6
ಯಲ್ಲಾಪುರ: ವರ್ಷದಿಂದ ವರ್ಷಕ್ಕೆ ಹೆಚ್ಚಾದ ಸಾವಿನ ಪ್ರಮಾಣ!

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ವರ್ಷದಿಂದ ವರ್ಷಕ್ಕೆ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ಸಾವು-ನೋವಿನ ಸಂಖ್ಯೆಯೂ ಅಧಿಕವಾಗಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿಪಡೆದ ಅಧಿಕೃತ ದಾಖಲೆಗಳ ಪ್ರಕಾರ 2020ರಿಂದ ಈವರೆಗೆ ಯಲ್ಲಾಪುರ ತಾಲೂಕು ಒಂದರಲ್ಲಿಯೇ ರಸ್ತೆ ಅಪಘಾತದಲ್ಲಿ 152 ಜನ ಪ್ರಾಣಬಿಟ್ಟಿದ್ದಾರೆ.…

ಮೂರೂರು: ರಸ್ತೆ ಮೇಲೆ ಬಿದ್ದ ಕಲ್ಬಂಡೆ

ಸುರಿಯುತ್ತಿರುವ ಮಳೆಯಿಂದಾಗ ಬೆಟ್ಟ ಗುಡ್ಡಗಳ ಮಣ್ಣು ಸಡಿಲಗೊಂಡಿದ್ದು, ಭಾನುವಾರ ಸಂಜೆ ಕುಮಟಾದ ಮೂರೂರಿನಲ್ಲಿ ರಸ್ತೆ ಮೇಲೆ ಕಲ್ಬಂಡೆ ಬಿದ್ದಿದೆ. ಮೂರುರು ಮುಸುಗುಪ್ಪ ಮಾರ್ಗವಾಗಿ ಬೃಹತ್ ಆಕಾರದ ಬಂಡೆ ರಸ್ತೆಗೆ ಉರುಳಿ ಬಂದಿದೆ. ಇದರ ಜೊತೆ ಕೆಲ ಪ್ರಮಾಣದಲ್ಲಿ ಮಣ್ಣು ಸಹ ರಸ್ತೆ…

ರೆಸಾರ್ಟಿನಲ್ಲಿ ಕೋಲಾಟ: ನಿಂತಿತು ಹೃದಯ ಬಡಿತ!

ಅಂಕೋಲಾದ ಲಕ್ಷ್ಮಣ ಗೌಡ ಅವರು ಗೋಕರ್ಣದ ಸಸ್ವರ ರೆಸಾರ್ಟಿಗೆ ಕೋಲಾಟಕ್ಕಾಗಿ ತೆರಳಿದಾಗ ಸಾವನಪ್ಪಿದ್ದಾರೆ. ಅಂಕೋಲಾ ಬಡಿಗೇರಿಯ ಲಕ್ಷ್ಮಣ ಗೌಡ (60) ಅವರು ಕೃಷಿಕರು. ಜೊತೆಗೆ ಕೋಲಾಟದ ಮೂಲಕ ಅವರು ತಮ್ಮ ಸಂಸ್ಕೃತಿಯನ್ನು ಇತರರಿಗೆ ಪರಿಚಯಿಸುತ್ತಿದ್ದರು. ಮೇ 24ರಂದು ಲಕ್ಷ್ಮಣ ಗೌಡ ಅವರ…

ಡಬಲ್ ಹಣದ ಆಮೀಷ: ವೆಂಕಟೇಶನಿಗೆ ಮೂರು ನಾಮ!

ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಅಪಾರ ಹಣ ಸಂಪಾದಿಸಲು ಉದ್ದೇಶಿಸಿದ ಹಳಿಯಾಳದ ಉದ್ಯಮಿ ವೆಂಕಟೇಶ ಗಡಾದ್ ಅವರು ನಕಲಿ ಆಫ್ ಬಳಸಿ 18 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ! ವೆoಕಟೇಶ್ ಗಡಾದ್ ಅವರು ಶೇರು ಮಾರುಕಟ್ಟೆ ಬಗ್ಗೆ ಅಧ್ಯಯನ ನಡೆಸುತ್ತಿದ್ದಾಗ ಅವರಿಗೆ…

ನದಿಗೆ ಬಿದ್ದ ಮೊಬೈಲ್ ಜೀವ ತೆಗೆಯಿತು!

ನದಿಗೆ ಬಿದ್ದ ಮೊಬೈಲ್ ಮೇಲೆತ್ತುವ ಪ್ರಯತ್ನ ನಡೆಸಿದ ಕಾರಣ ಕಾರವಾರದ ಕ್ರಿಕೆಟ್ ಆಟಗಾರ ಸಂತೋಷ್ ರಾಯ್ಕರ್ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಭಾನುವಾರ ಸಂಜೆ ಅವರ ಶವ ಸಿಕ್ಕಿದೆ. ಕಡವಾಡ ಬಳಿಯ ಮಾಡಿಭಾಗದ ಸಂತೋಷ ರಾಯ್ಕರ್ ಕ್ರಿಕೆಟ್ ಕ್ರೀಡಾಪಟು. ಕ್ರಿಕೆಟ್ ನಡೆಯುವ ಸ್ಥಳದಲ್ಲಿ…

ಈ ಶಾಲೆಯ ಪಿಯುಸಿ ಪ್ರವೇಶಕ್ಕೆ 1 ರೂಪಾಯಿ ಸಾಕು!

