6
ಅಪಘಾತ ತಪ್ಪಿಸಲು ಹೋದವನಿಗೆ ಅಪಘಾತ: ಸವಾರರಿಬ್ಬರನ್ನು ಕೆಡವಿದ ಹೆದ್ದಾರಿ ಹೊಂಡ!

ಭಟ್ಕಳದಲ್ಲಿ ಅಪಘಾತ ತಪ್ಪಿಸಲು ಹೋದ ಬೈಕ್ ಸವಾರ ಹೆದ್ದಾರಿ ಅಂಚಿನ ಹೊಂಡಕ್ಕೆ ಬಿದ್ದಿದ್ದು, ಈ ದುರಂತದಲ್ಲಿ ಒಟ್ಟು ನಾಲ್ವರು ಗಾಯಗೊಂಡಿದ್ದಾರೆ. ಗುರುವಾರ ನಡೆದ ಈ ಅಪಘಾತದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜೊತೆಗೆ ಆ ದೃಶ್ಯಾವಳಿಗಳು ಸಾಕಷ್ಟು ವೈರಲ್ ಆಗಿದೆ. ಸಂಶುದ್ಧೀನ್…

ಹೊಲನಗದ್ದೆ ಗ್ರಾ ಪಂ: ಲೋಕಾಯುಕ್ತರ ವಿರುದ್ಧವೇ ಮೇಲಧಿಕಾರಿಗೆ ದೂರು!

ಕುಮಟಾದ ಹೊಲನಗದ್ದೆ ಗ್ರಾಮ ಪಂಚಾಯತದಲ್ಲಿ ನಡೆದ ಅವ್ಯವಹಾರದ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿ ನಾಲ್ಕು ತಿಂಗಳು ಕ್ರಮವಾಗದ ಹಿನ್ನಲೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಲೋಕಾಯುಕ್ತ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಅವರಿಗೆ ಶುಕ್ರವಾರ ಆಗ್ನೆಲ್…

ಅಪಘಾತ: ಅಪರಾಧ ಪ್ರಕರಣ ಬೇಧಿಸಿದ ಕಿರವತ್ತಿಯ ಕ್ಯಾಮರಾ!

ಈಚೆಗೆ ಕಿರವತ್ತಿಯಲ್ಲಿ ಅಳವಡಿಸಿದ್ದ ಹೊಸ ಕ್ಯಾಮರಾ ಅಪರಾಧ ಪ್ರಕರಣವೊಂದನ್ನು ಬೇಧಿಸಿದೆ. ಕ್ಯಾಮರಾ ನೀಡಿದ ಮಾಹಿತಿ ಅನ್ವಯ ಪೊಲೀಸರು ಅಪಘಾತವೊಂದರಲ್ಲಿ ಇಬ್ಬರನ್ನು ಕೊಂದು ಪರಾರಿಯಾಗಿದ್ದ ಲಾರಿ ಚಾಲಕನನ್ನು ಬಂಧಿಸಿದ್ದಾರೆ. ಜೂನ್ 8ರಂದು ಯಲ್ಲಾಪುರದ ಚಿಕ್ಕಮಾವಳ್ಳಿ ಬಳಿಯ ಇಂಡಿಯಾ ಗೇಟ್ ಹೊಟೇಲ್ ಎದುರು ಅಪರಿಚಿತ…

ಬೈಕಿನಿಂದ ಬಿದ್ದವ ಜಾಗದಲ್ಲಿಯೇ ಕಲಾಸು!

ಜೊಯಿಡಾದ ರಾಮನಗರದಿಂದ ಗೋವಾ ಕಡೆ ಹೋಗುತ್ತಿದ್ದ ಬೈಕಿಗೆ ಅಪರಿಚಿತ ಗಾಡಿ ಗುದ್ದಿದ್ದು, ಬೈಕ್ ಸವಾರ ನಾಗೇಂದ್ರ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಜೊಯಿಡಾದಿಂದ ನಿತ್ಯ ನೂರಾರು ಜನ ಉದ್ಯೋಗ ಅರೆಸಿ ಗೋವಾಗೆ ಹೋಗುತ್ತಾರೆ. ಅದರಂತೆ ಜೊಯಿಡಾದ ಮಲಂಬಾ ಬಳಿಯ ಮಿರಾಶಿವಾಡಾದ ನಾಗೇಂದ್ರ ಅವರು ಶುಕ್ರವಾರ…

ಮನೆ ನಂ ನೀಡಲು ಗ್ರಾ ಪಂ ನಕಾರ: ಸರ್ಕಾರಕ್ಕೆ ಗಡುವು ನೀಡಿದ ಗ್ರಾ ಪಂ ಸದಸ್ಯ!

`ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಹೊಸದಾಗಿ ಮನೆ ಸಂಖ್ಯೆ ನೀಡಲು ಅಧಿಕಾರಿಗಳು ಕಾಡಿಸುತ್ತಿದ್ದು, ಒಂದು ತಿಂಗಳ ಒಳಗೆ ಎಲ್ಲಾ ತಾಂತ್ರಿಕ ಸಮಸ್ಯೆ ಬಗೆಹರಿಸಿ ಅಗತ್ಯವಿದ್ದವರಿಗೆ ಮನೆ ಸಂಖ್ಯೆ ನೀಡಬೇಕು’ ಎಂದು ಶಿರಸಿಯ ಗ್ರಾಮ ಪಂಚಾಯತ ಸದಸ್ಯರು ಆಗ್ರಹಿಸಿದ್ದಾರೆ. ಒಂದು…

ಕೊನೆಗೂ ಸಿಕ್ಕಿಬಿದ್ದ ಆರೋಪಿ: ಲೀಲಾ ಹೆಗಡೆ ಆತ್ಮಕ್ಕೆ ಸಿಕ್ಕಿತು ಶಾಂತಿ!

