6

ಸರ್ವೆಗೆ ಹೋದವನ ಸರ್ಕಾರಿ ಕೆಲಸಕ್ಕೆ ಅಡ್ಡಿ: ಭೂ ಮಾಪಕನಿಗೆ ಕಪಾಳ ಮೋಕ್ಷ!

ಭಟ್ಕಳ: ಬೈಲೂರು ತೊದಳ್ಳಿ ಗ್ರಾಮದ ನಾಗಮ್ಮ ಮೊಗೇರ್ ಹಾಗೂ ಲಲಿತಾ ಮೊಗೇರ್ ಅವರ ಭೂ ಗಡಿ ಗುರುತು ಮಾಡಲು ಹೋಗಿದ್ದ ಅನುಪ ಶೆಟ್ಟಿ (30) ಎಂಬಾತರ ಮೇಲೆ ಹಲ್ಲೆ ನಡೆದಿದೆ.
ನಾಗಮ್ಮ ಬೋಳು ಮೊಗೇರ್ ಹಾಗೂ ಲಲಿತಾ ತಿಮ್ಮಪ್ಪ ಮೊಗೇರ್ ಅವರು ಅರ್ಜಿ ಸಲ್ಲಿಸಿದ ಪ್ರಕಾರ ಜುಲೈ 26ರಂದು ಸರ್ಕಾರಿ ಭೂ ಮಾಪಕ ಅನುಪ ಶೆಟ್ಟಿ ತೆರಳಿದ್ದರು. ಹೀಗೆ ಹೋಗುವ ಮುನ್ನ ನಿಯಮಾನುಸಾರ ಅಕ್ಕಪಕ್ಕದ ಜಮೀನಿನ 12 ವಾರಸುದಾರರಿಗೂ ಅವರು ನೋಟಿಸ್ ಜಾರಿ ಮಾಡಿದ್ದರು. ಸರ್ವೆ ನಡೆಸುವ ವೇಳೆ ನೋಟಿಸ್ ಪಡೆದ 4 ಜನ ಆಗಮಿಸಿದ್ದು, ಆ ಪೈಕಿ ಜಯಂತ ನಾಗಪ್ಪ ಮೊಗೇರ್ ಎಂಬಾತರು ಸರ್ವೆಗೆ ಅಡ್ಡಪಡಿಸಿ ಭೂ ಮಾಪಕ ಅನೂಪ ಶೆಟ್ಟಿ ಅವರ ಕೆನ್ನೆಗೆ ಹೊಡೆದಿದ್ದಾರೆ. ಜೊತೆಗೆ ಕೈ ಹಿಡಿದು ತಿರುಚಿದ್ದರಿಂದ ಅನೂಪ ಶೆಟ್ಟಿ ಆಸ್ಪತ್ರೆ ಸೇರಿದ್ದಾರೆ.
ಕುಮಟಾ ಗಾಂಧಿನಗರದ ಅನೂಪ ಶೆಟ್ಟಿ 7 ವರ್ಷಗಳಿಂದ ಭೂ ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. `ಸರ್ವೆ ನಿಲ್ಲಿಸಿ ಇಲ್ಲಿಂದ ಹೊರಡಬೇಕು. ಇಲ್ಲಿಂದ ಹೋಗದೇ ಇದ್ದರೆ ಕೊಲೆ ಮಾಡುವೆ’ ಎಂದು ಸಹ ಜಯಂತ ನಾಗಪ್ಪ ಮೊಗೇರ್ ಬೆದರಿಕೆ ಒಡ್ಡಿ ಬಗ್ಗೆ ಆಸ್ಪತ್ರೆಯಿಂದಲೇ ಅನೂಪ್ ಶೆಟ್ಟಿ ಪೊಲೀಸ್ ದೂರು ನೀಡಿದ್ದಾರೆ.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    One thought on “ಸರ್ವೆಗೆ ಹೋದವನ ಸರ್ಕಾರಿ ಕೆಲಸಕ್ಕೆ ಅಡ್ಡಿ: ಭೂ ಮಾಪಕನಿಗೆ ಕಪಾಳ ಮೋಕ್ಷ!”

    Leave a Reply

    Your email address will not be published. Required fields are marked *

    You cannot copy content of this page