ಅಂಗಡಿಗೆ ನುಗ್ಗಿದ ಕಾರು: ಬೈಕ್ ಜಖಂ-ಮಹಿಳೆಗೆ ಗಾಯ
ಕುಮಟಾದ ಕೋಡ್ಕಣಿಯಲ್ಲಿನ ಅಂಗಡಿಗೆ ಕಾರು ನುಗ್ಗಿದ್ದು, ಅಂಗಡಿಯಲ್ಲಿದ್ದ ಮಹಿಳೆಯೊಬ್ಬರಿಗೆ ಗಾಯವಾಗಿದೆ. ಆ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳೂರು ಮೂಲದ ಜನ ಕಾರಿನ ಮೂಲಕ ಗೋಕರ್ಣಕ್ಕೆ ಬಂದಿದ್ದರು. ಭಾನುವಾರ ಪೂಜೆ ಸಲ್ಲಿಸಿ ಅವರು ಊರಿಗೆ ಮರಳುವಾಗ ವೇಗವಾಗಿ ಕಾರು ಚಲಾಯಿಸಿದರು. ಪರಿಣಾಮ ಕುಮಟಾದ…
ಅತಿಕ್ರಮಣದಾರರ ಸಂಕಲ್ಪ: ನಾಟಿಗೆ ಸಿದ್ದವಾದ 5 ಲಕ್ಷ ಗಿಡ
ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಅತಿಕ್ರಮಣದಾರರು ಅರಣ್ಯ ಪ್ರದೇಶದಲ್ಲಿ ಈ ವರ್ಷ ದಶ ಲಕ್ಷ ಗಿಡ ನೆಡುವ ಸಂಕಲ್ಪ ಮಾಡಿದ್ದು, ಸದ್ಯ 5 ಲಕ್ಷ ಗಿಡ ನಾಟಿಗೆ ಸಿದ್ಧವಾಗಿದೆ. ಅರಣ್ಯವಾಸಿಗಳಿಗೆ ಪರಿಸರ ಮತ್ತು ಸಂರಕ್ಷಣೆಯ ಕುರಿತು ಜಾಗೃತೆಯನ್ನು ಅರಣ್ಯವಾಸಿಗಳಿಗೆ ಮೂಡಿಸುವ ಉದ್ದೇಶದಿಂದ…
ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ
ಕರಾವಳಿಯಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುತ್ತಿದ್ದು, ಮಳೆ ಕಾರಣದಿಂದ ಭಟ್ಕಳದಲ್ಲಿ ಎರಡು ಸಾವು ಸಂಭವಿಸಿದೆ. ಶನಿವಾರ ಮಧ್ಯಾಹ್ನ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ಮನೆ ಮುಂದಿನ ಹಳ್ಳದಲ್ಲಿ ಬಿದ್ದು ಕೊಚ್ಚಿ ಹೋಗಿದೆ. ಆ ವೇಳೆ ಮಳೆ ಇಲ್ಲದಿದ್ದರೂ ಹಳ್ಳ…
ದೇವಿಮನೆ ಘಟ್ಟ: ಗುಡ್ಡ ಕುಸಿತದಿಂದ ಗಿಡ-ಮರಗಳ ಮರಣ-ಸಂಚಾರಕ್ಕೂ ಸಂಚಕಾರ
ಶಿರಸಿ-ಕುಮಟಾ ರಸ್ತೆಯ ದೇವಿಮನೆ ಘಟ್ಟದಲ್ಲಿ ಭಾನುವಾರ ನಸುಕಿನಲ್ಲಿ ಮತ್ತೆ ಗುಡ್ಡ ಕುಸಿದಿದೆ. ಗುಡ್ಡದ ಮೇಲಿನ ಗಿಡ-ಮರಗಳು ಹೆದ್ದಾರಿಗೆ ಬಂದು ಬಿದ್ದಿದೆ. ಹೀಗಾಗಿ ಲಘು ವಾಹನ ಸಂಚಾರಕ್ಕೂ ಇಲ್ಲಿ ಸಂಚಕಾರ ಎದುರಾಗಿದೆ. ಕಳೆದ ಮೂರು ದಿನದ ಅವಧಿಯಲ್ಲಿ ಮೂರನೇ ಬಾರಿ ಇಲ್ಲಿ ಗುಡ್ಡ…
ವೃದ್ಧೆಯ ಮೇಲೆ ಕಾಮದ ಕಣ್ಣು: ಆರೋಪಿಗೆ ಗುಂಡೇಟು!
