ತೆಂಗಿನಗೇರಿಗೆ ಬಸ್ ಬಂತು
ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾ.ಪಂ ವ್ಯಾಪ್ತಿಯ ತೆಂಗಿನಗೇರಿ ಗ್ರಾಮಕ್ಕೆ ಯಲ್ಲಾಪುರದಿಂದ ಬಸ್ ಓಡಾಟ ಗುರುವಾರ ಆರಂಭಗೊಂಡಿದೆ. ಗ್ರಾಮದಲ್ಲಿ ನೂತನ ಬಸ್ ಸಂಚಾರಕ್ಕೆ ಶಾಸಕ ಶಿವರಾಮ ಹೆಬ್ಬಾರ ಅವರು ಬಸ್ ಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ನಂತರ ಸ್ವಲ್ಪ ದೂರ…
ಅಂಗನವಾಡಿಗೆ ಬಂದ ನ್ಯಾಯಾಧೀಶರು
ಯಲ್ಲಾಪುರದ ಜೆಎಂಎಫ್ ಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ಅನಿತಾ ಕುಮಾರಿ ಅವರು ವಿವಿಧ ಅಂಗನವಾಡಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಟ್ಟಣದ ಗಣಪತಿಗಲ್ಲಿ, ಗಾಂಧೀನಗರ ಹಾಗೂ ಚಂದಗುಳಿ ಗ್ರಾ.ಪಂ ವ್ಯಾಪ್ತಿಯ ಜಂಬೇಸಾಲ ಅಂಗನವಾಡಿಗಳಿಗೆ ಅವರು ಭೇಟಿ ನೀಡಿದರು. ಅಂಗನವಾಡಿಗಳಲ್ಲಿ ಮಕ್ಕಳ…
ಮಳೆಯಿಂದಾದ ಹಾನಿಯ ವಿವರ ಪಡೆದ ದೇಶಪಾಂಡೆ
ಹಳಿಯಾಳ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಹಳಿಯಾಳ ಹಾಗೂ ದಾಂಡೇಲಿ ತಾಲೂಕುಗಳ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಶಾಸಕ ಆರ್.ವಿ.ದೇಶಪಾಂಡೆ ಸಮಾಲೋಚನಾ ಸಭೆ ನಡೆಸಿದರು. ಹಳಿಯಾಳ ಹಾಗೂ ದಾಂಡೇಲಿ ತಾಲೂಕುಗಳಲ್ಲಿ ಮಳೆಯಿಂದ ಉಂಟಾದ ಹಾನಿ ಕುರಿತು ತಾಲೂಕು ಆಡಳಿತ, ನೀರಾವರಿ, ಕೃಷಿ, ವಿದ್ಯುತ್ ಮತ್ತು…
ಇಡಗುಂದಿ ಬಳಿ ಗಟಾರಕ್ಕೆ ಉರುಳಿದ ಲಾರಿ
ಯಲ್ಲಾಪುರ: ತಾಲೂಕಿನ ಇಡಗುಂದಿ ಬಳಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಗಟಾರದಲ್ಲಿ ಪಲ್ಟಿಯಾಗಿದೆ. ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಸರಕು ತುಂಬಿ ಹೊರಟಿದ್ದ ಲಾರಿ ಇಡಗುಂದಿ ಶಾಲೆಯ ಬಳಿ ನಿಯಂತ್ರಣ ತಪ್ಪಿ ಹೆದ್ದಾರಿ ಗಟಾರದಲ್ಲಿ ಬಿದ್ದಿದೆ. ಘಟನೆಯಲ್ಲಿ ಲಾರಿ…
ತೆಂಗಿನಗೇರಿಯ ಅಡಿಕೆ ತೋಟದಲ್ಲಿ 10 ಅಡಿ ಉದ್ದದ ಹೆಬ್ಬಾವು
ಯಲ್ಲಾಪುರ: ತಾಲೂಕಿನ ಕಿರವತ್ತಿ ಸಮೀಪದ ತೆಂಗಿನಗೇರಿಯ ತೋಟವೊಂದರಲ್ಲಿ ಅಡಗಿದ್ದ ಹೆಬ್ಬಾವನ್ನು ಉರಗಪ್ರೇಮಿ ಸೂರಜ್ ಶೆಟ್ಟಿ ಅರಬೈಲ್ ರಕ್ಷಿಸಿ ಕಾಡಿಗೆ ಬಿಟ್ಟರು. ತೆಂಗಿನಗೇರಿಯ ಅಡಿಕೆ ವರ್ತಕ ನರಸಿಂಹ ಭಟ್ಟ ಅವರ ಅಡಿಕೆ ತೋಟದಲ್ಲಿ ಈ ಹೆಬ್ಬಾವು ಒಂದು ವಾರದಿಂದ ಠಿಕಾಣಿ ಹೂಡಿತ್ತು. ಸುತ್ತಮುತ್ತ…
