6

ಪತ್ನಿ ಹೆಸರಲ್ಲಿ ಭೂಮಿ ಖರೀದಿಸಿದ್ದ ಬೆಂಗಳೂರು ಉದ್ಯಮಿ: ದುಷ್ಕರ್ಮಿಯಿಂದ ಬೆಳೆ ನಾಶ!

ಕುಮಟಾ: ಬೆಂಗಳೂರಿನ ರಾಜಾಜಿನಗರದ ದೀಪಕ ಗಣೇಯಾನ ಗೋಕರ್ಣದಲ್ಲಿ ಆಸ್ತಿ ಹೊಂದಿದ್ದು, ಸಾಣೆಕಟ್ಟಾದ ವಿಠ್ಠಲ ನಾಯಕ ಆ ಭೂಮಿಯಲ್ಲಿನ ವಾಣಿಜ್ಯ ಬೆಳೆಗಳನ್ನು ನಾಶ ಮಾಡಿದ್ದಾರೆ.

2007-8ರ ಸಾಲಿನಲ್ಲಿ ದೀಪಕ ಗಣೇಯಾನ ಅವರು ತಮ್ಮ ಪತ್ನಿ ರೇಖಾ ಡಿ ಗಣಿಯನ್ ಹೆಸರಿನಲ್ಲಿ ಗೋಕರ್ಣದಲ್ಲಿ ಭೂಮಿ ಖರೀದಿಸಿದ್ದರು. ಭೂಮಿಯ ಸುತ್ತ ಕಂಪೌoಡ್ ನಿರ್ಮಿಸಿ ಒಳಭಾಗದಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆದಿದ್ದರು. ಜೊತೆಗೆ ಒಂದಷ್ಟು ಗಿಡ-ಮರಗಳನ್ನು ಬೆಳೆಸಿದ್ದರು.

ಸಾಣೆಕಟ್ಟಾದ ವಿಠ್ಠಲ ಮಹಾದೇವ ನಾಯಕ ಹಾಗೂ ಇತರರು ಸೇರಿ ಅಕ್ಟೊಬರ್ 15ರಂದು ಆ ಭೂಮಿಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಯಂತ್ರಗಳನ್ನು ಬಳಸಿ ಕಪೌಂಡ್ ಒಡೆದಿದ್ದಾರೆ. ಜೊತೆಗೆ ಅಲ್ಲಿದ್ದ ಬೆಳೆಗಳನ್ನು ನಾಶ ಮಾಡಿದ್ದಾರೆ. ಇದರಿಂದ ದೀಪಕ ಗಣೇಯಾನ ಅವರಿಗೆ ಅಂದಾಜು 7 ಲಕ್ಷ ರೂ ಹಾನಿಯಾಗಿದೆ. ಹಾನಿ ಮಾಡಿದವರ ವಿರುದ್ಧ ಅವರು ಪೊಲೀಸ್ ದೂರು ನೀಡಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page