ಕಾಂಗ್ರೆಸ್ ನಾಯಕನ ಆಯಸ್ಸುವೃದ್ಧಿಗೆ ಬಿಜೆಪಿಗನ ಪ್ರಾರ್ಥನೆ
ಶಿರಸಿ: ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎಂದು ಗೋಕರ್ಣದಲ್ಲಿ ಹೋಮ ಮಾಡಿದ್ದ ಬಿಜೆಪಿ ಧುರಿಣ ಅನಂತಮೂರ್ತಿ ಹೆಗಡೆ ಇದೀಗ ತಮ್ಮ ರಾಜಕೀಯ ವಿರೋಧಿ ಮಂಕಾಳು ವೈದ್ಯರ ಆಯಸ್ಸು ವೃದ್ಧಿಗಾಗಿ ಪ್ರಾರ್ಥಿಸಿದ್ದಾರೆ. `ನಾನು ಮಂಕಾಳು ವೈದ್ಯರನ್ನು ಬಹಳ ಗೌರವಿಸುತ್ತೇನೆ. ಹೀಗಾಗಿ ಅವರ ಹುಟ್ಟುಹಬ್ಬಕ್ಕೆ…
ಕನ್ನಡದ ಬಗ್ಗೆ ಶಾಸಕ ದಿನಕರ ಶೆಟ್ಟಿ ಕಾಳಜಿ
ಕಾರವಾರದಲ್ಲಿ ನಡೆದ ಸಭೆಯಲ್ಲಿ ಇಂಗ್ಲಿಷ್ ಮಾತನಾಡುತ್ತಿದ್ದ ಅಧಿಕಾರಿಗಳ ವಿರುದ್ಧ ಕುಮಟಾ ಶಾಸಕ ದಿನಕರ ಶೆಟ್ಟಿ ಗರಂ ಆದರು. `ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ’ ಎಂದು ಸರ್ಕಾರ ಸಾರುವಾಗ ಕನ್ನಡ ಬಿಟ್ಟು ಆಂಗ್ಲ ಭಾಷೆ ಬಳಸುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ಇಬ್ಬರು ಅಧಿಕಾರಿಗಳಿಗೆ…
ಸಚಿವ ಸ್ಥಾನಕ್ಕೆ ಅರ್ಜಿಯನ್ನೇ ಹಾಕದ ಆರ್ ವಿ ದೇಶಪಾಂಡೆ
`ಹಿರಿತನ, ಬುದ್ಧಿಮತ್ತೆ, ಚಾರಿತ್ರ‍್ಯ ಪರಿಗಣಿಸುವುದಾದರೆ ಹಲವರು ಉನ್ನತ ಸ್ಥಾನದಲ್ಲಿರುತ್ತಿದ್ದರು. ಈ ಎಲ್ಲ ಅಂಶಗಳ ಪರಿಗಣನೆ ಈಗ ಉಳಿದಿಲ್ಲ’ ಎನ್ನುವ ಮೂಲಕ ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಸಚಿವ ಸ್ಥಾನ ದೊರೆಯದ ಬಗ್ಗೆ ಪರೋಕ್ಷವಾಗಿ ದೇಶಪಾಂಡೆ ಬೇಸರ ವ್ಯಕ್ತಪಡಿಸಿದರು. `ಮುಖ್ಯಮಂತ್ರಿಗಳು ಹೊಸ…
`ಕಾಂಗ್ರೆಸ್ಸಿಗೆ ಬೇಕು ಯುವ ಶಕ್ತಿ’
ಯಲ್ಲಾಪುರ: ಶಾಸಕ ಶಿವರಾಮ ಹೆಬ್ಬಾರ್ ಅವರ ಪುತ್ರ ವಿವೇಕ್ ಹೆಬ್ಬಾರ್ ಅವರು ಕೆಪಿಸಿಸಿ ಸದಸ್ಯರಾಗಿದ್ದರೂ ಅವರ ಬೆಂಬಲಿಗರಿಗೆ ಹಾಗೂ ಮೂಲ ಕಾಂಗ್ರೆಸಿಗರಿಗೆ ಪಕ್ಷದಲ್ಲಿ`ಶಕ್ತಿ’ ಸಿಕ್ಕಿಲ್ಲ. ಇದರ ಪರಿಣಾಮವಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಬಹುದೂರ ಸಾಗಿದ್ದು, ಅದನ್ನು ಸರಿಪಡಿಸುವ ಕಾರ್ಯ ಇನ್ನೂ…
ಸರ್ಕಾರಕ್ಕೆ ಸಲಹೆ ನೀಡಿದ ಹಿರಿಯ ಶಾಸಕ
ಆಡಳಿತದಲ್ಲಿ ಪಾರದರ್ಶಕತೆ, ಸರಳತೆ ಹಾಗೂ ಸಕಾಲದಲ್ಲಿ ನಾಗರಿಕ ಸೇವೆ ನೀಡುವ ಬಗ್ಗೆ 39 ಇಲಾಖೆಗಳಿಗೆ ಸಂಬoಧಿಸಿ 7 ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಿರುವುದಾಗಿ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಈ ವರದಿಯಲ್ಲಿ ಒಟ್ಟು 5039 ಶಿಫಾರಸ್ಸುಗಳನ್ನು ಮಾಡಲಾಗಿದೆ…
ಕಾಂಗ್ರೆಸ್ ವಿರುದ್ಧ ಬಿಜೆಪಿಗರ ಪೋಸ್ಟರ್ ಅಭಿಯಾನ
