ಸತ್ತರೂ ತವರಿನ ಮಾತು ತಪ್ಪದ ಶಾಂತಿ!
`ಮುoದಿನ ವಾರ ಮತ್ತೆ ಬರುವೆ’ ಎಂದು ಹೇಳಿ ಶಿರೂರಿಗೆ ಹೋಗಿದ್ದ ಶಾಂತಿ ಇದೀಗ ಶವವಾಗಿ ತವರಿಗೆ ಮರಳಿದ್ದಾಳೆ. ಸಾವಿನ ನಂತರ ನದಿಯಲ್ಲಿ ತೇಲಿಯಾದರೂ ಆಕೆ ತವರು ಸೇರಿದ್ದಾಳೆ. ಕೊನೆಯದಾಗಿ ಆಕೆ ಹೇಳಿದ್ದ ಮಾತುಗಳನ್ನು ನೆನೆದು ಮಾವು ವ್ಯಾಪಾರಿಯಾಗಿರುವ ಶಾಂತಿಯ ತಂದೆ ಪಾಂಡುರoಗ…
ಜುಲೈ 18ರವರೆಗೆ ರೆಡ್ ಅಲರ್ಟ: ಗುರುವಾರ ಈ ಶಾಲೆಗಳಿಗೆ ರಜೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಜುಲೈ 18ರವರೆಗೆ `ರೆಡ್ ಅಲರ್ಟ‘ ಘೋಷಿಸಲಾಗಿದೆ. ಈ ಹಿನ್ನಲೆ ಗುರುವಾರ ಸಹ ಶಾಲಾ-ಕಾಲೇಜುಗಳಿಗೆ ರಜೆ ಮುಂದುವರೆಸಲಾಗಿದೆ. ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಶಿರಸಿ, ಯಲ್ಲಾಪುರ, ಸಿದ್ದಾಪುರ, ದಾಂಡೇಲಿ ಹಾಗೂ ಜೊಯಿಡಾದ ಅಂಗನವಾಡಿ,…
ಗೋ ರಕ್ಷಣೆಗೆ ಹೋದವನ ಜೀವಕ್ಕೆ ಕುತ್ತು
ಕಾರವಾರ: ಚೆಂಡಿಯಾದ ಅನೀಲ ರಾಘೋಬ (65) ಎಂಬಾತರು ಜಾನುವಾರುಗಳ ರಕ್ಷಣೆಗೆ ತೆರಳಿ ಸಾವನಪ್ಪಿದ್ದಾರೆ. ನೆರೆ ಪ್ರವಾಹದಿಂದಾಗಿ ಚೆಂಡಿಯಾ ಬಳಿಯ ಇಡೂರಿನಲ್ಲಿ ನೀರು ತುಂಬಿದ್ದು, ಜಾನುವಾರುಗಳು ತೊಂದರೆಯಲ್ಲಿದ್ದವು. ಇದನ್ನು ಗಮನಿಸಿದ ಅನೀಲ್ ಮೂಕ ಜೀವಿಗಳ ರಕ್ಷಣೆಗೆ ಧಾವಿಸಿದ್ದರು. ನೀರಿನಲ್ಲಿದ್ದ ಹಸುಗಳನ್ನು ಸುರಕ್ಷಿತ ಸ್ಥಳಕ್ಕೆ…
ಗುಡ್ಡಕುಸಿತದಿಂದ ಬಚಾವಾದ ಮೂಕಜೀವಿ: ಈ ಪ್ರಾಣಿಯ ಬದುಕು ನಿಜಕ್ಕೂ ನಾಯಿಪಾಡು!
ಅಂಕೋಲಾ: ಎಲ್ಲಿಂದಲೋ ಬಂದ ಬೀದಿ ನಾಯಿಗೆ ಶಿರೂರು ಅಂಗಡಿಯವರು ಊಟ ಹಾಕಿದ್ದರು. ಅಂದಿನಿoದ ಇಂದಿನವರೆಗೂ ಆ ನಾಯಿ ಅಂಗಡಿಯ ಕಾವಲಿಗಿದ್ದು, ಗುಡ್ಡ ಕುಸಿತದಲ್ಲಿ ಅನ್ನ ನೀಡಿದವರು ಸಾವನಪ್ಪಿದರೂ ನಾಯಿ ಮಾತ್ರ ಅಲ್ಲಿಂದ ಕದಲುತ್ತಿಲ್ಲ. ಮಾಹಿತಿಗಳ ಪ್ರಕಾರ ಎರಡು ವರ್ಷದ ಹಿಂದೆ ಲಾರಿಯವರೊಬ್ಬರು…
ಅಶೋಕವನದಲ್ಲಿ ರಾಘವೇಶ್ವರರ ಚಾತುರ್ಮಾಸ
ಗೋಕರ್ಣದ ಅಶೋಕೆಯಲ್ಲಿ ಜುಲೈ 21ರಿಂದ ಸೆಪ್ಟೆಂಬರ್ 18ರವರೆಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಚಾತುರ್ಮಾಸ ನಡೆಸಲಿದ್ದಾರೆ. `ಅನಾವರಣ ಚಾತುರ್ಮಾಸ್ಯ’ ಎಂಬ ಅಭಿದಾನದೊಂದಿಗೆ 60 ದಿನಗಳ ಕಾಲ ಅವರು ವೃತ ಆಚರಣೆಯಲ್ಲಿ ತೊಡಗಲಿದ್ದಾರೆ. ಈ ವೇಳೆ ಲೋಕಹಿತಕ್ಕಾಗಿ ಪರಮ ಪುರುಷನ ಆರಾಧನೆ, ಅನುಷ್ಠಾನಗಳಲ್ಲಿ…