ಲಕ್ಷಾಂತರ ರೂಪಾಯಿ ಪ್ರವೇಶ ಶುಲ್ಕ ಸ್ವೀಕರಿಸಿ ಪಾಠ ಮಾಡುವ ಶಿಕ್ಷಣ ಸಂಸ್ಥೆಗಳ ನಡುವೆ ಹೊನ್ನಾವರದ ಖಾಸಗಿ ವಿದ್ಯಾಸಂಸ್ಥೆಯೊoದು ಬರೇ ಒಂದು ರೂಪಾಯಿ ಪ್ರವೇಶ ಶುಲ್ಕದೊಂದಿಗೆ ಶಿಕ್ಷಣ ನೀಡಲು ಮುಂದಾಗಿದೆ! ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 90ಕ್ಕಿಂತ ಹೆಚ್ಚಿನ ಅಂಕಪಡೆದ ವಿದ್ಯಾರ್ಥಿಗಳಿಗೆ ಹೊನ್ನಾವರದ `ಮಾರುತಿ…

ಶೆಡ್ಡಿನೊಳಗೆ ಶವವಾದ ಮೀನು ಹಿಡಿಯುವ ಕಾರ್ಮಿಕ

ಕುಮಟಾದ ಗಂಗಾವಳಿಯಲ್ಲಿನ ಮೀನುಗಾರಿಕಾ ಬೋಟಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರ ಸಾವಾಗಿದೆ. ಓರಿಸ್ಸಾದ ಕಾರ್ಮಿಕ ಸೌಭಾಗ್ಯ ನಿರಂಜನ್ ಸಾವನಪ್ಪಿದ ವ್ಯಕ್ತಿ. ನಾರಾಯಣ ತಾಂಡೇಲ್ ಅವರ ಮೀನುಗಾರಿಕಾ ಬೋಟಿನಲ್ಲಿ ಸೌಭಾಗ್ಯ ನಿರಂಜನ್ ಕೆಲಸ ಮಾಡುತ್ತಿದ್ದರು. ಶನಿವಾರ ಮೀನುಗಾರಿಕೆ ಮುಗಿಸಿದ ನಂತರ ಅವರು ವಿಶ್ರಾಂತಿಗೆ ತೆರಳಿದ್ದರು.…

ಕೊಳೆತ ಶವದೊಂದಿಗೆ 3ಕಿಮೀ ನಡೆದ ಪೊಲೀಸ್ ಪಡೆ!

ಜೊಯಿಡಾದ ಬಳಿಯ ಕಾಳಿ ನದಿ ಹಿನ್ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಸಿಕ್ಕಿದ್ದು, ಶವ ಮೇಲೆತ್ತಲು ಯಾರೂ ಸಿಗಲಿಲ್ಲ. ಹೀಗಾಗಿ ಪೊಲೀಸರೇ ಆ ಶವವನ್ನು ಮೇಲೆತ್ತಿ ಶವಾಗಾರಕ್ಕೆ ಸಾಗಿಸಿದರು. ಜೊಯಿಡಾದ ನಾಗೋಡಾದಲ್ಲಿನ ಕಾಳಿ ನದಿ ಹಿನ್ನೀರ ಪ್ರದೇಶದಲ್ಲಿ ಶನಿವಾರ ಶವವೊಂದು ಕಾಣಿಸಿತು. ಶವ…

ಡೀಸಿ ಹೆಸರಿನಲ್ಲಿಯೇ ಡುಪ್ಲಿಕೇಟ್ ಖಾತೆ!

ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಠಿಯಾಗಿದೆ. ಮೂರೇ ದಿನದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಜನ ಅವರ ಸ್ನೇಹಿತರಾಗಿದ್ದಾರೆ! ಮೇ 15ರಂದು ದುಷ್ಕರ್ಮಿಗಳು ಕೆ ಲಕ್ಷ್ಮೀಪ್ರಿಯಾ ಅವರ ಫೋಟೋ ಬಳಸಿ ನಕಲಿ ಖಾತೆ ತೆರೆದಿದ್ದಾರೆ. ಜಿಲ್ಲಾಡಳಿತದ…

ಉಗ್ರ ಹೋರಾಟದ ಎಚ್ಚರಿಕೆ: ಬೆದರಿಕೆಗೆ ಬಗ್ಗಿದ ಹೆದ್ದಾರಿ ಕಂಪನಿ!

ಶಿರಸಿ-ಕುಮಟಾ ರಸ್ತೆಯ ನಿಲೇಕಣಿ ಬಳಿ ಬಿದ್ದಿರುವ ಹೊಂಡಗಳನ್ನು ಮೂರು ದಿನದ ಒಳಗೆ ಮುಚ್ಚದೇ ಇದ್ದರೆ ಹೈಕೋರ್ಟ ಮೊರೆ ಹೋಗುವುದಾಗಿ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಶನಿವಾರ ಎಚ್ಚರಿಕೆ ನೀಡಿದ್ದು, ಭಾನುವಾರ ಬೆಳಗ್ಗೆಯಿಂದಲೇ ಹೆದ್ದಾರಿ ನಿರ್ವಹಣೆಯ ಗುತ್ತಿಗೆಪಡೆದ ಕಂಪನಿ ಹೊಂಡ ಮುಚ್ಚುವ ಕೆಲಸ…

You cannot copy content of this page