6
ಸಾಲವನ್ನು ಪಡೆದಿಲ್ಲ.. ಜಾಮೀನು ಹಾಕಲಿಲ್ಲ… ಅಡಿಕೆ ವಕಾರಿ ಮಾಡಲು ಹೋಗಿ ಭೂಮಿ ಹಕ್ಕು ಕಳೆದುಕೊಂಡ ಕೃಷಿಕ!

ಈಗಾಗಲೇ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಶಿರಸಿಯ ಪತ್ರಕರ್ತ ರವೀಶ ಹೆಗಡೆ ವಿರುದ್ಧ ಮತ್ತೊಂದು ವಂಚನೆ ಆರೋಪ ಕೇಳಿ ಬಂದಿದೆ. ವಂಚನೆಗೆ ಒಳಗಾದ ಚಿಪಗಿಯ ದಿನೇಶ ಚಿಂಚ್ರೇಕರ್ ಪೊಲೀಸ್ ದೂರು ನೀಡಿದ್ದಾರೆ. ಚಿಪಗಿಯ ಮಹಾಬಲೇಶ್ವರ ಹೆಗಡೆ ಅವರ ಜೊತೆ ಚಿಪಗಿ ಲಂಡಕನಳ್ಳಿಯ ದಿನೇಶ…

ಆನ್‌ಲೈನ್ ಷೇರು: ಜಾಪರ್ ತಲೆಗೆ ಮಕ್ಮಲ್ ಟೋಪಿ – ದುಬೈ ಗಣಪತಿಗೆ ಕೋಟಿ ರೂ ನಷ್ಟ!

ದುಬೈನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿರುವ ಕುಮಟಾದ ಗಣಪತಿ ಹೆಗಡೆ ಆನ್‌ಲೈನ್ ಟ್ರೇಂಡಿಗ್ ಆಸೆಗೆ ಬಿದ್ದು 2 ಕೋಟಿ ರೂಪಾಯಿಗಿಂತಲೂ ಅಧಿಕ ಹಣ ಕಳೆದುಕೊಂಡಿದ್ದಾರೆ. ತಮ್ಮ ಪತ್ನಿ ಪ್ರಣಿತಾ ಹೆಗಡೆ ಅವರ ಖಾತೆಯಲ್ಲಿದ್ದ ಹಣವನ್ನು ಸಹ ಅವರು ಮೋಸದ ಜಾಲಕ್ಕೆ ಸುರಿದಿದ್ದಾರೆ!…

ಹಳಿಯಾಳ: ಕಬ್ಬು ಬೆಳೆಗಾರರ ಬಾಯಿಗೆ ಸಿಹಿ!

ರೈತ ಮುಖಂಡರು ಹಾಗೂ ಕಬ್ಬು ಬೆಳೆಗಾರರ ಜೊತೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಸಭೆ ನಡೆಸಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹಲವು ಕ್ರಮ ಜರುಗಿಸಿದರು. `ಹಳಿಯಾಳದ ಐಇಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಒಳಭಾಗದಲ್ಲಿ ಕಬ್ಬು ತೂಕ ಮಾಡುವ ಯಂತ್ರವನ್ನು…

ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದ ಅಪರಿಚಿತ ಕರೆ!

`ಇಲ್ಲೊಂದು ಕೊಲೆ ನಡೆದಿದೆ. ಶವವನ್ನು ನದಿಯಲ್ಲಿ ಎಸೆದಿದ್ದಾರೆ’ ಎಂದು ಸರ್ಕಾರಿ ಸಹಾಯವಾಣಿಗೆ ಫೋನ್ ಬಂದಿದ್ದು, ಕಂದಾಯ ಅಧಿಕಾರಿಗಳ ಜೊತೆ ಪೊಲೀಸರು ಶವ ಹುಡುಕಾಟ ನಡೆಸಿದರು. ಆದರೆ, ಅಲ್ಲಿ ಶವವೂ ಸಿಗಲಿಲ್ಲ.. ಫೋನ್ ಮಾಡಿದ ವ್ಯಕ್ತಿಯೂ ಇರಲಿಲ್ಲ! ಭಟ್ಕಳದ ಸರ್ಕಾರಿ ಸಹಾಯವಾಣಿಗೆ ಅಪರಿಚಿತ…

ಹೊನ್ನಾವರದ ಕಾರ್ಮಿಕನೇ ಕುಮಟಾದ ಗಾಂಜಾ ಮಾರಾಟಗಾರ!

ಕಾಲೇಜು ಯುವಕರನ್ನು ಗುರಿಯಾಗಿರಿಸಿಕೊಂಡು ಗಾಂಜಾ ಸರಬರಾಜು ಮಾಡುತ್ತಿದ್ದ ಹೊನ್ನಾವರ ಸುಬ್ರಹ್ಮಣ್ಯ ನಾಯ್ಕ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅವರೊಂದಿಗೆ ಕುಮಟಾದ ದರ್ಶನ ನಾಯ್ಕ ಹಾಗೂ ಹೊನ್ನಾವರದ ದೇವೇಂದ್ರ ಮುಕ್ರಿ ಸಹ ಬಂಧನಕ್ಕೆ ಒಳಗಾಗಿದ್ದಾರೆ. ಹೊನ್ನಾವರ ಮಾಡಗೇರಿಯ ಕೂಲಿಯಾಳು ಸುಬ್ರಹ್ಮಣ್ಯ ನಾಯ್ಕ (49) ಯುವಕರನ್ನು…

