6
ಹಿರಿಯ ಅರ್ಚಕನಿಗೆ ಹೃದಯಘಾತ

ಭಟ್ಕಳ: ಚಿತ್ರಾಪುರ ಮಠದ ಹಿರಿಯ ಅರ್ಚಕ ರಾಮೇಶ್ವರ ಹರಿದಾಸ್ (68) ಅವರು ಹೃದಯಘಾತದಿಂದ ಸಾವನಪ್ಪಿದ್ದಾರೆ. ಕಳೆದ 44 ವರ್ಷಗಳಿಂದ ಚಿತ್ರಾಪುರ ಮಠದಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದರು. ಮೃತರು ವಯೋವೃದ್ಧ ತಾಯಿ ಮೀರಾ ಅವರನ್ನು ಅಗಲಿದ್ದಾರೆ.

ಕಾರವಾರ: ನಾಳೆಯೂ ಇರಲ್ಲ ಕರೆಂಟ್!

ಕಾರವಾರ: ವಿದ್ಯುತ್ ತಂತಿ ನಿರ್ವಹಣೆ ಹಿನ್ನಲೆ ಜುಲೈ 12ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾರವಾರದ ಶಿರವಾಡ ಕೈಗಾರಿಕಾ ವಲಯದಲ್ಲಿ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ. ಉಳಿದ ಕಡೆ ಹೆಚ್ಚಿನ ಸಮಸ್ಯೆ ಇಲ್ಲ.

`ಡೆಂಗ್ಯು ತಡೆಗೆ ಶಾಲಾ ಮಕ್ಕಳ ಬಳಕೆ: ಶಿಕ್ಷಕರಿಗೆ ತರಬೇತಿ’

ಕಾರವಾರ: `ಮಳೆಗಾಲದ ಅವಧಿಯಲ್ಲಿ ಡೆಂಗ್ಯೂ ರೋಗ ಹೆಚ್ಚಾಗದಂತೆ ಮುನ್ನಚ್ಚರಿಕೆವಹಿಸಬೇಕು’ ಎಂದು ಅಧೀನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸೂಚಿಸಿದರು. ವಿಡಿಯೋ ಕಾನ್ಪರೆನ್ಸ್ ಮೂಲಕ ಎಲ್ಲಾ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು `ಗ್ರಾಮ ಪಂಚಾಯತ್’ಗಳಲ್ಲಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀರು…

ಕಾಗದದ ಪ್ಲೇಟಿನಲ್ಲಿ ಅರೆಬಿಕ್ ಬರಹ: ಮುಸ್ಲಿಂ ವಿರೋಧ

ಕಾರವಾರ: ಕೋರ್ಟ ರಸ್ತೆಯಲ್ಲಿರುವ ಬೇಕರಿಯೊಂದರಲ್ಲಿ ನೀಡಿದ ಕಾಗದ ಪಾತ್ರೆಯಲ್ಲಿ ಅರೆಬಿಕ್ ಭಾಷೆಯಲ್ಲಿ ಬರಹಗಳಿದ್ದು, ಈ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮುಸ್ಲಿಂ ಸಮುದಾಯದವರು ಅರೆಬಿಕ್ ಭಾಷೆಯನ್ನು ಈ ರೀತಿ ಬಳಸಿರುವ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವಿಷಯವಾಗಿ ಬುಧವಾರ ಸಂಜೆ…

ಶಿವ ಸನ್ನಿಧಿಯಲ್ಲಿ ರಾಮನ ಅವತಾರ

ಭಟ್ಕಳ: ಕವಲಕ್ಕಿಯ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಟಾನದ ಬೆಳ್ಳಿ ಹಬ್ಬದ ಪ್ರಯುಕ್ತ ಮುರುಡೇಶ್ವರದ ಬಸ್ತಿಮಕ್ಕಿಯಲ್ಲಿ ಕಿಷ್ಕಿಂಧಾ ಆಖ್ಯಾನ ನಡೆದಿದ್ದು, ನೆರೆದಿದ್ದವರನ್ನು ರಂಜಿಸಿತು. `ಕಿಷ್ಕಿoದಾ’ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಪರಮೇಶ್ವರ ಭಂಡಾರಿ ಕರ್ಕಿ, ಅರ್ಥದಾರಿಗಳಾಗಿ ವಾಸುದೇವ ರಂಗಾ ಭಟ್ಟ, ರಾಮಚಂದ್ರ ಹೆಗಡೆ…

