ರಸ್ತೆಗೆ ಅಡ್ಡ ಬಿದ್ದ ಮರ: ಓಡಾಟಕ್ಕೂ ಇಲ್ಲ ಜಾಗ
ಯಲ್ಲಾಪುರ: ಮಂಚಿಕೇರಿ ಅರಣ್ಯ ವಲಯದಲ್ಲಿ ಗುರುವಾರ ಇನ್ನೊಂದು ಮರ ಮುರಿದುಬಿದ್ದಿದೆ. ಜೋಗಬಟ್ಟರಕೇರಿಗೆ ತೆರಳುವ ಮಾರ್ಗದಲ್ಲಿ ದೊಡ್ಡ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಓಡಾಡಲು ಸ್ಥಳಾವಕಾಶವಿಲ್ಲ. ಈ ಭಾಗದಲ್ಲಿ ಒಟ್ಟು ಆರು ಮನೆಗಳಿವೆ. ಮರ ಬಿದ್ದಿದ್ದರಿಂದ ಎರಡು ಮನೆಯವರಿಗೆ ಸಮಸ್ಯೆಯಾಗಿದೆ. ಕಳೆದ ವರ್ಷ…
ಮುಂಡಗೋಡ: 34 ಶಾಲೆಗಳಿಗೆ ಮಳೆ ಹಾನಿ!
ಮುಂಡಗೋಡ: ಇತರೆ ತಾಲೂಕುಗಳಿಗೆ ಹೋಲಿಸಿದರೆ ಮುಂಡಗೋಡದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮಳೆ ಸುರಿದಿದೆ. ಅದಾಗಿಯೂ ತಾಲೂಕಿನ 34 ಶಾಲೆಗಳಿಗೆ ಮಳೆಯಿಂದ ಹಾನಿಯಾಗಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜಗಣಾಚಾರಿ ಮಾಹಿತಿ ನೀಡಿದ್ದು, `ಈ ಶಾಲೆಗಳಲ್ಲಿ ಗೋಡೆಗಳಿಗೆ ಬಿರುಕು ಮೂಡಿದೆ. ಅಲ್ಲಲ್ಲಿ ಸೋರುತ್ತಿದೆ’…
ಮೀನುಗಾರರ ನಡುವೆ ಮಾರಾಮಾರಿ!
ಕುಮಟಾ: ತೊರ್ಕೆ ಗ್ರಾ ಪಂ ವ್ಯಾಪ್ತಿಯ ಸಿದ್ದೇಶ್ವರ ಜಂತ್ರಾಡಿ ಪ್ರದೇಶ ಇದೀಗ ವಿವಾದದ ಕೇಂದ್ರವಾಗಿದ್ದು, ಮೀನು ಹಿಡಿಯುವ ವಿಷಯವಾಗಿ ಮೀನುಗಾರರ ನಡುವೆ ಪರಸ್ಪರ ವಾಗ್ವಾದ ನಡೆದು ಅದು ಹಾಗೂ ಕೈ ಕೈ ಮಿಲಾಯಿಸುವ ಹಂತದಲ್ಲಿ ಗಲಾಟೆ ನಡೆದಿದೆ. ಜುಲೈ 24ರ ಸಂಜೆ…
ಮುರ್ಕವಾಡದಲ್ಲಿ ಮನೆಗಳ್ಳತನ
ಹಳಿಯಾಳ: ಮುರ್ಕವಾಡದ ಸಂಬಾಜಿ ಗುತ್ತಣ್ಣನವರ (64) ಅವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿ ಯಾರೂ ಇಲ್ಲದಿರುವಾಗ ಒಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಿದ್ದ ಹಣ ದೋಚಿ ಪರಾರಿಯಾಗಿದ್ದಾರೆ. ಜುಲೈ 19ರಂದು ಮನೆಯವರೆಲ್ಲರೂ ಹೊರಗಡೆ ಹೋಗಿದ್ದು, ಜುಲೈ 24ರಂದು ಮನೆಗೆ ಮರಳಿದಾಗ ಮನೆಯ ಬಾಗಿಲು ಒಡೆದಿರುವುದು…
ಕಾರಿನಲ್ಲಿ ಬಂದವ ಮರಕ್ಕೆ ನೇತಾಡಿದ!
ಹೊನ್ನಾವರ: ಚಿಕ್ಕೊಳ್ಳಿಯ ಪ್ರಶಾಂತ ಈಶ್ವರ ನಾಯ್ಕ (37) ಗೇರು ಮರಕ್ಕೆ ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ. ಮಂಗಳವಾರ ಬೆಳಗ್ಗೆ ತಮ್ಮ ಕಾರು ತೆಗೆದುಕೊಂಡು ಹೋದ ಅವರು ಸಂಜೆ ಆದರೂ ಮನೆಗೆ ಮರಳಿಲ್ಲ. ಈ ಬಗ್ಗೆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಹುಡುಕಾಟ ನಡೆಸಿದಾಗ…
ನೀರಾಡಲು ಹೋದವ ಶವವಾದ!
