ಟಾಕ್ಟರ್ ಟೈಯರ್ ಸ್ಪೋಟ: ಆಸ್ಪತ್ರೆ ಸೇರಿದ ಗಾಯಾಳು ಸಾವು!
ಶಿರಸಿಯಲ್ಲಿ ಗುಜುರಿ ಸಾಮಗ್ರಿ ಒಯ್ಯುವ ಟಾಕ್ಟರ್ ಟೈಯರ್ ಸ್ಪೋಟಗೊಂಡ ಪರಿಣಾಮ ಸೋಮವಾರ ಸಂಜೆ ಇಬ್ಬರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದು, ಆ ಪೈಕಿ ಒಬ್ಬರು ಸಾವನಪ್ಪಿದ್ದಾರೆ. `ನಾಗಲಿಂಗ ಟ್ರೇರ‍್ಸ’ ಎಂಬ ಟಾಕ್ಟರಿನವರು ಶಿರಸಿ ಹುಬ್ಬಳ್ಳಿ ರಸ್ತೆಯಲ್ಲಿರುವ ಸುಂಕದ ವಾಲ್ಕ್ ನೈಸಿಂಗ್ ಅಂಗಡಿಗೆ ಬಂದಿದ್ದರು.…
ಕಾರವಾರ ಇದೀಗ ದಗ ದಗ!
ಕಾರವಾರ ನಗರದಲ್ಲಿ ಎರಡು ದಿನಗಳಿಂದ ವ್ಯಾಪಕ ಪ್ರಮಾಣದಲ್ಲಿ ಬಿಸಿಲು ಕಾಡುತ್ತಿದೆ. ಸಾವಂತವಾಡದಲ್ಲಿ ಮಾ 11 ಹಾಗೂ 12ರಂದು 42.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಈ ಪ್ರಮಾಣದ ಬಿಸಿಲು ಬೀದರ್-ಬಾಗಲಕೋಟೆ ಭಾಗದಲ್ಲಿ ಸಹ ಇಲ್ಲ. ಹೀಗಾಗಿ ಈ ಎರಡು ದಿನದ ಅವಧಿಯಲ್ಲಿ…
ಬಡ ರೋಗಿಗಳಿಗೆ ಆರ್ಥಿಕ ನೆರವು: ಮುಖ್ಯಮಂತ್ರಿಗೆ ಪತ್ರ ಬರೆದ ಮಾಜಿ ಶಾಸಕಿ
ಬೆನ್ನು ಮೂಳೆ ಕಾನ್ಸರಿನಿಂದ ಬಳಲುತ್ತಿರುವ ದಿನಕರ ಶೆಟ್ಟಿ ಅವರಿಗೆ ಮುಖ್ಯಮಂತ್ರಿ ಪರಿಹಾರ ಯೋಜನೆ ಅಡಿ ನೆರವು ನೀಡುವಂತೆ ಕುಮಟಾದ ಮಾಜಿ ಶಾಸಕಿ ಶಾರದಾ ಶೆಟ್ಟಿ ಶಿಫಾರಸ್ಸು ಪತ್ರ ನೀಡಿದ್ದಾರೆ. ಈ ಪತ್ರವನ್ನು ಮುಖ್ಯಮಂತ್ರಿ ಕಚೇರಿಗೆ ಜೋಪಾನವಾಗಿ ತಲುಪಿಸಿ, ಯೋಜನೆಯ ಪ್ರಯೋಜನ ಪಡೆಯುವಂತೆ…
ಆಳ ಸಮುದ್ರದಲ್ಲಿ ಬೋಟುಗಳ ತಾಲೀಮು: ನಿಷೇಧಾಜ್ಞೆ ಮೀರಿ ಮೀನುಗಾರರ ಪ್ರತಿಭಟನೆ!
ನೂರಾರು ದೋಣಿಗಳ ಮೂಲಕ ಆಳ ಸಮುದ್ರಕ್ಕೆ ತೆರಳಿದ ಮೀನುಗಾರರು ಅಂಕೋಲಾ ಅರಬ್ಬಿ ಸಮುದ್ರದ ನಡುವೆ ಬೋಟುಗಳ ತಾಲೀಮು ನಡೆಸಿ, ವಾಣಿಜ್ಯ ಬಂದರು ನಿರ್ಮಾಣ ಕಾರ್ಯಕ್ಕೆ ವಿರೋಧವ್ಯಕ್ತಪಡಿಸಿದರು. ಕಡಲತೀರದಲ್ಲಿಯೂ ಮಾನವ ಸರಪಳಿ ರಚಿಸಿ ಯೋಜನೆ ವಿರುದ್ಧ ಧಿಕ್ಕಾರ ಕೂಗಿದರು ಅಂಕೋಲಾದ ಕೇಣಿಯಲ್ಲಿ ಸರ್ಕಾರ…
ಎಂಜಲು ಕಾಸಿಗೆ ಆಸೆಪಟ್ಟ ಪೊಲೀಸ್ ಕಾನ್ಸ್ಟೇಬಲ್!
ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿದ್ದ ಸವಾರನನ್ನು ತಡೆದು ಪ್ರಕರಣ ದಾಖಲಿಸುವುದಾಗಿ ಬೆದರಿಸಿದ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ಸಿಬ್ಬಂದಿ ಚಂದ್ರಶೇಖರ್ ಹುದ್ದಾರ್ ಕೊನೆಗೆ ಎಂಜಲು ಕಾಸಿಗೆ ಕೈ ಒಡ್ಡಿದ್ದಾರೆ. ಚಂದ್ರಶೇಖರ್ ಹುದ್ದಾರ್ ಹಣ ಸ್ವೀಕರಿಸಿದ ವಿಡಿಯೋ ವೈರಲ್ ಆದ ಹಿನ್ನಲೆ…
ಪದ್ಮಶ್ರೀ ಹೆಸರಿನಲ್ಲಿ ವರ್ಷವಿಡೀ ವನ ಚೇತನ!
