ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ: ಪ್ರಶ್ನಿಸಿದಕ್ಕಾಗಿ ಪೆಟ್ರೋಲ್ ಸುರಿದುಕೊಂಡ ಅರಣ್ಯ ಇಲಾಖೆ ಚಾಲಕ!
ಸರ್ಕಾರಿ ಕಚೇರಿಯ ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ ವಾಹನ ಚಾಲಕರೊಬ್ಬರು ಈ ಪ್ರಕರಣದ ಆಂತರಿಕ ವಿಚಾರಣೆ ವೇಳೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ರಂಪಾಟ ನಡೆಸಿದ್ದಾರೆ. ಲಭ್ಯವಿರುವ ಮಾಹಿತಿಗಳ ಪ್ರಕಾರ, ಯಲ್ಲಾಪುರದ ಅರಣ್ಯ ಇಲಾಖೆ ವಸತಿಗೃಹದಲ್ಲಿ ವಾಸವಾಗಿರುವ ಎರಡು ಕುಟುಂಬಗಳ ನಡುವೆ…
ಮುತ್ತೋಟ ಫೈನಾನ್ಸ್: ಕದ್ದ ಚಿನ್ನಕ್ಕೂ ಸಾಲ ಕೊಟ್ಟ ಕಂಪನಿ!
ಅಜ್ಜಿಯ ಒಡವೆ ಕದ್ದು ಮುತ್ತೋಟ ಫೈನಾನ್ಸ್’ನಲ್ಲಿ ಅಡಗಿಸಿಟ್ಟಿದ್ದ ಭಟ್ಕಳದ ತಜಮುಲ್ ಹಸನ್’ರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಅಡವಿಟ್ಟ ಬಂಗಾರವನ್ನು ವಶಕ್ಕೆಪಡೆದಿದ್ದಾರೆ. ಭಟ್ಕಳ ಕಳಿಹನುಂತ ದೇವಸ್ಥಾನ ಎದುರಿನ ಮೌಲನ್ ಆಜಾದ್ ರಸ್ತೆಯಲ್ಲಿ ತಜಮುಲ್ ಹಸನ್ ಅವರು ತಾಜ್ ವಿಲ್ಲಾ ಎಂಬ ಮನೆ ನಿರ್ಮಿಸಿಕೊಂಡಿದ್ದರು.…
ರಂಜಾನ್ ಪೇಟೆ ಸುತ್ತಿದ ಪೊಲೀಸ್ ನಾರಾಯಣ!
ಭಟ್ಕಳದ ಪ್ರಸಿದ್ಧ ರಂಜಾನ್ ಬಜಾರ್ಗೆ ಭೇಟಿ ನೀಡಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅಲ್ಲಿನ ಮಾರುಕಟ್ಟೆ ಸುತ್ತಾಟ ನಡೆಸಿದ್ದಾರೆ. ಮುಸ್ಲಿಂ ಮುಖಂಡರೊAದಿಗೆ ಸಮಾಲೋಚನೆ ನಡೆಸಿದ ಅವರು ಪೊಲೀಸ್ ಭದ್ರತಾ ವ್ಯವಸ್ಥೆಗಳ ಪರಿಶೀಲನೆ ಮಾಡಿದ್ದಾರೆ. ಭಟ್ಕಳ ಮಜ್ಲಿಸ್-ಎ-ಇಸ್ಲಾ-ಒ-ತಂಜೀಮ್ ಅಧ್ಯಕ್ಷ…
ಯುಗಾದಿ ಜೊತೆ ರಂಜಾನ್: ಈ ಎರಡೂ ಹಬ್ಬಕ್ಕೆ ಸರಾಯಿ ಸಿಗಲ್ಲ!
ಯುಗಾದಿ ಹಾಗೂ ರಂಜಾನ್ ಹಬ್ಬದ ವೇಳೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಸರಾಯಿ ಮಾರಾಟ ಹಾಗೂ ಸಾಗಾಟ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜಿಲ್ಲೆಯ ಬಹುತೇಕ ಕಡೆ ರಂಜಾನ್ ಹಾಗೂ ಯುಗಾದಿ ಹಬ್ಬದ ನಿಮಿತ್ತ ಬೈಕ್…
ಬೈಕಿನಿಂದ ಬಿದ್ದ ಲಕ್ಷ್ಮಣ: 10 ದಿನ ನರಳಾಡಿ ಸತ್ತ!
ಬೈಕ್ ಅಪಘಾತದಿಂದ ಆಸ್ಪತ್ರೆ ಸೇರಿದ್ದ ಸಿದ್ದಾಪುರದ ಲಕ್ಷ್ಮಣ ನಾಯ್ಕ 10 ದಿನದ ನರಳಾಟ ಅನುಭವಿಸಿ ಸಾವನಪ್ಪಿದ್ದಾರೆ. ಲಕ್ಷ್ಮಣ ನಾಯ್ಕ ಜೊತೆಗೆ ಬೈಕಿನಲ್ಲಿದ್ದ ಈಶ್ವರ ನಾಯ್ಕ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಸಿದ್ದಾಪುರದ ಉಂಚಳ್ಳಿಯ ಲಕ್ಷ್ಮಣ ನಾಯ್ಕ (51) ಅವರು ಮಾರ್ಚ 17ರ ಬೆಳಗ್ಗೆ…
ಕಾಳಿ ನದಿಯಲ್ಲಿ ಸರ್ಕಸ್: ಮೊಸಳೆಗೆ ಬೆದರದ ಹೆಸ್ಕಾಂ ಸಿಬ್ಬಂದಿ!
