ಅಂಗನವಾಡಿಗೆ ಅಕ್ರಮ ನೇಮಕ ಆರೋಪ: ಕಲಿಕಾ ಕೇಂದ್ರಕ್ಕೆ ಬೀಗ ಜಡಿದು ಆಕ್ರೋಶ
ಮುಂಡಗೋಡದ ನಾಗನೂರು ಅಂಗನವಾಡಿ ಕೇಂದ್ರದ ನೇಮಕಾತಿ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಆ ಭಾಗದ ಜನ ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿದಿದ್ದಾರೆ. ಆಯ್ಕೆ ಪ್ರಕ್ರಿಯೆ ರದ್ಧು ಮಾಡಬೇಕು ಎಂದು ಸೋಮವಾರ ಅಲ್ಲಿನವರು ಪ್ರತಿಭಟಿಸಿದರು. `ಈ ಗ್ರಾಮದಲ್ಲಿ ಈಗಾಗಲೇ ಒಂದು ಅಂಗನವಾಡಿಯಿದೆ.…
ಮದ್ಯ ಸಾಗಿಸಿ ಸಿಕ್ಕಿಬಿದ್ದ ಮಂಡ್ಯದ ಗಂಡು!
ಹೊನ್ನಾವರದ ಅಬಕಾರಿ ಅಧಿಕಾರಿಗಳು ಮಂಡ್ಯಕ್ಕೆ ರವಾನೆಯಾಗುತ್ತಿದ್ದ ಗೋವಾ ಸರಾಯಿ ಹಿಡಿದಿದ್ದಾರೆ. ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಮಂಡ್ಯದ ಪುಟ್ಟ ಗೌಡ ಹಾಗೂ ಕೀರ್ತಿಕುಮಾರ್ ಎಂಬಾತರು ಗೋವಾ ಪ್ರವಾಸಕ್ಕೆ ಬಂದಿದ್ದರು. ಅಲ್ಲಿಂದ ಮರಳುವಾಗ ಗೋವಾದ ಸರಾಯಿ ಖರೀದಿಸಿದ್ದರು. ಸ್ನೇಹಿತರಿಗಾಗಿ ಅವರು ಸಾಕಷ್ಟು ಖರಿದಿ…
ಜಲಪಾತಕ್ಕೆ ಹೋದವ ನೀರಿನಲ್ಲಿ ಕಣ್ಮರೆ: ಶೋಧ ಕಾರ್ಯಾಚರಣೆಗೆ ಅಡ್ಡಿತಂದ ವರುಣ
ಶಿರಸಿಯಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಪವನ್ ಜೋಗಿ ಮತ್ತಿಘಟ್ಟಾದ ಜೋಗನಕಲ್ಲು ಜಲಪಾತದಲ್ಲಿ ಕಾಣೆಯಾಗಿದ್ದಾರೆ. ನಿನ್ನೆಯಿಂದ ಅವರ ಹುಡುಕಾಟ ನಡೆದಿದ್ದು, ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಶಿರಸಿ ಸೋಮನಳ್ಳಿ ಬಳಿಯ ಉಂಬಳಿಕೊಪ್ಪದ ಪವನ್ ಜೋಗಿ ಅವರು ತಮ್ಮ ಸ್ನೇಹಿತ ವಾಸುದೇವ ನಾಯ್ಕರ ಜೊತೆ…
ಕಾಶಿಗೆ ಹೋಗಬೇಕಿದ್ದ ಹೆಗಡೆಯರಿಗೆ ಮೋಸ: ಟ್ರಾವೆಲ್ ಕಂಪನಿಗೆ ದಂಡದ ಬಿಸಿ!
ಕೊಡ್ಲಗದ್ದೆಯ ಮನೋಹರ ಹೆಗಡೆ ಅವರಿಗೆ ಮೋಸ ಮಾಡಿದ್ದ ಮಲ್ಲಿಕಾರ್ಜುನ ಟ್ರಾವೆಲ್’ಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ. `30 ಸಾವಿರ ರೂ ಪರಿಹಾರದ ಜೊತೆ ಮನೋಹರ ಹೆಗಡೆ ಅವರು ಮುಂಗಡವಾಗಿ ಪಾವತಿಸಿದ್ದ 40 ಸಾವಿರ ರೂ ಹಣಕ್ಕೆ ಶೇ 12ರ…
ಸಮುದ್ರದಲ್ಲಿ ಮುಳುಗಿದ ದೋಣಿ: ಮೀನುಗಾರನನ್ನು ಕಾಡಿಸಿದ ವಿಮಾ ಕಂಪನಿಗೆ 43 ಲಕ್ಷ ರೂ ದಂಡ!