ರಸ್ತೆ ಅಪಘಾತ: ಕಾರವಾರದ ಯುವಕ ಮೃತ್ಯು

ಕಾರವಾರದಲ್ಲಿ ಎರಡು ಬೈಕುಗಳ ನಡುವೆ ಅಪಘಾತ ನಡೆದಿದ್ದು, ಮುದುಗಾದ ತನುಷ್ ದುರ್ಗೇಕರ್ (26) ಸಾವನಪ್ಪಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರವಾರದಿಂದ ಮುದುಗಾ ಕಡೆ ತನುಷ್ ದುರ್ಗೇಕರ್ ಅವರು ಬೈಕಿನಲ್ಲಿ ಸ್ನೇಹಿತರ ಜೊತೆ ಹೋಗುತ್ತಿದ್ದರು. ಎದುರಿನಿಂದ ಬಂದ ಇನ್ನೊಂದು ಬೈಕು…

ಸೆಂಟ್ ಮಿಲಾಗ್ರಿಸ್: ಸಾಲ ನೀಡಿದ ಸೊಸೈಟಿಗೆ ಮೂರು ನಾಮ!

ಭೂಮಿಯ ದಾಖಲೆಪಡೆದು ಸಾಲ ನೀಡಿದ ಶಿರಸಿಯ ಸೆಂಟ್ ಮಿಲಾಗ್ರಿಸ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಗೆ ಸಾಲ ಪಡೆದವರು ವಂಚಿಸಿದ್ದಾರೆ. 2022ರಲ್ಲಿಯೇ ವಂಚನೆ ನಡೆದಿದ್ದು, ಈ ಬಗ್ಗೆ ಇದೀಗ ಅರಿತ ಶಿರಸಿ ಸೊಸೈಟಿ ಶಾಖೆಯ ಲೋಕೇಶ ನಾಯ್ಕ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ…

`ಮಳೆ ಅವಾಂತರಕ್ಕೆ ನಗರಸಭೆಯೇ ಕಾರಣ’

`ಕಾರವಾರದಲ್ಲಿ ಚರಂಡಿ ವ್ಯವಸ್ಥೆ ಸರಿಪಡಿಸಲು ನಗರಸಭೆ ಸರಿಯಾದ ಯೋಜನೆ ರೂಪಿಸಬೇಕು’ ಎಂದು ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ದಿಲೀಪ್ ಅರ್ಗೇಕರ್ ಆಗ್ರಹಿಸಿದ್ದಾರೆ. `ಎರಡು ದಿನಗಳ ಹಿಂದೆ ಸುರಿದ ಬಾರಿ ಮಳೆಯಿಂದ ಕಾರವಾರ ನಗರದಲ್ಲಿ ಹಲವೆಡೆ ನೀರು ತುಂಬಿದೆ. ನೀರು ಮುಂದೆ ಸಾಗಲು…

ನಾಟಿ ಮಾಡಿದ ಗಿಡದ ಮೇಲೆ ಟಾಕ್ಟರ್ ಓಡಾಟ: ಕ್ಷಮೆ ಕೋರಿದ ಅರಣ್ಯಾಧಿಕಾರಿ

ಶಿರಸಿ ರಂಗಾಪುರದಲ್ಲಿ ರೈತರ ಬೆಳೆ ಹಾಳು ಮಾಡಿದ್ದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಕ್ಷಮೆ ಕೋರಿದ್ದಾರೆ. ಕ್ಷಮೆ ಕೋರಿದ ಅಧಿಕಾರಿಗಳನ್ನು ರೈತರು ಮನ್ನಿಸಿದ್ದು, ಈ ಪ್ರಕರಣ ಅಲ್ಲಿಗೆ ಮುಕ್ತಾಯವಾಗಿದೆ. ಶನಿವಾರ ಕಾಡಿನಲ್ಲಿ ಗಿಡ ನೆಡುವುದಕ್ಕೆ ಹೋಗುವ ಅರಣ್ಯಾಧಿಕಾರಿಗಳು ರೈತರು ಹೊಲದಲ್ಲಿ ಬೆಳೆದಿದ್ದ ಜೋಳ…

ಪೊಲೀಸ್ ನಡೆಗೆ ಆಕ್ಷೇಪ: ನ್ಯಾಯವಾದಿಗಳಿಗೆ ಅನ್ಯಾಯ!

ಪೊಲೀಸರ ಏಕಪಕ್ಷೀಯ ನಡವಳಿಕೆ ಬಗ್ಗೆ ಆಕ್ಷೇಪವ್ಯಕ್ತಪಡಿಸಿರುವ ದಾಂಡೇಲಿಯ ನ್ಯಾಯವಾದಿಗಳು `ತಮಗೆ ರಕ್ಷಣೆ ನೀಡಿ’ ಎಂದು ಮುಖ್ಯಮಂತ್ರಿಗಳಿಗೆ ಪತ್ರ ರವಾನಿಸಿದ್ದಾರೆ. ಇದರೊಂದಿಗೆ ವಿವಿಧ ಬೇಡಿಕೆಗಳ ಈಡೇರಿಕೆಗೂ ಒತ್ತಾಯಿಸಿದ್ದಾರೆ. ಅಖಿಲ ಭಾರತ ವಕೀಲರ ಒಕ್ಕೂಟದ ದಾಂಡೇಲಿ ಸಮಿತಿಯಿಂದ ಮುಖ್ಯಮಂತ್ರಿಗಳಿಗೆ ಪತ್ರ ರವಾನಿಸಲಾಗಿದೆ. `ಪೊಲೀಸರ ಏಕಪಕ್ಷೀಯ…

You cannot copy content of this page