ಪದ್ಮಶ್ರೀ ಸುಕ್ರಿ ಗೌಡ ಹಾಗೂ ತುಳಸಿ ಗೌಡ ಅವರ ನೆನಪನ್ನು ಶಾಶ್ವತವಾಗಿರಲು ಮಂಗಳೂರಿನ `ಸಹ್ಯಾದ್ರಿ ಸಂಚಯ’ ತಂಡದವರು ಉತ್ತರ ಕನ್ನಡ ಜಿಲ್ಲೆಯಲ್ಲಿ ವರ್ಷವಿಡೀ `ವನ ಚೇತನ’ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಈ ಇಬ್ಬರು ಸಾಧಕರ ಆದರ್ಶಗಳ…
ಹ್ವಾಯಿ ಇಲ್ಲಿ ಕೇಣಿ: 1 ಲಕ್ಷದ ಬಾಂಡ್ ಕೊಟ್ಟವರಿಗೆ ಮಾತ್ರ ಪ್ರತಿಭಟನೆ ಅವಕಾಶ!
ಅಂಕೋಲಾ ತಾಲೂಕಿನ ಕೇಣಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಹೀಗಾಗಿ ಇಲ್ಲಿ ಪ್ರತಿಭಟನೆಗೆ ಯಾವುದೇ ಅವಕಾಶವಿಲ್ಲ. ಅದಾಗಿಯೂ ಮೀನುಗಾರರು ಪ್ರತಿಭಟನೆಗೆ ಪಟ್ಟು ಹಿಡಿದ ಹಿನ್ನಲೆ ಮಾರ್ಚ 12ರಂದು ಬೇಲಿಕೇರಿಯಲ್ಲಿ ಪೊಲೀಸ್ ಭದ್ರತೆಯ ಜೊತೆ ಪ್ರತಿಭಟನೆ ನಡೆಸಲು ಅವಕಾಶ ಕೊಡಲಾಗಿದೆ. ಪ್ರತಿಭಟನೆಗೂ…
ಉಸಿರುಗಟ್ಟಿಸುವ ಬಿಸಿ ಗಾಳಿ: ಆರೋಗ್ಯ ಕಾಪಾಡುವುದೇ ದೊಡ್ಡ ಸವಾಲು!
ಉತ್ತರ ಕನ್ನಡ ಜಿಲ್ಲೆಯ ವಾತಾವರಣದಲ್ಲಿ ಈಚೆಗೆ ಸಾಕಷ್ಟು ಬದಲಾವಣೆಗಳಾಗಿದೆ. ನಿತ್ಯ ಬೆಳಗ್ಗೆ 11 ಗಂಟೆ ನಂತರದ ಉಷ್ಣತೆಗೆ ಜನ ತತ್ತರಿಸಿದ್ದಾರೆ. ಮಧ್ಯಾಹ್ನ 3 ಗಂಟೆಯವರೆಗೂ ಭಾರೀ ಪ್ರಮಾಣದ ಬಿಸಿಲು ಬರುತ್ತಿದ್ದು, ಕರಾವಳಿ ಭಾಗದ ಬಹುತೇಕರಿಗೆ ಮನೆಯಿಂದ ಹೊರಬರುವುದೇ ಸಮಸ್ಯೆಯಾಗಿದೆ! `ಕೆಲವು ದಿನಗಳಿಂದ…
ಉತ್ತರ ಕನ್ನಡ: 18 ಮಂಗಗಳ ಅಸಹಜ ಸಾವು!
ಮಂಗನ ಕಾಯಿಲೆ ಕುರಿತು ಉತ್ತರ ಕನ್ನಡ ಜಿಲ್ಲಾಡಳಿತ ಸಾಕಷ್ಟು ಮುನ್ನಚ್ಚರಿಕೆವಹಿಸಿದ್ದು, ಅಸಹಜ ಮಂಗಗಳ ಸಾವಿನ ಬಗ್ಗೆ ಅಧ್ಯಯನ ನಡೆಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವರ್ಷ 18 ಮಂಗಗಳು ಅಸಹಜ ರೀತಿಯಲ್ಲಿ ಸಾವನಪ್ಪಿರುವುದು ವರದಿಯಾಗಿದೆ. ಇದರೊಂದಿಗೆ ಶಿರಸಿಯ ವ್ಯಕ್ತಿಯೊಬ್ಬನಲ್ಲಿ ಮಂಗನ ಕಾಯಿಲೆ…
ಈ ಊರುಗಳಲ್ಲಿ ಇನ್ನೂ 5 ದಿನ ನಿಷೇಧಾಜ್ಞೆ!
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಿವಿಧ ಕಡೆ ಮಾರ್ಚ 11ರಿಂದ 15ರವೆರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭಾವಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳು ಮತ್ತು ಪುರಸಭೆ ಅಂಕೋಲಾ ವ್ಯಾಪ್ತಿಗೊಳಪಟ್ಟ ಕೇಣಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೆ ಬರಲಿದೆ. Geotechnical Investigation Work ಕಾಮಗಾರಿ…