ವೃದ್ಧೆಯನ್ನು ಅರಣ್ಯ ಪ್ರದೇಶಕ್ಕೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಗುರುವಾರ ವೃದ್ಧೆಯೊಬ್ಬರು ಸಂಬoಧಿಕರ ಮನೆಗೆ ಹೋಗಿದ್ದರು. ಅಲ್ಲಿಂದ ಮರಳುವಾಗ ವೃದ್ಧೆಯನ್ನು ಅಡ್ಡಗಟ್ಟಿದ ಬೈಲೆಪಾರಿನ ಫೈರೋಜ ಯರಘಟ್ಟಿ ಅವರನ್ನು ಕಾಡಿನ ಕಡೆ ಎಳೆದೊಯ್ದಿದ್ದರು. ಐಪಿಎಂ…
ಅಂಕೋಲಾದಲ್ಲಿ ಆತಂಕ | ಮನೆಯಲ್ಲಿ ಅಡಗಿದ್ದ ಚಿರತೆ: ಅರಿವಿಲ್ಲದೇ ಅಲ್ಲಿಗೆ ಹೋದವನ ಮೇಲೆ ಆಕ್ರಮಣ
ಅಂಕೋಲಾದ ಮನೆಯೊಂದರಲ್ಲಿ ಚಿರತೆ ಅಡಗಿ ಕುಳಿತಿದ್ದು, ಅದರ ಅರಿವಿಲ್ಲದೇ ಅಲ್ಲಿಗೆ ಹೋದ ಯುವಕನ ಮೇಲೆ ಏಕಾಏಕಿ ದಾಳಿ ನಡೆಸಿದೆ. ವಾಸರಕುದ್ರಿಗೆ ಗ್ರಾಮ ಪಂಚಾಯತ ವುಆಪ್ತಿಯ ಉಳಗದ್ದೆ ಗ್ರಾಮದಲ್ಲಿ ಶನಿವಾರ ಚಿರತೆಯೊಂದು ಕಾಣಿಸಿಕೊಂಡಿದೆ. ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಚಿರತೆ ಆಶ್ರಯಪಡೆದಿದ್ದು, ಅಲ್ಲಿಗೆ ಹೋಗಿದ್ದ…
ನಾಟಿ ಮಾಡಿದ ಗಿಡ ಮೇಲೆ ಟಾಕ್ಟರ್ ಓಡಾಟ: ಸಾಮಾಜಿಕ ನ್ಯಾಯ ಮರೆತ ಸಾಮಾಜಿಕ ಅರಣ್ಯಾಧಿಕಾರಿ!
