ಹಲ್ಲೆ ಪ್ರಕರಣ: ಸಿಸಿ ಕ್ಯಾಮರಾ ತೋರಿಸದ ಬಸ್ ಮಾಲಕ
ಭಟ್ಕಳ: ಹೈದರಾಬಾದಿನಿಂದ ಭಟ್ಕಳಕ್ಕೆ ಬರುತ್ತಿದ್ದ ಯುವಕನ ಮೇಲೆ ಖಾಸಗಿ ಬಸ್’ನಲ್ಲಿ ಸೋಮವಾರ ರಾತ್ರಿ ನಡೆದ ಹಲ್ಲೆ ಪ್ರಕರಣ ಹೊಸ ತಿರುವು ಪಡೆದಿದೆ. ಬಸ್ಸಿನಲ್ಲಿ ಯುವಕನ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಎಂದು ಬಸ್ ವ್ಯವಸ್ಥಾಪಕ ಮಂಗಳೂರಿನ ಮನೀಷ್ ಬುಧವಾರ ತಂಝೀo ನಿಯೋಗದವರಲ್ಲಿ…
ಅಧ್ಯಕ್ಷನ ಮೇಲೆ ಅಪರಿಚಿತರಿಂದ ಹಲ್ಲೆ
ಕುಮಟಾದ ನಾಡುಮಾಸ್ಕೇರಿ ಗ್ರಾ ಪಂ ಅಧ್ಯಕ್ಷ ಈಶ್ವರ ಗೌಡ ಅವರ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದಾರೆ. ಅವರ ಮೈಮೇಲೆ ಖಾರದ ಪುಡಿ ಎರಚಿ ಮಾರಕಾಸ್ತçಳಿಂದ ಹಲ್ಲೆ ಮಾಡಿದ್ದಾರೆ. ಈಶ್ವರ ನಾಯ್ಕ ಇದೀಗ ಅಂಕೋಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
`ಜಾಲತಾಣ ತಾಣಗಳ ಮೇಲೆ ಪೊಲೀಸ್ ಕಣ್ಗಾವಲು’
`ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುಳ್ಳು ಸುದ್ದಿ ಹರಡುತ್ತಿದ್ದು, ಅಂಥವರ ಮೇಲೆ ಪೊಲೀಸ್ ಇಲಾಖೆ ನಿಗಾ ಇಡಲಿದೆ’ ಎಂದು ನೂತನ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಹೇಳಿದ್ದಾರೆ. ಕಾರವಾರದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು `ಉತ್ತರ ಕನ್ನಡ ಜಿಲ್ಲೆ ನನಗೆ ಹೊಸದಲ್ಲ. ಈ…
230ಕ್ಕೂ ಅಧಿಕ ಮಂದಿ ಅತಂತ್ರ: ಸಂತ್ರಸ್ತರಿಗೆ ಕಾಳಜಿ ಕೇಂದ್ರವೇ ಆಸರೆ
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, 230ಕ್ಕೂ ಅಧಿಕ ಜನ ಅತಂತ್ರರಾಗಿದ್ದಾರೆ. ಅಪಾಯದಲ್ಲಿದ್ದವರನ್ನು ರಕ್ಷಿಸಿದ ಜಿಲ್ಲಾಡಳಿತ ಸಂತ್ರಸ್ತರಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ ನೀಡಿದೆ. ಹೊನ್ನಾವರ, ಕುಮಟಾ ಮತ್ತು ಅಂಕೋಲ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮದ ಜನ ತೊಂದರೆಗೆ…
ಮಳೆ ಅಪಾಯ: ಮುನ್ನಚ್ಚರಿಕೆಗೆ ಆಗಮಿಸಿದ ರಕ್ಷಣಾ ತಂಡ
ಮುoದಿನ ನಾಲ್ಕು ದಿನಗಳವರೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆಯಿದ್ದು, ವಿಪತ್ತು ನಿರ್ವಹಣಾ ತಂಡದ 50ಕ್ಕೂ ಅಧಿಕ ಸದಸ್ಯರು ಜನರ ಜೀವ ರಕ್ಷಣೆಗೆ ಬರುತ್ತಿದ್ದಾರೆ. ಬೆಂಗಳೂರಿನಿoದ ಜಿಲ್ಲೆಗೆ 2 ವಿಪತ್ತು ನಿರ್ವಹಣಾ ತಂಡ ಈಗಾಗಲೇ ಹೊರಟಿದ್ದು, ಶುಕ್ರವಾರ ಬೆಳಗ್ಗೆ ಅವರು ಕಾರವಾರ, ಕುಮಟಾ ಹಾಗೂ…
ಶಿರಸಿಯಲ್ಲಿ ಜೂಜಾಡುತ್ತಿದ್ದ ಸೊರಬದ ಕೂಲಿ: ಪೊಲೀಸ್ ದಾಳಿ
ಶಿರಸಿ: ಸೊರಬದಲ್ಲಿ ಕೂಲಿ ಕೆಲಸ ಮಾಡುವುದನ್ನು ಬಿಟ್ಟು ಶಿರಸಿಗೆ ಬಂದು ಜೂಜಾಟ ನಡೆಸುತ್ತಿದ್ದ ಪ್ರವೀಣಕುಮಾರ ಕುಂಬಾರ ಎಂಬಾತನ ಮೇಲೆ ಬನವಾಸಿ ಠಾಣೆ ಪಿಸೈ ಚಂದ್ರಕಲಾ ಪತ್ತಾರ್ ದಾಳಿ ನಡೆಸಿದ್ದಾರೆ. ಸೊರಬ ತಾಲೂಕಿನ ಭದ್ರಾಪುರದ ಪ್ರವೀಣಕುಮಾರ ಜೂ 3ರಂದು ಬನವಾಸಿಯ ಅಜ್ಜರಣಕೇರಿ ಬಳಿ…
ಬಸ್ಸಿನಲ್ಲಿ ಬಂದವರು ದೋಣಿಯಲ್ಲಿ ಊರು ಸೇರಿದರು!
