ಸಾಗರ ಆಳದಲ್ಲಿ ಕಳ್ಳ-ಪೊಲೀಸ್ ಆಟ: ಆಗುಂತುಕರನ್ನು ಸೆದೆಬಡಿದ ಕರಾವಳಿ ಪೊಲೀಸ್!
ತದಡಿ ಬಂದರಿನ ಮೇಲೆ ಆಕ್ರಮಣ ನಡೆಸಲು ಸಜ್ಜಾಗಿದ್ದ ಆಗಂತುಕರನ್ನು ಕರಾವಳಿ ಪೊಲೀಸ್ ಪಡೆಯವರು ಸೆದೆಬಡಿದಿದ್ದಾರೆ. ಆದರೆ, ಇಲ್ಲಿ ಸಿಕ್ಕಿಬಿದ್ದ ಆಗಂತುಕರು ಸಹ ಪೊಲೀಸರೇ ಆಗಿದ್ದಾರೆ! ಪೊಲೀಸರ ಕಾರ್ಯಕ್ಷಮತೆ ಪರೀಕ್ಷೆಗಾಗಿ ಕರಾವಳಿ ಭಾಗದಲ್ಲಿ ಆಗಾಗ ಸಾಗರ ಕವಚ ಎಂಬ ಅಣಕು ಕಾರ್ಯಾಚರಣೆ ನಡೆಯುತ್ತದೆ.…
ಗೋಕರ್ಣ: ಉಪಾಧ್ಯರ ಕಾರಿಗೆ ಬಸ್ಸು ಡಿಕ್ಕಿ!
ಗೋಕರ್ಣದ ಯತೀಶ ಉಪಾಧ್ಯ ಅವರ ಕಾರು ಅಪಘಾತವಾಗಿದೆ. ಕುಮಟಾದ ರವಿಕಿರಣ ನಾಯ್ಕ ಅವರು ಆ ಕಾರಿಗೆ ಬಸ್ಸು ಗುದ್ದಿದ್ದಾರೆ. ಕುಮಟಾ ತಾಲೂಕಿನ ಗೋಕರ್ಣದ ಯತೀಶ ಉಪಾಧ್ಯ ಅವರು ಕೋಟಿತೀರ್ಥದ ಬಳಿ ಮನೆ ಮಾಡಿಕೊಂಡಿದ್ದಾರೆ. ವೈದಿಕ ವೃತ್ತಿ ಅವರ ಕಸುಬು. ಏಪ್ರಿಲ್ 5ರಂದು…
ತವರಿಗೆ ಹೋದ ಹೆಂಡತಿ – ಮಾವನ ಮನೆಗೆ ಬಂದ ಪತಿ: ಧರ್ಮದೇಟು ನೀಡಿ ಅತಿಥಿ ಸತ್ಕಾರ!
ಮೂರು ತಿಂಗಳ ನಂತರ ಮಾವನ ಮನೆಗೆ ಹೋಗಿದ್ದ ಮಹಮದ್ ಗೌಸ್ ಅವರಿಗೆ ಅತ್ತೆ-ಮಾವನ ಜೊತೆ ಭಾವನೂ ಸೇರಿ ಧರ್ಮದೇಟು ನೀಡಿದ್ದಾರೆ. ಎಲ್ಲರೂ ಸೇರಿ ಒಬ್ಬನಿಗೆ ಒಡೆಯುವುದನ್ನು ನೋಡಿದ ಊರಿನ ಜನ `ತಾವು ಯಾರಿಗೂ ಕಡಿಮೆಯಿಲ್ಲ’ ಎಂದು ತೋರಿಸುವುದಕ್ಕಾಗಿ ಮಹಮದ್ ಗೌಸ್ ಅವರಿಗೆ…
ಮನಸಿಗೆ ಬೇಸರ: ಕ್ರಿಮಿನಾಶಕ ಸೇವಿಸಿದ ರೆಸಾರ್ಟ ಕಾರ್ಮಿಕನ ಬದುಕು ಅಂತ್ಯ!
ಹೊನ್ನಾವರ ಆದಿತ್ಯ ನಾಯ್ಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನಸ್ಸಿಗೆ ಬೇಸರವಾಗಿರುವುದರಿಂದ ಅವರು ಕ್ರಿಮಿನಾಶಕ ಸೇವಿಸಿರುವ ಬಗ್ಗೆ ಹೇಳಿಕೆ ನೀಡಿದ್ದು, ಯಾವ ಕಾರಣಕ್ಕೆ ಬೇಸರವಾಯಿತು? ಎಂದು ಯಾರಿಗೂ ತಿಳಿಸಿಲ್ಲ. ಹೊನ್ನಾವರದ ಖಾರ್ವಾದ ನಾಥಗೇರಿಯಲ್ಲಿ ಆದಿತ್ಯ ನಾಯ್ಕ (34) ವಾಸವಾಗಿದ್ದರು. ಬಾಡದ ರೆಸಾರ್ಟಿನಲ್ಲಿ…
ಸಾಗವಾನಿ ಸಾಗಾಟ: ಮೂವರ ಸೆರೆ-ಇಬ್ಬರು ಪರಾರಿ!
