6

ನನ್ನ ಸಾವಿಗೆ ಹಿರಿಯ ಅಧಿಕಾರಿಗಳೇ ಕಾರಣ: ಅಬಕಾರಿ ವಾಹನ ಚಾಲಕನಿಂದ ಆತ್ಮಹತ್ಯೆ ಬೆದರಿಕೆ!

ಶಿರಸಿ: ಮದ್ಯ ಸೇವಿಸಿ ಕಚೇರಿಗೆ ಬರುತ್ತಿದ್ದ ವಾಹನ ಚಾಲಕನಿಗೆ ಹಿರಿಯ ಅಧಿಕಾರಿಗಳು ಬುದ್ಧಿಮಾತು ಹೇಳಿದ್ದು, ಇದೇ ವಿಷಯವಾಗಿ ರೊಚ್ಚಿಗೆದ್ದ ಆತ ಮೇಲಾಧಿಕಾರಿಗಳ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ ಎಂದು ಅರಿತ ಅಧಿಕಾರಿಗಳು ತಮ್ಮದೇ ವಾಹನ ಚಾಲಕನ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ವಾಹನ ಚಾಲಕರಾಗಿರುವ ಡಿ ಎಂ ಗಾಯಕವಾಡ ಎಂಬಾತರು ಮದ್ಯ ಸೇವಿಸಿ ಕಚೇರಿಗೆ ಆಗಮಿಸುತ್ತಿದ್ದು, ಇದರಿಂದ ಅಲ್ಲಿನ ನೌಕರರು ಬೇಸತ್ತಿದ್ದರು. ಎಷ್ಟು ಬಾರಿ ಹೇಳಿದರೂ ಗಾಯಕವಾಡ ಅವರು ಕುಡಿಯುವುದನ್ನು ಬಿಟ್ಟಿರಲಿಲ್ಲ. ಹೀಗಾಗಿ ಅಬಕಾರಿ ಉಪಅಧೀಕ್ಷಕ ಶಿವಪ್ಪ ಎಚ್ ಎಸ್ ಗಾಯಕವಾಡರ ವರ್ತನೆಯ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಆ ವರದಿಯನ್ನು ಸಹ ಮೇಲಧಿಕಾರಿಗಳಿಗೆ ರವಾನಿಸಿದ್ದರು.

ಈ ಹಿನ್ನಲೆ ಚಾಲಕನ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಪ್ರಾಧಿಕಾರದಿಂದ ಅಬಕಾರಿ ಉಪನಿರೀಕ್ಷಕರಿಗೆ ಸೂಚನೆ ಬಂದಿತ್ತು. ಸೆ 19ರಂದು ಚಾಲಕ ಡಿ ಎಂ ಗಾಯಕವಾಡ ಅವರಿಗೆ ಅಬಕಾರಿ ಉಪನಿರೀಕ್ಷಕ ಶಿವಪ್ಪ ಎಚ್ ಎಸ್ ಅವರು ನೋಟಿಸ್ ನೀಡಿದ್ದರು. ನೋಟಿಸ್ ನೋಡಿ ಸಿಟ್ಟಾದ ಚಾಲಕ `ನಾನು ಸಾವಿಗೆ ಶರಣಾಗುವೆ’ ಎಂದು ಕಾರವಾರ ವಿಳಾಸದೊಂದಿಗೆ ಅಬಕಾರಿ ಆಯುಕ್ತರಿಗೆ ಪತ್ರ ರವಾನಿಸಿದ್ದಾರೆ. `ಹಿರಿಯ ಅಧಿಕಾರಿಗಳ ಕಿರುಕುಳದಿಂದ ನಾನು ಸಾವನಪ್ಪುತ್ತೇನೆ. ನನ್ನ ಸಾವಿಗೆ ಹಿರಿಯ ಅಧಿಕಾರಿಗಳೇ ಕಾರಣ’ ಎಂದು ಪತ್ರದ ಮೂಲಕ ಬೆದರಿಕೆ ಒಡ್ಡಿದ್ದಾರೆ!

ಇದನ್ನು ಅರಿತ ಶಿವಪ್ಪ ಅವರು ಅದೇ ದಿನ ರಾತ್ರಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ಅಕ್ಟೊಬರ್ 7ರಂದು ಆತ್ಮಹತ್ಯೆ ಬೆದರಿಕೆ ಒಡ್ಡಿದವನ ವಿರುದ್ಧ ಪ್ರಕರಣ ದಾಖಲಾಗಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page