ಕಳ್ಳ ಬಂದ ಕಳ್ಳ: ಗ್ರಾಸೀಂ ಮ್ಯಾನೇಜರ್ ಮನೆಯಲ್ಲಿ ಕೈ ಚಳಕ!
ಕಾರವಾರದ ಬಿಣಗಾದಲ್ಲಿರುವ ಗ್ರಾಸಿಮ್ ಇಂಡಸ್ಟ್ರಿ ಮ್ಯಾನೇಜರ್ ಮನೆಯಲ್ಲಿ ಕಳ್ಳತನ ನಡೆದಿದೆ. ಇಂಡಸ್ಟ್ರಿಯಲ್ಲಿ ಲ್ಯಾಬ್ ಮ್ಯಾನೆಜರ್ ಆಗಿರುವ ನರಸಿಂಗ್ ಆಚಾರಿ ಬಂಗಾರದ ಆಭರಣ ಹಾಗೂ ಇನ್ನಿತರ ವಸ್ತುಗಳನ್ನು ಕಳೆದುಕೊಂಡಿದ್ದಾರೆ. ಮಾರ್ಚ 26ರಿಂದ ಅವರು ಮನೆಯಲ್ಲಿರಲಿಲ್ಲ. ಈ ವೇಳೆಯಲ್ಲಿಯೇ ಮ್ಯಾನೇಜರ್ ಮನೆಗೆ ಗುರಿ ಹಾಕಿ…
ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ಪೊಲೀಸಪ್ಪನನ್ನು ಬಿಡದೇ ಬಂಧಿಸಿದ ಪೊಲೀಸರು!
ದೊಡ್ಡದಾಗಿ ಧ್ವನಿವರ್ಧಕ ಹಚ್ಚುವ ವಿಷಯದಲ್ಲಿ ಪೊಲೀಸರ ಜೊತೆ ಜಗಳ ಮಾಡಿ ಹೊಡೆದಾಟ ನಡೆಸಿದ ಪೊಲೀಸ್ ಸಿಬ್ಬಂದಿಯನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಆತನ ಮೂವರು ಸಹಚರರಿಗೂ ಜೈಲಿನ ದಾರಿ ತೋರಿಸಿದ್ದಾರೆ. ಮಾರ್ಚ 31ರಂದು ನಸುಕಿನ 2.30ಕ್ಕೆ ಕಾರವಾರದ ಗುನಗಿವಾಡದಲ್ಲಿ ದೊಡ್ಡದಾಗಿ ಮೈಕ್…
ಪ್ರವಾಸಿ ಬೋಟಿನವರ ರಂಪಾಟ: ಅಮಾಯಕ ಚಾಲಕನಿಗೆ ಥಳಿತ!
ಹೊನ್ನಾವರದ ಕಾಂಡ್ಲಾವನ ವೀಕ್ಷಣೆಗೆ ಪ್ರವಾಸಿಗರನ್ನು ಕರೆದಂತೆ ಚಾಲಕರೊಬ್ಬರಿಗೆ ಅಲ್ಲಿ ಬೋಟು ನಡೆಸುವ ಏಳೆಂಟು ಜನ ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. `ಕಾರಿನಲ್ಲಿ ಬಂದ ಪ್ರವಾಸಿಗರು ತಮ್ಮ ಬೋಟಿಗೆ ಬರಲಿಲ್ಲ’ ಎಂಬುದೇ ಈ ಘರ್ಷಣೆಗೆ ಕಾರಣ! ಕುಮಟಾ ಗಂಗಾವಳಿಯ ಮುಜಾಮಿಲ್ ಸಾಬ್ ಅವರು ಕಾರು…
ಅಕ್ಕಿ ಲಾರಿಯಿಂದ ಬಿದ್ದ ಚಾಲಕ ಸಾವು!