ದನ ಮೇಯಿಸಲು ಹೋದವರ ಮೇಲೆ ಚಿರತೆ ದಾಳಿ
ಯಲ್ಲಾಪುರ: ಜಾನುವಾರುಗಳನ್ನು ಮೇಯಿಸಲು ಗದ್ದೆಗೆ ಹೋಗಿದ್ದ ಇಬ್ಬರು ಗೌಳಿಗರ ಮೇಲೆ ಚಿರತೆ ದಾಳಿ ನಡೆಸಿದೆ. ಜುಲೈ 17ರ ಬೆಳಗ್ಗೆ 6.30ರ ವೇಳೆಗೆ ದೇಶಪಾಂಡೆ ನಗರದ ಸೋನು ಘಾಟು ಕೊಕ್ರೆ (32) ಹಾಗೂ ಲಕ್ಷ್ಮಣ ವಾಗು ಕೊಕ್ಕರೆ (37) ಎಂಬಾತರು ಕೊಟ್ಟಿಗೆಯಲ್ಲಿದ್ದ ದನವನ್ನು…
ಅಪಾಯದ ಅಂಚಿನಲ್ಲಿದ್ದವರ ರಕ್ಷಣೆ
ಯಲ್ಲಾಪುರ: ಜೋಗಾಳಕೇರಿ ಅಸ್ಲೇಕೊಪ್ಪದಲ್ಲಿ ಅಪಾಯದ ಅಂಚಿನಲ್ಲಿದ್ದ ನಾಲ್ಕು ಕುಟುಂಬದವರನ್ನು ಮಾವಿನಮನೆ ಗ್ರಾ ಪಂ ಅಧಿಕಾರಿ ಗಂಗಾಧರ ಭಟ್ಟ ರಕ್ಷಿಸಿದ್ದಾರೆ. ಸಂತ್ರಸ್ತರಿಗೆ ಅವರು ಆಶ್ರಯವನ್ನು ನೀಡಿದ್ದಾರೆ. ಅಸ್ಲೇಕೊಪ್ಪದಲ್ಲಿ ತೆಂಗು ವೆಂಕಣ್ಣ ಕುಣಬಿ, ಗಣಪತಿ ತಿಮ್ಮಣ್ಣ ಕುಣಬಿ, ಗಣಪತಿ ನೆಮ್ಮ ಕುಣಬಿ ಹಾಗೂ ನೆಮ್ಮಾ…
ಹೊಸ ಕಟ್ಟಡದ ಮೇಲೆ ಬಿದ್ದ ಹಳೆಮನೆ
ಯಲ್ಲಾಪುರ: ಮಂಜುನಾಥ ನಗರದಲ್ಲಿ ಬುಧವಾರ ಹಳೆಯ ಮನೆಯ ಗೋಡೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಮೇಲೆ ಕುಸಿದಿದೆ. ಬೀಮವ್ವ ಬೋವಿ ವಡ್ಡರ್ ಎಂಬಾತರ ಮಣ್ಣಿನ ಮನೆ ಮಳೆಗೆ ಕುಸಿತ ಕಂಡಿದೆ. ಅವರ ಮನೆಯ ಗೋಡೆ ಮಣಿಕಂಠ ಉಣಕಲ್ ಎಂಬಾತರು ನಿರ್ಮಿಸುತ್ತಿದ್ದ ಕಟ್ಟಡದ ಮೇಲೆ…
ಜುಲೈ 21ರಿಂದ ಸೋಂದಾ ಶ್ರೀಗಳ ಚಾತುರ್ಮಾಸ
ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನಲ್ಲಿ ಶ್ರೀ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹಾಗೂ ಶ್ರೀ ಆನಂದಭೋದೇoದ್ರ ಸರಸ್ವತೀ ಸ್ವಾಮೀಜಿ ಜುಲೈ 21ರಿಂದ ಸಪ್ಟೆಂಬರ್ 19ರತನಕ ಚಾತುರ್ಮಾಸ್ಯ ವೃತಾಚರಣೆ ನಡೆಸಲು ಸಂಕಲ್ಪ ಮಾಡಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ ಭಗವಾನ್ ವ್ಯಾಸರ ಪೂಜೆ…
ಶ್ರೀರಾಮ ನಿರ್ಯಾಣದೊಂದಿಗೆ ಸರಣಿಗೆ ಮಹಾ ಮಂಗಲ
ಹೊನ್ನಾವರ: ಒಂಬತ್ತು ದಿನಗಳಿಂದ ಬೆಳ್ಳಿ ಹಬ್ಬದ ಸಂಭ್ರಮ ಆಚರಿಸಿಕೊಳ್ಳುತ್ತಿದ್ದ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನದ `ನವ ದಿನ ಶ್ರೀರಾಮ ಚರಿತೆ ತಾಳಮದ್ದಲೆ’ ಸರಯೂತೀರದಲ್ಲಿ ಶ್ರೀರಾಮನ ನಿರ್ಯಾಣದ ಮೂಲಕ ಸಮಾರೋಪಗೊಂಡಿದೆ. ಹೊನ್ನಾವರದ ಕರಿಕಾನ ಅಮ್ಮನ ಸನ್ನಿಧಿಯಲ್ಲಿ ನಡೆದ ತಾಳಮದ್ದಲೆಯಲ್ಲಿ ಸೆಲ್ಕೋ ಇಂಡಿಯಾದದ ಸಿಇಓ, ಅರ್ಥದಾರಿ…







