ಅರಬ್ಬಿ ಅಲೆಗೆ ಅಪ್ಪಳಿಸಿದ ಮೀನುಗಾರ: ಸಾವು!
ಕಾರವಾರದ ಲಕ್ಷ್ಮಣ ಅಂಬಿಗ ಅರಬ್ಬಿ ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾರೆ. ಮೀನುಗಾರಿಕೆ ನಡೆಸಿ ಬದುಕು ಕಟ್ಟಿಕೊಂಡಿದ್ದ ಅವರು ಮೀನು ಹಿಡಿಯುವ ವೇಳೆ ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಕಾರವಾರದ ಚಿತ್ತಾಕುಲದ ಸೀಬರ್ಡ ಕಾಲೋನಿಯಲ್ಲಿ ಲಕ್ಷ್ಮಣ ಗೋವಿಂದ ಅಂಬಿಗ (50) ವಾಸವಾಗಿದ್ದರು. ನಿತ್ಯ…
ಕಲ್ಲು.. ಮಣ್ಣು.. ಧೂಳು: ಇದು ಬರೀ ಅಕ್ಕಿ ಅಲ್ಲ!
ಬಡವರ ಹಸಿವು ನೀಗಿಸಲು ಅನ್ನಭಾಗ್ಯ ಯೋಜನೆ ಅಡಿ ಸರ್ಕಾರ ಪೂರೈಸುವ ಅಕ್ಕಿಯಲ್ಲಿ ಕಲ್ಲು, ಮಣ್ಣು ಹಾಗೂ ಧೂಳು ಹೆಚ್ಚಾಗಿದೆ. ಶಿರಸಿ ಗಣೇಶನಗರದ ಪಡಿತರ ಅಂಗಡಿಯಲ್ಲಿ ಅಕ್ಕಿಪಡೆದವರು ಇದರಿಂದ ಕಂಗಾಲಾಗಿದ್ದಾರೆ. ಪದ್ಮ ಚಂದ್ರ ಮೊಗೇರ್ ಸರ್ಕಾರ ನೀಡುವ ಉಚಿತ ಅಕ್ಕಿ ಪಡೆದಿದ್ದರು. ಆದರೆ,…
ಪುಠಾಣಿ ಮಕ್ಕಳಿಗೆ ಬೇಸಿಗೆ ಶಿಬಿರದ ಖುಷಿ!
ಯಲ್ಲಾಪುರ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿ ಕ್ರಿಯಾತ್ಮಕ ಚಟುವಟಿಕೆಗಳನ್ನು ಒಳಗೊಂಡ ಬೇಸಿಗೆ ಶಿಬಿರ ಶುರುವಾಗಿದೆ. ಏಪ್ರಿಲ್ 1ರ ಮೊದಲ ದಿನ 25ಕ್ಕೂ ಅಧಿಕ ಮಕ್ಕಳು ಪ್ರವೇಶ ಪಡೆದಿದ್ದಾರೆ. ಏಪ್ರಿಲ್ 7ರವರೆಗೂ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ. ಪ್ರೋಪಾತ ಅಕಾಡೆಮಿ ಹಾಗೂ ಸ್ಪೂರ್ಣ ಟ್ಯುಶನ್…
ಚಂದ್ಗುಳಿ | ಇನ್ಮುಂದೆ ಇಲ್ಲಿ ನಿತ್ಯವೂ ತಂಬುಳಿ ಊಟ!
ಯಲ್ಲಾಪುರದ ಗಂಟೆ ಘಣಪತಿ ದೇವಾಲಯದಲ್ಲಿ ಮಧ್ಯಾಹ್ನದ ಪ್ರಸಾದ ಭೋಜನ ಶುರುವಾಗಿದೆ. ಏಪ್ರಿಲ್ 21ರಿಂದ ನಿತ್ಯವೂ ಊಟ ಹಾಕುವುದಾಗಿ ದೇಗುಲ ಸಮಿತಿ ಹೇಳಿಕೊಂಡಿದ್ದರೂ, ಒಳ್ಳೆಯ ಕಾರ್ಯಕ್ಕೆ ಅದಕ್ಕಿಂತಲೂ ಮುಂಚಿತವಾಗಿ ಮುಹೂರ್ತ ಕೂಡಿಬಂದಿದೆ. ಮಂಗಳವಾರದಿoದಲೇ ಅನ್ನದಾನ ಸೇವೆ ಶುರು ಮಾಡಲಾಗಿದೆ. ಮೊದಲ ದಿನ 150ಕ್ಕೂ…
ಚಾಕಲೇಟು ಆಸೆ ತೋರಿಸಿ ಅತ್ಯಾಚಾರ: ಒಂದನೇ ತರಗತಿ ಕೂಸಿನ ಬದುಕು ನರಕ!
