6

ಒಬ್ಬನ ಬೈಕ್ ಪಂಚರ್.. ಇನ್ನೊಬ್ಬನ ಬೈಕ್ ಎಕ್ಸಿಡೆಂಟ್.. ಶಿಖಾರಿ ಅಸ್ಲಾಂ’ಗೆ 5 ಲಕ್ಷ ರೂ ನಷ್ಟ!

ಹಳಿಯಾಳ: ಸದಾಶಿವನಗರದ ಅಸ್ಲಾಂ ಶಿಖಾರಿ ಅವರು ಬೈಕಿನಲ್ಲಿರಿಸಿದ್ದ 5 ಲಕ್ಷ ರೂ ಹಣ ಕಳ್ಳರ ಪಾಲಾಗಿದೆ.

ಅಕ್ಟೊಬರ್ 22ರಂದು ಜಮೀನು ಖರೀದಿ ಮಾಡುವುದಕ್ಕಾಗಿ ಅವರು ಬ್ಯಾಂಕಿನಿoದ ಹಣ ಪಡೆದಿದ್ದರು. ಮೊದಲು ಕಾರ್ಪೋರೇಶನ್ ಬ್ಯಾಂಕಿಗೆ ಹೋಗಿ 3 ಲಕ್ಷ ರೂ ಪಡೆದ ಅವರು ಅದನ್ನು ಕೆಂಪು ಬಣ್ಣದ ಕ್ಯಾರಿಬ್ಯಾಗಿನಲ್ಲಿ ಹಾಕಿ ಬೈಕಿನಲ್ಲಿರಿಸಿದ್ದರು. ಅದಾದ ಮೇಲೆ ಕುಸ್ತಿ ಅಖಾಡವಿರುವ ಕೆನರಾ ಬ್ಯಾಂಕಿನಿoದ 1 ಲಕ್ಷ ರೂ ಹಾಗೂ ಬಸ್ ನಿಲ್ದಾಣ ರಸ್ತೆಯ ಎಸ್‌ಬಿಐ ಬ್ಯಾಂಕಿನಿAದ 1 ಲಕ್ಷ ರೂ ಹಣ ಪಡೆದು ಅದೇ ಕವರಿನಲ್ಲಿ ಹಾಕಿದ್ದರು.

ಇದಾದ ಮೇಲೆ ಮನೆಗೆ ಹೋಗಲು ನಿರ್ಧರಿಸಿ ವಾಹನ ಏರಿದಾಗ ಬೈಕ್ ಪಂಚರ್ ಆಗಿರುವುದು ಗಮನಕ್ಕೆ ಬಂದಿತು. ಬೈಕನ್ನು ತಳ್ಳಿಕೊಂಡು ಕೆಡಿಸಿಸಿ ಬ್ಯಾಂಕ್ ಬಳಿಯ ಸೈಕಲ್ ಗ್ಯಾರೇಜ್’ಗೆ 11.30ರ ವೇಳೆಗೆ ತಲುಪಿದರು. ಬೈಕಿಗೆ ಗಾಳಿ ಹಾಕುತ್ತಿರುವಾಗ ಬೇರೊಬ್ಬರ ಬೈಕ್ ಅಪಘಾತವಾಗಿದ್ದು, ಪಂಚರ್ ಅಂಗಡಿಯ ಸತೀಶ ರಜಪೂತ ಜೊತೆ ಅಸ್ಲಾಂ ಸಹ ಅವರ ಸಹಾಯಕ್ಕೆ ಹೋದರು. ಮರಳಿ ಬಂದು ನೋಡಿದಾಗ ಅವರ ಬೈಕ್ ಟ್ಯಾಂಕಿನ ಕವರಿನಲ್ಲಿದ್ದ 5 ಲಕ್ಷ ರೂ ಹಣ ಕಣ್ಮರೆಯಾಗಿತ್ತು.

ಅಕ್ಕ ಪಕ್ಕ ಎಲ್ಲಾ ಕಡೆ ಹಣವನ್ನು ಹುಡುಕಿದರು. ಆದರೆ, ಎಲ್ಲಿಯೂ ಹಣ ಸಿಗಲಿಲ್ಲ. ಕಳ್ಳರ ಬಗ್ಗೆಯೂ ಸುಳಿವು ಗೊತ್ತಾಗಿಲ್ಲ. ಹೀಗಾಗಿ ಅವರು ಪೊಲೀಸ್ ದೂರು ನೀಡಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page