ಕಾರವಾರದ ಬಳಿ ಅಕ್ಕಿ ಒಯ್ಯುತ್ತಿದ್ದ ಲಾರಿಯಿಂದ ನೆಲಕ್ಕೆ ಬಿದ್ದ ಚಾಲಕ ಸಾವನಪ್ಪಿದ್ದು, ಪೊಲೀಸ್ ಪ್ರಕರಣ ದಾಖಲಾಗಿದೆ. ತೆಲಂಗಾಣದ ಬೊಡ್ಡುಪಳ್ಳಿ ಯಾದಗಿರಿ (45) ಎಂಬಾತರು ತಮ್ಮ ಲಾರಿಗೆ ವಿ ನಾಗರಾಜು ಎಂಬಾತರನ್ನು ಕ್ಲೀನರ್ ಆಗಿ ನೇಮಿಸಿದ್ದರು. ಬೊಡ್ಡುಪಳ್ಳಿ ಯಾದಗಿರಿ ಅವರು ಕ್ಲೀನರ್ ಜೊತೆ…
ಕೋತಿ ಕಾಟಕ್ಕೆ ನಲುಗಿದ ಮಾನವ!
ದಾಂಡೇಲಿ ಇಐಎಸ್ ಆಸ್ಪತ್ರೆ ಬಳಿ ಕೋತಿಗಳ ಕಾಟ ಹೆಚ್ಚಾಗಿದೆ. ಆಸ್ಪತ್ರೆ ಆವರಣದಲ್ಲಿದ್ದ ಕಾರ್ಮಿಕರೊಬ್ಬರ ಮೇಲೆ ಭಾನುವಾರ ಕೋತಿ ದಾಳಿ ನಡೆಸಿದೆ. ಕೋತಿ ಕಚ್ಚಿದ್ದರಿಂದ ಕಾಲಿಗೆ ಗಾಯ ಮಾಡಿಕೊಂಡ ಪ್ರವೀಣ ವಾಸಂದರ್ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ದಾಂಡೇಲಿ ನಗರದ ಇಎಸ್ಐ ಆಸ್ಪತ್ರೆಯ…
ಹಳ್ಳದ ಮೀನು: ವೃದ್ಧನನ್ನು ಬಲಿ ಪಡೆದ ಮತ್ಸ್ಯ ಬಲೆ!
ಅಂಕೋಲಾದ ಪೂಜಗೇರಿಯಲ್ಲಿ ಮೀನು ಹಿಡಿಯಲು ಹಳ್ಳಕ್ಕೆ ತೆರಳಿದ್ದ ಚೋಳ್ಳಯ್ಯ ಖಾರ್ವಿ ಮೀನು ಬಲೆಯೊಂದಿಗೆ ನೀರಿನಲ್ಲಿ ಬಿದ್ದು ಸಾವನಪ್ಪಿದ್ದಾರೆ. ನೀರಿನಲ್ಲಿ ಬಿದ್ದು ಅಸ್ವಸ್ಥರಗೊಂಡ ಅವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ. ಅಂಕೋಲಾ ತಾಲೂಕಿನ ಬೆಳಂಬಾರ ಬಳಿಯ ಉತ್ತರಖಾರ್ವಿವಾಡದಲ್ಲಿ ಚೋಳ್ಳಯ್ಯ ಖಾರ್ವಿ ವಾಸವಾಗಿದ್ದರು.…
ಜಾತ್ರೆ ಲೆಕ್ಕ ಅಪರಾತಪರ: ತನಿಖೆ ಠರಾವು ಕಾಣಿಸದೇ ಹುದ್ದೆ ತ್ಯಜಿಸಿದ ಮುಖ್ಯಾಧಿಕಾರಿ!