ಕಾಡಿನಲ್ಲಿ ಗಿಡ ನೆಡುವುದಕ್ಕಾಗಿ ರಸ್ತೆ ಇಲ್ಲ ಎಂಬ ಕಾರಣಕ್ಕೆ ಅರಣ್ಯಾಧಿಕಾರಿಗಳು ರೈತರು ಹೊಲದಲ್ಲಿ ಬೆಳೆದಿದ್ದ ಜೋಳ ತುಳಿದಿದ್ದಾರೆ. ರೈತರ ಗದ್ದೆಯಲ್ಲಿ ಟಾಕ್ಟರ್ ಓಡಿಸಿ ಅವರ ಬೆಳೆ ಹಾಳು ಮಾಡಿದ್ದಾರೆ. ಶಿರಸಿಯ ಬದನಗೋಡ ಗ್ರಾಪಂ ವ್ಯಾಪ್ತಿಯ ರಂಗಾಪುರದಲ್ಲಿ ರೈತರು ಜೋಳ ಬೆಳೆದಿದ್ದರು. ಗದ್ದೆಯಲ್ಲಿ…
ಬೈಕಿಗೆ ಗುದ್ದಿದ ಪೆಟ್ರೋಲ್ ಟ್ಯಾಂಕರ್: ಒಂದು ಸಾವು
ಯಲ್ಲಾಪುರದ ಮಲ್ಲಿಕಾ ಹೊಟೇಲ್ ಬಳಿ ಪೆಟ್ರೋಲ್ ಸಾಗಾಟದ ಟ್ಯಾಂಕರ್ ಬೈಕಿಗೆ ಗುದ್ದಿದೆ. ಪರಿಣಾಮ ಬೈಕ್ ಸವಾರ ಸಂಬಾಜಿ ಮಿರಾಶಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಜೂನ್ 13ರಂದು ಹಳಿಯಾಳದ ಸಂಕನಕೊಪ್ಪದ ಸಂಬಾಜಿ ಮಿರಾಶಿ (50) ಅವರು ಯಲ್ಲಾಪುರದ ಕಡೆ ಬೈಕ್ ಓಡಿಸಿಕೊಂಡು ಬರುತ್ತಿದ್ದರು. ಎದುರಿನಿಂದ…
ಇಡಗುಂಜಿ ಗಣಪನ ಕರೆಯೋಲೆ: ಹೂ-ಹಣ್ಣು ವ್ಯಾಪಾರಕ್ಕೆ ಇಲ್ಲಿದೆ ಒಂದು ಅವಕಾಶ!
ಧಾರ್ಮಿಕ ಕ್ಷೇತ್ರದಲ್ಲಿ ಅಂಗಡಿಯಿಟ್ಟು ವ್ಯಾಪಾರ ಮಾಡಬೇಕು ಎನ್ನುವವರಿಗೆ ಹೊನ್ನಾವರದ ಇಡಗುಂಜಿ ದೇವಾಲಯದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇಲ್ಲಿನ ಶ್ರೀ ವಿನಾಯಕ ದೇವಾಲಯಕ್ಕೆ ಸಂಬoಧಿಸಿದ 8 ಮಳಿಗೆಗಳ ಹರಜು ಪ್ರಕ್ರಿಯೆ ಜೂ 20ರಂದು ನಡೆಯಲಿದೆ. ಹಣ್ಣು-ಕಾಯಿ, ಪೂಜಾ ಸಾಮಗ್ರಿ, ಸ್ಟೇಶನರಿ ಚಿಲ್ಲರೆ ವ್ಯಾಪಾರ ಮಾಡುವವರಿಗೆ…
ಕಟ್ಟಿಗೆ ಬಿಟ್ಟು ಕಾಡಿಗೆ ಓಡಿದ ಮರಕಳ್ಳ!
ಕಾಡಿನಲ್ಲಿದ್ದ ಸೀಸಂ ಮರ ಕಡಿದಿದ್ದ ಮುಂಡಗೋಡಿನ ದೊಂಡು ಕೊಕ್ಕರೆ ಅದನ್ನು ಗದ್ದೆಯಲ್ಲಿ ಬಚ್ಚಿಟ್ಟಿದ್ದರು. ಅರಣ್ಯ ಇಲಾಖೆಯವರ ಭಯದಿಂದ ಅವರು ಇದೀಗ ಊರು ತೊರೆದಿದ್ದಾರೆ! ಗುಂಜಾವತಿ ಅರಣ್ಯ ವಿಭಾಗದ ಶಿಡ್ಲಗುಂಡಿ ಅರಣ್ಯ ಪ್ರವೇಶಿಸಿದ ದುಂಡು ಕೊಕ್ಕರೆ ಅಲ್ಲಿ ಸೀಸಂ ಮರವಿರುವುದನ್ನು ನೋಡಿದ್ದರು. ಅದನ್ನು…
















