ಕೋಲು ಕೊಟ್ಟು ಪೆಟ್ಟು ತಿಂದ ಖಾಸಗಿ ವಾಹಿನಿ
ಮೂರು ದಿನಗಳ ಹಿಂದೆ ನೇಣಿಗೆ ಶರಣಾದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ ಸಿದ್ದಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಪೋಸ್ಟ್ ಹಾಕಿದ ಖಾಸಗಿ ವಾಹಿನಿಯನ್ನು ಜಾಲತಾಣಗಳಲ್ಲಿ ಅನೇಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಚಂದ್ರಶೇಖರ ಸಿದ್ದಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಪೋಸ್ಟ್ ಒಂದನ್ನು ಖಾಸಗಿ…
ಡಬ್ಗುಳಿಯಲ್ಲಿ ಪಕ್ಷಿ ವೈವಿಧ್ಯತೆಯ ಸಮಗ್ರ ಅಧ್ಯಯನ
ಯಲ್ಲಾಪುರ ತಾಲೂಕಿನ ಡಬ್ಗುಳಿ ಗ್ರಾಮದಲ್ಲಿ ನಡೆಸಿದ ಪಕ್ಷಿ ವೈವಿಧ್ಯತೆಯ ಅಧ್ಯಯನದಲ್ಲಿ 25 ವಿಭಿನ್ನ ಪಕ್ಷಿ ಪ್ರಜಾತಿಗಳನ್ನು ಗುರುತಿಸಲಾಗಿದೆ. ಪಶ್ಚಿಮ ಘಟ್ಟದ ಜೀವವೈವಿಧ್ಯತೆಯ ಹಾಟ್‌ಸ್ಪಾಟ್ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ 355.7 ಮೀಟರ್ ಎತ್ತರದಲ್ಲಿರುವ ಈ 3900 ಹೆಕ್ಟೇರ್ ವಿಸ್ತೀರ್ಣದ ಗ್ರಾಮದಲ್ಲಿ ಕಳೆದ ಜೂನ್-ಜುಲೈ…
ಸಿಂಚನಾಗೆ ಶ್ರೀಮಾತಾ ಸೊಸೈಟಿಯಿಂದ ಬೀಳ್ಕೊಡುಗೆ
ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಯಲ್ಲಾಪುರ ಶಾಖೆಯಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿ ಸಿಂಚನಾ ಭಾಗ್ವತ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಿ, ಬೀಳ್ಕೊಡಲಾಯಿತು. ಬೆಳಗಾವಿಯ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಲು ತೆರಳುತ್ತಿರುವ ಅವರಿಗೆ ಶುಭ ಹಾರೈಸಲಾಯಿತು. ಶಾಖಾ ಅಧ್ಯಕ್ಷ ಕೆ ಎಸ್ ಭಟ್ಟ ಅನಗೋಡ,…
ಬಸ್ ಅವ್ಯವಸ್ಥೆ: ಹೈರಾಣಾದ ಮಲವಳ್ಳಿಯ ಜನತೆ
ಯಲ್ಲಾಪುರ ತಾಲೂಕಿನ ಮಲವಳ್ಳಿ ಬಾರೆ ಭಾಗದಲ್ಲಿ ಬಸ್ ಅವ್ಯವಸ್ಥೆಯಿಂದ ವಿದ್ಯಾರ್ಥಿಗಳು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾ.ಪಂ ವ್ಯಾಪ್ತಿಯ ಐದು ಗ್ರಾಮಗಳಿಗೆ ಕೇವಲ ಒಂದೇಒಂದು ಬಸ್ ಮಾರ್ಗ ನೀಡಲಾಗಿದೆ. ಇದರಿಂದಾಗಿ ಪ್ರತಿನಿತ್ಯ ಪ್ರಯಾಣಿಕರ ದಟ್ಟಣೆ ಉಂಟಾಗುತ್ತಿದೆ. ಮಹಿಳೆಯರು, ವಯೋವೃದ್ಧರು, ಶಾಲಾ ವಿದ್ಯಾರ್ಥಿಗಳು ಬಸ್…
ಗದ್ದೆಯಲ್ಲಿ ನಾಟಿಯ ಪಾಠ
ಯಲ್ಲಾಪುರ ತಾಲೂಕಿನ ಸವಣಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸವಣಗೇರಿಯ ವಿದ್ಯಾರ್ಥಿಗಳು ಭತ್ತದ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಕೃಷಿಯ ಅನುಭವ ಪಡೆದರು. 7 ನೇ ತರಗತಿಯ ಪಠ್ಯದಲ್ಲಿರುವ ‘ಸೀನ ಸೆಟ್ಟರು ನಮ್ಮ ಟೀಚರು ಎಂಬ ಪಾಠದ ಬೋಧನೆಯ…
