ಕಾಟಾಚಾರಕ್ಕೆ ನಡೆಯಿತು ವಿಶ್ವ ಕಪ್ಪೆ ದಿನ!
ಸಾರ್ವಜನಿಕ ಸಹಭಾಗಿತ್ವದಲ್ಲಿ ಸರ್ಕಾರಿ ಕಾರ್ಯಕ್ರಮ ನಡೆಯಬೇಕು ಎಂಬುದು ಎಲ್ಲರ ಉದ್ದೇಶ. ಆದರೆ, ಮೊನ್ನೆ ಯಲ್ಲಾಪುರದ ಮಾಗೋಡಿನಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ವಿಭಾಗ ಮಟ್ಟದ `ವಿಶ್ವ ಕಪ್ಪೆ ದಿನ’ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳು-ಅರಣ್ಯ ಸಿಬ್ಬಂದಿ ಸೇರಿ 52 ಜನ ಮಾತ್ರ ಭಾಗವಹಿಸಿದ್ದರು! ವಿವಿಧ…
ವಿದ್ಯಾರ್ಥಿಗಳ ಪಕ್ಷಿ ಪ್ರೇಮ: ರಜೆಯಿದ್ದರೂ ಶಾಲೆಗೆ ಬರುವ ಸದ್ಗುರು ಶಾಲೆ ಮಕ್ಕಳು!
ಶಾಲೆಗೆ ರಜೆಯಿದ್ದರೂ ಪಕ್ಷಿಗಳಿಗೆ ನೀರುಣಿಸುವದಕ್ಕಾಗಿಯೇ ಗೋಕರ್ಣದ ಸಾಣಿಕಟ್ಟಾದ ವಿದ್ಯಾರ್ಥಿಗಳು ನಿತ್ಯವೂ ಶಾಲೆಗೆ ಬರುತ್ತಿದ್ದಾರೆ. ಇಲ್ಲಿನ ಶ್ರೀ ಸದ್ಗುರು ನಿತ್ಯಾನಂದ ಪ್ರೌಢಶಾಲೆಯ ಮಕ್ಕಳು ಪಕ್ಷಿಗಳಿಗೆ ನೀರು-ಆಹಾರವಿರಿಸಿ ಅವುಗಳ ಚಲನ-ವಲನ ಅಭ್ಯಯಿಸುತ್ತಿದ್ದಾರೆ. ಸದ್ಗುರು ನಿತ್ಯಾನಂದ ಪ್ರೌಢಶಾಲೆಯೂ ದಟ್ಟವಾದ ಅರಣ್ಯ ಪ್ರದೇಶದ ಬೆಟ್ಟದಲ್ಲಿದೆ. ವಿವಿಧ ಬಗೆಯ…
ಸಾಮಾಜಿಕ ಸಂದೇಶ ಸಾರಿದ ಸುಬ್ಬಣ್ಣನ ನಾಟಕ!
ಯಲ್ಲಾಪುರದ ಹುತ್ಕಂಡ ಕ್ರಾಸಿನಲ್ಲಿ ಗ್ರಾ ಪಂ ಸದಸ್ಯ ಸುಬ್ರಹ್ಮಣ್ಯ ಉದ್ದಾಬೈಲ್ ಅಧ್ಯಕ್ಷತೆಯಲ್ಲಿ ಸಂಘಟಿಸಿದ ನಾಟಕ ದುಶ್ಚಟಗಳ ಕುರಿತು ಅರಿವು ಮೂಡಿಸುವುದರ ಮೂಲಕ ಸಾಮಾಜಿಕ ಸಂದೇಶ ಸಾರಿದೆ. ಶನಿವಾರ ರಾತ್ರಿ ಹುತ್ಕಂಡದಲ್ಲಿ `ಅಣ್ಣ ಹಚ್ಚಿದ ರಕ್ತ ತಿಲಕ’ ನಾಟಕ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ…
ದುಷ್ಟಕೂಟದ ಕಾಟಕ್ಕೆ ನಲುಗಿದ ಸೊಸೈಟಿ: ಕೋಟಿ ನಷ್ಟ ಮಾಡಿದರೂ ಠೇವಣಿ ಸುಭದ್ರ!
ಶಿರಸಿಯ ಉಂಚಳ್ಳಿ ಸೊಸೈಟಿಯಲ್ಲಿ ಅವ್ಯವಹಾರ ನಡೆದ ಬಗ್ಗೆ ಕೆಲವರು ದೂರಿ, ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಆದರೆ, `ಸೊಸೈಟಿ ಸುಭದ್ರವಾಗಿದ್ದು, ವದಂತಿಗಳನ್ನು ನಂಬಬೇಡಿ’ ಎಂದು ಶಿರಸಿಯ ಉಂಚಳ್ಳಿ ಸಹಕಾರಿ ಸಂಘದ ಆಡಳಿತ ಮಂಡಳಿ ಸ್ಪಷ್ಠಪಡಿಸಿದೆ. 1969ರ ಆಸುಪಾಸಿನಲ್ಲಿ ಉಂಚಳ್ಳಿ ಸಹಕಾರಿ ಸಂಘ ಸ್ಥಾಪನೆಯಾಯಿತು.…
ಅಗ್ನಿ ಅವಘಡ: ಜಾನುವಾರುಗಳಿಗೆ ನೀರು ಇಲ್ಲ.. ಮೇವು ಇಲ್ಲ!