ಯಲ್ಲಾಪುರ: ತುರ್ತು ಪರಿಸ್ಥಿತಿ ಘೋಷಣೆಗೆ ಕಾರಣವಾಗಿದ್ದ ಕಾಂಗ್ರೆಸ್ ವಿರುದ್ಧ ಬಿಜೆಪಿಗರು ಮಂಗಳವಾರ `ಪೋಸ್ಟರ್ ಅಭಿಯಾನ’ ನಡೆಸಿದರು. ಬಿಜೆಪಿ ಯುವ ಮೋರ್ಚಾ ಘಟಕದವರು ಈ ಅಭಿಯಾನ ನಡೆಸಿದ್ದು, ಕಾಂಗ್ರೆಸ್ ಕುರಿತು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಜತ ಬದ್ದಿ ಕಿಡಿಕಾರಿದರು. ಪ್ರಮುಖರಾದ ನಯನ ಇಂಗಳೆ,…
ಅಧಿಕಾರಿಗಳಿಗೆ ಚಳಿ ಬಿಡಿಸಿದ ಆರ್ ವಿ ದೇಶಪಾಂಡೆ
ಜೋಯಿಡಾ: ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅಧಿಕಾರಿಗಳ ಸಭೆ ನಡೆಸಿದ್ದು, ಕೆಲಸ ಮಾಡದೇ ಕಾಲಹರಣ ಮಾಡುತ್ತಿರುವ ಅಧಿಕಾರಿಗಳಿಗೆ ಚಳಿ ಬಿಡಿಸಿದರು. `ತೇಲೋಲಿ-ಗೋಡಶೇತ್ ಪಿ.ಎಮ್.ಜಿ.ಎಸ್‌ವೈ ರಸ್ತೆ ಕಾಮಗಾರಿ ಮುಗಿದಿಲ್ಲ. ವೈಯಕ್ತಿಕ ಜಾಗದ ಸಮಸ್ಯೆ ಇರುವುದರಿಂದ ಕಾಮಗಾರಿ ತಡೆಯಾಗಿದೆ. ಇದನ್ನು…
ಬಿಜೆಪಿ ಶಾಸಕರ ನಡೆ ನಿಗೂಢ: ಕುಮಟಾ ಕ್ಷೇತ್ರ ಜೆಡಿಎಸ್ ಪಾಲು?
ಹೊನ್ನಾವರ: ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಮೈತ್ರಿ ಲೋಕಸಭಾ ಚುನಾವಣೆಯಲ್ಲಿ ಯಶಸ್ವಿ ಕಂಡಿದ್ದು, ಜೆಡಿಎಸ್‌ನ ಸಂಸದ ಹೆಚ್.ಡಿ ಕುಮಾರಸ್ವಾಮಿ ಅವರು ಮೋದಿ ಜೊತೆ ಸೇರಿ ಯೋಗ್ಯ ಖಾತೆ ನಿಭಾಯಿಸುತ್ತಿದ್ದಾರೆ. ಈ ನಡುವೆ ಕ್ಷೇತ್ರದ ಬಿಜೆಪಿ ಶಾಸಕ ದಿನಕರ ಶೆಟ್ಟಿ ಸದ್ಯ…
ಆಡಳಿತ ಪಕ್ಷದ ಶಾಸಕರೇ ಸಭೆಗೆ ಗೈರು: ಭಿನ್ನಮತದ ಸುದ್ದಿ ಇನ್ನಷ್ಟು ಜೋರು!
ಕಾಂಗ್ರೆಸ್ ವಲಯದಲ್ಲಿ ಶಾಸಕರುಗಳ ನಡುವೆ ಭಿನ್ನಮತ ಶುರುವಾಗಿದೆ. ಇದಕ್ಕೆ ಕಾರವಾರದಲ್ಲಿ ನಡೆದ ಕೆಡಿಪಿ ಸಭೆಯೇ ನಿದರ್ಶನ. ಈ ಸಭೆಯಲ್ಲಿ ಆಡಳಿತ ಪಕ್ಷದ ಶಾಸಕರೇ ಇರಲಿಲ್ಲ. ಕಾಂಗ್ರೆಸ್ ಪಕ್ಷ ವಿಧಾನಸಭೆಯಲ್ಲಿ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಿಂದ ಆರ್ ವಿ ದೇಶಪಾಂಡೆ ಮತ್ತೊಮ್ಮೆ ಮಂತ್ರಿಯಾಗಲಿದ್ದಾರೆ…
ಹೊನ್ನಾವರ ಕಾಂಗ್ರೆಸಿಗರಿಂದ ಸಾಮೂಹಿಕ ರಾಜೀನಾಮೆ
ಹೊನ್ನಾವರ: ಪಕ್ಷದ ನಿಷ್ಟಾವಂತ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ಹೊನ್ನಾವರದ ಅನೇಕ ಕಾಂಗ್ರೆಸಿಗರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ಸದಸ್ಯತ್ವ ಹೊಂದದೆ ಇದ್ದವರಿಗೆ ಪಕ್ಷದಲ್ಲಿ ಸ್ಥಾನ ನೀಡುತ್ತಿರುವುದನ್ನು ಅವರೆಲ್ಲರೂ ವಿರೋಧಿಸಿದ್ದಾರೆ. `ಈ ಹಿಂದೆ ಬಿಜೆಪಿ ಪಕ್ಷದವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಾರೆ ಎಂದು…