ಯಲ್ಲಾಪುರದ ಇಡಗುಂದಿ ಅರಣ್ಯ ವ್ಯಾಪ್ತಿಯಲ್ಲಿ ಸಾಗವಾನಿ ಮರ ಕಡಿತ ಆರೋಪದ ಅಡಿ ಅರಣ್ಯ ಅಧಿಕಾರಿಗಳು ಮೂವರನ್ನು ವಶಕ್ಕೆಪಡೆದಿದ್ದಾರೆ. ಕಾಡಿನಲ್ಲಿದ್ದ ಮರ ಕಡಿತು ಸಾಗಿಸುವ ಪ್ರಯತ್ನದಲ್ಲಿದ್ದ ಮಹಾಬಲೇಶ್ವರ ಹರಿಕಂತ್ರ, ಸಂದೀಪ ನಾಯ್ಕ ಹಾಗೂ ಸುರೇಶ ಗೌಡ ಅವರ ವಿಚಾರಣೆ ಮುಂದುವರೆದಿದೆ. ಅಧಿಕಾರಿಗಳ ದಾಳಿಯ…
ಜುಜುಬಿ ಕಾರಿಗಾಗಿ ತಾಯಿಯನ್ನೇ ದೂರ ಮಾಡಿದ ಮಗ!
ದಾಂಡೇಲಿಯ ಫೈರೋಜಾ ಅಲಿ ಅವರು ತಮ್ಮ ತಾಯಿ ರುಕ್ಸನಾ ಬೇಗಂ ಅವರ ಜೊತೆ ಮುನಿಸಿಕೊಂಡಿದ್ದಾರೆ. ಇದರೊಂದಿಗೆ `ತನ್ನ ಕಾರು ತನಗೆ ನೀಡದೇ ವಂಚಿಸಿದ್ದಾರೆ’ ಎಂದು ತಾಯಿ ರುಕ್ಸನಾ ಬೇಗಂ ಜೊತೆ ಅವರ ಗೆಳತಿಯ ಪುತ್ರ ಆಸೀಪ ಸೌದಗಾರ್ ವಿರುದ್ಧ ಪೊಲೀಸ್ ದೂರು…
ದಾಂಡೇಲಿ ಪೆಪರ್ ಮಿಲ್: ಭದ್ರತೆ ಮೀರಿ ಒಳ ನುಗ್ಗಿದ ಕಳ್ಳರು!
ದಾಂಡೇಲಿಯ ವೆಸ್ಟಕೋಸ್ಟ್ ಪೆಪರ್ ಮಿಲ್ಲಿನಲ್ಲಿ ಕಳ್ಳತನ ನಡೆದಿದೆ. ಮೂವರು ಕಳ್ಳರು ತಮ್ಮ ಕೈ ಚಳಕ ಪ್ರದರ್ಶಿಸಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಾರ್ಚ 31ರ ರಾತ್ರಿ 11ಗಂಟೆ ನಂತರ ಏಪ್ರಿಲ್ 1ರ 12.20ರವರೆಗೆ ದಾಂಡೇಲಿಯ ವೆಸ್ಟಕೋಸ್ಟ್ ಪೆಪರ್ ಮಿಲ್ಲಿನೊಳಗೆ ಪ್ರವೇಶಿದ ಕಳ್ಳರು ತಮ್ಮ…
ಮೊದಲ ಸಲ-ಮೊದಲ ಘಟಕ: ಕೆಲಸ ನಿಲ್ಲಿಸಿದ ಕೈಗಾ!
ಕಳೆದ ಮೂರು ದಶಕದಿಂದ ನಿರಂತರ ವಿದ್ಯುತ್ ಉತ್ಪಾದಿಸುತ್ತಿದ್ದ ಕೈಗಾ ಅಣು ವಿದ್ಯುತ್ ಸ್ಥಾವರದ ಒಂದನೇ ಘಟಕ ಇದೀಗ ತನ್ನ ಕಾರ್ಯ ಚಟುವಟಿಕೆ ನಿಲ್ಲಿಸಿದೆ. ರಿಯಾಕ್ಟರಿನ ಶೀತಕ ಕೊಳವೆಯನ್ನು ಹೊಸದಾಗಿ ಜೋಡಿಸುವುದಕ್ಕಾಗಿ ಅಣು ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಸದ್ಯ ಕೈಗಾ ಅಣು ವಿದ್ಯುತ್…
ಎಲೆಮಾನವರಿಗೆ ಪೊಲೀಸರ ಕಾಟ!
ಮುಂಡಗೋಡಿನ ಎಪಿಎಂಸಿ ಬಳಿಯ ಅರಣ್ಯದಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಒಟ್ಟು 10 ಜೂಜುಕೋರರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಪಟ್ಟಣದ ನೆಹರು ನಗರದ ರಾಘವೇಂದ್ರ ರಾಯ್ಕರ್, ನೂರಾನಿಗಲ್ಲಿಯ ನಿಸ್ಸಾರಹ್ಮದ ದರ್ಗಾವಾಲೆ ದಾಳಿಯ ವೇಳೆ ಸಿಕ್ಕಿ…
ಒಂದು ಅಪಘಾತ: ಇಬ್ಬರ ಬದುಕು ಅಂತ್ಯ!
ಹಳಿಯಾಳದಲ್ಲಿ ಬೈಕಿಗೆ ಟಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಧಾರವಾಡ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆದರೂ ಪ್ರಯೋಜನವಾಗಲಿಲ್ಲ. ಮಾರ್ಚ 3ರಂದು ತುಕಾರಾಮ ಕುಬೇರರ (18) ಎಂಬಾತರು ಇನ್ನೂ ನೊಂದಣಿಯೂ ಆಗದ ಟಾಕ್ಟರ್ ಓಡಿಸುತ್ತಿದ್ದರು. ಹಳಿಯಾಳದ ಡವಗೇರಿ ಕೆರೆ…