ಮನೆಯ ಮೇಲೆ ಬಿದ್ದ ಮರ
ಯಲ್ಲಾಪುರದ ರವೀಂದ್ರನಗರದಲ್ಲಿ ಮನೆಯೊಂದರ ಮೇಲೆ ಬ್ರಹತ್ ಮರ ಬಿದ್ದು ಹಾನಿಯಾಗಿದೆ. ರವೀಂದ್ರನಗರದ ಸುಬ್ರಾಯ ಎಸ್ ಭಟ್ಟ ಅವರ ಮನೆಯ ಮೇಲೆ ಬ್ರಹತ್ ಮರ ಮುರಿದು ಬಿದ್ದಿದೆ. ಇದರಿಂದ ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ…
ಚಂದಗುಳಿಯಲ್ಲಿ ಕಲಾವಿದರಿಂದ ಗಾನ ನಾದ ಸೇವೆ
ಯಲ್ಲಾಪುರ: ತಾಲೂಕಿನ ಚಂದಗುಳಿ ಘಂಟೆ ಗಣಪತಿ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ತುರುವೆಕೆರೆಯ ಶ್ರೀಪ್ರಣವಾನಂದ ತೀರ್ಥ ಸ್ವಾಮಿಗಳ ಸಮ್ಮುಖದಲ್ಲಿ ಸ್ಥಳೀಯ ಕಲಾವಿದರಿಂದ ಗಾನ ನಾದ ಸೇವೆ ನಡೆಯಿತು. ಭಾಗವತರಾದ ದಿನೇಶ ಭಟ್ಟ ಯಲ್ಲಾಪುರ, ನಾಗೇಂದ್ರ ಭಾಗ್ವತ ಶೇಡಿಜಡ್ಡಿ ವಿವಿಧ ಯಕ್ಷಗಾನ ಪದ್ಯಗಳು…
ತುಂಡಾಯ್ತು ಕ್ರೇನ್ ನ ಎಕ್ಸಲ್: ಹೆದ್ದಾರಿಯಲ್ಲಿ ಎರಡು ತಾಸು ಟ್ರಾಫಿಕ್ ಜಾಮ್
ಯಲ್ಲಾಪುರ ತಾಲೂಕಿನ ಆರತಿಬೈಲ್ ಘಟ್ಟದಲ್ಲಿ ಹಾಳಾದ ಲಾರಿಯನ್ನು ತೆಗೆದುಕೊಂಡು ಬರುತ್ತಿದ್ದ ಕ್ರೇನ್ ಎಕ್ಸೆಲ್ ತುಂಡಾಗಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳ್ಳುವಂತಾಯಿತು. ಹಾಳಾಗಿದ್ದ ಲಾರಿಯೊಂದನ್ನು ಗುಳ್ಳಾಪುರ ಕಡೆಯಿಂದ ಯಲ್ಲಾಪುರಕ್ಕೆ ಕ್ರೇನ್ ಮೂಲಕ ತೆಗೆದುಕೊಂಡು ಬರಲಾಗುತ್ತಿತ್ತು. ಆರತಿಬೈಲ್ ಘಟ್ಟದ ಬಳಿ ಕ್ರೇನ್…
ಜಾಮ್ ಪರೀಕ್ಷೆಯಲ್ಲಿ ಪವನ್ ಸಾಧನೆ
ಎಂಇಎಸ್, ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎಸ್ ಸಿ ವಿದ್ಯಾರ್ಥಿ ಪವನ್ ತಿಮ್ಮಣ್ಣ ಗಾಂವ್ಕರ ದೇಶದ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಂ ಎಸ್ ಸಿ ಪದವಿಗಾಗಿ ನಡೆಸುವ ಜಾಮ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಭೌತಶಾಸ್ತ್ರ ವಿಷಯದಲ್ಲಿ…
ಕರಡಿ ದಾಳಿ: ರೈತನಿಗೆ ಗಂಭೀರ ಗಾಯ
ಕರಡಿ ದಾಳಿಯಿಂದ ರೈತ ಗಂಭೀರವಾಗಿ ಗಾಯಗೊಂಡ ಘಟನೆ ಜೊಯಿಡಾ ತಾಲೂಕಿನ ರಾಮನಗರದ ನಾನೆಗಾಳಿ ಬಳಿ ನಡೆದಿದೆ. ರಾಮನಗರದ ಹನುಮಾನ ಗಲ್ಲಿಯ ರೈತ ಮಾರುತಿ ಮಳೇಕರ ಗಾಯಗೊಂಡವರು. ಮಂಗಳವಾರ ಸಂಜೆ ಸಿಂರಗಾಂವ ಗ್ರಾಮ ಪಂಚಾಯತ ಪ್ರದೇಶದ ನಾನೆಗಾಳಿಯಲ್ಲಿರುವ ತನ್ನ ಹೊಲದಲ್ಲಿ ಕೆಲಸ ಮಾಡಿ…
