ಕುಮಟಾ – ಶಿರಸಿ ಹೆದ್ದಾರಿಯ ಕತಗಾಲ ಬಳಿ ಚಂಡಿಕಾ ಹೊಳೆಯ ನೀರು ರಸ್ತೆಯ ಮೇಲೆ ಹರಿದಿದೆ. ಇದರಿಂದ ಈ ಭಾಗದಲ್ಲಿ ಸಂಚರಿಸುತ್ತಿದ್ದ ಬಸ್ಸು ಅಪಾಯಕ್ಕೆ ಸಿಲುಕಿದ್ದು, ಪ್ರಯಾಣಿಕರನ್ನು ದೋಣಿಯ ಮೂಲಕ ರಕ್ಷಿಸಲಾಯಿತು. ನೀರು ನಿಂತಿದ್ದರೂ ಬಸ್ಸಿನ ಚಾಲಕ ಅಲ್ಲಿಯೇ ತನ್ನ ವಾಹನ…
ಭಟ್ಕಳ ನ್ಯಾಯಾಲಯದಲ್ಲಿ ಉದ್ಯೋಗವಕಾಶ
ಭಟ್ಕಳ: ತಾಲೂಕಾ ಕಾನೂನು ಸೇವಾ ಸಮಿತಿ ಅಡಿಯಲ್ಲಿ ನಡೆಯುವ ಕಚೇರಿಯಲ್ಲಿ ಎರಡು ಹುದ್ದೆ ಖಾಲಿ ಇದ್ದು, ಅರ್ಹರ ಹುಡುಕಾಟ ನಡೆದಿದೆ. ಇಲ್ಲಿ ಕ್ಲರ್ಕ ಕೆಲಸಕ್ಕೆ ಜನ ಬೇಕಾಗಿದ್ದು, ಅವರಿಗೆ ಟೈಪಿಂಗ್ ಸಹ ಗೊತ್ತಿರಬೇಕು. ಜೊತೆಗೆ ದಲಾಯಿತ ಹುದ್ದೆಗೂ ಯೋಗ್ಯರ ಹುಡುಕಾಟ ನಡೆದಿದೆ.…
ರೈಲು ಬಡಿದು ಕಾರ್ಮಿಕ ಸಾವು
ಹೊನ್ನಾವರ: ಮಂಕಿ ಸಾರಸ್ವತಕೇರಿಯ ಮೋಹನ ನಾಯ್ಕ (53) ಎಂಬಾತರು ರೈಲು ಬಡಿದು ಸಾವನಪ್ಪಿದ್ದಾರೆ. ಜೂ 3ರಂದು ಬೆಳಗ್ಗೆ ಕೂಲಿ ಕೆಲಸಕ್ಕೆ ಹೊರಟ ಅವರು ಸಂಜೆಯಾದರೂ ಮನೆಗೆ ಮರಳಿಲ್ಲ. ರಾತ್ರಿ ರೈಲ್ವೆ ಕ್ವಾಟರ್ಸ ಬಳಿ ಅವರಿಗೆ ರೈಲು ಗುದ್ದಿದ್ದು, ತಲೆ ಛಿದ್ರವಾಗಿದೆ. ಮರುದಿನ…
ಗದ್ದೆ ಕೆಲಸಕ್ಕೆ ಹೋಗಿದ್ದ ಗೌಡತ್ತಿ ಸಾವು
ಅಂಕೋಲಾ: ವಾಸರ ಕುದ್ರುಗಿ ಉಳುಗದ್ದೆಯ ಗಂಗೆ ಸುಕ್ರು ಗೌಡ (55) ಎಂಬಾತರು ಗದ್ದೆ ಕೆಲಸಕ್ಕೆ ಹೋಗಿದ್ದಾಗ ಕಾಲು ಜಾರಿ ನೀರಿನಲ್ಲಿ ಬಿದ್ದು ಸಾವನಪ್ಪಿದ್ದಾರೆ. ಜೂ 30ರಂದು ತಮ್ಮ ಮನೆ ಮುಂದಿನ ಗದ್ದೆ ಕೆಲಸಕ್ಕೆ ಹೋಗಿದ್ದ ಅವರು ಅಲ್ಲಿ ಗೊಬ್ಬರ ಹರಡಿದ್ದರು. ನಂತರ…








