ರೈತ ಬೆಳೆದ ಭತ್ತ ಮಣ್ಣುಪಾಲು
ಜೊಯಿಡಾ: ರಾಮನಗರದ ದಿವಾಕರ್ ಯಶವಂತ ಚೋರೆ ಎಂಬಾತರು ಅಕ್ಕಿ ಮಾಡಿಸಲು ರೈಸ್ ಮಿಲ್ಲಿಗೆ ತರುತ್ತಿದ್ದ ಭತ್ತ ವಾಹನ ಅಪಘಾತದ ಕಾರಣದಿಂದ ಮಣ್ಣುಪಾಲಾಗಿದೆ. ಮಣ್ಣಿನಡಿ ಬಿದ್ದ ಭತ್ತದ ಚೀಲಗಳನ್ನು ಕಷ್ಟಪಟ್ಟು ಆರಿಸಿದಾಗ ದೊರೆತ ಭತ್ತವನ್ನು ಅವರು ಅಕ್ಕಿ ಮಾಡಿಸಿದ್ದಾರೆ. ದಿವಾಕರ್ ಅವರು ಬೆಳೆದಿದ್ದ…
ಸರ್ಕಾರಕ್ಕೆ ನಷ್ಟ – ಪೊಲೀಸರಿಗೆ ಸಂಕಷ್ಟ: ಆರಕ್ಷಕರಿಗೆ ಗೃಹಲಕ್ಷ್ಮಿಯೂ ಇಲ್ಲ, ಗೃಹಭಾಗ್ಯವೂ ಸಿಕ್ಕಿಲ್ಲ!
ಜಿಲ್ಲಾಕೇಂದ್ರ ಕಾರವಾರದಲ್ಲಿನ ಎಂ ಜಿ ರಸ್ತೆಯಲ್ಲಿ ಪೊಲೀಸರಿಗಾಗಿ ವಸತಿ ನಿಲಯ ನಿರ್ಮಿಸಿ ಒಂದುವರೆ ವರ್ಷ ಕಳೆದಿದೆ. ಆದರೆ, ಈವರೆಗೂ ಅಲ್ಲಿನ ಮನೆಗಳನ್ನು ಅರ್ಹರಿಗೆ ವಿತರಿಸಿಲ್ಲ. ಇದೀಗ ಪ್ರತಿ ಮನೆಗೆ 10 ಸಾವಿರ ರೂ ಲೆಕ್ಕದಲ್ಲಿ ನೀರು ಹಾಗೂ ವಿದ್ಯುತ್ ಬಿಲ್ ಬಂದಿದ್ದು,…
ಮಳೆಗಾಲದ ಮುನ್ನಚ್ಚರಿಕೆವಹಿಸಲು ಡೀಸಿ ಸೂಚನೆ
ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಯಾವುದೇ ಜೀವಹಾನಿ ಆಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನೇಕರ್ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈಗಾಗಲೇ ಗುರುತಿಸಲಾಗಿರುವ ಗುಡ್ಡ ಕುಸಿತ ಮತ್ತು ಅಪಾಯಕಾರಿ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಅಗತ್ಯ ಎಚ್ಚರಿಕೆ ನೀಡಿ, ಅವರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅವರು…
ಅಸಹಾಯಕ ಅನಾಥನಿಗೆ ಆಸರೆಯಾದ ಅಕ್ಷರಕ್ರಾಂತಿ
ಸಿದ್ದಾಪುರ: ಅಂಕೋಲಾ ತಾಲೂಕಿನ ಅಂಗಡಿಬೈಲ್ ಬಸ್ ನಿಲ್ದಾಣದಲ್ಲಿ ಅನಾಥವಾಗಿ ಬಿದ್ದಿದ್ದ ಕೃಷ್ಣ ಹೆಗಡೆ ಎಂಬಾತರ ಮುಖ ಹಾಗೂ ಕುತ್ತಿಗೆ ಕೊಳೆತು ಹುಳಗಳಾಗಿದ್ದು, ಈ ವಿಷಯ ತಿಳಿದ ಸಿದ್ದಾಪುರದ ಅಕ್ಷರಕ್ರಾಂತಿ ನಾಗರಾಜ ನಾಯ್ಕ ಅವರನ್ನು ತಮ್ಮ ಆಶ್ರಮಕ್ಕೆ ಕರೆದೊಯ್ದಿದ್ದಾರೆ. ಕಳೆದ ಕೆಲ ದಿನಗಳಿಂದ…
ವರುಣನ ಆರ್ಭಟ: ಬ್ರಾಹ್ಮಣ ಪರಿಷತ್ ಆಸ್ತಿಗೆ ಹಾನಿ
ಕುಮಟಾ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ನೆನೆದ ಗೋಕರ್ಣದ ಬ್ರಾಹ್ಮಣ ಪರಿಷತ್’ನ ತಡೆಗೋಡೆ ಜೂ 27ರ ರಾತ್ರಿ ಕುಸಿದಿದೆ. ಇಲ್ಲಿನ ಸ್ಮಶಾನಕಾಳಿ ಮಂದಿರ ರಸ್ತೆಗೆ ಹೊಂದಿಕೊAಡು ಬ್ರಾಹ್ಮಣ ಪರಿಷತ್ ಕಟ್ಟಡವಿದ್ದು, ಇದಕ್ಕೆ ಹಾಕಲಾದ ತಡೆಗೋಡೆ ಮಳೆ ನೀರು ಕುಡಿದು ತೇವಗೊಂಡಿತ್ತು. ಮಳೆ ಮುಂದುವರೆದಿದ್ದರಿAದ…
ಮಣ್ಣಿನಡಿ ಸಿಲುಕಿ ಸಾವನಪ್ಪಿದ ಹಣ್ಣು ಮಾರಾಟಗಾರ್ತಿ
