ವಕೀಲರ ಕಚೇರಿಯಲ್ಲಿ ದಾಂದಲೆ: ನೋಟರಿಗೆ ಜೀವ ಬೆದರಿಕೆ!
ಕಾರವಾರ: ವಕೀಲ ಪ್ರದೀಪ ತಾಂಡೇಲ ಅವರ ಕಚೇರಿಗೆ ನುಗ್ಗಿದ ವಿನಯಕ ತಾಂಡೇಲ್ ಎಂಬಾತ ಗಲಾಟೆ ಮಾಡಿದ್ದು, ಅವರಿಗೆ ಜೀವ ಬೆದರಿಕೆ ಒಡ್ಡಿದ್ದಾನೆ. ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರದೀಪ…
ಧರ್ಮಾ ಜಲಾಶಯ ಭರ್ತಿ: ರಸ್ತೆಗೆ ನುಗ್ಗಿದ ನೀರು
ಮುಂಡಗೋಡ: ಮಳಗಿ ಸಮೀಪದ ಧರ್ಮ ಜಲಾಶಯ ಭರ್ತಿಯಾಗಿದ್ದು, ಇದರ ಪರಿಣಾಮ ಮಳಗಿ-ದಾಸನಕೊಪ್ಪ ರಸ್ತೆಯಲ್ಲಿ ನೀರು ತುಂಬಿಕೊoಡಿದೆ. ಇಲ್ಲಿನ ಮಿನಿ ಸೇತುವೆ ಮೇಲೆ ನೀರು ಹರಿಯುತ್ತಿರುವ ಕಾರಣ ರಸ್ತೆ ಸಂಚಾರ ಸಾದ್ಯವಿಲ್ಲ. ಮಳೆ ಹೆಚ್ಚಾಗಿರುವುದರಿಂದ ಜಲಾಶಯದ ಒಳಹರಿವು ಜಾಸ್ತಿಯಾಗಿದೆ. ಸಂಚಾರ ಹದಗೆಟ್ಟ ಕಾರಣ…
ಕೋಳಿ ಸಾಕಲು ಆಸಕ್ತಿ ಇದ್ದವರಿಗೆ ಈ ಸುದ್ದಿ..
ಕುಮಟಾದ ಕೆನರಾ ಬ್ಯಾಂಕ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜು 29ರಿಂದ ಆಗಸ್ಟ್ 7ರವರೆಗೆ 10 ದಿನಗಳ ಕೋಳಿ ಸಾಕಾಣಿಕೆ ತರಬೇತಿ ನಡೆಯಲಿದೆ. ತರಬೇತಿಯು ಊಟ ಮತ್ತು ವಸತಿಸಹಿತ ಉಚಿತ. ಅಭ್ಯರ್ಥಿಯು ನಿರುದ್ಯೋಗಿಯಾಗಿದ್ದು, ಸ್ವ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ವಯೋಮಿತಿ 18…
ಸೈನಿಕರಾಗಬಯಸುವವರಿಗೆ ಆಯ್ಕೆ ದೈಹಿಕ ಪರೀಕ್ಷೆ
ಉತ್ತರಕನ್ನಡ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವೀರ ಬಹದ್ದೂರ ಹೆಂಜಾ ನಾಯ್ಕ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಗೆ 2024-25ನೇ ಸಾಲಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಜು.29 ರಂದು ಬೆಳಗ್ಗೆ 6.30 ಗಂಟೆಗೆ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣ…
ಪ್ರವಾಸಿ ಜೊತೆ ಭಕ್ತಿತಾಣ ಈ ಶಿವಗಂಗಾ..