1994ರಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು 31 ವರ್ಷದ ನಂತರ ಶಿರಸಿ ಪೊಲೀಸರು ಬಂಧಿಸಿದ್ದಾರೆ. 1994ರ ಮಾರ್ಚ 3ರಂದು ಶಿರಸಿ-ಕುಮಟಾ ರಸ್ತೆಯಲ್ಲಿ ಅಪಘಾತವೊಂದು ನಡೆದಿತ್ತು. ಆ ಅಪಘಾತದಲ್ಲಿ ಮಂಜಗುಣಿ ಕೋಖಂಡದ ಲೀಲಾವತಿ ಹೆಗಡೆ ಅವರು ಸಾವನಪ್ಪಿದ್ದರು. ಲಾರಿ ಚಾಲಕ ಇಲಿಯಾಸ್…

ಯಾರಿಗೂ ಹೇಳದೇ.. ಯಾರನ್ನು ಕೇಳದೇ.. ಅವರೆಲ್ಲ ಎಲ್ಲಿ ಹೋದರು?

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರ ಕಣ್ಮರೆ ಪ್ರಮಾಣ ಹೆಚ್ಚಾಗಿದೆ. ಈ ವಾರ ಮೂರು ಮಹಿಳೆಯರು ಕಾಣೆಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆದಿದೆ. ಸಿದ್ದಾಪುರದ ಬಿರ್ಲಮಕ್ಕಿಯ ನೆಟ್ಟಗೋಡ ಗ್ರಾಮದ ಶೋಭಾ ಗೌಡ (35) ಕಾಣೆಯಾಗಿದ್ದಾರೆ. ಜೂನ್ 15ರಂದು ಉಪ್ಪಾಗೆ ಹುಳಿ ಆರಿಸಿಕೊಂಡು ಬರಲು…

ಸಾರ್ವಜನಿಕ ದೂರು: ಆಸ್ಪತ್ರೆಗೆ ಬಂದ ಲೋಕಾಯುಕ್ತ ಲೇಡಿ!

ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದ ಬಗ್ಗೆ ಸಾರ್ವಜನಿಕ ದೂರಿನ ಹಿನ್ನಲೆ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯಕ ಅವರು ಗುರುವಾರ ದಿಢೀರ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಾಖಲೆಗಳ ಪ್ರಕಾರ ಈ ಆಸ್ಪತ್ರೆ 24 ಗಂಟೆಯೂ ಸೇವೆ ನೀಡುತ್ತಿದೆ. ಆದರೆ, ನಿತ್ಯ…

ಮಿರ್ಜಾನ್ ನಾಡಕಚೇರಿ ಅಸ್ತವ್ಯಸ್ತ: ಕನ್ನಡ ಕಾರ್ಯಕರ್ತನ ಉಗ್ರ ಹೋರಾಟ

ಕುಮಟಾ ಬಳಿಯ ಮಿರ್ಜಾನ್ ನಾಡಕಚೇರಿ ಅವ್ಯವಸ್ಥೆ ವಿರುದ್ದ ಕರವೇ ಅಧ್ಯಕ್ಷ ಭಾಸ್ಕರ ಪಟಗಾರ್ ಕಿಡಿಕಾರಿದ್ದಾರೆ. ಅವ್ಯವಸ್ಥೆ ಸರಿಪಡಿಸದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ. ಈ ಬಗ್ಗೆ ಗುರುವಾರ ತಹಶೀಲ್ದಾರ್ ಕಚೇರಿಗೆ ನೋಟಿಸ್ ನೀಡಿದ ಅವರು ಅಲ್ಲಿನ ಅವ್ಯವಸ್ಥೆಗಳ ಪಟ್ಟಿ…

BSNL: ಟವರ್ ನಿರ್ಮಾಣದ ಸಾಮಗ್ರಿಯೇ ಮಾಯ!

ಯಲ್ಲಾಪುರದ ಡಬ್ಗುಳಿಯಲ್ಲಿ ನಿರ್ಮಾಣ ಹಂತದಲ್ಲಿದ್ದ BSNL ಟವರ್ ಸಾಮಗ್ರಿಗಳು ಕಳ್ಳರ ಪಾಲಾಗಿದೆ. ಶಿರಸಿಯ ಜಯಲಕ್ಷ್ಮಿ ಬಿಲ್ಟೆಕ್ ಪ್ರೆö ಲಿ ಕಂಪನಿಯವರು ಡಬ್ಗುಳಿಯಲ್ಲಿ ಟವರ್ ನಿರ್ಮಿಸುತ್ತಿದ್ದರು. ಇದಕ್ಕಾಗಿ ಅವರು ಕಬ್ಬಿಣ ಹಾಗೂ ಉಕ್ಕಿನ ಸಾಮಗ್ರಿಗಳನ್ನು ಸ್ಥಳದಲ್ಲಿ ದಾಸ್ತಾನು ಮಾಡಿದ್ದರು. ಜೂನ್ 14ರ ಬೆಳಗ್ಗೆ…

You cannot copy content of this page