ಕಾರವಾರ: 70ನೇ ವಯಸ್ಸಿನಲ್ಲಿಯೂ ಹಣ್ಣು-ತರಕಾರಿ ಮಾರಿ ಬದುಕು ಕಟ್ಟಿಕೊಂಡಿದ್ದ ತರ‍್ಲೆಭಾಗದ ಗುಲಾಬಿ ಮಾಂಜ್ರೇಕರ್ ಎಂಬಾತರು ಮಣ್ಣಿನ ಅಡಿ ಸಿಲುಕಿ ಉಸಿರುಕಟ್ಟಿ ಸಾವನಪ್ಪಿದ್ದಾರೆ. ಸದಾಶಿವಗಡ ಬಳಿಯ ತರ‍್ಲೆಭಾಗದ ಆರವ್’ದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆಯ ಮೇಲೆ ಅವರು ವಾಸವಾಗಿದ್ದ ಮಣ್ಣಿನ ಮನೆಯ ಗೋಡೆ ಬಿದ್ದಿದೆ.…
ಯೋಧರ ವಸತಿಗೆ ಸರ್ಕಾರಿ ಭೂಮಿ: ಅಂಗವಿಕಲರಿಗೂ ಆದ್ಯತೆ
ಕಾರವಾರ: `ಜಿಲ್ಲೆಯಲ್ಲಿನ ಮಾಜಿ ಯೋಧರು, ಅಶಕ್ತರು ಮತ್ತು ವಸತಿಹೀನರಿಗೆ ಜೀವನ ನಿರ್ವಹಣೆಗೆ ಭೂಮಿ ಒದಗಿಸುವ ಕುರಿತಂತೆ ಜಿಲ್ಲೆಯ ಎಲ್ಲಾ ತಾಲುಕಿನ ತಹಶೀಲ್ದಾರರು ತಮ್ಮ ವ್ಯಾಪ್ತಿಯಲ್ಲಿರುವ ಖಾಲಿ ಭೂಮಿ ಕುರಿತು ಮಾಹಿತಿ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚಿಸಿದರು. ಶುಕ್ರವಾರ ತಹಶೀಲ್ದಾರರ…
ವಿಶ್ವದರ್ಶನ: ತುರುಸಿನಿಂದ ನಡೆದ ಚಿಣ್ಣರ ಚುನಾವಣೆ
ಯಲ್ಲಾಪುರ: ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ `ಚಿಣ್ಣರ ಚುನಾವಣೆ’ ನಡೆದಿದ್ದು, ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಚುನಾವಣಾ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡುವ ಪ್ರಯತ್ನ ನಡೆಯಿತು. ಮೊದಲು ಚುನಾವಣಾ ಅಧೀಸೂಚನೆ ಹೊರಡಿಸಿ, ನಂತರ ನಾಮಪತ್ರ ಸಲ್ಲಿಸಲು ಸಮಯಾವಕಾಶ ನೀಡಲಾಯಿತು. ನಾಮಪತ್ರ ಹಿಂಪಡೆಯುವಿಕೆ, ಪರಿಶೀಲನೆ, ಪ್ರಚಾರಕ್ಕೆ…
ಮಾತೃವಂದನಾ: ಅರ್ಹರು ಇಂದೇ ಅರ್ಜಿ ಹಾಕಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತೃವಂದನಾ ಯೋಜನೆ ಅಡಿ ಜಿಲ್ಲಾ ಸಂಯೋಜಕರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳ ಹುಡುಕಾಟ ನಡೆದಿದೆ. ಕರಾರು ಒಪ್ಪಂದದ ಅಡಿ ಈ ಹುದ್ದೆಯನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. 18ರಿಂದ 45 ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 11…
ಗಾಂಜಾ ಗಿರಾಕಿ ಸೆರೆ
ಶಿರಸಿ: ರಾಮನಬೈಲ್ ಕುಳವೆ ಕ್ರಾಸ್ ಬಳಿ ಗಣೇಶ ನಗರದ ನಿಹಾಲ್ ಡಿಯಾಗೋ ಫರ್ನಾಂಡೀಸ್ ಎಂಬಾತ ಗಾಂಜಾ ಮಾರುತ್ತಿದ್ದಾಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾನೆ. ಈತನ ಬಳಿಯಿದ್ದ 80 ಸಾವಿರ ರೂ ಮೌಲ್ಯದ 804 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಬೇರೆಯವರಿಂದ…







