6
ಉತ್ತರ ಕನ್ನಡ | ಉಸ್ತುವಾರಿ ಸಚಿವರು ಕಾಣೆಯಾಗಿದ್ದಾರೆ!

ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಬುಧವಾರ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಮಂಕಾಳು ವೈದ್ಯರ ಫೋಟೋದ ಜೊತೆ `ಉಸ್ತುವಾರಿ ಸಚಿವರು ಕಾಣೆಯಾಗಿದ್ದಾರೆ’ ಎಂಬ ನಾಮಫಲಕಗಳು ಕಾಣಿಸಿದವು. ಬಿಜೆಪಿ ರೈತಮೋರ್ಚಾ ಅಧ್ಯಕ್ಷ ರಮೇಶ ನಾಯ್ಕ ಹಾಗೂ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಮುಂದಾಳತ್ವದಲ್ಲಿ ಯಲ್ಲಾಪುರದಲ್ಲಿ ಭಾರೀ…

ಯಲ್ಲಾಪುರ ಕಾಂಗ್ರೆಸ್ಸಿನಲ್ಲಿ ಭಿನ್ನಮತ: ನಾಯಕರ ನಿಲುವಿಗೆ ಕಾರ್ಯಕರ್ತರ ಅಸಮಧಾನ!

`ನಾವೆಲ್ಲರೂ ಒಂದು’ ಎನ್ನುತ್ತಿದ್ದ ಕಾಂಗ್ರೆಸ್ ವಲಯದಲ್ಲಿ ಇದೀಗ ಭಿನ್ನಾಭಿಪ್ರಾಯ ಕೇಳಿ ಬಂದಿದೆ. ಸೋಮವಾರ ನಡೆದ ಆಂತರಿಕ ಸಭೆಯಲ್ಲಿ ಪಕ್ಷ ಸಂಘಟನೆ ವಿಷಯವಾಗಿ ಅನೇಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಯಲ್ಲಾಪುರ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಿ ಎನ್ ಗಾಂವ್ಕರ್ ಅವರ ಮನೆಯಲ್ಲಿ…

ಪಟಾಕಿ ಹೊಡೆದು ಪೊರಕೆ ಹಿಡಿದ ಬಿಜೆಪಿಗರು!

ಗ್ರಾಮ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಸಿಕ್ಕಿದ ಖುಷಿಗೆ ಪಟಾಕಿ ಹೊಡೆದ ಬಿಜೆಪಿಗರು ನಂತರ ಪಟಾಕಿಯಿಂದಾದ ಮಾಲಿನ್ಯವನ್ನು ಗುಡಿಸಿ ಸ್ವಚ್ಛಗೊಳಿಸಿದರು.! ಯಲ್ಲಾಪುರ ತಾಲೂಕಿನ ಮದನೂರು ಗ್ರಾಮ ಪಂಚಾಯತಗೆ ಕೆಲ ದಿನಗಳ ಹಿಂದೆ ಅವಿಶ್ವಾಸ ಮಂಡನೆ ನಡೆದಿತ್ತು. ಶುಕ್ರವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ…

ಸಿದ್ದರಾಮಯ್ಯ ಅಲ್ಲ.. ಆತ ಸೊಕ್ಕುರಾಮಯ್ಯ!

ಬರೆಯವರ ಬಗ್ಗೆ ಸದಾ ಹಗರುವಾಗಿ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ತನೆಯನ್ನು ಯಲ್ಲಾಪುರದ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಖಂಡಿಸಿದ್ದಾರೆ. `ಅವರು ಸಿದ್ದರಾಮಯ್ಯ ಅಲ್ಲ, ಸೊಕ್ಕುರಾಮಯ್ಯ’ ಎಂದು ರಾಮು ನಾಯ್ಕ ಹೇಳಿದ್ದಾರೆ. `ಪ್ರತಿಯೊಬ್ಬರಿಗೂ ತಮ್ಮದೇ ಆದ ಗೌರವವಿರುತ್ತದೆ. ಅದರಲ್ಲಿಯೂ ಸರ್ಕಾರಿ…

ಇದೇ ಮೊದಲಲ್ಲ.. ಇದಕ್ಕೆ ಕೊನೆಯೂ ಇಲ್ಲ: ಇಲ್ಲದ ಕಚೇರಿಗೆ ಸಚಿವರ ಪ್ರವಾಸ!

ಕಾರವಾರ: ಕಾಂಗ್ರೆಸ್ ಚಿಹ್ನೆಯ ಅಡಿ ಆಯ್ಕೆಯಾದ ಶಾಸಕ ಸತೀಶ್ ಸೈಲ್ ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಕಚೇರಿಯನ್ನು ಹೊಂದಿಲ್ಲ. ಅದಾಗಿಯೂ ಕಾರವಾರಕ್ಕೆ ಭೇಟಿ ನೀಡುವ ಸಚಿವರೆಲ್ಲರೂ `ಕಾಂಗ್ರೆಸ್ ಕಚೇರಿಗೆ ಭೇಟಿ’ ಎಂದು ಸಮಯ ನಿಗದಿ ಮಾಡುತ್ತಿದ್ದು, ಇಲ್ಲದ ಕಚೇರಿಗೆ ಸಚಿವರು…

ಅನಂತಕುಮಾರ ಹೆಗಡೆ ಇದೀಗ ಹಸಿರು ಉದ್ಯಮಿ!

ಶಿರಸಿ: ಎಲ್ಲರಿಗಿಂತಲೂ 10 ವರ್ಷ ಮುಂಚಿತವಾಗಿ ಯೋಚಿಸಿ ಮನಸಲ್ಲಿ ಅಂದುಕೊoಡಿದ್ದನ್ನು ಸಾಧಿಸಿ ತೋರಿಸುವ ಉತ್ತರ ಕನ್ನಡ ಮಾಜಿ ಸಂಸದ ಅನಂತಕುಮಾರ ಹೆಗಡೆ ಇದೀಗ ನ್ಯಾನ್ಯೋ ಟೆಕ್ನಾಲಜಿ ಹಿಂದೆ ಬಿದ್ದಿದ್ದಾರೆ. ರಾಜಕೀಯ ಪಡಸಾಲೆಯಿಂದ ದೂರವಿರುವ ಅವರು ಗ್ರೀನ್ ನ್ಯಾನೋ ಟೆಕ್ ಕ್ಷೇತ್ರದಲ್ಲಿ ಕ್ರಾಂತಿ…

ವಿದೇಶಕ್ಕೆ ಹಾರಿದ ಶಾಸಕ.. ಸ್ಥಳಕ್ಕೆ ದೌಡಾಯಿಸಿದ ಸಂಸದ: ರಾಜಕೀಯೇತರ ಹೋರಾಟಕ್ಕೆ ರಾಜಕಾರಣಿಗಳ ಪ್ರವೇಶ!

ಶಿರಸಿ: ಹೈಟೆಕ್ ಆಸ್ಪತ್ರೆ ವಿಚಾರವಾಗಿ ಹೋರಾಟ ನಡೆಸುತ್ತಿರುವ ಅನಂತಮೂರ್ತಿ ಹೆಗಡೆ ಅವರಿಗೆ ಘಟಾನುಘಟಿಗಳ ಬೆಂಬಲ ಸಿಕ್ಕಿದೆ. ಉಪವಾಸನಿರತ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ `ಆಸ್ಪತ್ರೆ ವಿಷಯವಾಗಿ ನಡೆಯುವ ಎಲ್ಲಾ ಹೋರಾಟದಲ್ಲಿಯೂ ನಾನು ಭಾಗಿಯಾಗುವೆ’ ಎಂದು ಘೋಷಿಸಿದರು. `ಸಮಾಜಕ್ಕೆ…

ಆಸ್ಪತ್ರೆ ಅಪರಾತಪರ | ಹೋರಾಟ ನಿಶ್ಚಿತ.. ಉಪವಾಸ ಖಚಿತ!

ಶಿರಸಿ: ಹೈಟೆಕ್ ಆಸ್ಪತ್ರೆ ಹಣಕಾಸಿನ ಗೊಂದಲ ಬಗೆಹರಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಉಪವಾಸದ ಮೂಲಕ ಧರಣಿ ನಡೆಸುವುದು ಖಚಿತವಾಗಿದೆ. ಈ ಮೊದಲೇ ಘೋಷಿಸಿದಂತೆ ಜನವರಿ 13ರಂದು ಅವರು ಗಾಂಧೀಜಿಯವರನ್ನು ನೆನೆದು ಉಪವಾಸ ನಡೆಸಲಿದ್ದಾರೆ. ಇದಕ್ಕೂ ಮುನ್ನ ಶಿರಸಿ ನಗರದಲ್ಲಿ ಮೆರವಣಿಗೆ…

ಬಿಜೆಪಿ: ಗ್ರಾಮೀಣ ಘಟಕಕ್ಕೆ ಮತ್ತೆ ರಿಕ್ಷಾ ಚಾಲಕನೇ ಅಧ್ಯಕ್ಷ!

ಕಾರವಾರ: ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಸುಭಾಷ ಗುನಗಿ ಆಯ್ಕೆಯಾಗಿದ್ದಾರೆ. ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿರುವ ಸುಭಾಷ ಗುನಗಿ ಅವರನ್ನು ಮತ್ತೊಮ್ಮೆ ಅದೇ ಹುದ್ದೆಯಲ್ಲಿ ಮುಂದುವರೆಸಲಾಗಿದೆ. ರಿಕ್ಷಾ ಚಾಲಕರಾಗಿರುವ ಸುಭಾಷ ಗುನಗಿ ಎಲ್ಲರ ಜೊತೆ ಉತ್ತಮ ಬಾಂದವ್ಯ ಹೊಂದಿದ್ದಾರೆ.…

ಬೆಲೆ ಏರಿಕೆಯೇ ಕಾಂಗ್ರೆಸ್ ಗ್ಯಾರಂಟಿ!

ಹಳಿಯಾಳ: `ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಬೊಕ್ಕಸ ಖಾಲಿಯಾಗುತ್ತಿದೆ. ಇದರೊಂದಿಗೆ ಜನಸಾಮಾನ್ಯರ ಮೇಲೆಯೂ ಬೆಲೆ ಏರಿಕೆ ಬಾಣ ಪ್ರಯೋಗ ನಡೆದಿದೆ’ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು. ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಕಾಂಗ್ರೆಸ್ ವಿರುದ್ಧ…

You cannot copy content of this page