ಕೋಳಿ ಅಂಕದ ಮೇಲೆ ಪೊಲೀಸರ ದಾಳಿ
ಭಟ್ಕಳ ತಾಲೂಕಿನ ಶಿರಾಲಿಯ ಹುಲ್ಲುಕ್ಕಿ ಅರಣ್ಯದಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ಪೊಲೀಸರು ದಾಳಿ ನಡೆಸಿ 11 ಜನರನ್ನು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಕೋಳಿ ಅಂಕ ಜೂಜಾಟದಲ್ಲಿ ತೊಡಗಿದ್ದ 11…
ಮನೆಯ ಗೋಡೆ ಉರುಳಿಸಿದ ಲಾರಿ
ಹೆದ್ದಾರಿ ಬಿಟ್ಟು ಬದಿಗೆ ಸಾಗಿದ ಲಾರಿ ಮನೆಯ ಗೋಡೆಗೆ ಡಿಕ್ಕಿ ಹೊಡೆದು ಉರುಳಿಸಿ, ಲಾರಿಯೂ ಉರುಳಿ ಬಿದ್ದ ಘಟನೆ ಯಲ್ಲಾಪುರ ತಾಲೂಕಿನ ಚಿನ್ನಾಪುರದಲ್ಲಿ ನಡೆದಿದೆ. ಲಾರಿ ಮಂಗಳೂರಿನಿಂದ ದಾಂಡೇಲಿಗೆ ಪೊಲ್ಸ್ ತುಂಬಿಕೊಂಡು ಹೋಗುತ್ತಿತ್ತು. ಅರಬೈಲ್ ಘಟ್ಟ ಹತ್ತಿ ಬಂದು ಚಿನ್ನಾಪುರ ಬಳಿ…
‘ಕಾಮಿಡಿ ಕಿಲಾಡಿ’ ಖ್ಯಾತಿಯ ಚಂದ್ರಶೇಖರ ಸಿದ್ದಿ ಇನ್ನಿಲ್ಲ
ಕಾಮಿಡಿ ಕಿಲಾಡಿ ಖ್ಯಾತಿಯ ಯುವ ಕಲಾವಿದ, ಯಲ್ಲಾಪುರ ತಾಲೂಕಿನ ಚಿಮನಳ್ಳಿಯ ಚಂದ್ರಶೇಖರ ಸಿದ್ದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತೇಲಂಗಾರ ಸಮೀದ ಚಿಮನಳ್ಳಿಯವರಾದ ಚಂದ್ರಶೇಖರ, ನೀನಾಸಂನಲ್ಲಿ ಅಭಿನಯ ಕಲಿತು ಉತ್ತಮ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಕೆಲ ವರ್ಷಗಳ ಹಿಂದೆ ಝೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿ…
ಜಾತ್ರೆ ಅಂಗಡಿ ಹರಾಜು: 11 ಲಕ್ಷ ರೂ ಅವ್ಯವಹಾರದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರೂ ಶಾಮೀಲು
ಕಳೆದ ಗ್ರಾಮದೇವಿ ಜಾತ್ರೆಯ ಅಂಗಡಿ ಹರಾಜಿನಲ್ಲಿ 11 ಲಕ್ಷ ರೂ ಅವ್ಯವಹಾರವಾಗಿದೆ. ಇದರಲ್ಲಿ ಕೆಲವು ಸದಸ್ಯರೂ ಶಾಮೀಲಾಗಿದ್ದಾರೆ. ಆದರೆ ಕೇವಲ ಅಧಿಕಾರಿಗಳ ಮೇಲೆ ಮಾತ್ರ ಅವ್ಯವಹಾರದ ಹೊಣೆ ಹೊರಿಸಿ, ಅವರನ್ನು ತಪ್ಪಿತಸ್ಥರನ್ನಾಗಿಸಲಾಗುತ್ತಿದೆ. ಪಟ್ಟಣ ಪಂಚಾಯಿತಿಯ ಸದಸ್ಯ ಸೋಮೇಶ್ವರ ನಾಯ್ಕ ಸುದ್ದಿಗೋಷ್ಠಿಯಲ್ಲಿ ಈ…
ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಜೋಡಿ ಮಾರ್ಗ ಘೋಷಣೆ: ನಾಗರಿಕ ವೇದಿಕೆ ಹೋರಾಟಕ್ಕೆ ಸಿಕ್ಕ ಜಯ
ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯ ಜೋಡಿ ಮಾರ್ಗ ಮಂಜೂರಾಗಿದ್ದು, ನಾಗರಿಕ ವೇದಿಕೆಯ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ಹೇಳಿದರು. ಯಲ್ಲಾಪುರದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಇದಾದರೂ, ಹುಬ್ಬಳ್ಳಿಯಲ್ಲಿ, ಅಂಕೋಲಾದಲ್ಲಿ ಮೊದಲೇ ರೈಲ್ವೆ ಇದೆ.…
