ಹೆದ್ದಾರಿ ಕಾಮಗಾರಿಯಲ್ಲಿ ಲೋಪ: ಕನ್ನಡ ಸಂಘಟನೆ ಕಿಡಿ

ಕಾರವಾರ: ಮಾಜಾಳಿಯಿಂದ ಭಟ್ಕಳದವರೆಗೆ ಹಾದುಹೋಗಿರುವ ಹೆದ್ದಾರಿಯನ್ನು ಚತುಷ್ಪದ ಮಾಡುವ ವೇಳೆ ನಡೆದ ಅವಘಡ ಹಾಗೂ ಅಲ್ಲಿನ ಅವೈಜ್ಞಾನಿಕ ಕಾಮಗಾರಿಗಳ ವಿರುದ್ಧ ಜಯ ಕರ್ನಾಟಕ ಜನಪರ ಸಂಘಟನೆಯವರು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಗೆ ಪತ್ರ…

ಮಿರ್ಜಾನ್: ಮಣ್ಣಿನ ರಸ್ತೆಯಲ್ಲಿ ಕಂದಕ

ಕುಮಟಾ: ಮಿರ್ಜಾನ ಸಂಕ್ರೆಕಟ್ಟೆ ಬಳಿಯ ಮಣ್ಣಿನ ರಸ್ತೆ ಕುಸಿದಿದ್ದರಿಂದ ಇಲ್ಲಿ ಕಂದಕ ಉಂಟಾಗಿದೆ. ರೇಲ್ವೆ ಟರ್ನಲ್ ಬಳಿಯ ಮಣ್ಣಿನ ರಸ್ತೆ ಇದಾಗಿದೆ. ಕಂದಕದ ಕಾರಣ ವಾಹನ ಸವಾರರಿಗೆ ತೊಂದರೆಯಾಗಿದೆ. ಈ ರಸ್ತೆಯ ಎಡದಿಂದ ಬಲಕ್ಕೆ ಇಲ್ಲಿ ಹಳ್ಳ ಹರಿಯುತ್ತಿದ್ದು, ಆ ಭಾಗದ…

ಜುಲೈ 11: ಮಳೆ ಮತ್ತು ಜಲಾಶಯದ ನೀರಿನ ವಿವರ

ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೆ, ಜಲಾಶಯಗಳ ನೀರಿನ ಮಟ್ಟ ಬಹುತೇಕ ಯಥಾ ಸ್ಥಿತಿಯಲ್ಲಿದೆ. ಜಲಾಶಯಗಳ ನೀರಿನ ಮಟ್ಟ ಹೀಗಿದೆ. 24 ತಾಸಿನ ಅವಧಿಯಲ್ಲಿ ಸುರಿದ ಮಳೆ ಪ್ರಮಾಣ ಹೀಗಿದೆ. ಜೂಮ್ ಮಾಡಿ ಓದಿ..

ಬಾಳೆಹದ್ದದ ಶ್ರೀಧರ ನಿಗೂಢವಾಗಿ ನಾಪತ್ತೆ

ಯಲ್ಲಾಪುರ: ಬಾಳೆಹದ್ದದ ಶ್ರೀಧರ ರಾಮಾ ಮೋಗೇರ್ (46) ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಚವತ್ತಿ ಬಳಿಯ ಬಾಳೆಹದ್ದದ ಶ್ರೀಧರ ಮೋಗೇರ ಹಾಗೂ ಅವರ ಪತ್ನಿ ಸೌಭಾಗ್ಯ ಅವರಿಗೆ ಕೂಲಿ ಮಾಡಿ ಬದುಕು ಕಂಡಿಕೊoಡಿದ್ದರು. ಜುಲೈ 8ರಂದು ಸಂಜೆಯವರೆಗೂ ಮನೆಯಲ್ಲಿಯೇ ಇದ್ದ ಶ್ರೀಧರ ಮೊಗೆರ್ 6…

ಎಸ್ ಎಸ್ ಎಲ್ ಸಿ ಜಸ್ಟ್ ಪಾಸ್: ಮುಂದೇನು? ಇಲ್ಲಿದೆ ಉದ್ಯೋಗದ ದಾರಿ..

ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯಲ್ಲಿ ಪಾಸಾಗಿ ಮುಂದೆನು? ಎಂದು ಯೋಚಿಸುತ್ತಿದ್ದವರಿಗೆ ಸರ್ಕಾರಿ ಸಂಸ್ಥೆಯೊoದರಲ್ಲಿ ಉದ್ಯೋಗದ ತರಬೇತಿ ಸಿಗುತ್ತದೆ. ಕಾರವಾರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ `ಟಿ.ಆರ್.ಎ.ಸಿ, ಟರ್ನರ್, ವೆಲ್ಡರ್, ಎಮ್.ಇ.ವಿ ಹಾಗೂ ಐ.ಆರ್.ಡಿ.ಎಮ್’ ವೃತ್ತಿಗಳ ಬಾಕಿ ಉಳಿದುಕೊಂಡಿರುವ 60…

You cannot copy content of this page