುಕಿನ ಅವಧಿಯಲ್ಲಿ ರಭಸ ಮಳೆ ಸುರಿದಿದೆ. ಕಳೆದ 24 ಗಂಟೆ ಅವಧಿಯ ಲೆಕ್ಕಾಚಾರದಲ್ಲಿ ಜಿಲ್ಲೆಯಲ್ಲಿ ಸರಾಸರಿ 57.58ರಷ್ಟು ಮಳೆಯಾಗಿದೆ. ಈವರೆಗಿನ…
ನಿರಂತರ ವಿದ್ಯುತ್’ಗಾಗಿ ಪ್ರತಿಭಟಿಸೋಣ.. ನೀವು ಬನ್ನಿ!
ಯಲ್ಲಾಪುರ: ನಿರಂತರ ವಿದ್ಯುತ್ ಸಮಸ್ಯೆಯಿಂದ ಬೇಸತ್ತ ಗುಳ್ಳಾಪುರದ ಜನ ಹೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಜುಲೈ 30ರ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸುವುದಕ್ಕಾಗಿ ಅನೇಕರು ತಯಾರಿ ನಡೆಸಿದ್ದು, ಜನರ ಸಮಸ್ಯೆ ಆಲಿಸಲು ಅಧಿಕಾರಿಗಲು ಸಹ ಭಾಗವಹಿಸುವ…
ನೊಂದವರ ನೆರವಿಗೆ ನಿಂತ ರಾಮಚಂದ್ರಾಪುರ ಮಠ
ಕುಮಟಾ: ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿ ನೀರು ಅಪ್ಪಳಿಸಿ ಏಳು ಮನೆಗಳು ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಸಂತ್ರಸ್ತ ಕುಟುಂಬಗಳಿಗೆ ರಾಮಚಂದ್ರಾಪುರ ಮಠ ನೆರವು ನೀಡಿದೆ. ಮಠದ ಪರವಾಗಿ ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್, ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು,…
ಹಳಿಯಾಳಕ್ಕೂ ಮಳೆ ರಜೆ ವಿಸ್ತರಣೆ
ಹಳಿಯಾಳದಲ್ಲಿ ಸಹ ಮಳೆಯಾಗುತ್ತಿರುವುದನ್ನು ಗಮನಿಸಿ ಅಲ್ಲಿನ ಶಾಲಾ-ಕಾಲೇಜುಗಳಿಗೂ ಜಿಲ್ಲಾಡಳಿರ ಜುಲೈ 27ರಂದು ರಜೆ ಘೋಷಿಸಿದೆ. ಈ ಹಿಂದೆ ಹಳಿಯಾಳ ಹಾಗೂ ಮುಂಡಗೋಡು ಹೊರತುಪಡಿಸಿ ರಜೆ ಘೋಷಿಸಲಾಗಿದ್ದು, ರಾತ್ರಿ 9.30ರ ವೇಳೆಗೆ ಹಳಿಯಾಳದ ಶಾಲಾ ಮಕ್ಕಳಿಗೂ ರಜೆ ನೀಡಲಾಗಿದೆ. ಅಲ್ಲಿ ಸಹ ಅಂಗನವಾಡಿಯಿoದ…