ದಾoಡೇಲಿಯಲ್ಲಿ ಗಾಳಿ-ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಊರುಗಳಿಗೆ ಹೆಸ್ಕಾಂ ಸಿಬ್ಬಂದಿ ಶನಿವಾರ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಮೊಸಳೆಗಳಿರುವ ನದಿಯಲ್ಲಿ ಸಾಹಸ ಮಾಡಿ ಅವರು ವಿದ್ಯುತ್ ಸಂಪರ್ಕ ನೀಡಿದ್ದಾರೆ. ಸುರಿದ ಭಾರೀ ಪ್ರಮಾಣದ ಮಳೆಯಿಂದಾಗಿ ಕಾಳಿ ನದಿಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು.…
ಹುಟಕಮನೆ | ಗುಡ್ಡದ ಭೂತ: ಹಳೆ ಸುದ್ದಿ.. ಹೊಸ ವಿಷಯ!
ಯಲ್ಲಾಪುರ ತಾಲೂಕಿನ ಹುಟಕಮನೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಗುಡ್ಡ ಅಗೆದಿರುವುದರಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ಶನಿವಾರ ತಹಶೀಲ್ದಾರ್ ಕಚೇರಿಯ ಮೂಲಕ ಅಲ್ಲಿನ ಜನ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. `ಅವೈಜ್ಞಾನಿಕವಾಗಿ ಗುಡ್ಡ ಕೊರೆದ ಪರಿಣಾಮ ಭೂ ಕುಸಿತವಾಗುವ…
ಕಾಳಿಕಾ ಭವಾನಿ ಮೇಲೆ ಕಳ್ಳರ ಕಣ್ಣು!
ಶಿರಸಿ-ಸಿದ್ದಾಪುರ ರಸ್ತೆಯ ಕಾಳಿಕಾ ಭವಾನಿ ಹೈಸ್ಕೂಲ್ ಎದುರಿನ ಅಂಗಡಿಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಇಲ್ಲಿನ ಮೂರು ಅಂಗಡಿಗಳಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಸಾಮಗ್ರಿಗಳನ್ನು ದೋಚಿ ಪರಾರಿಯಾಗಿದ್ದಾರೆ. ಸಿದ್ದಾಪುರ ತಾಲೂಕಿನ ಕಾನಸೂರು ಬಳಿಯ ಕಾಳಿಕಾ ಭವಾನಿ ಹೈಸ್ಕೂಲ್ ಎದುರು ಕಾನಸೂರು ಜಾರಗಲ್ನ…
ಊರಿನವರ ಮೌನ.. ಪರ ಪ್ರದೇಶದವರ ಆಕ್ರಂದನ: ಬೆಂಬಿಡದೇ ಕಾಡುತ್ತಿದೆ ಗುಡ್ಡದ ಭೂತ!
ಯಲ್ಲಾಪುರದ ಹುಟಕಮನೆಯಲ್ಲಿನ ಗುಡ್ಡ ಕಟಾವು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. `ಕೆಲವರು ದ್ವೇಷ ಮನೋಭಾವನೆಯಿಂದ ತನ್ನ ಕೃಷಿ ಕಾಯಕಕ್ಕೆ ತೊಂದರೆ ಮಾಡುತ್ತಿದ್ದಾರೆ’ ಎಂದು ಅಲ್ಲಿ ಭೂಮಿ ಖರೀದಿಸಿದ ದೀಪಕ ನಾಯ್ಕ ಇದೀಗ ಹೇಳಿಕೆ ನೀಡಿದ್ದಾರೆ. `ಹುಟಕಮನೆಯಲ್ಲಿ ಅವೈಜ್ಞಾನಿಕವಾಗಿ ಗುಡ್ಡ ಕುಸಿತ ನಡೆಸಿದ್ದರಿಂದ…
ಶಿರಸಿಯಲ್ಲಿ ಇನ್ನೂ ಜೀವಂತ.. ಈ ವರದಕ್ಷಿಣೆ ಭೂತ!
ವರದಕ್ಷಿಣೆಗಾಗಿ ಪೀಡಿಸಿದ ಪತಿಯ ವಿರುದ್ಧ ಮಹಿಳೆ ಸಿಡಿದೆದ್ದಿದ್ದಾರೆ. `ತನಗೆ ನ್ಯಾಯ ಕೊಡಿಸಿ’ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಶಿರಸಿ ತಾಲೂಕಿನ ಬಸಳೆಕೊಪ್ಪ ಗ್ರಾಮದ ಹಿತ್ಲಗದ್ದೆಯ ಪವಿತ್ರ ನಾಯ್ಕ ಅವರು ತಮ್ಮ ಪತಿ ಉದಯ ನಾಯ್ಕ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ.…














