6

ನವರಾತ್ರಿ | ದಾಂಡಿಯಾ ನೋಡಲು ಹೋದವನ ಮೇಲೆ ರಾಡಿನಿಂದ ಹಲ್ಲೆ

ಕಾರವಾರ: ಡೆಕೊರೇಶನ್ ಕೆಲಸ ಮಾಡುವ ಅಭಿಷೇಕ ಖಾರ್ವಿ (18) ಎಂಬಾತರ ಮೇಲೆ ಪ್ರಣವ ಬಾಂದೇಕರ್ ಎಂಬಾತರು ಕಬ್ಬಿಣದ ರಾಡಿನಿಂದ ಹೊಡೆದಿದಿದ್ದು, ಅಭಿಷೇಕ ಖಾರ್ವಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರ್ಸಾ ಮೂಲದ ಅಭಿಷೇಕ ಖಾರ್ವಿ ಪ್ರಸ್ತುತ ಖಾರ್ವಿವಾಡದಲ್ಲಿ ವಾಸವಾಗಿದ್ದಾರೆ. ಅಕ್ಟೊಬರ್ 6 ರಾತ್ರಿ ಅವರು ಖಾರ್ವಿವಾಡದಿಂದ ಕಳಸವಾಡದ ದುರ್ಗಾದೇವಿ ದೇವಾಲಯದ ಬಳಿ ಬಂದಿದ್ದರು. ಅಲ್ಲಿಂದ ಮುಂದೆ ದಾಂಡಿಯಾ ನೋಡಲು ಅವರು ತೆರಳುತ್ತಿದ್ದರು.

ಆಗ ಸದಾಶಿವಗಡದ ಪ್ರಣವ ಬಾಂದೇಕರ್ 5-6 ಜನರ ಜೊತೆ ಜಗಳ ಮಾಡುತ್ತಿದ್ದು, ಇದನ್ನು ನೋಡಿದ ಅಭಿಷೇಕ್ `ಸುಮ್ಮನೆ ಇಲ್ಲಿ ಯಾಕೆ ಜಗಳ ಮಾಡುತ್ತೀಯಾ?’ ಎಂದು ಪ್ರಶ್ನಿಸಿದ್ದರು. ಇದರಿಂದ ಸಿಟ್ಟಾದ ಪ್ರಣವ ಬಾಂದೇಕರ್ `ಅದೆಲ್ಲ ನಿನಗೆ ಏಕೆ ಬೇಕು?’ ಎಂದು ಪ್ರಶ್ನಿಸಿ ಕೆಟ್ಟದಾಗಿ ಬೈದಿದ್ದು, ಜೊತೆಗೆ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಗಾಯಪಡಿಸಿದ್ದಾರೆ.

ಮತ್ತಷ್ಟು ಹೊಡೆಯಲು ಬಂದಾಗ ಅಲ್ಲಿದ್ದವರು ತಪ್ಪಿಸಿ ಗಾಯಗೊಂಡ ಅಭಿಷೇಕರನ್ನು ಆಸ್ಪತ್ರೆಗೆ ದಾಖಲಿಸಿದರು. ಕಾರವಾರ ನಗರಠಾಣೆ ಪೊಲೀಸರು ಆಸ್ಪತ್ರೆಗೆ ತೆರಳಿ ಗಾಯಾಳುವನ್ನು ವಿಚಾರಿಸಿದರು. ತನ್ನ ತಾಯಿ ಜೊತೆ ಚರ್ಚಿಸಿದ ನಂತರ ಅಭಿಷೇಕ್ ವಿವರ ನೀಡಿದ್ದು, ಪೊಲೀಸರು ದೂರು ದಾಖಲಿಸಿಕೊಂಡರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page