1ನೇ ತರಗತಿಯ ಬಾಲಕಿ ಮೇಲೆ ಬಾಲಕನೊಬ್ಬ ಅತ್ಯಾಚಾರ ನಡೆಸಿದ್ದಾನೆ. ಅತ್ಯಾಚಾರ ನಡೆಸಿದ ಬಾಲಕನಿಗೆ ಊರಿನ ಜನ ಹಿಗ್ಗಾಮುಗ್ಗ ಥಳಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಹಾಗೂ ಅತ್ಯಾಚಾರ ನಡೆಸಿದ ಕಾಮುಕ ಇಬ್ಬರೂ ಅಪ್ರಾಪ್ತರಾದ ಕಾರಣ ಅವರ ಹೆಸರು-ಊರಿನ ಬಗ್ಗೆ ಮಾಧ್ಯಮಗಳು ಪ್ರಕಟಿಸುವ ಹಾಗಿಲ್ಲ.…
ಕೊಲೆ ಯತ್ನ: ಆರೋಪಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ
ಜಮೀನು ವ್ಯಾಜ್ಯದ ವಿಷಯವಾಗಿ ವ್ಯಕ್ತಿಯೊಬ್ಬರ ಕೊಲೆಗೆ ಪ್ರಯತ್ನಿಸಿದ ಆರೋಪಿ ಪರಮೇಶ್ವರ ಪಿಳ್ಳೆ ಅಪರಾಧಿ ಎಂದು ಸಾಭೀತಾಗಿದೆ. ಈ ಹಿನ್ನಲೆ ನ್ಯಾಯಾಲಯ ಪರಮೇಶ್ವರ ಪಿಳ್ಳೆ ಅವರಿಗೆ ಶಿಕ್ಷೆಯನ್ನು ಪ್ರಕಟಿಸಿದೆ. ಶಿರಸಿ ಮರಾಠಿಕೊಪ್ಪದ ನಿವಾಸಿ ಪರಮೇಶ್ವರ ಕನ್ನಾ ಪಿಳ್ಳೆ ಹಾಗೂ ಈಶ್ವರ ಕೃಷ್ಣಾ ದೇವಾಡಿಗ…
ರಂಜಾನ್ ಜೊತೆ ಯುಗಾದಿ: ಹಿಂದು – ಮುಸ್ಲಿಂ ಬಾಯಿ ಬಾಯಿ!
ಶಿರಸಿಯಲ್ಲಿ ನಡೆದ ಯುಗಾದಿ ಮೆರವಣಿಗೆಯಲ್ಲಿ ಭಾಗಿಯಾದ ಮುಸ್ಲಿಂ ಸಮುದಾಯದವರು ಪುಷ್ಪ ಮಳೆ ಸುರಿಸಿದ್ದಾರೆ. ಜೊತೆಗೆ ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ವಿವಿಧ ಬಗೆಯ ತಿನಿಸುಗಳನ್ನು ನೀಡಿ ಸತ್ಕರಿಸಿದ್ದಾರೆ. ಯುಗಾದಿ ಹಬ್ಬದ ಹಿನ್ನಲೆ ಶಿರಸಿಯಲ್ಲಿ ಸಾವಿರಾರು ಜನ ಶೋಭಾಯಾತ್ರೆ ನಡೆಸಿದರು. ಹಿಂದು ಸಮುದಾಯದವರ ತಲೆ ಮೇಲೆ…
ಬಸ್ಸು ಓಡಿಸಬೇಕು… ದುಡ್ಡು ಎಣಿಸಬೇಕು!
