ಕೃಷಿ ಪ್ರಶಸ್ತಿಗೆ ಹೀಗೆ ಮಾಡಿ!
ನೀವು ಉತ್ತಮ ಕೃಷಿಕರಾ? ಅಥವಾ ಕೃಷಿ ಸಾಧಕರಾ? ನಿಮ್ಮನ್ನೂ ಯಾರೂ ಗುರುತಿಸಲಿಲ್ಲವಾ.. ಹಾಗಾದರೆ `ಕೃಷಿ ಪ್ರಶಸ್ತಿ’ ಪಡೆಯಲು ಇಲ್ಲಿ ಅರ್ಜಿ ಹಾಕಿ! `ಕೃಷಿ ಪಂಡಿತ’ ಮತ್ತು `ಕೃಷಿ ಪ್ರಶಸ್ತಿ’ಗೆ ಕೃಷಿ ಇಲಾಖೆ ಅರ್ಜಿ ಕರೆದಿದೆ. ಕೃಷಿಯಲ್ಲಿ ಅಳವಡಿಸಿಕೊಂಡಿರುವ ಬೆಳೆ ಪದ್ಧತಿ, ಸಮಗ್ರ…
ಜುಲೈ 25: ಕೆಲ ತಾಲೂಕಿನ ಶಾಲೆಗಳಿಗೆ ಮಾತ್ರ ರಜೆ!
ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜುಲೈ 25ರ ಗುರುವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ದಾಂಡೇಲಿ ಹಾಗೂ ಜೊಯಿಡಾದ ಶಾಲೆಗಳಿಗೆ ಮಾತ್ರ ಈ ರಜೆ ಸಿಗಲಿದೆ. ಅಂಗನವಾಡಿ, ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ…
ಔಷಧಿ ಬದಲು ವಿಷ ಕುಡಿದ ಸೈನಿಕನ ಸಹೋದರ
ಕಾರವಾರ: ಮೂಡಗೇರಿಯ ಪ್ರಕಾಶ ಗೋವಿಂದ ನಾಯ್ಕ (64) ಔಷಧಿ ಎಂದು ತಿಳಿದು ವಿಷ ಕುಡಿದು ಸಾವನಪ್ಪಿದ್ದಾರೆ. ಸೀಬರ್ಡ ಕಾಲೋನಿಯ ಈತ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈಚೆಗೆ ಬಿಬಿ ಮತ್ತು ಶುಗರ್ ಕಾಣಿಸಿಕೊಂಡಿತ್ತು. ಈ ಹಿನ್ನಲೆ ವೈದ್ಯರ ಸಲಹೆ ಪಡೆದು ಔಷಧಿ…
ಜಲಾಶಯಕ್ಕೆ ಹೋದವ ನೀರುಪಾಲು
ಮುಂಡಗೋಡ: ಮಳಗಿ ಬಳಿಯಿರುವ ಧರ್ಮಾ ಜಲಾಶಯ ನೋಡಲು ಹೋಗಿದ್ದ ಶ್ರೀನಾಥ ಎಂಬಾತ ನೀರು ಪಾಲಾಗಿದ್ದಾನೆ. ಮುಡಸಾಲಿಯ ಈತ ತನ್ನ ಸ್ನೇಹಿತ ಪೀರಪ್ಪ ಜೊತೆ ಜಲಾಶಯ ನೋಡಲು ತೆರಳಿದ್ದ. ಜಲಾಶಯದ ಹತ್ತಿರ ಹೋಗದಂತೆ ಸೂಚಿಸಿದರೂ ಮುಂದೆ ತೆರಳಿದ್ದು, ಆತ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.…
ಶಿರೂರು: ಶವ ಸಂಸ್ಕಾರಕ್ಕೂ ಇಲ್ಲ ಜಾಗ!
ಈ ಮೊದಲು ಶಿರೂರು-ಉಳುವರೆಯಲ್ಲಿ ಯಾರೇ ಸಾವನಪ್ಪಿದರೂ ಮನೆ ಹಿಂದಿನ ಅರಣ್ಯ ಪ್ರದೇಶದಲ್ಲಿ ಶವ ಸಂಸ್ಕಾರ ಮಾಡುತ್ತಿದ್ದರು. ಆದರೆ, ಇದೀಗ ಅಲ್ಲಿ ಶವ ಸಂಸ್ಕಾರಕ್ಕೆ ಸರಿಯಾದ ಅರಣ್ಯವೇ ಇಲ್ಲ! ಗುಡ್ಡ ಕುಸಿತದಲ್ಲಿ ಕೊಚ್ಚಿ ಹೋಗಿದ್ದ ಉಳುವರೆ ಗ್ರಾಮದ ಸಣ್ಣಿ ಹನುಮ ಗೌಡ ಒಂದುವಾರ…
ಈತನನ್ನು ಎಲ್ಲಾದರೂ ಕಂಡಿರಾ?
