ಪ್ರಯಾಣಿಕರೇ.. ಇಲ್ಲಿ ಅಪಾಯಕಾರಿ ಹೊಂಡಗಳಿವೆ ಎಚ್ಚರ!
ಶಿರಸಿ: ಪರಿಸರ ಇಲಾಖೆಯ ಪರವಾನಿಗೆ, ಉಚ್ಛ ನ್ಯಾಯಾಲಯದ ಮದ್ಯಂತರ ಆದೇಶ, ಬಗೆಹರಿಯದ ಭೂಸ್ವಾಧೀನ ಪರಿಹಾರ ವಿತರಣೆ, ಟೆಂಡರ್ ಪ್ರಕ್ರಿಯೆಗೆ ತಡ ಸೇರಿದಂತೆ ವಿವಿಧ ಕಾರಣಗಳಿಂದ ಕುಂಟುತ್ತ ಸಾಗಿದ ಶಿರಸಿ-ಕುಮಟಾ ರಸ್ತೆ ಕಾಮಗಾರಿಗೆ ಸದ್ಯ ಎಲ್ಲಾ ಅಡೆತಡೆಗಳು ದೂರವಾಗಿದ್ದರೂ ರಸ್ತೆ ಮಾತ್ರ ಸರಿಯಾಗಿಲ್ಲ.…
ದೇವರ ಚಿನ್ನದ ಮೇಲೆ ಕಳ್ಳರ ಕಣ್ಣು: ಸಿಸಿ ಕ್ಯಾಮರಾಸಹಿತ ಪರಾರಿ!
ಕುಮಟಾದ ಗೋರೆಗುಡ್ಡದ ಮೇಲಿರುವ ಪುರಾತನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ದೇವಾಲಯದ ಚಾವಣಿಯಿಂದ ಒಳಗೆ ಪ್ರವೇಶಿಸಿದ ಕಳ್ಳರು ದೇವಾಲಯದಲ್ಲಿದ್ದ ಹಣ ಹಾಗೂ ಚಿನ್ನದ ಸರವನ್ನು ದೋಚಿದ್ದಾರೆ. ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿ ಅಲ್ಲಿಯೂ ತಡಕಾಟ ನಡೆಸಿದ್ದಾರೆ. ದೇವರ ಹಣೆಗೆ ಹಚ್ಚಿದ್ದ ತಿಲಕವನ್ನು ಕದ್ದ…
`ಗುಡ್ಡಗಾಡು ಜನರ ಅಭಿವೃದ್ಧಿಗೆ ನರೆಗಾ ಬಳಕೆ’
ಯಲ್ಲಾಪುರ: `ಗುಡ್ಡಗಾಡಿನ ಜನರ ಆರ್ಥಿಕ ಅಭಿವೃದ್ಧಿಗಾಗಿ ಅರಣ್ಯ ಇಲಾಖೆ ನೌಕರರು ನರೆಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು’ ಎಂದು ಯಲ್ಲಾಪುರ ಅರಣ್ಯ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಹೆಚ್ ಎ ಆನಂದ ಹೇಳಿದರು. ಶನಿವಾರ ಅರಣ್ಯ ಸಭಾ ಭವನದಲ್ಲಿ `ನರೇಗಾ…
ಕಾಸು ಕೊಟ್ಟು ಟಿಕೆಟ್ ಪಡೆದ ಕಾಂಗ್ರೆಸ್ ಶಾಸಕ
ಕಾರವಾರ: ರವೀಂದ್ರನಾಥ ಕಡಲತೀರದಲ್ಲಿ ಟುಪಲೇವ್ ಯುದ್ಧ ವಿಮಾನ ಹಾಗೂ ಐ.ಎನ್.ಎಸ್ ಚಾಪೆಲ್ ಯುದ್ದ ನೌಕೆ ಪ್ರವೇಶಿಸುವ ಮುನ್ನ ಶಾಸಕ ಸತೀಶ್ ಸೈಲ್ ಹಣ ನೀಡಿ, ಟಿಕೆಟ್ ಪಡೆದರು. ಯುದ್ಧ ವಿಮಾನ ಉದ್ಘಾಟನಾ ಕಾರ್ಯಕ್ರಮ ಶನಿವಾರ ನಡೆದಿದ್ದು, ಇದಕ್ಕೆ ಚಾಲನೆ ನೀಡಲು ಆಗಮಿಸಿದ್ದ…
ಮೀನು ಹಿಡಿಯಲು ಹೋದವ ಶವವಾದ!