ಯಲ್ಲಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನೀಲ ಗಾವಡೆ ಅವರನ್ನು ಸರ್ಕಾರ ಇಲ್ಲಿಂದ ವರ್ಗಾಯಿಸಿದೆ. ಸಾಕಷ್ಟು ಸಾರ್ವಜನಿಕ ದೂರುಗಳ ಹಿನ್ನಲೆ ಅವರನ್ನು ಕಾರವಾರಕ್ಕೆ ವರ್ಗಾವಣೆ ಮಾಡಲಾಗಿದೆ. ಎಲ್ಲರ ಜೊತೆ ಸೌಜನ್ಯವಾಗಿ ವರ್ತಿಸುವ ಸುನೀಲ ಗಾವಡೆ ಸಾರ್ವಜನಿಕ ಕೆಲಸವನ್ನು ಮಾತ್ರ ಮಾಡಿಕೊಡುತ್ತಿರಲಿಲ್ಲ. ಸಮಸ್ಯೆ ಹೇಳಿಕೊಂಡು…
ಕಾರವಾರ | ಸಂಸ್ಕೃತಿ ಪ್ರತಿಬಿಂಬಿಸಿದ ಗುಡಿಪಡ್ವಾ ಭವ್ಯ ಶೋಭಾ ಯಾತ್ರೆ
ಯುಗಾದಿ- ಗುಡಿಪಡ್ವಾ ಅಂಗವಾಗಿ ನರೇಂದ್ರಾಚಾರ್ಯಜಿ ಮಹಾರಾಜ್ ಭಕ್ತ ಸೇವಾ ಮಂಡಳಿ ನೇತ್ರತ್ವದಲ್ಲಿ ಕಾರವಾರ ನಗರದಲ್ಲಿ ನಡೆದ ಭವ್ಯ ಶೋಭಾ ಯಾತ್ರೆ ನೋಡುಗರ ಮನ ಗೆದ್ದಿತು. ಯುಗಾದಿಯ ಹೊಸ ವರ್ಷದ ಆರಂಭವನ್ನು ಮರಾಠ – ಕೊಂಕಣ ಸಮುದಾಯದವರು `ಗುಡಿಪಡ್ವಾ’ ಎಂಬ ಹೆಸರಿನಿಂದ ಆಚರಿಸುತ್ತಾರೆ.…
KA 31 | ಬೆನ್ನಿಗಿದ್ದ ಬ್ಯಾಗಿಗೆ ಸಿಕ್ಕಿಬಿದ್ದ ಬೈಕ್ ಹ್ಯಾಂಡಲ್: ಬೈಕಿನಿಂದ ಬಿದ್ದ ಮೂವರಿಗೂ ಪೆಟ್ಟು!
ಮುಂದೆ ಚಲಿಸುತ್ತಿದ್ದ ಕಾರನ್ನು ಹಿಂದಿಕ್ಕುವ ತರಾತುರಿಯಲ್ಲಿ ಎರಡು ಬೈಕ್ ನಡುವೆ ಅಪಘಾತ ನಡೆದಿದೆ. ಏಕಾಏಕಿ ಕಾರಿನ ಬಲಬದಿಗೆ ಚಲಿಸಿದ ಬೈಕಿನ ಹ್ಯಾಂಡಲ್ ಇನ್ನೊಂದು ಬೈಕ್ ಸಹ ಸವಾರ ಬೆನ್ನಿಗೆ ಹಾಕಿಕೊಂಡಿದ್ದ ಬ್ಯಾಗಿಗೆ ಸಿಲುಕಿದ್ದರಿಂದ ಅಪಘಾತದ ತೀವೃತೆ ಹೆಚ್ಚಾಗಿದೆ. ಮುಂಡಗೋಡು ಬೆಡಸಗಾವಿನ ಶಾನವಳ್ಳಿಯ…
ಕಿರವತ್ತಿಯ ವ್ಯಕ್ತಿ ಕುಮಟಾದಲ್ಲಿ ಸಾವು!
ಕುಮಟಾ ಮೀನು ಮಾರುಕಟ್ಟೆ ಬಳಿ ಯಲ್ಲಾಪುರದ ಗುರುಮೋಹನ ಮಹಾಜನ್ ಎಂಬಾತರು ಸಾವನಪ್ಪಿದ್ದಾರೆ. ಯಲ್ಲಾಪುರದ ಕಿರವತ್ತಿ ಬಳಿ ಗುರುಮೋಹನ ಮಹಾಜನ್ ವಾಸವಾಗಿದ್ದರು. ಚಿಂದಿ ಆಯುವ ಕೆಲಸ ಮಾಡಿಕೊಂಡಿದ್ದ ಅವರು ಕುಮಟಾಗೆ ಹೋಗಿ ಕೆಲಸ ಮಾಡುತ್ತಿದ್ದರು. ಹಲವು ದಿನಗಳಿಂದ ಕುಮಟಾ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ…