ಸಮುದ್ರದಲ್ಲಿ ಮುಳುಗಿದ ದೋಣಿಗೆ ವಿಮಾ ಪರಿಹಾರ ನೀಡಲು ಮೀನಾಮೇಷ ಏಣಿಸಿದ ವಿಮಾ ಕಂಪನಿಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ 43 ಲಕ್ಷ ರೂ ದಂಡ ವಿಧಿಸಿದೆ. ಜೊತೆಗೆ ಶೇ 9ರ ಲೆಕ್ಕಾಚಾರದಲ್ಲಿ ಬಡ್ಡಿ ಪಾವತಿಸುವಂತೆಯೂ ಆದೇಶಿಸಿದೆ. ಅಂಕೋಲಾ ತಾಲೂಕಿನ ಮಂಜುಗುಣಿಯ ಉಲ್ಲಾಸ…
`ವ್ಯಕ್ತಿತ್ವ ವಿಕಸನಕ್ಕೆ ಸಂಘ-ಸಂಸ್ಥೆಗಳು ಸಹಕಾರಿ’
`ಪರಿಪೂರ್ಣ ಶಿಕ್ಷಣದ ಜೊತೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಂಘ-ಸoಸ್ಥೆಗಳು ಸಹಕಾರಿ’ ಎಂದು ಕಾರವಾರ ಧರ್ಮಪ್ರಾಂತೀಯ ಶಿಕ್ಷಣ ಸಂಸ್ಥೆಯ ಸಂಚಾಲಕ ಫಾದರ್ ರೋನಿ ರೋಡ್ರಿಗಸ ಹೇಳಿದ್ದಾರೆ. ಯಲ್ಲಾಪುರದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಸಾಂಸ್ಕೃತಿಕ ಹಾಗೂ ವಿವಿಧ ಸಂಘಗಳ ವಾರ್ಷಿಕ ಚಟುವಟಿಕೆ…
ಸಾತೊಡ್ಡಿ: ಸಾರ್ವಜನಿಕ ಪ್ರವೇಶ ನಿಷಿದ್ಧ!
ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಯಲ್ಲಾಪುರದ ಸಾತೊಡ್ಡಿ ಜಲಪಾತಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಕಳೆದ ಕೆಲ ದಿನಗಳಿಂದ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಸಾತೊಡ್ಡಿ ಜಲಪಾತ ತುಂಬಿ ಹರಿಯುತ್ತಿದೆ. ಪ್ರವಾಸಿಗರ ಸುರಕ್ಷತೆ ಹಿನ್ನಲೆ ಜಲಪಾತ ಪ್ರವೇಶಕ್ಕೆ ಅರಣ್ಯ ಇಲಾಖೆ ತಡೆ ಒಡ್ಡಿದೆ.…
ಮುರುಡೇಶ್ವರ: ಆ ಬಟ್ಟೆ ಧರಿಸಿದವರಿಗೆ ಇಲ್ಲಿ ಪ್ರವೇಶವಿಲ್ಲ!
ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಮುರುಡೇಶ್ವರದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಿದೆ. ಹೀಗಾಗಿ ಮೈಮಾಟ ಪ್ರದರ್ಶಿಸುವ ಬಟ್ಟೆ ಧರಿಸಿ ಬರುವವರಿಗೆ ದೇಗುಲದ ಒಳಗೆ ಪ್ರವೇಶ ನೀಡಲಾಗುತ್ತಿಲ್ಲ. 2022ರಲ್ಲಿ ಹಿಂದು ಜನಜಾಗೃತಿ ಸಮಿತಿ ಹಾಗೂ ಹಿಂದು ಸಂಘಟನೆಯವರು ವಸ್ತ್ರ ಸಂಹಿತೆ ಜಾರಿಗೆ…
ಮೀನು ಹಿಡಿಯಲು ಹೋದವನ ಬದುಕಿಗೆ ವಿದಾಯ: ಸೀಬರ್ಡ ಉದ್ಯೋಗಿಯ ಶವಪಡೆದ ಕಾಳಿ ನದಿ
ಕಾರವಾರದ ಕಾಳಿ ನದಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದ ಸೀಬರ್ಡ ನೌಕಾನೆಲೆ ಉದ್ಯೋಗಿಯೊಬ್ಬರು ಸಾವನಪ್ಪಿದ್ದಾರೆ. ಕಾರವಾರದ ಕಣಸಗೇರಿ ಭಂಡರಿವಾಡದ ಮಹಾದೇವಸ್ಥಾನ ಹತ್ತಿರ ಗಗನ ಗಜನೀಕರ (21) ವಾಸವಾಗಿದ್ದರು. ಅವರು ಸೀಬರ್ಡನಲ್ಲಿ ತಾತ್ಕಾಲಿಕ ಕೆಲಸ ಮಾಡಿಕೊಂಡಿದ್ದರು. ಜೂನ್ 22ರ ಭಾನುವಾರ ಬೆಳಗ್ಗೆ ತಂದೆ…
ಬೈಕಿಗೆ ಗುದ್ದಿದ ಬಸ್ಸು: ಸವಾರ ಸಾವು.. ಮಹಿಳೆಗೆ ಗಾಯ
ಜೊಯಿಡಾದ ರಾಮನಗರದಲ್ಲಿ ಸರ್ಕಾರಿ ಬಸ್ಸು ಬೈಕಿಗೆ ಡಿಕ್ಕಿಯಾಗಿದ್ದರಿಂದ ಖಾನಾಪರುದ ಚಾಲಕರೊಬ್ಬರು ಸಾವನಪ್ಪಿದ್ದಾರೆ. ಬೈಕಿನಲ್ಲಿ ಜೊತೆಯಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಜೂನ್ 21ರಂದು ಖಾನಾಪುರದ ಚಾಲಕ ಅನೀಲ ಪಾಟೀಲ ಅವರು ತಮ್ಮ ಬೈಕಿನಲ್ಲಿ ಜ್ಯೋತಿಬಾ ಗಡಕರಿ ಅವರನ್ನು ಜೊಯಿಡಾಗೆ ಕರೆದುಕೊಂಡು ಬಂದಿದ್ದರು. ಅವರು…
















