6

ಅರಣ್ಯಾಧಿಕಾರಿ ನಡೆಗೆ ಅತಿಕ್ರಮಣದಾರರ ಆಕ್ರೋಶ

ಸಿದ್ದಾಪುರ: ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಗಳಲ್ಲಿ ಅಸಮರ್ಪಕ ಜಿಪಿಎಸ್ ಆಗಿರುವ ಕುರಿತು ಅತಿಕ್ರಮಣದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡ ರೈತರ ಮೇಲೆ ಅರಣ್ಯ ಸಿಬ್ಬಂದಿ ದಬ್ಬಾಳಿಕೆ ನಡೆಸುತ್ತಿರುವ ಬಗ್ಗೆಯೂ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ಬಾಲಭವನದಲ್ಲಿ ನಡೆದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಸಭೆಯಲ್ಲಿ ಅನೇಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. `ಸಿದ್ದಾಪುರ ತಾಲೂಕಿನಲ್ಲಿ 6,915 ಜಿಪಿಎಸ್ ಮೇಲ್ಮನವಿ ಉಚಿತವಾಗಿ ಮಾಡುವುದಾಗಿ ರವೀಂದ್ರ ನಾಯ್ಕ ಘೋಷಿಸಿದರು. ಅಸಮರ್ಪಕ ಜಿಪಿಎಸ್‌ಗೆ ಕಾನೂನಾತ್ಮಕ ಹೋರಾಟ ಮಾಡುವ ಬಗ್ಗೆ ತಿಳಿಸಿದಾಗ ಅದನ್ನು ಅರಣ್ಯವಾಸಿಗಳು ಚಪ್ಪಾಳೆ ಮೂಲಕ ಸ್ವಾಗತಿಸಿದರು.

`ತಲಾತಲಾತರದಿಂದ ಸಾಗುವಳಿ ಮಾಡಿದ ಕೋಟಿಗೆ, ಅಂಗಳ, ಗೊಬ್ಬರ ಗುಂಡಿ, ಗಿಡ-ಮರ ಮತ್ತು ಹುಲ್ಲುಗಾವಲು ಕ್ಷೇತ್ರವನ್ನು ಜಿಪಿಎಸ್’ನಿಂದ ಹೊರಗಿಡಲಾಗಿದೆ’ ಎಂದು ರೈತ ಹೋರಾಟಗಾರ ವೀರಭದ್ರ ನಾಯ್ಕ ಆಕ್ರೋಶವ್ಯಕ್ತಪಡಿಸಿದರು. ಹರಿಹರ ನಾಯ್ಕ ಓಂಕಾರ್, ಟಿ.ಎಮ್ ನಾಯ್ಕ ಅವರಗುಡ್ಡ, ಮಧುಕೇಶ್ವರ ನಾಯ್ಕ ಜೋಗಿಮನೆ, ಮಹಾಬಲೇಶ್ವರ ಗೌಡ ಸುಳಗಾರ್ ಇನ್ನಿತರರು ಇದಕ್ಕೆ ಧ್ವನಿಯಾದರು.

ಈ ಸಭೆಯಲ್ಲಿ ಜಯಂತ ನಾಯ್ಕ ಕಾನಗೋಡ, ವೆಂಕಟರಮಣ ನಾಯ್ಕ ಕುಪ್ಪರ್‌ಜಡ್ಡಿ, ಗಣಪ ಗೌಡ ತಾರೇಮನೆ, ಗೋಪಾಲ ನಾಯ್ಕ ಮನಮನೆ, ಖಾಜೀರಾ ಬೇಗಂ ಕಾನಗೋಡ, ಮಂಜುನಾಥ ಣಾಯ್ಕ ಹಾರ್ಸಿಕಟ್ಟಾ, ಸುರೇಶ ನಾಯ್ಕ ಹಾರ್ಸಿಕಟ್ಟಾ, ಗೋವಿಂದ ಗೌಡ ಸೋವಿನಕೊಪ್ಪ ಉಪಸ್ಥಿತರಿದ್ದರು. `ಕಾಯಿದೆ ಪ್ರಕಾರ ಹೋರಾಟದಿಂದ ಮಾತ್ರ ಗೆಲುವು ಸಾಧ್ಯ’ ಎಂದು ಈ ವೇಳೆ ರವೀಂದ್ರ ನಾಯ್ಕ ಕರೆ ನೀಡಿದರು.

ಮುಂಡಗೋಡಿನಲ್ಲಿ ಮುಂದಿನ ಸಭೆ:
ಅರಣ್ಯ ಅತಿಕ್ರಮಣದಾರರ ಮುಂದಿನ ಸಭೆ ಅಕ್ಟೋಬರ್ 24ರ ಬೆಳಗ್ಗೆ 10 ಗಂಟೆಗೆ ಮುಂಡಗೋಡಿನ ಪ್ರವಾಸಿ ಮಂದಿರದಲ್ಲಿ ನಡೆಯಲಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page