ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ!
ಭಟ್ಕಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ. 1500ರೂ ಬೆಲೆಯ ನಾಲ್ಕು ಹುಂಜಗಳ ಜೊತೆ 1690ರೂ ಹಣವನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಏಪ್ರಿಲ್ 20ರಂದು ಜಾಲಿ ಗ್ರಾಮದ ಹರ್ನಗದ್ದೆಯ ದೇವೇಂದ್ರ ಗೊಂಡ ಅವರ ಮನೆ ಬಳಿಯ ಅರಣ್ಯದಲ್ಲಿ…
ಸಾಗುವಳಿ ಕ್ಷೇತ್ರದಲ್ಲಿ ಗಿಡ ನೆಡುವ ಗುಂಡಿ: ಹೋರಾಟಕ್ಕೂ ಮುನ್ನ ಸೌಹಾರ್ದ ಸಭೆ!
ಅನಾಧಿಕಾಲದಿಂದಲೂ ಅರಣ್ಯ ಅತಿಕ್ರಮಣದಾರರು ಸಾಗುವಳಿ ಮಾಡಿಕೊಂಡು ಬಂದಿರುವ ಕ್ಷೇತ್ರದಲ್ಲಿ ಹೊನ್ನಾವರ ಅರಣ್ಯ ಸಿಬ್ಬಂದಿ ಗುಂಡಿ ತೋಡಿದ ಪ್ರದೇಶಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ಭೇಟಿ ನೀಡಲಿದ್ದಾರೆ. ಏಪ್ರಿಲ್ 24ರ ಮುಂಜಾನೆ 7 ಗಂಟೆಗೆ ಹೋರಾಟಗಾರರು ಅಲ್ಲಿ ಹಾಜರಿದ್ದು, ಜನರ ಸಮಸ್ಯೆ…
ರಸ್ತೆ ಕಬಳಿಸಿದ ಬೀದಿ ಅಂಗಡಿ: ಸಿಪಿಐ ಗರಂ!
ಗೋಕರ್ಣದ ಹಲವು ಕಡೆ ರಸ್ತೆ ಬದಿಯ ಅಂಗಡಿಗಳು ರಸ್ತೆಯನ್ನು ಕಬಳಿಸಿವೆ. ಭಾನುವಾರ ಅಲ್ಲಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ರಸ್ತೆ ಬದಿ ಅಂಗಡಿಕಾರರಿಗೆ ಎಚ್ಚರಿಕೆ ನೀಡಿದ್ದಾರೆ. ಸಿಪಿಐ ಶ್ರೀಧರ ಹಾಗೂ ಪಿಎಸ್ಐ ಖಾದರ್ ಭಾಷಾ ಅವರು ಈ ದಿನ ಓಂ ಬೀಚ್ ಕಡೆ…
ಅಗ್ನಿ ಅನಾಹುತ: ಹುಲ್ಲು ತುಂಬಿದ ಲಾರಿ ಕರಕಲು!
ಶಿರಾಳಕೊಪ್ಪದಿಂದ ಶಿರಸಿಗೆ ಬಂದಿದ್ದ ಲಾರಿಗೆ ಬೆಂಕಿ ತಗುಲಿದೆ. ಪರಿಣಾಮ ಆ ಲಾರಿ ಸುಟ್ಟು ಕರಕಲಾಗಿದೆ. ಭಾನುವಾರ ಬೆಳಗ್ಗೆ ಹುಲ್ಲು ತುಂಬಿದ ಲಾರಿ ಬದನಗೋಡು ಗ್ರಾ ಪಂ ವ್ಯಾಪ್ತಿಯ ರಂಗಾಪುರ ಮಾರ್ಗವಾಗಿ ಚಲಿಸುತ್ತಿತ್ತು. ರಂಗಾಪುರ ಪ್ರವೇಶಿಸಿದಾಗ ಲಾರಿಗೆ ಬೆಂಕಿ ತಗುಲಿತು. ಪರಿಣಾಮ ಹುಲ್ಲು…
ಇನ್ಮುಂದೆ ಇಲ್ಲಿ ಪೆಟ್ರೋಲ್ ಸಿಗಲ್ಲ.. ಡಿಸೇಲ್ ಸಹ ಲಭ್ಯವಿಲ್ಲ!
ಅಂಕೋಲಾ-ಯಲ್ಲಾಪುರ ಗಡಿಭಾಗದ ಕೊಡ್ಲಗದ್ದೆ ಕಾಡಿನಲ್ಲಿ ಮಾರಾಟವಾಗುತ್ತಿದ್ದ ಪೆಟ್ರೋಲ್-ಡಿಸೇಲ್ ವ್ಯಾಪಾರಕ್ಕೆ ಪೊಲೀಸರು ಕಡಿವಾಣ ಹಾಕಿದ್ದಾರೆ. ಅರಣ್ಯದಲ್ಲಿ ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಇಂಧನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಕೊಡ್ಲಗದ್ದೆ ಕ್ರಾಸಿನಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಮಾರಾಟ ನಡೆಯುತ್ತಿತ್ತು. ಮಾರುಕಟ್ಟೆ ಬೆಲೆಗಿಂತ…
ಮರಿ ರೌಡಿಗಳ ಅಟ್ಟಹಾಸ: ಬೀದಿ ಹೆಣವಾದ ರಾಜಕೀಯ ಪುಡಾರಿ!