ಮುಂಡಗೋಡ: ಬುಧವಾರ ಧರ್ಮಾ ಜಲಾಶಯದಲ್ಲಿ ನೀರು ಪಾಲಾಗಿದ್ದ ಮುಡಸಾಲಿ ಗ್ರಾಮದ ಶ್ರೀನಾಥ ಹರಿಜನ ಸಾವನಪ್ಪಿದ್ದು, ಆತನ ಶವ ಗುರುವಾರ ಸಿಕ್ಕಿದೆ. ಮಳಗಿ ಬಳಿಯ ಧರ್ಮಾ ಜಲಾಶಯಕ್ಕೆ ಸ್ನೇಹಿತನ ಜೊತೆ ತೆರಳಿದ್ದ ಶ್ರೀನಾಥ ಅಲ್ಲಿ ನೀರಿಗೆ ಇಳಿದಿದ್ದ. ನೀರಿನ ರಭಸಕ್ಕೆ ಆತ ಕೊಚ್ಚಿ…
ಮಳೆ ನೀರಿಗೆ ಮನೆಗೆ ಬಂದ ನಾಗರ!
ಭಟ್ಕಳ: ಚರಂಡಿ ನಿರ್ವಹಣೆ ಸರಿಯಿಲ್ಲದ ಕಾರಣ ಮಳೆ ನೀರು ಮನೆಗೆ ಬರುತ್ತಿದ್ದು, ಮಳೆ ನೀರಿನಲ್ಲಿ ಕೊಚ್ಚಿದ ನಾಗರ ಹಾವು ಕೊಂಡು ಬಂದ ವಾಸುದೇವ ನಾಯಕ ಎಂಬಾತರ ಮನೆಯಲ್ಲಿ ಆಶ್ರಯ ಪಡೆದಿತ್ತು. ನಂತರ ಅವರ ಮನೆ ಮುಂದಿನ ಅಂಗಡಿ ಬಾಗಿಲಿಗೆ ತೆರಳಿ ಹೆಡೆ…
ಗಂಗಾವಳಿ ಪಾಲಾದ ಮರದ ನಾಟಾ
ಜೊಯಿಡಾದ ರಾಮನಗರದಿಂದ ಕೇರಳಕ್ಕೆ ತೆರಳುತ್ತಿದ್ದ ಮರದ ನಾಟಾ ಶಿರೂರು ಗುಡ್ಡ ಕುಸಿತದ ಪರಿಣಾಮ ಗಂಗಾವಳಿ ನದಿ ಪಾಲಾಗಿದ್ದು, ಅಂಕೋಲಾದ ಅಗ್ರಗೋಣದಲ್ಲಿ ಕೆಲ ನಾಟಾದ ತುಂಡುಗಳು ಪತ್ತೆಯಾಗಿದೆ. ಜೂ 15ರಂದು ಲಾರಿಯಲ್ಲಿ ನಾಟಾ ತುಂಬಿಸಿಕೊ0ಡಿದ್ದ ಅರ್ಜುನ ಜು 16ರಂದು ಶಿರೂರು ತಲುಪಿದ್ದ. ಆಗ,…
ಯೋಗ ಸ್ಪರ್ಧೆ: ಸರ್ಕಾರಿ ಶಾಲಾ ಮಕ್ಕಳ ಸಾಧನೆ
ಹೊನ್ನಾವರ: ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಅಂತರ್ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಹಳದಿಪುರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಶಾಲೆಯ ವಿದ್ಯಾರ್ಥಿಗಳಾದ ರಜತ್ ಮಂಜುನಾಥ್ ನಾಯ್ಕ, ವಿದ್ಯಾಶ್ರೀ ಈಶ್ವರ ಗೌಡ, ಶ್ರೀನಿಧಿ ಸತೀಶ್ ರೇವಣಕರ್, ಸಮಿಕ ಚಂದ್ರಕಾoತ…
ಇದು ಸುಳ್ಳು ಸುದ್ದಿ!
ಬುಧವಾರ ಸಂಜೆಯಿoದ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಹೆದ್ದಾರಿ ಕುಸಿದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದ್ದು, ಇದು ಸತ್ಯವಲ್ಲ. ಅರಬೈಲ್ ಘಟ್ಟದಲ್ಲಿ ಎಲ್ಲಿಯೂ ಹೆದ್ದಾರಿ ಕುಸಿತ ಆಗಿಲ್ಲ. ರಸ್ತೆ ಸಂಚಾರ ಸರಿಯಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಕೆಲ ಕಿಡಿಗೇಡಿಗಳು ಜನರಲ್ಲಿ…