ದಾಂಡೇಲಿಯ ಹಾರ್ನೋಡಾ ಗ್ರಾಮದಲ್ಲಿ ದಾಸ್ತಾನು ಮಾಡಿದ್ದ ಹುಲ್ಲಿನ ಬವಣೆ ಬೆಂಕಿಗೆ ಆಹುತಿಯಾಗಿದೆ. ಲಕ್ಷಾಂತರ ರೂ ಮೌಲ್ಯದ ಹುಲ್ಲಿನ ಉಂಡೆಗಳು ಸುಟ್ಟು ಕರಕಲಾಗಿದೆ. ಹಾರ್ನೋಡಾ ಗ್ರಾಮದ ಬಾಬು ಲಕ್ಕು ಪಟಕಾರೆ ಎಂಬಾತರು ಹುಲ್ಲಿನ ಬವಣೆ ನಿರ್ಮಿಸಿಕೊಂಡಿದ್ದರು. ಹೈನುಗಾರಿಕೆ ಮಾಡಿಕೊಂಡಿರುವ ಅವರು ದನಕರುಗಳ ಮೇವಿಗಾಗಿ…
ಸೇತುವೆಗೆ ಬಾರ.. ಸವಾರರಿಗೆ ಕಿರಿಕಿರಿ: ಅರ್ದ ರಸ್ತೆ ನುಂಗಿದ ಅಕ್ರಮ ಮರಳು!
ಕಾರವಾರದ ಕಾಳಿ ನದಿ ಬಗೆದು ಅಕ್ರಮವಾಗಿ ರೇತಿ ತೆಗೆದ ದುರುಳರು ಸಾಗಾಟದ ಲಾರಿ ಪಂಚರ್ ಆದ ಪರಿಣಾಮ ಮರಳನ್ನು ರಸ್ತೆ ಮದ್ಯೆ ಚೆಲ್ಲಿ ಪರಾರಿಯಾಗಿದ್ದಾರೆ. ಇದರಿಂದ ಬಸ್ಸು ಸೇರಿ ಇತರೆ ವಾಹನ ಸವಾರರು ಸಮಸ್ಯೆ ಅನುಭವಿಸುತ್ತಿದ್ದಾರೆ! ಕಾರವಾರದ ಕಿನ್ನರ ಬಳಿಯ ಸಿದ್ದರ…
ಆಧಾರ್ ಕಾರ್ಡಿಗಾಗಿ ಮೋದಿಗೆ ಪತ್ರ ಬರೆದ 80ರ ಅಜ್ಜಿ!
ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ ಮಾಡಿಸಲು ಅಲೆದಾಡುತ್ತಿರುವ ಯಲ್ಲಾಪುರ ಕಾನಗೋಡಿನ 80 ವರ್ಷದ ಸರಸ್ವತಿ ಹೆಗಡೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. `ತಾನು ಸಾಯುವುದರ ಒಳಗೆ ಆಧಾರ್ ಕಾರ್ಡ ಮಾಡಿಕೊಡಿ’ ಎಂದವರು ಅಳಲು ತೋಡಿಕೊಂಡಿದ್ದಾರೆ. ಈ…
ಕರಡಿ ಜೊತೆ ಕುಸ್ತಿಯಾಡಿದ ಕಾವಲುಗಾರ!
ಹೊಲ ಕಾಯಲು ತೆರಳಿದ್ದ ರೈತನ ಮೇಲೆ ಶನಿವಾರ ನಸುಕಿನಲ್ಲಿ ಕರಡಿ ದಾಳಿ ನಡೆಸಿದೆ. ಎರಡು ಕರಡಿ ಜೊತೆ ಕಾದಾಡಿ ಜೀವ ಉಳಿಸಿಕೊಂಡ ಡೋಮಿಂಗ್ ಸಿದ್ದಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾಂಡೇಲಿಯ ಕೆಗದಾಳದಲ್ಲಿ ಡೋಮಿಂಗ್ ಸಿದ್ದಿ ಅವರು ಗೇರು ಮರಗಳನ್ನು ಬೆಳೆದಿದ್ದಾರೆ. ವಿಪರೀತ…
SSLC ಪರೀಕ್ಷೆ: ಮೊದಲ ದಿನವೇ 220 ವಿದ್ಯಾರ್ಥಿಗಳ ಗೈರು!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾರ್ಚ 21ರಂದು ಮೊದಲ ದಿನದ SSLC ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಆದರೆ, ಈ ದಿನ ಒಟ್ಟು 220 ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರವುಳಿದಿದ್ದಾರೆ! ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಮೂಡಿಸಲು ಸಾಕಷ್ಟು ಪ್ರಯತ್ನ ನಡೆದಿತ್ತು. ವಿಶೇಷ ತರಗತಿಗಳನ್ನು ಆಯೋಜಿಸಲಾಗಿತ್ತು. ಹಿಂದುಳಿದ…
ಗಾಂಜಾ ವಿರುದ್ಧ ಸಮರ: ಗ್ರಾಹಕನ ಜೊತೆ ವ್ಯಾಪಾರಿಯೂ ಸಿಕ್ಕಿಬಿದ್ದ!
ಶಿರಸಿಯಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆ ಮಾಡುವವರ ವಿರುದ್ಧ ಪೊಲೀಸರು ಸಮರ ಸಾರುತ್ತಿದ್ದು, ಗುರುವಾರ ಗಾಂಜಾ ನಶೆಯಲ್ಲಿದ್ದ ಹರೀಶ ನಾಯ್ಕರನ್ನು ಬಂಧಿಸಿದ್ದಾರೆ. ಶುಕ್ರವಾರ ಗಾಂಜಾ ಮಾರಾಟ ಮಾಡುತ್ತಿದ್ದ ಅಜಾಜ್ ಮಕ್ಬೂಲ್ ಅಹ್ಮದ್ ಶೇಖ್ರನ್ನು ವಶಕ್ಕೆ ಪಡೆದಿದ್ದಾರೆ. ನಿಲೆಕಣಿ ಮೀನು ಮಾರುಕಟ್ಟೆ ಪಕ್ಕದ…
