ಕಾರವಾರ ನಗರಸಭೆ ಮಾಜಿ ಸದಸ್ಯ ಸತೀಶ ಕೋಳಂಕರ್ ಅವರ ಕೊಲೆಯಾಗಿದೆ. ಭಾನುವಾರ ಬೆಳಗ್ಗೆ ವಾಕಿಂಗ್ ಹೊರಟಿದ್ದ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಸತೀಶ ಕೋಳಂಕರ್ ವಿರುದ್ಧ 8ಕ್ಕೂ ಅಧಿಕ ಪೊಲೀಸ್ ಪ್ರಕರಣಗಳಿದ್ದವು. ಹೀಗಾಗಿ ಅವರನ್ನು ಪೊಲೀಸರು ಸಹ ರೌಡಿ ಶೀಟರ್…
KSRTC | ಈ ಬಸ್ಸಿನಲ್ಲಿ ಅರ್ದ ಕೆಜಿ ಮೆಣಸು ಒಯ್ಯುವುದು ಗಂಭೀರ ಅಪರಾಧ!
ಯಲ್ಲಾಪುರದಿಂದ ಮಾಗೋಡಿಗೆ ತೆರಳುವ ಬಸ್ಸಿನಲ್ಲಿ ಅರ್ದ ಕೆಜಿ ಒಣ ಮೆಣಸು ಒಯ್ಯುತ್ತಿದ್ದ ಮಹಿಳೆಯರನ್ನು ಬಸ್ಸಿನಿಂದ ಕೆಳಗಿಳಿಸಿದ್ದಾರೆ. ಬಸ್ಸಿನಿಂದ ಇಳಿಯಲು ಒಪ್ಪದವರ ಮೈಮುಟ್ಟಿದ ಸಾರಿಗೆ ಸಿಬ್ಬಂದಿ ಮಹಿಳೆಯರನ್ನು ಕೆಳಗೆ ದೂಡಿದ್ದಾರೆ. ಭಾನುವಾರ ಸಂತೆಗೆ ಬಂದಿದ್ದ ಮಹಿಳೆಯರು ಒಣ ಮೆಣಸು ಖರೀದಿಸಿ ಅನ್ಯಾಯಕ್ಕೆ ಒಳಗಾಗಿದ್ದಾರೆ!…
ಗಾಂಜಾ ಅಮಲು: ವ್ಯಸವಿ ವಿರುದ್ಧ ಕಠಿಣ ಕ್ರಮ!
ಬೀಡಿ-ಸಿಗರೇಟಿನ ಅಮಲು ಸಾಕಾಗದೇ ಶಿರಸಿಯ ವಿರಾಲ್ ಶೆಟ್ಟಿ ಗಾಂಜಾ ಮೊರೆ ಹೋಗಿದ್ದು, ಕಠಿಣ ಕ್ರಮ ಜರುಗಿಸುವ ಮೂಲಕ ಪೊಲೀಸರು ಅವರ ನಶೆ ಇಳಿಸಿದ್ದಾರೆ. ಶಿರಸಿಯ ನಾರಾಯಣಗುರು ವಿರಾಲ್ ಈಶ್ವರ ಶೆಟ್ಟಿ ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದರು. ಪೊಲೀಸರನ್ನು ಕಂಡ ತಕ್ಷಣ ಅವರು ಇನ್ನಷ್ಟು…
ಹೊಳೆ ಮೀನಿಗೆ ಆಸೆಪಟ್ಟ ಕಾಡು ಕಡಿಯುವ ಕಾರ್ಮಿಕ: ಸಾವು!
ಜೊಯಿಡಾದ ಕೃಷ್ಣ ಗಾಂವಕರ ಕಾಳಿ – ಕಾನೇರಿ ನದಿ ಸಂಗಮ ಪ್ರದೇಶದ ನೀರಿನಲ್ಲಿ ಬಿದ್ದು ಬದುಕು ಕಳೆದುಕೊಂಡಿದ್ದಾರೆ. ಗು0ದ ಕೆರೆಗದ್ದೆಯಲ್ಲಿ ಕೃಷ್ಣ ಗಾಂವಕರ (48) ಕುಟುಂಬದವರ ಜೊತೆ ವಾಸವಾಗಿದ್ದರು. ಏಪ್ರಿಲ್ 17ರಂದು ಅವರು ಅರಣ್ಯ ಇಲಾಖೆಯ ಕೆಲಸಕ್ಕೆ ನಿಯೋಜನೆಗೊಂಡಿದ್ದರು. ಅದೇ ಊರಿನ…
ಜನಿವಾರ ಪ್ರಕರಣ: ಸಂತ್ರಸ್ತ ವಿದ್ಯಾರ್ಥಿಗಳಿಗೆ ಶ್ರೀಮಠದ ಅಭಯ!
`ಬೀದರ್ ಹಾಗೂ ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಜನಿವಾರ ತೆಗೆಯುವಂತೆ ತಾಕೀತು ಮಾಡಿದ ಪರೀಕ್ಷಾ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು’ ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ. `ಜನಿವಾರದ ಕಾರಣಕ್ಕೆ ಪರೀಕ್ಷೆ ಬರೆಯಲು ಸಾಧ್ಯವಾಗದ ಎಲ್ಲರಿಗೂ ಸಹಾಯಹಸ್ತ ಚಾಚಲು…
