ಭಟ್ಕಳದಿಂದ ಕಾರವಾರ ಬರುವ ಬಸ್ಸಿನ ಚಾಲಕರೊಬ್ಬರು ಹಣ ಎಣಿಸುತ್ತಲೇ ಬಸ್ಸು ಓಡಿಸುವ ವಿಡಿಯೋ ಹರಿದಾಡುತ್ತಿದೆ. ಸಿಬ್ಬಂದಿ ಕೊರತೆ ಹಾಗೂ ಹೊಸ ನೇಮಕಾತಿಗೆ ಆದ್ಯತೆ ನೀಡದ ಕಾರಣ ಅನೇಕ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಚಾಲಕರೇ ನಿರ್ವಾಹಕರಾಗಿದ್ದಾರೆ. ಪ್ರಯಾಣಿಕರಿಗೆ ಟಿಕೆಟ್ ನೀಡಿದ ನಂತರ ಅವರಿಂದ ಹಣಪಡೆದು…
ಅಮಾಯಕರ ವಿರುದ್ಧ ಕೂಗಾಟ.. ಪೊಲೀಸ್ ಠಾಣೆಯಲ್ಲಿಯೂ ರಂಪಾಟ: ಕೊನೆಗೂ ಜೈಲು ಸೇರಿದ ಭೂಪ!
ಸರಾಯಿ ಕೊಡಿಸದ ಕಾರಣ ಸ್ನೇಹಿತ ಬೈಕ್ ಜೊತೆ ಪರಾರಿಯಾಗಿದ್ದ ಜೊಯಿಡಾದ ಪ್ರವೀಣ ಸುಧೀರ್’ರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಬಂಧನದ ವೇಳೆಯೂ ಪ್ರವೀಣ ಸುಧೀರ್ ಸಾಕಷ್ಟು ರಂಪಾಟ ನಡೆಸಿದ್ದು, ಬಂಧನಕ್ಕೆ ತೆರಳಿದವರಿಗೆ ಬೆದರಿಕೆ ಒಡ್ಡಿದ ಬಗ್ಗೆಯೂ ಪ್ರಕರಣ ದಾಖಲಾಗಿದೆ. ರಾಮನಗರದ ಪ್ರವೀಣ ಸುಧೀರ್…
ಪುಕ್ಕಟ್ಟೆ ಪ್ರಚಾರಕ್ಕೆ ಕತ್ತರಿ ಪ್ರಯೋಗ: ತ್ಯಾಜ್ಯ ತುಂಬುವ ತೆರೆದ ವಾಹನದಲ್ಲಿ ವಿದ್ಯಾರ್ಥಿನಿಯರ ಚಿತ್ರ ಮೆರವಣಿಗೆ!
ಯಲ್ಲಾಪುರ ಪಟ್ಟಣದಲ್ಲಿ ಅಳವಡಿಸಿದ್ದ ಕೆಲ ವಿದ್ಯಾಸಂಸ್ಥೆಯ ಫ್ಲೆಕ್ಸು-ಬ್ಯಾನರುಗಳನ್ನು ಎರಡು ದಿನದ ಹಿಂದೆ ಪಟ್ಟಣ ಪಂಚಾಯತ ತೆರವು ಮಾಡಿದೆ. ತ್ಯಾಜ್ಯ ತುಂಬುವ ತೆರೆದ ವಾಹನದಲ್ಲಿ ವಿದ್ಯಾರ್ಥಿನಿಯರ ಭಾವಚಿತ್ರವಿರುವ ಫ್ಲೆಕ್ಸುಗಳ ಮೆರವಣಿಗೆ ನಡೆಸಲಾಗಿದೆ. ಅದಾಗಿಯೂ, ವಿದ್ಯಾಸಂಸ್ಥೆಯವರು ಇದನ್ನು ಆಕ್ಷೇಪಿಸಿಲ್ಲ. ಕಾರಣ, ಫ್ಲೆಕ್ಸು ಅಳವಡಿಕೆಗೆ ಅವರ…
















