6

ಎಲೆಮಾನವರಿಗೆ ಪೊಲೀಸರ ಕಾಟ!

ಮುಂಡಗೋಡಿನ ಎಪಿಎಂಸಿ ಬಳಿಯ ಅರಣ್ಯದಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಒಟ್ಟು 10 ಜೂಜುಕೋರರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

ಪಟ್ಟಣದ ನೆಹರು ನಗರದ ರಾಘವೇಂದ್ರ ರಾಯ್ಕರ್, ನೂರಾನಿಗಲ್ಲಿಯ ನಿಸ್ಸಾರಹ್ಮದ ದರ್ಗಾವಾಲೆ ದಾಳಿಯ ವೇಳೆ ಸಿಕ್ಕಿ ಬಿದ್ದಿದ್ದು ಉಳಿದವರು ಓಡಿ ಪರಾರಿಯಾಗಿದ್ದಾರೆ. ಇಂದಿರಾನಗರ ಪ್ಲಾಟ್‌ನ ಲಾಲಸಾಬ್ ಇಟ್ಟಂಗಿ, ಅಲ್ಲಾಭಕ್ಷ ಹಿರೇಹಳ್ಳಿ, ಅಕ್ಬರಶಾ ಮೀರಾಶಿ, ಇಂದಿರಾನಗರದ ನಾಶೀರ್ ಬಂಕಾಪುರ, ರಫೀಕ್ ಭಟ್ಕಳ್, ನೂರಾನಿಗಲ್ಲಿಯ ಮೌಲಾಲಿ ಜಂಡೆವಾಲೆ, ಕಿಲ್ಲೆ ಓಣಿಯ ಸೈಯದ್ ಯಳ್ಳೂರ, ಇಸ್ಮಾಯಿಲ್ ಹಾನಗಲ ಪೊಲೀಸರಿಂದ ತಪ್ಪಿಸಿಕೊಂಡಿದ್ದಾರೆ. ಅದಾಗಿಯೂ ಪೊಲೀಸರು ಅವರ ಹೆಸರು ಸೇರಿಸಿ ಪ್ರಕರಣ ದಾಖಲಿಸಿದ್ದಾರೆ.

ಈ ದಾಳಿಯಲ್ಲಿ 11,500ರೂ ಹಣ ಸಿಕ್ಕಿದೆ. ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಪಿಎಸ್‌ಐ ಹನುಮಂತ ಕುಡಗುಂಟಿ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page