ಕಾರವಾರ: ಮುದುಗಾದಲ್ಲಿ ವಾಸವಾಗಿದ್ದ ವೆಸ್ಟ್ ಬಂಗಾಲದ ಅರುಣ (35) ಎಂಬಾತ ನಾಪತ್ತೆಯಾಗಿದ್ದು, ಆತನ ಕುಟುಂಬದವರು ಹುಡುಕಾಡುತ್ತಿದ್ದಾರೆ. ಮುದುಗಾದ ಎನ್‌ಸಿಸಿ ಲೇಬರ್ ಕಾಲೋನಿಯಲ್ಲಿದ್ದ ಈತ ಜು 7ರಂದು ಕಣ್ಮರೆಯಾಗಿದ್ದಾನೆ. ಅಂದು ಮಧ್ಯಾಹ್ನ 2ಗಂಟೆಯವರೆಗೆ ಮನೆಯಲ್ಲಿಯೇ ಇದ್ದ. ನಂತರ ಯಾರಿಗೂ ಕಾಣಿಸಿಕೊಂಡಿಲ್ಲ. ಅವರ ಊರಿನಲ್ಲಿ…
ಟಿ ಎಸ್ ಎಸ್ ಅಂಗಳದಲ್ಲಿ ಮತ್ತೆ ಕೆಸರಾಟ!
ಶಿರಸಿ: `ಕೆಲಸಗಾರರನ್ನು ಕರೆತರುವುದಕ್ಕಾಗಿ ಟಿಎಸ್‌ಎಸ್ ವಾಹನ ಖರೀದಿ ಮಾಡಿದ್ದು, ವಾಹನಕ್ಕೆ ಇಂಧನ ನೀಡುವ ದರ ಹೆಚ್ಚಿಸಿದ್ದರಿಂದ ಯಾರಿಗೂ ಹಾನಿ ಆಗಿಲ್ಲ. ಅದಾಗಿಯೂ ನಮ್ಮ ಅವಧಿಯಲ್ಲಿ ಕೆಲಸಗಾರರನ್ನು ಸಂಸ್ಥೆಗೆ ಕರೆತರುವ ಸಲುವಾಗಿ ವಾಹನದ ಇಂಧನಕ್ಕೆ ನೀಡುವ ದರ ಹೆಚ್ಚಿಸಿ ಸಂಸ್ಥೆಗೆ ಹಾನಿ ಮಾಡಿದ್ದೇವೆ…
ಮಕ್ಕಳ ಮೇಲೆ ಬಿದ್ದ ಮನೆ
ಸಿದ್ದಾಪುರ: ಬುಧವಾರ ವ್ಯಾಪಕವಾಗಿ ಸುರಿದ ಮಳೆ ಹಾಗೂ ರಭಸವಾಗಿ ಬೀಸಿದ ಗಾಳಿಗೆ ನೆಜ್ಜೂರಿನ ಅಹ್ಮದ್ ಖಾನ್ ಅವರ ಮನೆ ಮುರಿದಿದೆ. ಮನೆಯಲ್ಲಿ ವಾಸವಿದ್ದ ಮೂವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಖಿಲಿಲ್ ಖಾನ್ (65) ಸಾಗರದ ಆಸ್ಪತ್ರೆಗೆ, ಅಯನ್ ಖಾನ್ (11) ಶಿಮವೊಗ್ಗದ…
ಮನೆ ಮೇಲೆ ಬಿದ್ದ ಮರ: ಮೂವರಿಗೆ ಗಾಯ
ಹೊನ್ನಾವರ: ಹಳದಿಪುರದ ಬಗ್ರಾಣಿಯಲ್ಲಿ ಬುಧವಾರ ಮನೆ ಮೇಲೆ ಮರ ಬಿದ್ದಿದೆ. ಮನೆಯಲ್ಲಿ ವಾಸವಾಗಿದ್ದ ಕೃಷ್ಣ ಗೌಡ, ಮಾದೇವಿ ಗೌಡ ಹಾಗೂ ನಿಫುಲ ಗೌಡ ಗಾಯಗೊಂಡಿದ್ದಾರೆ. ಈ ಮನೆಯಲ್ಲಿ ನಾಲ್ಕು ಜನ ವಾಸಿಸುತ್ತಿದ್ದು, ಮರ ಬೀಳುವಾಗ ಒಬ್ಬರು ಹೊರಗಿದ್ದರು. ಗಾಯಗೊಂಡ ಮೂವರನ್ನು ಮಂಗಳೂರಿನ…
ಮಳೆಗೆ ನೆನೆದು ಕುಸಿದ ಶಾಲೆ
ಜೊಯಿಡಾ: ಬುಧವಾರ ಸುರಿದ ರಭಸ ಮಳೆಗೆ ವಾಗಬಂಧ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಕುಸಿದಿದೆ. ಈ ಶಾಲೆಯಲ್ಲಿ 18 ಮಕ್ಕಳು ಓದುತ್ತಿದ್ದರು. ಮಕ್ಕಳು ಅಲ್ಲಿ ಇಲ್ಲದ ವೇಳೆ ಗೋಡೆ ಕುಸಿದಿದೆ. ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳು ಇದೀಗ ಬೇರೆ ಕೊಠಡಿಯಲ್ಲಿ ಮಕ್ಕಳಿಗೆ…