ಶಿರಸಿಯಿoದ 32 ಕಿಮೀ ದೂರದಲ್ಲಿರುವ ಶಿವಗಂಗಾ ಜಲಪಾತ ಶಾಲ್ಮಲಾ ನದಿಯ ಕೂಸು. ಈ ಜಲಪಾತ ಸಮೀಪ ಗಣಪತಿ ಹಾಗೂ ಈಶ್ವರ ಲಿಂಗಗಳಿವೆ. ಸಮೃದ್ಧ ಹಸಿರು ಪರಿಸರದ ವೈಯ್ಯಾರದಿಂದ ಜಲಪಾತ ಧುಮುಕುತ್ತದೆ. ಇದನ್ನು ನೋಡಲು ದೇಶದ ನಾನಾ ಭಾಗಗಳಿಂದ ಜನ ಬರುತ್ತಾರೆ. ಎರಡು…
ಕುಸಿದ ಸೇತುವೆ ಕಂಬ: ಬಸ್ ಸಂಚಾರ ಸ್ಥಗಿತ
ಕುಮಟಾ: ಕೊಡಮಡಗು ರಾಜ್ಯ ಹೆದ್ದಾರಿಯಲ್ಲಿರುವ ದೀವಳ್ಳಿ ಬಳಿ ಸೇತುವೆ ನಡುವಿನ ಕಂಬ ಕುಸಿದಿದ್ದು, ಬಸ್ ಸಂಚಾರ ಸ್ಥಗಿತವಾಗಿದೆ. ಈ ಸಮಸ್ಯೆ ಬಗೆಹರಿಸುವಂತೆ ಸಂತೆಗುಳಿ ಹಾಗೂ ಸೊಪ್ಪಿನ ಹೊಸಳ್ಳಿ ಭಾಗದ ಜನ ಗುರುವಾರ ಪ್ರತಿಭಟಿಸಿದರು. ನಂತರ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕುಮಟಾ…
ಇನ್ನೂ ಪತ್ತೆಯಾಗದ ಲೋಕೇಶನ ಲೊಕೆಶನ್!
ಶಿರೂರು ಗುಡ್ಡ ಕುಸಿತ ಅವಧಿಯಲ್ಲಿ ಅಲ್ಲಿಯೇ ಇದ್ದ ಎನ್ನಲಾದ ಗಂಗೆಕೊಳ್ಳದ ಲೋಕೇಶ (30)ನ ಬಗ್ಗೆ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಜುಲೈ 16ರಂದು ಈತ ಶಿರೂರು ಗುಡ್ಡದ ಕೆಳಗಿರುವ ಚಹದ ಅಂಗಡಿ ಬಳಿ ಬ್ಯಾಗ್ ಹಾಕಿಕೊಂಡು ನಿಂತಿರುವುದನ್ನು ಅದೇ ಮಾರ್ಗದಲ್ಲಿ ಹೋಗುತ್ತಿದ್ದ…
ದಲಿತ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ
ಯಲ್ಲಾಪುರ: 44 ವರ್ಷದ ದಲಿತ ಮಹಿಳೆ ಮೇಲೆ 46 ವರ್ಷದ ಹೆಮ್ಮಾಡಿಯ ಕೊಣನಗುಂಡಿ ಸತೀಶ ಕಾಂತಪ್ಪ ಪೂಜಾರಿ ಎಂಬಾತ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದು, ಸಂತ್ರಸ್ತ ಮಹಿಳೆ ಸಂಘಟನೆ ನೆರೆವು ಪಡೆದು ನ್ಯಾಯಕ್ಕಾಗಿ ಪೊಲೀಸ್ ಮೊರೆ ಹೋಗಿದ್ದಾರೆ. ಬಾಳೆಜಡ್ಡಿ ಆಗೇರ ಕಾಲೋನಿಯ…
ಜುಲೈ 26: ಹಳಿಯಾಳ – ಯಲ್ಲಾಪುರಕ್ಕೂ ವಿಸ್ತರಿಸಿದ `ಮಳೆ ರಜೆ’
ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜುಲೈ 26ರ ಶುಕ್ರವಾರ ವಿವಿಧ ತಾಲೂಕಿನ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಹಳಿಯಾಳ, ಭಟ್ಕಳ, ದಾಂಡೇಲಿ, ಜೊಯಿಡಾ ಹಾಗೂ ಯಲ್ಲಾಪುರದ ಶಾಲೆಗಳಿಗೆ ಮಾತ್ರ ಈ ರಜೆ ಸಿಗಲಿದೆ.…
ಕಾರ್ಗಿಲ್ ವಿಜಯಕ್ಕೆ 25 ವರ್ಷ: ಮಾಜಿ ಸೈನಿಕನಿಂದ ಜನ ಜಾಗೃತಿಯ ಓಟ!
ಕುಮಟಾ: ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಜುಲೈ 26ರ ಶುಕ್ರವಾರ `ಯುವಾ ಬ್ರಿಗೇಡ್’ ಮ್ಯಾರಥಾನ್ ಓಟ ಆಯೋಜಿಸಿದೆ. ಮಾಸ್ತಿಕಟ್ಟೆ ದೇವಸ್ಥಾನದಿಂದ ಹಳೆ ಬಸ್ ನಿಲ್ದಾಣ, ಮಾರುಕಟ್ಟೆ ಶನಿ ದೇವಸ್ಥಾನ ರಸ್ತೆ ಮೂಲಕ ಸುಭಾಷ್ ರಸ್ತೆ, ಗಿಬ್ ಸರ್ಕಲ್’ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.…