ಕುಮಟಾ: ಅಘನಾಶಿನಿ ನದಿಯ ಗಜನಿ ಪ್ರದೇಶದಲ್ಲಿ ಮೀನುಗಾರಿಕೆಗೆ ತೆರಳಿದ್ದ ರಮೇಶ ನಾರಾಯಣ ಹರಿಕಂತ್ರ (45) ಎಂಬಾತ ಅಲ್ಲಿಯೇ ಸಾವನಪ್ಪಿದ್ದಾನೆ. ಹಿರೆಗುತ್ತಿಯ ನುಶಿಕೋಟೆ ಬಳಿಯ ಈತ ಜೂ 28ರಂದು ಕೈ ಬಲೆಯನ್ನು ತೆಗೆದುಕೊಂಡು ಹೋಗಿ ಮೀನುಗಾರಿಕೆಗೆ ತೆರಳಿದ್ದ. ಅಘನಾಶಿನಿ ನದಿ ತೀರದಲ್ಲಿ ಕೊಂಚ…
ಶಿಖಾರಿಗೆ ಹೋದವರು ಸೆರೆಮನೆಗೆ
ಜೊಯಿಡಾ: ಕಾಡಿನಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿಗೆ ಕಳ್ಳ ಬಂದೂಕು ಹಿಡಿದು ಶಿಖಾರಿಗೆ ಅಡ್ಡಾಡುತ್ತಿದ್ದ ಇಬ್ಬರು ಸಿಕ್ಕಿಬಿದ್ದಿದ್ದು, ಅವರ ಬಳಿಯಿದ್ದ ಬಂದೂಕನ್ನು ಅರಣ್ಯ ಸಿಬ್ಬಂದಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಅರಣ್ಯ ಸಿಬ್ಬಂದಿ ಬಸವರಾಜ ಚಿಪ್ಪಲಗಟ್ಟಿ, ನಿಂಗಪ್ಪ ಲಮಾಣಿ, ಮಡಿವಾಳಪ್ಪ ಅಂಗಡಿ, ಬಾಬುಲೊ ನಾಯ್ಕ,…
ಲಾರಿ ಹಿಂದೆ ಹೋದ ಬೈಕ್ ಸವಾರ ಸಾವು
ಅಂಕೋಲಾ: ಬಂಕಿಕೊಡ್ಲದ ಶೇಖರ್ ಆಗೇರ್ (19) ಎಂಬಾತ ಲಾರಿ ಹಿಂದಿಕ್ಕಲು ಹೋಗಿ, ಅದೇ ಲಾರಿಯ ಚಕ್ರಕ್ಕೆ ಸಿಲುಕಿ ಸಾವನಪ್ಪಿದ್ದಾನೆ. ಈ ಅಪಘಾತದಲ್ಲಿ ಭೂಮಿಕಾ ಆಗೇರ್ ಎಂಬ ವಿದ್ಯಾರ್ಥಿನಿಗೆ ಗಾಯವಾಗಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಹನೆಹಳ್ಳಿಯ ಶೇಖರ್ ಆಗೇರ್ ಜೂ 28ರ ಸಂಜೆ…
ಅದೃಷ್ಟದ ಆಟಕ್ಕೆ ಸ್ಮಶಾನಕ್ಕೆ ತೆರಳಿದ್ದ ಕೂಲಿಯಾಳು
ಶಿರಸಿ: ಇಂದಿರಾನಗರದ ಬಳಿಯ ಸ್ಮಶಾನ ರಸ್ತೆಯಲ್ಲಿ ಅಂಕಿ-ಸoಖ್ಯೆಗಳ ಆಟವಾಡಿಸುತ್ತಿದ್ದ ರಾಜಪ್ಪ ನಾಯ್ಕ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಣೇಶನಗರದ ಈತ ಕೂಲಿ ಕೆಲಸ ಮಾಡಿ ಜೀವಿಸುತ್ತಿದ್ದ. ಬೇರೆಯವರ ಮಾತು ಕೇಳಿ ಜೂಜಾಟ ನಡೆಸಲು ಆಸಕ್ತಿ ತೋರಿದ್ದ. ಅದೃಷ್ಟ ಒಲಿದರೆ ಕಾಸು ಬರುತ್ತದೆ…
ಶಿವಮೊಗ್ಗಕ್ಕೆ ಹೊರಟವ ಶಿವನಪಾದ ಸೇರಿದ!
ಹೊನ್ನಾವರ: ಗೇರುಸೊಪ್ಪಾ ಡ್ಯಾಮ್ ಸೈಟ್ ಬಳಿ ಶುಕ್ರವಾರ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಭಟ್ಕಳದ ಓಮಿನಿ ಚಾಲಕ ಭಟ್ಕಳದ ಅಬ್ದುಲ್ ವಾಜಿದ್ (37) ಉಡುಪಿ ಆಸ್ಪತ್ರೆಗೆ ತೆರಳುವಾಗ ಸಾವನಪ್ಪಿದ್ದಾನೆ. ಅಬ್ದುಲ್ ವಾಜಿದ್ ತನ್ನ ಕುಟುಂಬದ ಜೊತೆ ಓಮಿನಿಯಲ್ಲಿ ಶಿವಮೊಗ್ಗದ ಶಿರಾಳಿಕೊಪ್ಪಕ್ಕೆ ತೆರಳುತ್ತಿದ್ದಾಗ ಪ್ರವಾಸಿ…
ಅಣೆಕಟ್ಟಿನ ಬಳಿ ಅಕ್ರಮ ಮದ್ಯ ಸೇವನೆ: ಪೊಲೀಸ್ ದಾಳಿ
ಕಾರವಾರ: ಕದ್ರಾ ಅಣೆಕಟ್ಟಿನ ಬಳಿ ಸಾರ್ವಜನಿಕರಿಗೆ ಮದ್ಯ ವಿತರಿಸುತ್ತಿದ್ದ ವ್ಯಕ್ತಿಯ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಮಲ್ಲಾಪುರ ಬಳಿಯ ಹರ್ಟುಗಾದ ಶಂಕರ್ ಅಸ್ನೋಟಿಕರ್ ಎಂಬಾತ ಗಾಂಧಿನಗರದ ಹತ್ತಿರ ಹರಿಯುವ ಕದ್ರಾ ಡ್ಯಾಮಿನ ಹಳ್ಳದ ಬಳಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ. ಹಲವರು…







