6

ಕಟ್ಟಡದಿಂದ ಬಿದ್ದ ಕಾರ್ಮಿಕ ಸಾವು: ಜಾಗದ ಮಾಲಕನ ಜೊತೆ ಗುತ್ತಿಗೆದಾರನ ವಿರುದ್ಧವೂ ದೂರು

ಕಾರವಾರ: ಸದಾಶಿವಗಡದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಕಾರ್ಮಿಕ ಕಟ್ಟಡದ ಮೇಲ್ಬಾಗದಿಂದ ಆಯತಪ್ಪಿ ನೆಲಕ್ಕೆ ಬಿದ್ದು ಸಾವನಪ್ಪಿದ್ದಾನೆ. ಹಳಿಯಾಳ ಮೂಲದ ಪ್ರಸ್ತುತ ಶಿರವಾಡದಲ್ಲಿ ವಾಸವಾಗಿದ್ದ ಸಯ್ಯದ ಸಾಬ್ ಮುಜಾವರ್ (38) ಸಾವನಪ್ಪಿದವ.

ಸದಾಶಿವಗಡದ ಸುಶೀಲ ಶಾಂತರಾಮ ದೇಸಾಯಿ ತಮ್ಮ ಜಾಗದಲ್ಲಿ ಕಟ್ಟಡ ನಿರ್ಮಿಸುತ್ತಿದ್ದರು. ಈ ಕೆಲಸವನ್ನು ಗುತ್ತಿಗೆ ಆಧಾರದಲ್ಲಿ ಅರವ್ ಬಳಿಯ ರಾಹುಲ್ ವಿಠ್ಠಲ ಪವಾರ್ ಎಂಬಾತರಿಗೆ ನೀಡಿದ್ದರು. ಸೆ 8ರಂದು ಗೌಂಡಿ ಕೆಲಸ ಮಾಡುವ ಸಯ್ಯದ ಸಾಬ್ ಮುಜಾವರ್ ಕೂಲಿ ಕೆಲಸಕ್ಕಾಗಿ ಅಲ್ಲಿ ತೆರಳಿದ್ದ. ಕಟ್ಟಡದ ಮೇಲ್ಬಾಗಕ್ಕೆ ತೆರಳಿದ ಆತ ನೆಲಕ್ಕೆ ಅಪ್ಪಳಿಸಿ ತಲೆ ಹಾಗೂ ಎದೆಗೆ ಗಾಯ ಮಾಡಿಕೊಂಡು ಸಾವನಪ್ಪಿದ್ದಾನೆ. ಕಟ್ಟಡ ಕಾರ್ಮಿಕನಿಗೆ ಅಗತ್ಯವಿರುವ ಸಾಧನ-ಸಲಕರಣೆ ನೀಡದಿರುವುದೇ ಸಯ್ಯದ ಸಾಬ್ ಮುಜಾವರ್ ಸಾವಿಗೆ ಕಾರಣ ಎಂಬುದು ಸಯ್ಯದರ ಪತ್ನಿ ವಾಜೀದಾರ ದೂರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page